Site icon Vistara News

Virat kohli : ಕೊಹ್ಲಿ ಜತೆಗಿನ ಮುನಿಸು ಕೊನೆಗೊಳಿಸಿದ್ದೇ ಗಂಭೀರ್​; ವಿರಾಟ್ ಅಹಂ ಬಿಡಲಿಲ್ಲ ಎಂದ ಮಾಜಿ ಸ್ಪಿನ್ನರ್​​

Virat Kohli

ಬೆಂಗಳೂರು: ವಿರಾಟ್ ಕೊಹ್ಲಿ (Virat kohli) ಹಾಗೂ ಗೌತಮ್ ಗಂಭೀರ್ ನಡುವಿನ ಕೋಳಿ ಜಗಳ ವಿಶ್ವ ವಿಖ್ಯಾತಿ ಪಡೆದುಕೊಂಡಿದೆ. ಹಲವಾರು ಬಾರಿ ಜಗಳವಾಡಿಕೊಂಡಿದ್ದ ಅವರ ಕೋಪ ಇನ್ನೂ ಮುಂದುವರಿದಿರಬಹುದು ಎಂದು ಹೇಳಲಾಗುತ್ತಿದೆ. ಇದೀಗ ಗಂಭೀರ್ ಭಾರತ ತಂಡದ ಕೋಚ್ ಆಗಿ ನೇಮಕಗೊಂಡಿದ್ದಾರೆ. ಹೀಗಾಗಿ ಕೊಹ್ಲಿ ಮತ್ತು ಅವರ ನಡುವೆ ಶೀತಲ ಸಮರ ನಡೆಯಬಹುದು ಎಂಬುದಾಗಿ ಹೇಳಲಾಗುತ್ತಿದೆ. ಆದರೆ ಕೊಹ್ಲಿ ಮತ್ತು ಗಂಭೀರ್​ ನಡುವಿನ ಗಲಾಟೆ ಮುಗಿದ ಅಧ್ಯಾಯ ಎಂಬುದಾಗಿ ಭಾರತ ತಂಡದ ಮಾಜಿ ಸ್ಪಿನ್ನರ್ ಅಮಿತ್​ ಮಿಶ್ರಾ ಹೇಳಿದ್ದಾರೆ.

ಗೌತಮ್​ ಗಂಭೀರ್ ಅವರು ವಿರಾಟ್ ಕೊಹ್ಲಿ ಅವರೊಂದಿಗಿನ ಜಗಳವನ್ನು ಕೊನೆಗೊಳಿಸಿದ್ದಾರೆ. ಐಪಿಎಲ್ 2023 ರ ಋತುವಿನಲ್ಲಿ ಆರ್​ಸಿಬಿ ಮತ್ತು ಎಲ್ಎಸ್​​ಜಿ ಲಖನೌ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ಮುಖಾಮುಖಿಯಾದಾಗ ಗಂಭೀರ್ ಮತ್ತು ಕೊಹ್ಲಿ ಮೈದಾನದಲ್ಲೇ ವಾಗ್ವಾದದಲ್ಲಿ ತೊಡಗಿದ್ದರು. ಇಬ್ಬರೂ ನವೀನ್-ಉಲ್-ಹಕ್ ವಿಷಯಕ್ಕೆ ತೀವ್ರ ವಾಗ್ವಾದದಲ್ಲಿ ಭಾಗಿಯಾಗಿದ್ದರು. ಮೂವರೂ ಬಿಸಿಸಿಐನಿಂದ ಛೀಮಾರಿ ಹಾಕಿಸಿಕೊಂಡಿದ್ದರು.

ಐಪಿಎಲ್ 2024 ರ ಋತುವಿನಲ್ಲಿ ಗಂಭೀರ್ ಮತ್ತು ಕೊಹ್ಲಿ ನಡುವೆ ಎಲ್ಲವೂ ಬಗೆಹರಿದಿದೆ. ಏಕೆಂದರೆ ಬೆಂಗಳೂರಿನಲ್ಲಿ ನಡೆದ ಕೆಕೆಆರ್ ಮತ್ತು ಆರ್​ಸಿಬಿ ನಡುವಿನ ಪಂದ್ಯದ ಸಮಯದಲ್ಲಿ ಇಬ್ಬರೂ ಪರಸ್ಪರ ತಬ್ಬಿಕೊಂಡಿದ್ದರ. ಪಂದ್ಯಕ್ಕೆ ಮುಂಚಿತವಾಗಿ ಕೋಲ್ಕತ್ತಾದಲ್ಲಿ ನಡೆದ ರಿವರ್ಸ್ ಪಂದ್ಯದ ವೇಳೆಯೂ ಸಂಭಾಷಣೆ ನಡೆಸುತ್ತಿರುವುದು ಕಂಡುಬಂದಿದೆ. ಯೂಟ್ಯೂಬರ್ ಶುಭಂಕರ್ ಮಿಶ್ರಾ ಅವರ ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತ್, ಕೊಹ್ಲಿಯೊಂದಿಗಿನ ಭಿನ್ನಾಭಿಪ್ರಾಯ ಕೊನೆಗೊಳಿಸಲು ಗಂಭೀರ್ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದ್ದಾರೆ.

ಕೆಕೆಆರ್​​ನ ಮಾಜಿ ಮೆಂಟರ್ ಗಂಭೀರ್​, ಕೊಹ್ಲಿಯ ಜತೆ ಅವರ ಕುಟುಂಬದ ಆರೋಗ್ಯ ವಿಚಾರಿಸಿದ್ದರು. ಅವರು ಅಜಗಳವನ್ನು ಕೊನೆಗೊಳಿಸಿದ್ದರು. ಹೀಗಾಗಿ ಅವರಿಬ್ಬರ ನಡುವಿನ ಜಗಳವನ್ನು ಗಂಭೀರ್ ಮುಕ್ತಾಯಗೊಳಿಸಿದ್ದಾರೆ ಎಮದು ಹೇಳಿದ್ದಾರೆ. ಇದೇ ವೇಳೆ ಅಮಿತ್ ಮಿಶ್ರಾ, ಈ ಕೆಲಸವನ್ನು ಕೊಹ್ಲಿ ಮೊದಲು ಮಾಡಬೇಕಾಗಿತ್ತು ಎಂದು ಹೇಳಿದ್ದಾರೆ.

ಇದನ್ನೂ ಓದಿ: Paris Olympics 2024: ಮೊಟ್ಟಮೊದಲ ಒಲಿಂಪಿಕ್ಸ್ ಕ್ರೀಡಾಕೂಟದ 10 ಕುತೂಹಲಕರ ಸಂಗತಿಗಳಿವು

ನಾನು ಅಂದು ಗೌತಮ್ ವಿಚಾರದಲ್ಲಿ ಒಳ್ಳೆಯ ವಿಷಯವನ್ನು ನೋಡಿದೆ. ವಿರಾಟ್ ಕೊಹ್ಲಿ ಗೌತಮ್​ ಕಡೆಗೆ ಹೋಗಲಿಲ್ಲ, ಗೌತಮ್ ಅವರ ಕಡೆಗೆ ಹೋದರು. ಅವರೆಏ ಹೋಗಿ ‘ಹೇಗಿದ್ದೀರಿ, ನಿಮ್ಮ ಕುಟುಂಬ ಹೇಗಿದೆ’ ಎಂದು ಕೇಳಿದರು. ಈ ಮೂಲಕ ಜಗಳ ಕೊನೆಗೊಳಿಸಿದ್ದು ಗೌತಮ್ ಹೊರತು ಕೊಹ್ಲಿ ಅಲ್ಲ” ಎಂದು ಅಮಿತ್ ಮಿಶ್ರಾ ಹೇಳಿದ್ದಾರೆ.

“ಗೌತಮ್ ಆ ಸಮಯದಲ್ಲಿ ತಮ್ಮ ವಿಶಾಲ ಹೃದಯ ತೋರಿಸಿದರು. ಕೊಹ್ಲಿ ಹೋಗಿ ಜಗಳವನ್ನು ಕೊನೆಗೊಳಿಸಬೇಕಿತ್ತು. ಅವರೇ ಹೋಗಿ ‘ಗೌತಮ್​. ಇದನ್ನು ಕೊನೆಗೊಳಿಸೋಣ’ ಎಂದು ಹೇಳಬೇಕಿತ್ತು” ಎಂದು ಅಮಿತ್ ಮಿಶ್ರಾ ಹೇಳಿದರು.

ಗೌತಮ್ ಗಂಭೀರ್ ಅವರು ವಿರಾಟ್ ಕೊಹ್ಲಿ ಅವರ ಬಳಿಗೆ ಹೋಗಿ ಅವರನ್ನು ತಬ್ಬಿಕೊಳ್ಳುವ ಮೂಲಕ ಅವರೊಂದಿಗಿನ ದ್ವೇಷ ಕೊನೆಗೊಳಿಸಿದರು/ ಆ ಮೂಲಕ ಅವರ ವಿಶಾಲ ಹೃದಯ ತೋರಿಸಿದರು. ಆದಾಗ್ಯೂ, ಕೊಹ್ಲಿ ಇದನ್ನು ಮಾಡಬೇಕಾಗಿತ್ತು, ಏಕೆಂದರೆ ಅವರು ಸಮಸ್ಯೆಯನ್ನು ದೊಡ್ಡದಾಗಿ ಮಾಡಿದರು ಮತ್ತು ಅದನ್ನು ಎಳೆದರು, ಎಂದು ಅವರು ಹೇಳಿದ್ದಾರೆ.

ಕೊಹ್ಲಿ ಮತ್ತು ಗಂಭೀರ್ ಒಟ್ಟಿಗೆ ಕೆಲಸ ಮಾಡಲು ಸಜ್ಜು


ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಮಾಜಿ ಆರಂಭಿಕ ಬ್ಯಾಟರ್​ ಗೌತಮ್​ ಗಂಭೀರ್​ ನೇಮಕಗೊಂಡಿದ್ದರಿಂದ ಕೊಹ್ಲಿ ಮತ್ತು ಗಂಭೀರ್ ಈಗ ಮತ್ತೊಮ್ಮೆ ಒಟ್ಟಿಗೆ ಕೆಲಸ ಮಾಡಲು ಸಜ್ಜಾಗಿದ್ದಾರೆ. ರಾಹುಲ್ ದ್ರಾವಿಡ್ ಬದಲಿಗೆ ಗಂಭೀರ್ ಜುಲೈ 27ರಿಂದ ಆರಂಭವಾಗಲಿರುವ ಶ್ರೀಲಂಕಾ ಪ್ರವಾಸದೊಂದಿಗೆ ತಮ್ಮ ಅಧಿಕಾರಾವಧಿಯನ್ನು ಆರಂಭಿಸಲಿದ್ದಾರೆ.

Exit mobile version