ಬೆಂಗಳೂರು: ಬಾಂಗ್ಲಾದೇಶದ (Bangaldesh Cricket Team) ಮಾಜಿ ಕ್ರಿಕೆಟರ್ ಮತ್ತು ತಮೀಮ್ ಇಕ್ಬಾಲ್ (Nafees Iqbal) ಅವರ ಸಹೋದರ ನಫೀಸ್ ಇಕ್ಬಾಲ್ ಮೆದುಳಿನ ರಕ್ತಸ್ರಾವಕ್ಕೆ ಒಳಗಾಗಿದ್ದಾರೆ. ಅವರು ಢಾಕಾ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕಕ್ಕೆ ದಾಖಲಾಗಿದ್ದಾರೆ. ಜುಲೈ 5 ರ ಶುಕ್ರವಾರ ಚಟ್ಟೋಗ್ರಾಮ್ನಲ್ಲಿ ಅವರಿಗೆ ಈ ಸಮಸ್ಯೆ ಉಂಟಾಗಿದೆ. ಮಧ್ಯಾಹ್ನ ಏರ್ ಆಂಬ್ಯುಲೆನ್ಸ್ ಮೂಲಕ ಢಾಕಾಗೆ ಕರೆತಂದು ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲಿ ಅವರು ಈಗ ಹೈ ಡಿಪೆಂಡೆನ್ಸಿ ಯುನಿಟ್ (ಎಚ್ಡಿಯು) ನಲ್ಲಿದ್ದಾರೆ.
Former Bangladesh batter Nafees Iqbal was AILIFTED to Dhaka from Chittagong as he suffered a stroke on Friday.
— Himanshu Pareek (@Sports_Himanshu) July 5, 2024
Nafees is the elder brother of Tamim Iqbal. He played 11 Tests and 16 ODIs for Bangladesh between 2003 and 2006. He is now the logistics manager of national team. pic.twitter.com/vKGA9xIhQg
ಟಿ 20 ವಿಶ್ವಕಪ್ನಲ್ಲಿ ಬಾಂಗ್ಲಾದೇಶದ ತಂಡದ ಲಾಜಿಸ್ಟಿಕ್ಸ್ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದ ನಫೀಸ್ ಕಳೆದ ಕೆಲವು ದಿನಗಳಿಂದ ತಲೆನೋವಿನಿಂದ ಬಳಲುತ್ತಿದ್ದರು. ಅವರು ಇತ್ತೀಚೆಗೆ ತಂಡದ ಉಳಿದದ ಆಟಗಾರರ ಜತೆ ಬಾಂಗ್ಲಾದೇಶಕ್ಕೆ ಮರಳಿದ್ದರು. ನಫೀಸ್ ಅವರು ಅಪಾಯದಿಂದ ಪಾರಾಗಿದ್ದಾರೆ ಮತ್ತು ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಕೆಲವು ವಾರಗಳು ಬೇಕಾಗುತ್ತದೆ ಎಂದು ಬಿಸಿಬಿ (ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ) ಮುಖ್ಯ ವೈದ್ಯ ದೇಬಶಿಶ್ ಚೌಧರಿ ಹೇಳಿದ್ದಾರೆ.
“ನಫೀಸ್ ಸೆರೆಬ್ರಲ್ ವೆನಸ್ ಥ್ರಾಂಬೋಸಿಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ತಜ್ಞರು ನಮಗೆ ಮಾಹಿತಿ ನೀಡಿದ್ದಾರೆ. ಅವರ ಮೆದುಳಿನ ನಿರ್ದಿಷ್ಟ ಭಾಗದಲ್ಲಿ ರಕ್ತ ಹೆಪ್ಪುಗಟ್ಟಿದೆ. ಈಗ ಅವರ ಆರೋಗ್ಯ ಸ್ಥಿರವಾಗಿದೆ. ಅವರ ಇತರ ಆರೋಗ್ಯ ಪರಿಸ್ಥಿತಿ ಉತ್ತಮವಾಗಿವೆ. ಅವರು ಇನ್ನೂ ಕೆಲವು ದಿನಗಳ ಆಸ್ಪತ್ತೆಯಲ್ಲಿಯೇ ಇರುತ್ತಾರೆ. ಇನ್ನೂ ಸಮಸ್ಯೆ ಆಗದಿದ್ದರೆ ಸಂಪೂರ್ಣ ಚೇತರಿಸಿಕೊಳ್ಳುತ್ತಾರೆ ಎಂದು ಅವರು ಹೇಳಿದ್ದಾರೆ. ಮೊದಲ ದಿನ ಅವರನ್ನು ಸೂಕ್ಷ್ಮವಾಗಿ ಗಮನಿಸಬೇಕು. ಅವರನ್ನು ಶೀಘ್ರದಲ್ಲೇ ವಾರ್ಡ್ಗೆ ಸ್ಥಳಾಂತರಿಸಬಹುದು. ಆದರೆ ಸಂಪೂರ್ಣ ಚೇತರಿಕೆಗೆ ಕೆಲವು ವಾರಗಳು ಬೇಕಾಗಬಹುದು” ಎಂದು ದೇಬಶಿಸ್ ಚೌಧರಿ ಇಎಸ್ಪಿಎನ್ ಕ್ರಿಕ್ಇನ್ಫೋಗೆ ತಿಳಿಸಿದ್ದಾರೆ.
ಇದನ್ನೂ ಓದಿ: Car price Discounts: ರಿನೊ ಕೈಗರ್, ಕ್ವಿಡ್, ಟ್ರೈಬರ್ ಕಾರುಗಳಿಗೆ 40,000 ರೂ. ತನಕ ರಿಯಾಯಿತಿ
ಜಲಾಲ್ ಯೂನುಸ್ (ಬಿಸಿಬಿ ನಿರ್ದೇಶಕ), ಮುಖ್ಯ ಕಾರ್ಯನಿರ್ವಾಹಕ ನಿಜಾಮುದ್ದೀನ್ ಚೌಧರಿ ಮತ್ತು ಮಹಮುದುಲ್ಲಾ, ಮುಷ್ಫಿಕರ್ ರಹೀಮ್ ಮತ್ತು ಮಶ್ರಫೆ ಮೊರ್ತಾಜಾ ಅವರಂತಹ ಹಲವಾರು ಆಟಗಾರರು ಢಾಕಾ ಆಸ್ಪತ್ರೆಯಲ್ಲಿ ಇಕ್ಬಾಲ್ ಅವರ ಬಗ್ಗೆ ನಿಗಾ ವಹಿಸಿದ್ದಾರೆ. ಇಕ್ಬಾಲ್ ಬಾಂಗ್ಲಾದೇಶದ ಮಾಜಿ ನಾಯಕ ಮತ್ತು ಪ್ರಸ್ತುತ ಬಿಸಿಬಿ ನಿರ್ದೇಶಕ ಅಕ್ರಮ್ ಖಾನ್ ಅವರ ಸೋದರಳಿಯ.
ಕಳೆದ ಎರಡು ವರ್ಷಗಳಿಂದ ಬಾಂಗ್ಲಾದೇಶದ ತಂಡದ ವ್ಯವಸ್ಥಾಪಕರಾಗಿ ಕೆಲಸ ಮಾಡಿದ ಮಾಜಿ ಬ್ಯಾಟರ್ 2003 ಮತ್ತು 2006 ರ ನಡುವೆ 11 ಟೆಸ್ಟ್ ಮತ್ತು 16 ಏಕದಿನ ಪಂದ್ಯಗಳನ್ನು ಆಡಿದ್ದಾರೆ, ಅವರ ಹೆಚ್ಚಿನ ಪ್ರದರ್ಶನಗಳು ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಬಂದಿವೆ, ಚಟ್ಟೋಗ್ರಾಮ್ ತಂಡಕ್ಕೆ 120 ಪಂದ್ಯಗಳನ್ನು ಆಡಿದ್ದಾರೆ.