Site icon Vistara News

Gautam Gambhir : ಗೌತಮ್ ಗಂಭೀರ್ ಭಾರತ ತಂಡದ ಮುಂದಿನ ಕೋಚ್​; ಐಪಿಎಲ್​ ಫ್ರಾಂಚೈಸಿ ಮಾಲೀಕರಿಂದ ಬಹಿರಂಗ?

Gautam Gambhir

ಬೆಂಗಳೂರು: ಗೌತಮ್ ಗಂಭೀರ್ (Gautam Gambhir) ಭಾರತ ಕ್ರಿಕೆಟ್ ತಂಡದ ಮುಂದಿನ ಮುಖ್ಯ ಕೋಚ್ ಆಗುತ್ತಾರೆ ಎಂಬುದು ಐಪಿಎಲ್ 2024 ಮುಗಿದ ನಂತರ ಹರಿದಾಡುತ್ತಿರುವ ಬಲವಾದ ವದಂತಿ . ಗಂಭೀರ್ ಮಾರ್ಗದರ್ಶನದಲ್ಲಿ ಕೋಲ್ಕತಾ ನೈಟ್ ರೈಡರ್ಸ್ (KKR) ತಂಡ ಪ್ರಶಸ್ತಿ ಗೆದ್ದುಕೊಂಡ ಕಾರಣ ಆ ಚರ್ಚೆಗೆ ಹೆಚ್ಚಿನ ಪುಷ್ಟಿ ಸಿಕ್ಕಿದೆ. 2024ರ ಐಪಿಎಲ್​ಗೆ ಮೊದಲು ಗಂಭೀರ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾರ್ಗದರ್ಶಕರಾಗಿದ್ದರು. ಅಂತೆಯೇ ಕೆಎಲ್ ರಾಹುಲ್ ನೇತೃತ್ವದ ತಂಡವು ಗಂಭೀರ್ ನಾಯಕತ್ವದಲ್ಲಿ ಸತತ ಎರಡು ಋತುಗಳಲ್ಲಿ ಐಪಿಎಲ್ ಪ್ಲೇ ಆಫ್ ಪ್ರವೇಶಿಸಿದೆ. ಮೂರನೇ ಅವಧಿಯಲ್ಲಿ ಅವರು ಕೆಕೆಆರ್​ಗೆ ಕಪ್​ ಗೆದ್ದುಕೊಟ್ಟಿದ್ದಾರೆ. ಹೀಗಾಗಿ ಟೀಂ ಇಂಡಿಯಾದ ಮುಂದಿನ ಕೋಚ್ ಹುದ್ದೆಗೆ ಗಂಭೀರ್ ಹೆಸರು ಕೇಳಿಬರುತ್ತಿದೆ.

ಭಾರತ ಕ್ರಿಕೆಟ್ ತಂಡದ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೋಮವಾರ ಮುಗಿದಿದೆ. ಭಾರತದ ಮುಂದಿನ ಕೋಚ್ ಆಗಲು ಗೂಗಲ್ ಶೀಟ್ ಸಲ್ಲಿಸಲು ಸೋಮವಾರ ಕೊನೆಯ ದಿನವಾಗಿತ್ತು. ಆದರೆ ಆ ಅರ್ಜಿಯಲ್ಲಿ ದೊಡ್ಡ ಹೆಸರುಗಳು ಇರಲಿಲ್ಲ.

ಕ್ರಿಕ್​ಬಜ್​ ವರದಿ ಪ್ರಕಾರ ಬಿಸಿಸಿಐ ಗಂಭೀರ್​ ಅವರನ್ನೇ ಕೋಚ್ ಹುದ್ದೆಗೆ ಆಯ್ಕೆ ಮಾಡಿದೆ. ಐಪಿಎಲ್ ಫ್ರಾಂಚೈಸಿಯ ಮಾಲೀಕರೊಬ್ಬರ ಹೇಳಿಕೆಯಿಂದ ಇದು ಗೊತ್ತಾಗಿದೆ. ಬಿಸಿಸಿಐ ಉನ್ನತ ಅಧಿಕಾರಿಗಳು ಗಂಭೀರ್​ ಜತೆ ಚರ್ಚಿಸಿದ್ದಾರೆ. ತರಬೇತುದಾರರಾಗಿ ಭಾರತದ ಮಾಜಿ ಆರಂಭಿಕ ಬ್ಯಾಟರ್​ನ ನೇಮಕವು ಅಂತಿಮಗೊಂಡಿದೆ. ಪ್ರಕಟಣೆ ಶೀಘ್ರದಲ್ಲೇ ಬರಲಿದೆ” ಎಂದು ಅವರು ಹೇಳಿದ್ದಾರೆ ಎಂಬುದಾಗಿ ವರದಿ ಮಾಡಲಾಗಿದೆ. ಶಾರುಖ್​ ಅವರು ಗಂಭೀರ್​ಗೆ ತಮ್ಮೊಂದಿಗೆ ಇರಲು ಸಾಕಷ್ಟು ಮನವಿ ಮಾಡುತ್ತಿದ್ದಾರೆ. ಹೀಗಾಗಿ ಅವರು ಹೋಗವು ವಿಚಾರದಲ್ಲಿ ಗೊಂದಲಗಳಿವೆ. ಈ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಟಿಲ್ಲ. , ಮಾತುಕತೆಗಳು ಇನ್ನೂ ಮುಂದುವರಿದಿದೆ ಎಂಬ ಅಂಶವನ್ನು ಇದು ಸೂಚಿಸುತ್ತದೆ.

ವಿದೇಶಿ ಕೋಚ್​ ಬೇಡ

ಭಾರತದ ಮುಂದಿನ ಮುಖ್ಯ ಕೋಚ್ ಆಗಲು ಬಿಸಿಸಿಐ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗರನ್ನು ಸಂಪರ್ಕಿಸಿದೆ ಎಂಬ ಹೇಳಿಕೆಗಳನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕಳೆದ ವಾರ ತಿರಸ್ಕರಿಸಿದ್ದರು. ರಾಹುಲ್ ದ್ರಾವಿಡ್ ಅವರ ಉತ್ತರಾಧಿಕಾರಿ ಭಾರತೀಯರೇ ಆಗುತ್ತಾರೆ ಎಂದು ಸುಳಿವು ನೀಡಿದ್ದರು.

ಇದನ್ನೂ ಓದಿ: T20 World Cup 2024: ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್​ ಕಿತ್ತ ಟಾಪ್​ 5 ಬೌಲರ್​ಗಳು ಯಾರು?

ನಾನು ಅಥವಾ ಬಿಸಿಸಿಐ ಆಸ್ಟ್ರೇಲಿಯಾದ ಯಾವುದೇ ಮಾಜಿ ಕ್ರಿಕೆಟಿಗರನ್ನು ಕೋಚಿಂಗ್ ಪ್ರಸ್ತಾಪದೊಂದಿಗೆ ಸಂಪರ್ಕಿಸಿಲ್ಲ. ಕೆಲವು ಮಾಧ್ಯಮ ವಿಭಾಗಗಳಲ್ಲಿ ಪ್ರಸಾರವಾಗುತ್ತಿರುವ ವರದಿಗಳು ಸಂಪೂರ್ಣವಾಗಿ ತಪ್ಪು ಎಂದು ಶಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಮ್ಮ ರಾಷ್ಟ್ರೀಯ ತಂಡಕ್ಕೆ ಸರಿಯಾದ ತರಬೇತುದಾರನನ್ನು ಹುಡುಕುವುದು ನಿಖರವಾದ ಮತ್ತು ಸಂಪೂರ್ಣ ಪ್ರಕ್ರಿಯೆಯಾಗಿದೆ. ಭಾರತೀಯ ಕ್ರಿಕೆಟ್ ರಚನೆಯ ಬಗ್ಗೆ ಆಳವಾದ ತಿಳುವಳಿಕೆಯನ್ನು ಹೊಂದಿರುವ ಮತ್ತು ಶ್ರೇಣಿಗಳ ಮೂಲಕ ಬೆಳೆದ ವ್ಯಕ್ತಿಗಳನ್ನು ಗುರುತಿಸುವತ್ತ ನಾವು ಗಮನ ಹರಿಸಿದ್ದೇವೆ” ಎಂದು ಶಾ ಹೇಳಿದ್ದಾರೆ.

Exit mobile version