Site icon Vistara News

IPL 2024 : ಐಪಿಎಲ್​ನ ಡಿಆರ್​​ಎಸ್​​ನಲ್ಲೂ ಮೋಸ; ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗನ ಆರೋಪ

IPL 2024

ನವದೆಹಲಿ: ಐಪಿಎಲ್ 2024 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (lacknow Supre Giants) ಕಳಪೆ ತಂತ್ರಗಳ ಬಗ್ಗೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರಾಡ್ ಹಾಗ್ ವಾಗ್ದಾಳಿ ನಡೆಸಿದ್ದಾರೆ. ಐಪಿಎಲ್​ 2024ರ (IPL 2024) ರ ಈ ಪಂದ್ಯದಲ್ಲಿ ದೀಪಕ್ ಹೂಡಾ ಅವರನ್ನು ಇಂಪ್ಯಾಕ್ಟ್​ ಪ್ಲೇಯರ್​ ಆಯ್ಕೆ ಮಾಡುವ ಮೂಲಕ ಎಲ್ಎಸ್​ಜಿ ದೊಡ್ಡ ತಪ್ಪು ಮಾಡಿದೆ ಎಂದು ಬ್ರಾಡ್ ಹಾಗ್​ ಹೇಳಿದ್ದಾರೆ.

ಕೆಎಲ್ ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ಐಪಿಎಲ್ 2024 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 6 ವಿಕೆಟ್​​ಗಳಿಂದ ಸೋತಿದೆ. ಈ ಪಂದ್ಯದಲ್ಲಿ ಎಲ್ಎಸ್​​ಜಿ ತನ್ನ ಮೊದಲ ಇನ್ನಿಂಗ್ಸ್ ಮೊತ್ತವನ್ನು 167 ರನ್​​ಗಳನ್ನು ರಕ್ಷಿಸಲು ವಿಫಲವಾಯಿತು. ರಿಷಭ್ ಪಂತ್ (24 ಎಸೆತಗಳಲ್ಲಿ 41 ರನ್) ಮತ್ತು ಚೊಚ್ಚಲ ಆಟಗಾರ ಜೇಕ್ ಫ್ರೇಸರ್-ಮೆಕ್ಗುರ್ಕ್ (35 ಎಸೆತಗಳಲ್ಲಿ 55 ರನ್) ಐಪಿಎಲ್ 2024 ರಲ್ಲಿ ಡಿಸಿಗೆ ಎರಡನೇ ಗೆಲುವು ಸಾಧಿಸಲು ಸಹಾಯ ಮಾಡಿದರು.

ಮೊದಲು ಬ್ಯಾಟಿಂಗ್ ಮಾಡಿದ ಎಲ್ಎಸ್​ಜಿ 94 ರನ್​ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಯುವ ಆಟಗಾರ ಆಯುಷ್ ಬದೋನಿ 35 ಎಸೆತಗಳಲ್ಲಿ ಅಜೇಯ 55 ರನ್ ಗಳಿಸಿ ತಂಡವನ್ನು ರಕ್ಷಿಸಿದರು. ಲಕ್ನೋದ ಎಕಾನಾ ಕ್ರೀಡಾಂಗಣದಲ್ಲಿ ಎಲ್ಎಸ್​ಜಿ ಗೌರವಾನ್ವಿತ ಮೊತ್ತವನ್ನು ತಲುಪಿತು. ನಂತರ ಮೊತ್ತವನ್ನು ರಕ್ಷಿಸಲು ವಿಫಲವಾಯಿತು.

ಎಲ್ಎಸ್ಜಿಯ ತಂತ್ರಗಳು ಪ್ರಶ್ನಾರ್ಹ: ಬ್ರಾಗ್ ಹಾಗ್

ಆಸ್ಟ್ರೇಲಿಯಾದ ಮಾಜಿ ಲೆಗ್ ಸ್ಪಿನ್ನರ್ ಬ್ರಾಗ್ ಹಾಗ್ ಎಕ್ಸ್​ ಮೂಲಕ ಎಲ್ಎಸ್ಜಿ ಮತ್ತು ಡಿಸಿ ಪಂದ್ಯವನ್ನು ವಿಶ್ಲೇಷಿಸಿದ್ದಾರೆ. ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಅವರ ಕಳಪೆ ತಂತ್ರಗಳಿಗಾಗಿ ವಾಗ್ದಾಳಿ ನಡೆಸಿದ್ದಾರೆ. ಹಾಗ್ ಪ್ರಕಾರ, ಎಲ್ಎಸ್ಜಿ ಈಗಾಗಲೇ ಆಯುಷ್ ಬಡೋನಿಯನ್ನು ಹೊಂದಿರುವುದರಿಂದ ದೀಪಕ್ ಹೂಡಾ ಅವರನ್ನು ಇಂಪ್ಯಾಕ್ಟ್​ ಪ್ಲೇಯರ್​​ ಆಗಿ ಬಳಸಬಾರದಿತ್ತು. 2 ನೇ ಇನ್ನಿಂಗ್ಸ್​ನಲ್ಲಿ ಹೆಚ್ಚುವರಿ ಬೌಲರ್ ಸೇರಿಸುವ ಅವಕಾಶವನ್ನು ಎಲ್ಎಸ್ಜಿ ಕಳೆದುಕೊಂಡಿತು ಎಂದು ಅವರು ಗಮನಸೆಳೆದರು.

ಇದನ್ನೂ ಓದಿ: IPL 2024 : ಮುಂದಿನ ಆವೃತ್ತಿಯಿಂದ ರೋಹಿತ್ ಶರ್ಮಾ ಚೆನ್ನೈ ತಂಡ ನಾಯಕ; ಮಾಜಿ ನಾಯಕನ ಭವಿಷ್ಯ

“ಎಲ್​​ಎಸ್​​​ಜಿ ತಂತ್ರಗಳು ಪ್ರಶ್ನಾರ್ಹವಾಗಿದ್ದವು. ಬದೋನಿ ಇದ್ದಾಗ ಹೂಡಾ ಅವರನ್ನು ಇಂಪ್ಯಾಕ್ಟ್​​ ಆಟಗಾರನಾಗಿ ಬಳಸಿರುವುದು ಸರಿಯಲ್ಲ. ಏಕೆಂದರೆ ಮೊತ್ತವನ್ನು ರಕ್ಷಿಸುವ ಸರದಿ ಬಂದಾಗ ಹೆಚ್ಚುವರಿ ಬೌಲರ್ ಅನ್ನು ಬಳಸುವ ಅವಕಾಶ ನೀವು ಕಳೆದುಕೊಂಡಿದ್ದೀರಿ “ಎಂದು ಹಾಗ್ ಎಕ್ಸ್​ನಲ್ಲಿ ವೀಡಿಯೊದಲ್ಲಿ ಹೇಳಿದರು.ದೀಪಕ್ ಹೂಡಾ 13 ಎಸೆತಗಳಲ್ಲಿ ಕೇವಲ 10 ರನ್ ಸೇರಿಸಿದರು.

“ಡಿಆರ್​ಎಸ್​​ ನಿಭಾಯಿಸಲು ಲಕ್ನೋ ಸೂಪರ್ ಜೈಂಟ್ಸ್​ಗೆ ಸಾಧ್ಯವಾಗಲಿಲ್ಲ. ಅದು ಖಂಡಿತವಾಗಿಯೂ ಔಟ್ ಆಗಿರಲಿಲ್ಲ, ಸ್ಟಂಪ್ ಗಿಂತ ಹೊರಗೆ ಚೆಂಡು ಹೋಗುತ್ತಿತ್ತು. ತಂತ್ರಜ್ಞಾನವು ಅದನ್ನು ತಪ್ಪಾಗಿ ಗ್ರಹಿಸಿದೆ. ಹಾಗೆಂದು ಅದನ್ನು ದೂಷಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಕುಲ್ದೀಪ್ ಶ್ರಮಕ್ಕೆ ಶ್ಲಾಘನೆ

1996 ರಿಂದ 2014 ರವರೆಗೆ ಆಸ್ಟ್ರೇಲಿಯಾವನ್ನು ಪ್ರತಿನಿಧಿಸಿದ್ದ ಬ್ರಾಗ್ ಹಾಗ್, ಎಲ್ಎಸ್​ಜಿ ಮತ್ತು ಡಿಸಿ ಮುಖಾಮುಖಿಯಲ್ಲಿ 3 ವಿಕೆಟ್ ಪಡೆದ ಕುಲ್ದೀಪ್ ಯಾದವ್ ಅವರನ್ನು ಶ್ಲಾಘಿಸಿದರು. ಎಡಗೈ ಸ್ಪಿನ್ನರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಚೆನ್ನಾಗಿ ಆಡಬಹುದಾಗಿದ್ದ ಲಕ್ನೊ ತಂಡದ ಆಟಗಾರರನ್ನು ಕುಲ್ದೀಪ್​ ತಮ್ಮ ಚಮತ್ಕಾರಿ ಬೌಲಿಂಗ್ ಮೂಲಕ ನಿಯಂತ್ರಿಸಿದರು ಎಂದು ಹೇಳಿದ್ದಾರೆ.

Exit mobile version