ಬೆಂಗಳೂರು: ಐಪಿಎಲ್ನ ಕೋಲ್ಕತಾ ನೈಟ್ ರೈಡರ್ಸ್ (KKR) ಹೆಡ್ ಕೋಚ್ ಗೌತಮ್ ಗಂಭೀರ್ (Gautam Gambhir) ಅವರು ಕೋಲ್ಕತ್ತಾದ ಈಡನ್ ಗಾರ್ಡರ್ಸ್ನಲ್ಲಿ ವಿದಾಯ ವೀಡಿಯೊವನ್ನು ಚಿತ್ರೀಕರಿಸಿದ್ದಾರೆ ಎಂದು ವರದಿಯಾಗಿದೆ. ರಾಹುಲ್ ದ್ರಾವಿಡ್ ಅವರ ಉತ್ತರಾಧಿಕಾರಿ ಟೀಮ್ ಇಂಡಿಯಾ ಕೋಚ್ ಯಾರೆಂಬುದನ್ನು ಬಿಸಿಸಿಐ ಶೀಘ್ರದಲ್ಲೇ ಘೋಷಿಸಲಿದೆ. ಬಹುತೇಕ ಅದು ಗೌತಮ್ ಗಂಭೀರ್. ಹೀಗಾಗಿ ಅವರು ವಿದಾಯದ ಶೂಟಿಂಗ್ ಮಾಡಿದ್ದಾರೆ. ಕಪ್ ಗೆದ್ದು ಕೊಟ್ಟಿರುವ ಐಪಿಎಲ್ ಫ್ರಾಂಚೈಸಿಯಿಂದ ಅವರು ನಿರ್ಗಮಿಸಲಿದ್ದಾರೆ ಎಂಬುದಾಗಿ ವರದಿಯಾಗಿದೆ.
Gautam Gambhir attended his farewell video shoot at the Eden Gardens yesterday. pic.twitter.com/gqVqbQ8MPq
— Mufaddal Vohra (@mufaddal_vohra) July 7, 2024
ಗೌತಮ್ ಗಂಭೀರ್ ಮುಂದಿನ ಉಸ್ತುವಾರಿ ವಹಿಸಲಿದ್ದಾರೆ ಎಂದು ಹಲವಾರು ಮಾಧ್ಯಮಗಳ ವರದಿಗಳು ಹೇಳಿವೆ. ಆದರೆ, ಮಾಜಿ ಕ್ರಿಕೆಟಿಗ ಈ ಬಗ್ಗೆ ಮೌನವಾಗಿದ್ದಾರೆ. ಇನ್ನೂ ದಿನಗಳು ದೂರ ಇವೆ ಎಂದು ಹೇಳಿದ್ದಾರೆ. ಗಂಭೀರ್ ಅಥವಾ ಬಿಸಿಸಿಐ ಯಾವುದೇ ಅಧಿಕೃತ ಘೋಷಣೆ ಮಾಡುವ ಮೊದಲು, ಕೆಕೆಆರ್ ಮಾರ್ಗದರ್ಶಕ ಫ್ರಾಂಚೈಸಿಗೆ ವಿದಾಯ ಹೇಳಿದ್ದಾರೆ ಎಂದು ವರದಿಗಳು ಸೂಚಿಸಿವೆ.
ಟೈಮ್ಸ್ ನೌ ವರದಿಯ ಪ್ರಕಾರ, ಎರಡು ಬಾರಿ ಐಪಿಎಲ್ ವಿಜೇತ ಕೆಕೆಆರ್ ನಾಯಕ ಗಂಭೀರ್ ಶುಕ್ರವಾರ ಈಡನ್ ಗಾರ್ಡನ್ಗೆ ಭೇಟಿ ನೀಡಿ ಫ್ರಾಂಚೈಸಿ ಮತ್ತು ಅಭಿಮಾನಿಗಳಿಗೆ ವಿದಾಯ ಹೇಳುವ ವೀಡಿಯೊವನ್ನು ಚಿತ್ರೀಕರಿಸಿದ್ದಾರೆ. ಈ ವೀಡಿಯೊ ಕೆಕೆಆರ್ ಫ್ರಾಂಚೈಸಿಯೊಂದಿಗೆ ಗಂಭೀರ್ ಅವರ ಪ್ರಯಾಣದ ಕೊನೆ ಎಂದು ಹೇಳಲಾಗುತ್ತದೆ.
ಜುಲೈ 5 ರಂದು ಈಡನ್ ಗಾರ್ಡನ್ಸ್ನಲ್ಲಿ ಭಾರತದ ಮಾಜಿ ಆರಂಭಿಕ ಆಟಗಾರನ ಉಪಸ್ಥಿತಿ ಇದ್ದರು ಎಂಬುದನ್ನು ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧಿಕಾರಿಯೊಬ್ಬರು ದೃಢ ಪಡಿಸಿದ್ದಾರೆ. “ಇದು ಕಡಿಮೆ ಪ್ರಾಮುಖ್ಯತೆಯ ವಿಷಯ. ಆದರೆ ಗಂಭೀರ್ ತಮ್ಮ ಅಭಿಮಾನಿಗಳಿಗೆ ಸಂದೇಶದೊಂದಿಗೆ ವಿದಾಯ ಹೇಳಲು ಬಯಸಿದ್ದರು ಮತ್ತು ಅದಕ್ಕಾಗಿಯೇ ಅವರು ಈಡನ್ನಲ್ಲಿ ವೀಡಿಯೊವನ್ನು ಚಿತ್ರೀಕರಿಸಿದರು” ಎಂದು ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: Virat Kohli : ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ಬಿಟಿಎಸ್ ಬ್ಯಾಂಡ್ನ ದಾಖಲೆ ಮುರಿದ ವಿರಾಟ್ ಕೊಹ್ಲಿ
ಗಂಭೀರ್ 2012 ಮತ್ತು 2014ರಲ್ಲಿ ಕೆಕೆಆರ್ ತಂಡದಲ್ಲಿ ನಾಯಕರಾಗಿ ಐಪಿಎಲ್ ಗೆದ್ದಿದ್ದರು. ನಂತರ ಅವರು 2024 ರಲ್ಲಿ ಮಾರ್ಗದರ್ಶಕರಾಗಿ ಫ್ರಾಂಚೈಸಿಗೆ ಮರಳಿದ್ದರು. ಮೊದಲ ಪ್ರಯತ್ನದಲ್ಲೇ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಮೂರನೇ ಪ್ರಶಸ್ತಿಯನ್ನು ಗೆಲ್ಲಲು ಸಹಾಯ ಮಾಡಿದ್ದರು.
ಈ ತಿಂಗಳ ಕೊನೆಯಲ್ಲಿ ಶ್ರೀಲಂಕಾದಲ್ಲಿ ಪ್ರವಾಸದಲ್ಲಿ ನಡೆಯಲಿರುವ ಸೀಮಿತ ಓವರ್ನಲ್ಲಿ ಸರಣಿಯಿಂದ ಭಾರತೀಯ ಕ್ರಿಕೆಟ್ ತಂಡಕ್ಕೆ ಹೊಸ ಮುಖ್ಯ ಕೋಚ್ ನೇಮಕವಾಗಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸೋಮವಾರ ಹೇಳಿದ್ದಾರೆ.