Site icon Vistara News

Cable TV Subscriber : ಕೇಬಲ್​, ಡಿಶ್​ ಟಿವಿ ಬಳಕೆದಾರರಿಗೆ ಗುಡ್​ ನ್ಯೂಸ್​, ಅಗ್ಗವಾಗಲಿದೆ ನಿಮ್ಮ ಮಾಸಿಕ ಬಿಲ್​

Cable TV Subscriber

ಬೆಂಗಳೂರು: ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಪ್ರಸಾರ ಮತ್ತು ಕೇಬಲ್ ಸೇವೆಗಳನ್ನು ನಿಯಂತ್ರಿಸುವ ನಿಯಮಗಳಲ್ಲಿ ಹಲವಾರು ಬದಲಾವಣೆಗಳನ್ನು ಪ್ರಕಟಿಸಿದೆ. ಇದು ದೇಶಾದ್ಯಂತ ಇರುವ ಲಕ್ಷಾಂತರ ಡಿಟಿಎಚ್ ಮತ್ತು ಕೇಬಲ್ ಟಿವಿ ಬಳಕೆದಾರರಿಗೆ (Cable TV Subscriber ) ದೊಡ್ಡ ಲಾಭ ನೀಡಲಿದೆ. ಪ್ರಮುಖವಾಗಿ ಸೆಟ್-ಟಾಪ್ ಬಾಕ್ಸ್​ಗಳನ್ನು ಬದಲಾಯಿಸದೇ ಒಂದು ಸೇವಾದಾರರಿಂದ ಮತ್ತೊಂದು ಸೇವಾದಾರರಿಗೆ ಬದಲಾಯಿಸಿಕೊಳ್ಳುವುದಕ್ಕೆ ಅವಕಾಶ ನೀಡುತ್ತಿದೆ. ಹೀಗಾಗಿ ಸೆಟ್​ಅಪ್​ ಬಾಕ್ಸ್​ಗೆ ಪದೇ ಪದೇ ಹಣ ಪಾವತಿಸುವ ಪ್ರಮೇಯ ಇರುವುದಿಲ್ಲ. ಜತೆಗೆ ಒಟ್ಟು ಬಿಲ್​ ಕೂಡ ಅಗ್ಗವಾಗಲಿದೆ. ಅದಕ್ಕೆ ಪೂರಕವಾಗಿ ಮಾಸಿಕ ಟಿವಿ ಶುಲ್ಕಗಳ ಮೇಲೆ ಪರಿಣಾಮ ಬೀರುವ ಮತ್ತೊಂದು ಪ್ರಮುಖ ಶಿಫಾರಸು ಕೂಡ ಮಾಡಿದೆ.

ಹೊಸ ನಿಯಮದ ಅಡಿಯಲ್ಲಿ ಸೇವೆಗಳನ್ನು ಪೂರೈಕೆ ಮಾಡುವ ಕಂಪನಿಗಳು ಗ್ರಾಹಕರಿಗೆ ವಿಧಿಸುವ ನೆಟ್ವರ್ಕ್ ಸಾಮರ್ಥ್ಯ ಶುಲ್ಕವನ್ನು (ಎನ್​ಸಿಎಫ್) ಟ್ರಾಯ್ ತೆಗೆದುಹಾಕಿದೆ. ಪ್ರಸ್ತುತ 200 ಚಾನೆಲ್​​ಗಳಿಗೆ 130 ರೂ ಮತ್ತು 200 ಕ್ಕೂ ಹೆಚ್ಚು ಚಾನೆಲ್​ಗಳಿಗೆ 160 ರೂ. ವಿಧಿಸಲಾಗುತ್ತಿದೆ. ಇದೀಗ ಸ್ಪರ್ಧಾತ್ಮಕ ಮತ್ತು ಪ್ರಾದೇಶಿಕವಾಗಿ ಕಡಿಮೆ ಶುಲ್ಕ ವಿಧಿಸುವ ಆಯ್ಕೆಯನ್ನು ನೀಡಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ದರ ಕಡಿಮೆಯ ಆದೇಶ:

ನೆಟ್ವರ್ಕ್ ಸಾಮರ್ಥ್ಯ ಶುಲ್ಕ (ಎನ್​​ಸಿಎಫ್) ಮಿತಿ ತೆಗೆದುಹಾಕಿರುವ ಕಾರಣ ಸೇವಾ ಪೂರೈಕೆದಾರರು ಈಗ ವಿವಿಧ ಅಂಶಗಳ ಆಧಾರದ ಮೇಲೆ ವಿಭಿನ್ನ ಎನ್​​ಸಿಎಫ್​ಗಳನ್ನು ಹೊಂದಿಸಬೇಕು. ಆದರೆ ಈ ಶುಲ್ಕಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಬೇಕು. ಅವರು ತಮ್ಮ ಆಯ್ಕೆಯನ್ನು ಪಡೆದುಕೊಳ್ಳಬಹುದು.

ಡಿಪಿಒಗಳು ಈಗ ಚಾನೆಲ್ ಬಂಡಲ್​ಗಳ ಮೇಲೆ 45% ವರೆಗೆ ರಿಯಾಯಿತಿಯನ್ನು ನೀಡಬಹುದು. ಹಿಂದಿನ ಮಿತಿ 15% ಮಾತ್ರ ಇತ್ತು. ಹೀಗಾಗಿ ಪಾವತಿಸುವ ಮೊತ್ತ ಕಡಿಮೆಯಾಗಲಿದೆ.

ಸಾರ್ವಜನಿಕ ಸೇವಾ ಪ್ರಸಾರಕರ ಡಿಟಿಎಚ್ ವೇದಿಕೆಯಲ್ಲಿ ಪೇ ಚಾನೆಲ್​​ಗಳನ್ನು ಎಲ್ಲಾ ವಿತರಣಾ ಫ್ಲ್ಯಾಟ್​​ಫಾರ್ಮ್​ಗಳಿಗೆ ಉಚಿತವಾಗಿ ಪ್ರಸಾರ ಮಾಡಬೇಕು.

ಅಂತರಸಂಪರ್ಕ ನಿಯಮಗಳು:

ಕ್ಯಾರೇಜ್ ಶುಲ್ಕದ ಉದ್ದೇಶಗಳಿಗಾಗಿ ಎಚ್​ಡಿ ಮತ್ತು ಎಸ್​ಡಿ ಚಾನೆಲ್​​ಗಳ ನಡುವಿನ ವ್ಯತ್ಯಾಸವನ್ನು ತೆಗೆದುಹಾಕಲಾಗಿದೆ. ಹೀಗಾಗಿ ದರ ವ್ಯತ್ಯಾಸ ಇರುವುದಿಲ್ಲ.

ಇದನ್ನೂ ಓದಿ: Sniper Rifles : ಸ್ನೈಪರ್ ರೈಫಲ್ ರಫ್ತುದಾರ ಎಂಬ ಪಟ್ಟ ಗಿಟ್ಟಿಸಿದ ಭಾರತ; ಬೆಂಗಳೂರಿನ ಕಂಪನಿಯಿಂದ ಮೆಗಾ ಒಪ್ಪಂದ

ಕ್ಯಾರೇಜ್ ಶುಲ್ಕ ನಿರ್ವಹಣೆಯನ್ನು ಸರಳೀಕರಿಸಲಾಗಿದೆ. ಡಿಪಿಒಗಳಿಗೆ ಅಗತ್ಯಕ್ಕೆ ತಕ್ಕಂತೆ ಕಡಿಮೆ ಕ್ಯಾರೇಜ್ ಶುಲ್ಕವನ್ನು ವಿಧಿಸಬೇಕಾಗುತ್ತದೆ.

ಸೇವೆಯ ಗುಣಮಟ್ಟ (QoS) ನಿಯಮಗಳು:

ಇನ್​ಸ್ಟಾಲೇಷನ್ ಮತ್ತು ಮತ್ತು ಆಕ್ಟಿವೇಷನ್​ ಸೇವೆಗಳಿಗೆ ಶುಲ್ಕಗಳು ಇನ್ನು ಮುಂದೆ ಪೂರೈಕೆದಾರರ ನಿರ್ಧಾರವಾಗಿದೆ. ಅದಕ್ಕೊಂದು ಮಿತಿಯಿಲ್ಲ. ಅಂದರೆ ಸೇವಾ ಪೂರೈಕೆದಾರರು ತಮ್ಮದೇ ಆದ ಶುಲ್ಕಗಳನ್ನು ನಿಗದಿಪಡಿಸಬಹುದು. ಆದರೆ ಅದನ್ನು ತಿಳಿಸಬೇಕು.

ಸ್ಪಷ್ಟತೆಗಾಗಿ ಪ್ರಿಪೇಯ್ಡ್ ಚಂದಾದಾರಿಕೆಗಳ ಅವಧಿಯನ್ನು ದಿನಗ ಲೆಕ್ಕದಲ್ಲಿ ಮೊದಲೇ ನಿರ್ದಿಷ್ಟಪಡಿಸಬೇಕು.

ಡಿಪಿಒಗಳು ಇಪಿಜಿಯಲ್ಲಿ ಎಂಆರ್ ಪಿಗಳ ಜೊತೆಗೆ ವಿತರಕ ಚಿಲ್ಲರೆ ಬೆಲೆಗಳನ್ನು (ಡಿಆರ್ ಪಿ) ತೋರಿಸಬೇಕು.

ಪ್ಲಾಟ್ ಫಾರ್ಮ್ ಸೇವಾ ಚಾನೆಲ್ ಗಳನ್ನು ಇಪಿಜಿಯಲ್ಲಿ ‘ಪ್ಲಾಟ್ ಫಾರ್ಮ್ ಸೇವೆಗಳು’ ಪ್ರಕಾರದ ಅಡಿಯಲ್ಲಿ ವರ್ಗೀಕರಿಸಬೇಕು ಮತ್ತು ಅವುಗಳ ಎಂಆರ್ ಪಿಗಳನ್ನು ತೋರಿಸಬೇಕು.

ಸುಂಕ ಆದೇಶ ಮತ್ತು ಇತರ ನಿಬಂಧನೆಗಳನ್ನು ಉಲ್ಲಂಘಿಸಿದರೆ ದಂಡ ವಿಧಿಸಲಾಗುತ್ತದೆ.

ಸೇವಾ ಪೂರೈಕೆದಾರರು ತಮ್ಮ ವೆಬ್​​ಸೈಟ್​ನಲ್ಲಿ ಎಲ್ಲಾ ಸುಂಕ ಮತ್ತು ಶುಲ್ಕ ಮಾಹಿತಿ ಪ್ರಕಟಿಸಬೇಕು ಮತ್ತು ಚಂದಾದಾರರಿಗೆ ತಮ್ಮ ಯೋಜನೆಗಳಿಗೆ ಸುಂಕಗಳು ಮತ್ತು ಶುಲ್ಕಗಳ ಬಗ್ಗೆ ತಿಳಿಸಬೇಕು.

ಸುಲಭ ನ್ಯಾವಿಗೇಷನ್​ಗಾಗಿ ಚಾನೆಲ್​ಗಳನ್ನು ಅವುಗಳ ಪ್ರಾಥಮಿಕ ಭಾಷೆಯ ಮಾಹಿತಿಯೊಂದಿಗೆ ಇಪಿಜಿಯಲ್ಲಿ ಪಟ್ಟಿ ಮಾಡಬೇಕು.

ವೀಕ್ಷಣೆಯ ಗುಣಮಟ್ಟವನ್ನು ಸುಧಾರಿಸಲು, ಪೈರಸಿಯನ್ನು ತಡೆಗಟ್ಟಲು ಮತ್ತು ಚಂದಾದಾರರ ದಾಖಲೆಗಳನ್ನು ನಿರ್ವಹಿಸಲು ಡಿಡಿ ಫ್ರೀ ಡಿಶ್ ಪ್ಲಾಟ್ ಫಾರ್ಮ್ ಅನ್ನು ಇಟ್ಟುಕೊಳ್ಳುವುದು.

Exit mobile version