ಬೆಂಗಳೂರು: ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ ರಾತ್ರಿ ನಡೆದ ಮುಂಬಯಿ ಇಂಡಿಯನ್ಸ್ ವಿರುದ್ದದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬಿಗ್ ಹಿಟ್ಟರ್ ಗ್ಲೆನ್ ಮ್ಯಾಕ್ಸ್ವೆಲ್ (Glenn Maxwell) ಹೆಬ್ಬೆರಳಿನ ಗಾಯಕ್ಕೆ ಒಳಗಾಗಿದ್ದಾರೆ. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಅವರು ಹೊರಕ್ಕೆ ಬೀಳುವ ಸಾಧ್ಯತೆಗಳಿವೆ. ಹೀಗಾಗಿ ಅವರು ತಂಡವನ್ನು ತೊರೆದು ಮನೆಗೆ ಹೋಗಲಿದ್ದಾರೆ.
ಐಪಿಎಲ್ 2024 ರ ಆರ್ಸಿಬಿಯ 6ನೇ ಲೀಗ್ ಹಂತದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಫೀಲ್ಡಿಂಗ್ ಮಾಡುವಾಗ ಮ್ಯಾಕ್ಸ್ವೆಲ್ ಹೆಬ್ಬೆರಳಿಗೆ ಗಾಯವಾಗಿದೆ. ಅಲ್ಲಿ ಆರ್ಸಿಬಿ ತವರು ತಂಡದ ವಿರುದ್ಧ 7 ವಿಕೆಟ್ಗಳಿಂದ ಸೋತಿತ್ತು. ಈ ಆಘಾತದ ನಡುವೆ ಹೆಬ್ಬೆರಳಿನ ಗಾಯದ ಸಮಸ್ಯೆಯಿಂದಾಗಿ ಮ್ಯಾಕ್ಸ್ವೆಲ್ ಆರ್ಸಿಬಿಯ ಮುಂದಿನ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂಬ ಸುದ್ದಿ ಬಂದಿದೆ.
Glenn Maxwell is expected to sit out RCB's next match against SRH in Bengaluru due to a thumb injury. (News 24) pic.twitter.com/eWK64dCLrq
— Vipin Tiwari (@Vipintiwari952_) April 12, 2024
ಅಗ್ರ ಮಧ್ಯಮ ಕ್ರಮಾಂಕದಲ್ಲಿ ಆರ್ಸಿಬಿ ಪ್ರಮುಖ ಬ್ಯಾಟರ್ ಎಂದು ಪರಿಗಣಿಸಲ್ಪಟ್ಟಿರುವ ಗ್ಲೆನ್ ಮ್ಯಾಕ್ಸ್ವೆಲ್ಗೆ 2024 ರ ಋತು ಕಠಿಣ ಎನಿಸಿದೆ. ಪವರ್ ಹಿಟ್ಟರ್ ಎಂಬ ಅವರ ಖ್ಯಾತಿಗೆ ತಕ್ಕದಾಗಿ ಆಡಿಲ್ಲ. ಅವರ ಇತ್ತೀಚಿನ ಗಾಯದ ಹಿನ್ನಡೆಯು ಬೆಂಗಳೂರು ಡ್ರೆಸ್ಸಿಂಗ್ ಕೋಣೆಯಲ್ಲಿ ಸಮಸ್ಯೆ ಉಂಟುಮಾಡಿದೆ. ತಂಡದ ಪರ ವಿರಾಟ್ ಕೊಹ್ಲಿ ಮಾತ್ರ ಫಾರ್ಮ್ನಲ್ಲಿದ್ದಾರೆ. ಉಳಿದವರು ಆಡುತ್ತಿಲ್ಲ.
ಮುಂಬಯಿ ವಿರುದ್ಧದ ಪಂದ್ಯದ ವೇಳೆ ವಿರಾಟ್ ಕೊಹ್ಲಿಗೆ ಐಪಿಎಲ್ 2024 ರಲ್ಲಿ ಮೊದಲ ಬಾರಿಗೆ ಒಂದೇ ಒಂದು ಬೌಂಡರಿ ಗಳಿಸಲು ಸಾಧ್ಯವಾಗಲಿಲ್ಲ. ಎರಡಂಕಿಗಳನ್ನು ತಲುಪದೆ ಔಟಾದರು. ಮುಂಬೈ ಇಂಡಿಯನ್ಸ್ ಮುಂಚೂಣಿ ವೇಗಿ ಜಸ್ಪ್ರೀತ್ ಬುಮ್ರಾ 3 ರನ್ ಮಾಡಿದ್ದ 35 ವರ್ಷದ ಆಟಗಾರನನ್ನು ಕಳುಹಿಸಿದರು. ಆದರೆ ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ರಜತ್ ಪಾಟಿದಾರ್ ಉತ್ತಮವಾಗಿ ಆಡಿದರು.
ಗ್ಲೆನ್ ಮ್ಯಾಕ್ಸ್ವೆಲ್ ಸಮಸ್ಯೆ ಏನು?
ನ್ ಮ್ಯಾಕ್ಸ್ವೆಲ್ ಈ ಐಪಿಎಲ್ 2024 ಋತುವಿನಲ್ಲಿ ಅವಸರದಲ್ಲಿ ಆಡುತ್ತಿದ್ದಾರೆ. ಅವರು ತಾಳ್ಮೆ ಕಳೆದುಕೊಂಡಿದ್ದಾರೆ. ಆಸಿಸ್ ಆಟಗಾರ ಎದುರಿಗೆ ಬರುವ ಪ್ರತಿಯೊಂದು ಚೆಂಡನ್ನು ಹೊಡೆಯಲು ನೋಡುತ್ತಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ (0) ವಿರುದ್ಧದ ಆರಂಭಿಕ ಪಂದ್ಯದಲ್ಲಿ ಮ್ಯಾಕ್ಸ್ವೆಲ್ ಕಳಪೆ ಶಾಟ್ ಆಯ್ಕೆ ಮಾಡಿದರು, ಏಕೆಂದರೆ ಅವರು ದೀಪಕ್ ಚಹರ್ ಅವರ ಎಸೆತವನ್ನು ಅಂದಾಜಿಸದೇ ಹೊಡೆಯಲು ಹೋಗಿ ಧೋನಿಗೆ ಕ್ಯಾಚ್ ನೀಡಿದರು.
ಪಂಜಾಬ್ ಕಿಂಗ್ಸ್ (3) ವಿರುದ್ಧದ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಫಿಂಗರ್ ಸ್ಪಿನ್ನರ್ ಹರ್ಪ್ರೀತ್ ಬ್ರಾರ್ ವಿರುದ್ಧ ಔಟ್ ಆದರು. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ 3 ನೇ ಪಂದ್ಯದಲ್ಲಿ ಮ್ಯಾಕ್ಸ್ವೆಲ್ ಅವರು ಎಕ್ಸ್ಪ್ರೆಸ್ ವೇಗಿ ಮಯಾಂಕ್ ಯಾದವ್ ಅವರ ಶಾರ್ಟ್ ಪಿಚ್ ಎಸೆತವನ್ನು ಎದುರಿಸಿ ಕ್ಯಾಚ್ ನೀಡಿದ ಔಟಾದರು.
ಇದನ್ನೂ ಓದಿ: Ishan Kishan : ಬಿಸಿಸಿಐ ವಾರ್ನಿಂಗ್ ನಡುವೆಯೂ ರಣಜಿ ಆಡದಿರುವುದಕ್ಕೆ ಕಾರಣ ಕೊಟ್ಟ ಇಶಾನ್ ಕಿಶನ್
ರಾಜಸ್ಥಾನ್ ರಾಯಲ್ಸ್ ವಿರುದ್ಧ, ಮ್ಯಾಕ್ಸ್ವೆಲ್ ಅವರು ಪಂಜಾಬ್ ವಿರುದ್ಧ ಮಾಡಿದಂತೆಯೇ ನಾಂಡ್ರೆ ಬರ್ಗರ್ ಅವರ ಕಠಿಣ ಲೆಂಗ್ತ್ ಎಸೆತ ಅರಿಯದೇ ಹೊಡೆಯಲು ಮುಂದಾದರು. ಮಿಡ್ ವಿಕೆಟ್ ಕಡೆಗೆ ಆಡಲು ಪ್ರಯತ್ನಿಸಿದ್ದರಿಂದ ಚೆಂಡು ಸ್ಟಂಪ್ಗಳನ್ನು ಚೆಲ್ಲಾಪಿಲ್ಲಿ ಮಾಡಿತು. ಕಳೆದ ರಾತ್ರಿ ಮುಂಬೈ ಇಂಡಿಯನ್ಸ್ ವಿರುದ್ಧದ ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಎಸೆತವನ್ನು ಅರಿಯದೇ ಮತ್ತೆ ಡಕ್ಔಟ್ ಆದರು.
ಮ್ಯಾಕ್ಸ್ವೆಲ್ಗೆ ಸಾಮರ್ಥ್ಯ ಪ್ರದರ್ಶನಕ್ಕೆ ಅಡ್ಡಿಯಾಗುತ್ತಿರುವುದು ಅವರ ಶಾಟ್ ಆಯ್ಕೆಯಿಂದ ಸಹಜವಾಗಿ ತಾಳ್ಮೆಯ ಕೊರತೆ.