Site icon Vistara News

French Open Final 2024: 4ನೇ​ ಫ್ರೆಂಚ್‌ ಓಪನ್‌ ಟ್ರೋಫಿ ಗೆದ್ದ ಇಗಾ ಸ್ವಿಯಾಟೆಕ್‌

French Open Final 2024

French Open Final 2024: Iga Swiatek enters league of clay-court greats with fourth French Open title

ಪ್ಯಾರಿಸ್‌: ಪೋಲೆಂಡ್‌ನ‌ ಇಗಾ ಸ್ವಿಯಾಟೆಕ್‌(Iga Swiatek) ಅವರು ಫ್ರೆಂಚ್‌ ಓಪನ್‌(French Open Final 2024) ಟೂರ್ನಿಯಲ್ಲಿ ತಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು(ಶನಿವಾರ) ನಡೆದ ಮಹಿಳಾ ಸಿಂಗಲ್ಸ್​ ವಿಭಾಗದ ಫೈನಲ್​ ಪಂದ್ಯದಲ್ಲಿ ಜಾಸ್ಮಿನ್​ ಪಾವೊಲಿನಿ(Jasmine Paolini) ವಿರುದ್ಧ ಅಧಿಕಾರಯು ಗೆಲುವು ಸಾಧಿಸಿ ಮತ್ತೊಮ್ಮೆ ಚಾಂಪಿಯನ್​ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಆವೇ ಅಂಗಣದ ಕೂಟದಲ್ಲಿ 4ನೇ ಹಾಗೂ ಹ್ಯಾಟ್ರಿಕ್​ ಪ್ರಶಸ್ತಿ ಗೆದ್ದ ಸಾಧನೆ ಮಾಡಿದರು. ಒಟ್ಟಾರೆಯಾಗಿ ಇದು ಸ್ವಿಯಾಟೆಕ್​ಗೆ 5ನೇ ಗ್ರ್ಯಾನ್‌ ಸ್ಲಾಮ್‌ ಕಿರೀಟ. ಒಂದು ಟ್ರೋಫಿ ಯುಎಸ್​ ಓಪನ್​ನಲ್ಲಿ ಒಲಿದಿತ್ತು.

ಶನಿವಾರ ನಡೆದ ಈ ಫೈನಲ್​ ಪಂದ್ಯದಲ್ಲಿ ಸ್ವಿಯಾಟೆಕ್​ ಅವರ ಆಕ್ರಮಣಕಾರಿ ಆಟದ ಮುಂದೆ ಪಾವೊಲಿನಿ ಸಂಪೂರ್ಣವಾಗಿ ಮಂಕಾದರು. ಯಾವ ಹಂತದಲ್ಲಿಯೂ ಕೂಡ ಪೈಪೋಟಿ ನೀಡಲು ಇವರಿಂದ ಸಾಧ್ಯವಾಗಲಿಲ್ಲ. ಹೀಗಾಗಿ 6-2, 6-1 ನೇರ ಸೆಟ್​ಗಳ ಹೀನಾಯ ಸೋಲು ಕಂಡರು. ಕೇವಲ 68 ನಿಮಿಷದಲ್ಲಿ ಈ ಪಂದ್ಯ ಮುಕ್ತಾಯ ಕಂಡಿತು.

ಸ್ವಿಯಾಟೆಕ್‌ ರೋಲ್ಯಾಂಡ್​ ಗ್ಯಾರಸ್​ನಲ್ಲಿ ಸತತ 21 ಪಂದ್ಯಗಳ ಅಜೇಯ ಓಟ ಮುಂದುವರಿಸಿ ಪಾರಮ್ಯ ಮೆರದರು. 28 ವರ್ಷದ ಪಾವೊಲಿನಿ ಇದೇ ಮೊದಲ ಬಾರಿಗೆ ಗ್ರಾಂಡ್​ ಸ್ಲಾಂ ಟೂರ್ನಿಯ ಫೈನಲ್​ ಪ್ರವೇಶಿಸಿ ಚೊಚ್ಚಲ ಪ್ರಶಸ್ತಿ ಎತ್ತಿ ಹಿಡಿಯಿವ ನಿರೀಕ್ಷೆಯಲ್ಲಿದ್ದರು. ಆದರೆ ಇದಕ್ಕೆ ಸ್ವಿಯಾಟೆಕ್​ ಅನವು ಮಾಡಿಕೊಳ್ಳಲಿಲ್ಲ.

ಸ್ವಿಯಾಟೆಕ್ ಮೂರು ವರ್ಷಗಳ ಕಾಲ ಪಂದ್ಯಾವಳಿಯನ್ನು ಗೆದ್ದ ಮೂರನೇ ಆಟಗಾರ್ತಿ ಎನಿಸಿಕೊಂಡರು. ಇದಕ್ಕೂ ಮುನ್ನ ಹೆನಿನ್, 2005-07ರಲ್ಲಿ ಕೊನೆಯದಾಗಿ ಈ ಸಾಧನೆ ಮಾಡಿದ್ದರು. ಮೋನಿಕಾ ಸೆಲೆಸ್ 1990 ರ ದಶಕದ ಆರಂಭದಲ್ಲಿ ಈ ಸಾಧನೆಯನ್ನು ಮಾಡಿದ್ದರು.

ಇದನ್ನೂ ಓದಿ IND vs PAK: ಭಾರತ-ಪಾಕ್​ ಹೈವೋಲ್ಟೇಜ್​ ಪಂದ್ಯದ ಹವಾಮಾನ ವರದಿ, ಆಡುವ ಬಳಗ ಹೇಗಿದೆ?

ಅಲ್ಕರಾಜ್‌-ಜ್ವರೇವ್ ಫೈನಲ್​ ಫೈಟ್​​


ನಾಳೆ ನಡೆಯುವ ಪುರುಷರ ಸಿಂಗಲ್ಸ್​ ಫೈನಲ್​ ಪಂದ್ಯದಲ್ಲಿ ವಿಶ್ವದ ಮೂರನೇ ಶ್ರೇಯಾಂಕಿತ ಕಾರ್ಲೋಸ್‌ ಅಲ್ಕರಾಜ್‌ ಮತ್ತು ನಾಲ್ಕನೇ ಶ್ರೇಯಾಂಕಿತ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೇವ್‌ ಪ್ರಶಸ್ತಿಗಾಗಿ ಕಾದಾಟ ನಡೆಸಲಿದ್ದಾರೆ.

ಅಲ್ಕರಾಜ್​ಗೆ ಇದು ಚೊಚ್ಚಲ ಫ್ರೆಂಚ್​ ಓಪನ್​ ಫೈನಲ್​ ಪಂದ್ಯವಾಗಿದೆ. 14 ಬಾರಿಯ ಚಾಂಪಿಯನ್​ ರಫೆಲ್​ ನಡಾಲ್​ ಮತ್ತು ಸರ್ಬಿಯಾದ ನೊವಾಕ್​ ಜೋಕೊವಿಕ್​ ಗಾಯದಿಂದಾಗಿ ಟೂರ್ನಿಯನ್ನು ಅರ್ಧಕ್ಕೆ ಮೊಟಕುಗೊಳಿಸಿದ ಬಳಿಕ ಅಲ್ಕರಾಜ್ ಪ್ರಶಸ್ತಿ ಗೆಲ್ಲುವ ಫೇವರಿಟ್​ ಎನಿಸಿಕೊಂಡಿದ್ದರು. ಇದೀಗ ನಾಳೆ ನಡೆಯುವ ಫೈನಲ್​ನಲ್ಲಿ ಚೊಚ್ಚಲ ಪ್ರಶಸ್ತಿ ಎತ್ತಿ ಹಿಡಿಯಲಿದ್ದಾರಾ ಎಂದು ಕಾದು ನೋಡಬೇಕಿದೆ.

ಶುಕ್ರವಾರ ನಡೆದಿದ್ದ ಸೆಮಿಫೈನಲ್​ ಪಂದ್ಯದಲ್ಲಿ ಅಲ್ಕರಾಜ್ ಐದು ಸೆಟ್​ಗಳ 4 ಗಂಟೆಗಳ ಕಾಲ ನಡೆದ ತೀವ್ರ ಪೈಪೋಟಿಯ ಪಂದ್ಯದಲ್ಲಿ ಆಸ್ಟ್ರೇಲಿಯನ್​ ಚಾಂಪಿಯನ್​ ಇಟಲಿಯ ಜನ್ನಕ್​ ಸಿನ್ನರ್​ ಅವರನ್ನು 2-6, 6-3,3-6,6-4, 6-3 ಸೇಟ್​ಗಳ ಗೆಲುವು ಸಾಧಿಸಿದ್ದರು.

Exit mobile version