Site icon Vistara News

GDP Growth rate | 2023ರ ಜಿಡಿಪಿ 5.9%ಕ್ಕೆ ಇಳಿಕೆ ಸಂಭವ: ಗೋಲ್ಡ್ಮನ್ ‌ಸ್ಯಾಕ್ಸ್ ಮುನ್ನೋಟ

goldman

ನವ ದೆಹಲಿ: ‌ ಭಾರತ ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂಬ ಹೆಗ್ಗಳಿಕೆಯನ್ನು 2023ರಲ್ಲಿ ಕಳೆದುಕೊಳ್ಳುವ ಸಾಧ್ಯತೆ ಇದೆ (GDP Growth rate ) ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಗೋಲ್ಡ್ಮನ್‌ ಸ್ಯಾಕ್ಸ್‌ನ ಇತ್ತೀಚಿನ ವರದಿ ತಿಳಿಸಿದೆ.

ಸಾಲದ ವೆಚ್ಚ ದುಬಾರಿಯಾಗುತ್ತಿರುವುದು ಮತ್ತು ಆರ್ಥಿಕ ಚಟುವಟಿಕೆಗಳ ಮಂದಗತಿಯ ಪರಿಣಾಮ ಜಿಡಿಪಿ ಬೆಳವಣಿಗೆ ಕುಂಠಿತವಾಗಲಿದೆ ಎಂದು ಗೋಲ್ಡ್ಮನ್‌ ಸ್ಯಾಕ್ಸ್‌ ವರದಿ ತಿಳಿಸಿದೆ. 2022ರಲ್ಲಿ 6.9% ಹಾಗೂ 2023ರಲ್ಲಿ 5.9% ಜಿಡಿಪಿ ಅಂದಾಜನ್ನು ಸಂಸ್ಥೆ ಮಾಡಿದೆ.

ಭಾರತದ ಜಿಡಿಪಿ ಕಳೆದ 2021-22ರಲ್ಲಿ 8.7% ರಷ್ಟು ವೃದ್ಧಿಸಿತ್ತು. 2023ರಲ್ಲಿ ಚಿಲ್ಲರೆ ಹಣದುಬ್ಬರ 6.1%ಕ್ಕೆ ಇಳಿಕೆಯಾಗಬಹುದು ಎಂದೂ ನಿರೀಕ್ಷಿಸಿದೆ. ಹೀಗಿದ್ದರೂ, ಆರ್‌ಬಿಐನ ಸಹಿಷ್ಣುತೆಯ ಮಟ್ಟಕ್ಕಿಂತ (6%) ಮೇಲಿದೆ.

Exit mobile version