ಲಂಡನ್: ಇಂಗ್ಲೆಂಡ್ನ ಮಾಜಿ ಕ್ರಿಕೆಟಿಗ ಗ್ರಹಾಂ ಥಾರ್ಪ್ (55) ನಿಧನ (Graham Thorpe) ಹೊಂದಿದ್ದಾರೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಸೋಮವಾರ ದೃಢಪಡಿಸಿದೆ. ಥಾರ್ಪ್ 1993ರಿಂದ 2005ರವರೆಗೆ ಇಂಗ್ಲೆಂಡ್ ಪರ 100 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಆ ಸಮಯದಲ್ಲಿ 82 ಏಕದಿನ ಪಂದ್ಯಗಳ ಭಾಗವಾಗಿದ್ದರು. ಥಾರ್ಪ್ ಇಂಗ್ಲೆಂಡ್ ಪರ ಟೆಸ್ಟ್ನಲ್ಲಿ 6,744 ರನ್ ಗಳಿಸಿದ್ದಾರೆ. ತಂಡದೊಂದಿಗೆ 44.66 ಸರಾಸರಿಯಲ್ಲಿ 16 ಶತಕಗಳನ್ನು ಬಾರಿಸಿದ್ದಾರೆ. ಸೋಮವಾರ ಇಸಿಬಿ ತನ್ನ ವೆಬ್ಸೈಟ್ನಲ್ಲಿ ಥೋರ್ಪ್ ಅವರ ನಿಧನವನ್ನು ದೃಢಪಡಿಸುವ ಹೇಳಿಕೆ ಬಿಡುಗಡೆ ಮಾಡಿದೆ.
It is with great sadness that we share the news that Graham Thorpe, MBE, has passed away.
— England and Wales Cricket Board (@ECB_cricket) August 5, 2024
There seem to be no appropriate words to describe the deep shock we feel at Graham's death. pic.twitter.com/VMXqxVJJCh
ಎಂಬಿಇ ಗ್ರಹಾಂ ಥೋರ್ಪ್ ನಿಧನರಾದ ಸುದ್ದಿಯನ್ನು ಇಸಿಬಿ ಬಹಳ ದುಃಖದಿಂದ ಹಂಚಿಕೊಳ್ಳುತ್ತದೆ. ಗ್ರಹಾಂ ಅವರ ಸಾವಿನಿಂದ ನಾವು ಅನುಭವಿಸುವ ಆಳವಾದ ನೋವನ್ನು ವಿವರಿಸಲು ಸೂಕ್ತ ಪದಗಳಿಲ್ಲ ಎಂದು ತೋರುತ್ತದೆ.” ಎಂದು ಬರೆದುಕೊಂಡಿದ್ದಾರೆ.
ಇಂಗ್ಲೆಂಡ್ನ ಸಾರ್ವಕಾಲಿಕ ಅತ್ಯುತ್ತಮ ಬ್ಯಾಟರ್ಗಳಲ್ಲಿ ಒಬ್ಬರಿಗಿಂತ ಹೆಚ್ಚಾಗಿ ಅವರು ಕ್ರಿಕೆಟ್ ಕುಟುಂಬದ ಪ್ರೀತಿಯ ಸದಸ್ಯರಾಗಿದ್ದರು. ಪ್ರಪಂಚದಾದ್ಯಂತದ ಅಭಿಮಾನಿಗಳಿಂದ ಗೌರವ ಪಡೆದಿದ್ದರು. ಅವರ ಕೌಶಲ್ಯವು ಪ್ರಶ್ನಾತೀತವಾಗಿತ್ತು. 13 ವರ್ಷಗಳ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಅವರ ಸಾಮರ್ಥ್ಯಗಳು ಮತ್ತು ಸಾಧನೆಗಳು ಸಹ ಆಟಗಾರರಿಗೆ ಮತ್ತು ಇಂಗ್ಲೆಂಡ್ ಮತ್ತು ಸರ್ರೆ ಸಿಸಿಸಿ ಬೆಂಬಲಿಗರಿಗೆ ಪ್ರೋತ್ಸಾಹದಾಯಕವಾಗಿತ್ತು. ಅತ್ಯುತ್ತಮವಾಗಿ ತರಬೇತುದಾರರಾಗಿ ಇಂಗ್ಲೆಂಡ್ ಪುರುಷರ ತಂಡಕ್ಕೆ ನೆರವಾಗಿದ್ದರು.
ಕ್ರಿಕೆಟ್ ಜಗತ್ತು ಇಂದು ಶೋಕದಲ್ಲಿದೆ. ಈ ಊಹಿಸಲಾಗದ ಕಷ್ಟದ ಸಮಯದಲ್ಲಿ ಅವರ ಪತ್ನಿ ಅಮಂಡಾ ಅವರ ಮಕ್ಕಳು, ತಂದೆ ಜೆಫ್ ಮತ್ತು ಅವರ ಎಲ್ಲಾ ಕುಟುಂಬ ಮತ್ತು ಸ್ನೇಹಿತರಿಗೆ ನಮ್ಮ ಹೃದಯಗಳು ಮಿಡಿಯುತ್ತವೆ. ಕ್ರೀಡೆಗೆ ಗ್ರಹಾಂ ಅವರ ಅಸಾಧಾರಣ ಕೊಡುಗೆಗಳಿಗಾಗಿ ನಾವು ಯಾವಾಗಲೂ ಅವರನ್ನು ನೆನಪಿಸಿಕೊಳ್ಳುತ್ತೇವೆ, “ಎಂದು ಇಸಿಬಿ ಹೇಳಿಕೆಯಲ್ಲಿ ತಿಳಿಸಿದೆ.
ಗ್ರಹಾಂ ಥಾರ್ಪ್ ಸಾಧನೆಗಳು
ಗ್ರಹಾಂ ಥಾರ್ಪ್ 1988 ರ ಬೇಸಿಗೆಯಲ್ಲಿ ಸರ್ರೆ ಪರ ಪ್ರಥಮ ದರ್ಜೆ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು ಮತ್ತು 1989 ರ ಋತುವಿನಲ್ಲಿ ನಿಯಮಿತ ಆಟಗಾರರಾದರು. 1993ರಲ್ಲಿ ತಮ್ಮ 24ನೇ ವಯಸ್ಸಿನಲ್ಲಿ ಇಂಗ್ಲೆಂಡ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಅವರು, ಟ್ರೆಂಟ್ ಬ್ರಿಜ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ 114 ರನ್ ಬಾರಿಸಿದ್ದರು.
ಥೋರ್ಪ್ 2002 ರಲ್ಲಿ ಕ್ರೈಸ್ಟ್ಚೈರ್ಚ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಅಜೇಯ ದ್ವಿಶತಕದೊಂದಿಗೆ ಇಂಗ್ಲೆಂಡ್ನ ಮಧ್ಯಮ ಕ್ರಮಾಂಕದಲ್ಲಿ ಪ್ರಮುಖ ಆಟಗಾರರಾದರು. ಈ ಇನ್ನಿಂಗ್ಸ್ ನಲ್ಲಿ 28 ಬೌಂಡರಿಗಳು ಮತ್ತು ನಾಲ್ಕು ಸಿಕ್ಸರ್ಗಳು ಸೇರಿವೆ.
ಅಂತಾರಾಷ್ಟ್ರೀಯ ವೃತ್ತಿಜೀವನವು ಉತ್ತಮ ಪ್ರದರ್ಶನಗಳಿಂದ ಗುರುತಿಸಲ್ಪಟ್ಟಿದ್ದರೂ ಅವರು 2005ರಲ್ಲಿ ಇಂಗ್ಲೆಂಡ್ ತಂಡದಿಂದ ನಿವೃತ್ತಿ ಪಡೆದುಕೊಂಡರು. ಥಾರ್ಪ್ ನಂತರ ಆರಂಭದಲ್ಲಿ ಆಸ್ಟ್ರೇಲಿಯಾದಲ್ಲಿ ಕೋಚಿಂಗ್ ಹುದ್ದೆ ವಹಿಸಿಕೊಂಡರು. ಅಲ್ಲಿ ಅವರು ನ್ಯೂ ಸೌತ್ ವೇಲ್ಸ್ನಲ್ಲಿ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಅವರಂತಹ ಆಟಗಾರರಿಗೆ ಮಾರ್ಗದರ್ಶನ ನೀಡಿದ್ದರು. . ನಂತರ ಅವರು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಗೆ ಬ್ಯಾಟಿಂಗ್ ತರಬೇತುದಾರರಾಗಿ ಸೇರಿಕೊಂಡರು.
ಇದನ್ನೂ ಓದಿ: Washington Sundar : ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ವಾಷಿಂಗ್ಟನ್ ಸುಂದರ್ ನಾಮನಿರ್ದೇಶನ
ಮಾರ್ಚ್ 2022 ರಲ್ಲಿ, ಥೋರ್ಪ್ ಅವರನ್ನು ಅಫ್ಘಾನಿಸ್ತಾನದ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರರಾಗಿ ನೇಮಿಸಲಾಯಿತು ಆದರೆ ಅನಾರೋಗ್ಯದಿಂದಾಗಿ ಅವರು ಈ ಪಾತ್ರವನ್ನು ವಹಿಸಲು ಸಾಧ್ಯವಾಗಲಿಲ್ಲ