ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ಭಾಗವಾಗಿದ್ದ ಮಿಲಿಂದ್ ಕುಮಾರ್ (Milind Kumar) ಭಾರತೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಅವರು ಈಗ ಯುಎಸ್ಎಯಲ್ಲಿ ಮೈನರ್ ಲೀಗ್ ಕ್ರಿಕೆಟ್ನೊಂದಿಗೆ ಸಹಿ ಹಾಕಿದ್ದಾರೆ. ಅಲ್ಲಿ ಅವರು ಫಿಲಡೆಲ್ಫಿಯನ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ. ಭಾರತದ ಅಂಡರ್-19 ತಂಡದ ಮಾಜಿ ನಾಯಕ ಉನ್ಮುಕ್ತ್ ಚಾಂದ್ ಅವರು ಭಾರತೀಯ ಕ್ರಿಕೆಟ್ನಿಂದ ನಿವೃತ್ತರಾಗಿ ಅಮೆರಿಕಕ್ಕೆ ತೆರಳಿದ್ದರು. ಇದಕ್ಕೂ ಮುನ್ನ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ಸ್ಮಿತ್ ಪಟೇಲ್, ಹರ್ಮೀತ್ ಸಿಂಗ್ ಮತ್ತು ಸಿದ್ಧಾರ್ಥ್ ತ್ರಿವೇದಿ ಎಂಐಎಲ್ಸಿ ಸೇರಿದ್ದರು.
Milind Kumar is very excited to be joining the Minor and Major League Cricket family! We wish him and The Philadelphians all the best with the current season 😎 pic.twitter.com/dFpvtrBfib
— Minor League Cricket (@MiLCricket) August 21, 2021
ಬಿಸಿಸಿಐ ನಿಯಮದ ಪ್ರಕಾರ, ಒಬ್ಬ ಆಟಗಾರ (ಪುರುಷ) ಭಾರತೀಯ ಕ್ರಿಕೆಟ್ನಿಂದ ನಿವೃತ್ತರಾಗದಿದ್ದರೆ ಇತರ ಲೀಗ್ಗಳಲ್ಲಿ ಆಡಲು ಸಾಧ್ಯವಿಲ್ಲ. “ಹೌದು, ಭಾರತದಲ್ಲಿ ಕ್ರಿಕೆಟ್ನಿಂದ ನಿವೃತ್ತರಾಗುವ ನನ್ನ ನಿರ್ಧಾರವನ್ನು ನಾನು ಬಿಸಿಸಿಐಗೆ ತಿಳಿಸಿದ್ದೇನೆ. ವಿರಾಟ್ ಕೊಹ್ಲಿ, ಶಿಖರ್ ಧವನ್ ಮತ್ತು ಇಶಾಂತ್ ಶರ್ಮಾ ಅವರಂತಹ ಶ್ರೇಷ್ಠ ಆಟಗಾರರೊಂದಿಗೆ ದೆಹಲಿ ಪರ ಆಡುವುದನ್ನು ನಾನು ಆನಂದಿಸಿದೆ. ಇದು ಮುಂದುವರಿಯುವ ಸಮಯ ಎಂದು ಮಿಲಿಂದ್ ಕುಮಾರ್ ತಿಳಿಸಿದ್ದಾರೆ.
ರಣಜಿ ವಿವರ
2018-19ರ ರಣಜಿ ಟ್ರೋಫಿ ಋತುವಿನಲ್ಲಿ 1000 ಕ್ಕೂ ಹೆಚ್ಚು ರನ್ ಗಳಿಸಿದ್ದ ಮಿಲಿಂದ್ ಕುಮಾರ್, 2014 ರ ಐಪಿಎಲ್ನಲ್ಲಿ ದೆಹಲಿ ತಂಡದ ಭಾಗವಾಗಿದ್ದರು. 2019 ರ ಋತುವಿನಲ್ಲಿ ಆರ್ಸಿಬಿಯೊಂದಿಗೆ ಇದ್ದರು. ಆದಾಗ್ಯೂ, ಆ ಎರಡು ಋತುಗಳಲ್ಲಿ ಐಪಿಎಲ್ಗೆ ಪಾದಾರ್ಪಣೆ ಮಾಡಲು ಅವರಿಗೆ ಅವಕಾಶ ಸಿಗಲಿಲ್ಲ.
ಇದನ್ನೂ ಓದಿ: Gautam Gambhir : ಗೌತಮ್ ಗಂಭೀರ್ ಟೀಮ್ ಇಂಡಿಯಾದ ಮುಂದಿನ ಕೋಚ್?
ದೇಶೀಯ ಕ್ರಿಕೆಟ್ನಲ್ಲಿ ದೆಹಲಿ, ಸಿಕ್ಕಿಂ ಮತ್ತು ತ್ರಿಪುರಾವನ್ನು ಪ್ರತಿನಿಧಿಸಿದ ಅವರು 46.68 ಸರಾಸರಿಯಲ್ಲಿ 9 ಶತಕಗಳು ಮತ್ತು 15 ಅರ್ಧಶತಕಗಳೊಂದಿಗೆ 2988 ಪ್ರಥಮ ದರ್ಜೆ ರನ್ ಗಳಿಸಿದ್ದಾರೆ. ಅವರು 2023 ರ ಲಿಸ್ಟ್-ಎ ರನ್ಗಳನ್ನು 43.04 ಸರಾಸರಿಯಲ್ಲಿ ಮತ್ತು 1176 ಟಿ 20 ರನ್ಗಳನ್ನು 29.40 ಸರಾಸರಿಯಲ್ಲಿ ಗಳಿಸಿದ್ದಾರೆ.
2013 ರಲ್ಲಿ ಇಂಗ್ಲೆಂಡ್ ತಂಡವನ್ನು ಅಭ್ಯಾಸ ಪಂದ್ಯದಲ್ಲಿ ಸೋಲಿಸಿದ ದೆಹಲಿ ತಂಡದ ಭಾಗವಾಗಿದ್ದರು, ಅಲ್ಲಿ ಅವರು 85 ಎಸೆತಗಳಲ್ಲಿ 78* ರನ್ ಗಳಿಸಿದ್ದರು. ಅವರು 2017ರಲ್ಲಿ ರಲ್ಲಿ ನ್ಯೂಜಿಲೆಂಡ್ ವಿರುದ್ಧ ಮಂಡಳಿಯ ಅಧ್ಯಕ್ಷರ ಇಲೆವೆನ್ ಅನ್ನು ಪ್ರತಿನಿಧಿಸಿದರು.
ಬಿಸಿಸಿಐ ಅಡಿಯಲ್ಲಿ ಕ್ರಿಕೆಟ್ ತೊರೆದ ನಂತರ, ಮಿಲಿಂದ್ ಕುಮಾರ್ ಈಗ ಇತರ ಫ್ರ್ಯಾಂಚೈಸ್ ಲೀಗ್ಗಳಲ್ಲಿ ಆಡಲು ಅರ್ಹರಾಗಿದ್ದಾರೆ. ಈ ವರ್ಷದ ಆರಂಭದಲ್ಲಿ ಭಾರತೀಯ ಕ್ರಿಕೆಟ್ನಲ್ಲಿ ವಿದಾಯ ಹೇಳಿದ ಸ್ಮಿತ್ ಪಟೇಲ್ ಅವರನ್ನು ಈ ವರ್ಷದ ಕೆರಿಬಿಯನ್ ಪ್ರೀಮಿಯರ್ ಲೀಗ್ಗೆ ಬಾರ್ಬಡೋಸ್ ಟ್ರೈಡೆಂಟ್ಸ್ ಆಯ್ಕೆ ಮಾಡಿದೆ.