Site icon Vistara News

Virat kohli : ಕೊಹ್ಲಿಗೆ ಭಯೋತ್ಪಾದಕರ ಬೆದರಿಕೆ ಸುದ್ದಿ; ಸ್ಪಷ್ಟನೆ ನೀಡಿದ ಗುಜರಾತ್​ ಕ್ರಿಕೆಟ್​​ ಸಂಸ್ಥೆ

Virat Kohli

ಬೆಂಗಳೂರು: ಆರ್​ಸಿಬಿ ಮತ್ತು ರಾಜಸ್ಥಾನ್​ ರಾಯಲ್ಸ್​ ತಂಡಗಳ ನಡುವಿನ ಐಪಿಎಲ್ 2024 ಎಲಿಮಿನೇಟರ್ ಪಂದ್ಯಕ್ಕೆ ಮೊದಲು ಅಹಮದಾಬಾದ್​ನಿಂದ ಆಘಾತಕಾರಿ ಸುದ್ದಿ ಬಂದಿತ್ತು. ಭದ್ರತಾ ಕಾರಣಗಳಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಾಕೌಟ್ ಪಂದ್ಯ ಪ್ರಾರಂಭವಾಗುವ ಮೊದಲು ತನ್ನ ಏಕೈಕ ಅಭ್ಯಾಸವನ್ನು ರದ್ದುಗೊಳಿಸಬೇಕಾಯಿತು ಎಂದು ಹೇಳಲಾಯಿತು. ಮುಖ್ಯವಾಗಿ ವಿರಾಟ್ ಕೊಹ್ಲಿ (Virat kohli ) ಅವರಿಗೆ ಭಯೋತ್ಪಾದಕರಿಂದ ಬೆದರಿಕೆಗಳು ಬಂದಿದ್ದು ಆರ್​ಸಿಬಿ ಅಭ್ಯಾಸ ಹಾಗೂ ಪತ್ರಿಕಾಗೋಷ್ಠಿ ನಡೆಸಲಿಲ್ಲ ಎಂದು ವರದಿಗಳು ಬಂದವು. ಆದರೆ, ಎಲ್ಲ ಊಹಾಪೋಹಗಳಿಗೆ ಕೊನೆ ಎಳೆಯಲಾಗಿದ್ದು ಬೆದರಿಕೆ ಇರಲಿಲ್ಲ ಹಾಗೂ ಅದಕ್ಕಾಗಿ ಅಭ್ಯಾಸ ಮೊಟಕುಗೊಳಿಸಿಲ್ಲ ಎಂದು ಹೇಳಲಾಗಿದೆ.

ಬುಧವಾರ ನಡೆಯಲಿರುವ ಎಲಿಮಿನೇಟರ್ ಪಂದ್ಯಕ್ಕೂ ಮುನ್ನ ಆರ್​ಸಿಬಿ ಬಳಗ ಮಂಗಳವಾರ ಅಹಮದಾಬಾದ್​ ಗುಜರಾತ್ ಕಾಲೇಜು ಮೈದಾನದಲ್ಲಿ ಅಭ್ಯಾಸ ನಡೆಸಬೇಕಿತ್ತು. ಅದು ಸಮಯಕ್ಕೆ ಸರಿಯಾಗಿ ನಡೆದಿರಲಿಲ್ಲ. ಆದರೆ ಅಭ್ಯಾಸ ಅವಧಿ ಮತ್ತು ಪತ್ರಿಕಾಗೋಷ್ಠಿಯನ್ನು ರದ್ದುಗೊಳಿಸುವ ಹಿಂದಿನ ಪ್ರಾಥಮಿಕ ಕಾರಣ ವಿರಾಟ್ ಅವರ ಭದ್ರತೆ ಎಂದು ಗುಜರಾತ್ ಪೊಲೀಸರು ಸುಳಿವು ನೀಡಿದ್ದಾರೆ ಎಂಬುದಾಗಿ ಕೆಲವು ಪತ್ರಿಕೆಗಳು ವರದಿ ಮಾಡಿದವು. ಭಯೋತ್ಪಾದಕ ಚಟುವಟಿಕೆಯ ಶಂಕೆಯ ಮೇಲೆ ಅಹಮದಾಬಾದ್ ನಿಂದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಲಾಗಿದೆ. ಆದರೆ, ಬಂಧನ ಮತ್ತು ನಂತರದ ಘಟನೆಗಳಿಗೆ ಆರ್​ಸಿಬಿ ಅಭ್ಯಾಸ ನಡೆಸದಿರುವುದಕ್ಕೆ ಯಾವುದೇ ಸಂಬಂಧ ಇಲ್ಲ ಎಂದು ಹೇಳಲಾಗಿದೆ.

ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ (ಜಿಸಿಎ) ಉನ್ನತ ಅಧಿಕಾರಿಯೊಬ್ಬರು ನಡೆದ ಘಟನೆಗಳ ಕುರಿತು ಮಾಹಿತಿ ನೀಡಿದ್ದು ಬೆದರಿಕೆಯಂಥ ಘಟನೆಗಳು ನಡೆದಿಲ್ಲ ಎಂದು ಹೇಳಿದ್ದಾರೆ.

ಯಾವುದೇ ಭಯೋತ್ಪಾದಕ ಬೆದರಿಕೆ ಇರಲಿಲ್ಲ. ರಾಜಸ್ಥಾನ್ ರಾಯಲ್ಸ್ ಮತ್ತು ಆರ್​ಸಿಬಿ ತಂಡಗಳಿಗೆ ಗುಜರಾತ್ ಕಾಲೇಜು ಮೈದಾನದಲ್ಲಿ ಅಭ್ಯಾಸ ನಡೆಸಲು ನಾವು ಅವಕಾಶ ಕಲ್ಪಿಸಿದ್ದೆವು. ಅಹಮದಾಬಾದ್​ನಲ್ಲಿ ಬೇಸಿಗೆಯಲ್ಲಿ ಸಂಜೆ 6.30 ರವರೆಗೆ ಬೆಳಕು ಉತ್ತಮವಾಗಿರುತ್ತದೆ ಹೀಗಾಗಿ ಆರ್​ಸಿಬಿ ಮಧ್ಯಾಹ್ನ 2 ರಿಂದ 5 ರವರೆಗೆ ಅಭ್ಯಾಸ ಮಾಡಲು ಯೋಜಿಸಿತ್ತು. ಬಿಸಿಲಿನ ಕಾರಣಕ್ಕೆ ಅದನ್ನು ಮಧ್ಯಾಹ್ನ 3ರಿಂದ 6 ಕ್ಕೆ ಬದಲಾಯಿಸಲಾಯಿತು. ಆದಾಗ್ಯೂ, ರಾಜಸ್ಥಾನ್ ರಾಯಲ್ಸ್ ತಮ್ಮ ಪೂರ್ಣ ತಂಡದೊಂದಿಗೆ ಗುಜರಾತ್ ಕಾಲೇಜು ಮೈದಾನದಲ್ಲಿ ಮಧ್ಯಾಹ್ನ 3.30 ರಿಂದ 6.30 ರವರೆಗೆ ಅಭ್ಯಾಸ ನಡೆಸಿತು ಎಂದು ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ ಕಾರ್ಯದರ್ಶಿ ಅನಿಲ್ ಪಟೇಲ್ ಹೇಳಿದ್ದಾರೆ.

ಬಿಸಿಲಿನ ಹೊಡೆತದ ಭಯ

ನಗರದಲ್ಲಿ ಸದ್ಯ ಇರುವ ಬಿಸಿಲಿನ ತಾಪಮಾನದಿಂದಾಗಿ ಆರ್​ಸಿಬಿ ತನ್ನ ಅಭ್ಯಾಸವನ್ನು ತಪ್ಪಿಸಿಕೊಂಡಿದೆ. ಅವರು ಅಲ್ಲಿ ಒಳಾಂಗಣ ಅಭ್ಯಾಸ ಸೌಲಭ್ಯವನ್ನು ಬಳಸಬಹುದಾಗಿತ್ತು. ನರೇಂದ್ರ ಮೋದಿ ಕ್ರೀಡಾಂಗಣದ ಒಳಾಂಗಣ ಸೌಲಭ್ಯದಲ್ಲಿ ಆಡಬಹುದು ಎಂದು ಆರ್​ಸಿಬಿಗೆ ತಿಳಿಸಿದ್ದೆವು. ಆದಾಗ್ಯೂ, ಬಿಸಿಗಾಳಿಯ ಕಾರಣಕ್ಕೆ ಆರ್​ಸಿಬಿ ಅಭ್ಯಾಸ ಮಾಡಲು ಬಯಸಲಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Shah Rukh Khan : ಶಾರುಖ್​ ಖಾನ್ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

ಕಾಲೇಜು ಮೈದಾನವು ಅವರ ನಿಯಂತ್ರಣಕ್ಕೆ ಬರುವುದರಿಂದ ನಾವು ಜಿಲ್ಲಾಧಿಕಾರಿ ಕಚೇರಿಯಿಂದ (ಕಾಲೇಜು ಮೈದಾನದಲ್ಲಿ ಟ್ರಾಮ್ ಗಳ ಮೂಲಕ ಅಭ್ಯಾಸ ಮಾಡಲು) ವಿಶೇಷ ಅನುಮತಿಯನ್ನು ಪಡೆದಿದ್ದೇವೆ. ಕಾಲೇಜು ಮೈದಾನದಲ್ಲಿ ಅಭ್ಯಾಸ ನಡೆಸಲು ಎರಡೂ ತಂಡಗಳಿಗೆ ಜಿಲ್ಲಾಧಿಕಾರಿ ವಿಶೇಷ ಅನುಮತಿ ನೀಡಿದ್ದರು. ಆದಾಗ್ಯೂ, ನಾನು ಮೊದಲೇ ಹೇಳಿದಂತೆ, ಬಿಸಿಗಾಳಿಯಿಂದಾಗಿ ಆರ್​ಸಿಬಿ ಅಭ್ಯಾಸ ಅವಧಿ ತಪ್ಪಿಸಿತು, “ಎಂದು ಪಟೇಲ್ ಹೇಳಿದರು.

ಪಂದ್ಯದ ಮೊದಲು ಯಾವುದೇ ಪತ್ರಿಕಾಗೋಷ್ಠಿ ಇರಲಿಲ್ಲ ಮತ್ತು ಅದು ಊಹಾಪೋಹಗಳನ್ನು ಹೆಚ್ಚಿಸಿತು. “ಈ ಪಂದ್ಯಕ್ಕೆ ಮೊದಲು ಪತ್ರಿಕಾಗೋಷ್ಠಿಯನ್ನು ನಿಗದಿಪಡಿಸಲಾಗಿಲ್ಲ, ಏಕೆಂದರೆ ಈಗಾಗಲೇ ಮೊದಲ ಕ್ವಾಲಿಫೈಯರ್ ಪಂದ್ಯ (ಕೋಲ್ಕತಾ ನೈಟ್ ರೈಡರ್ಸ್ ಮತ್ತು ಹೈದರಾಬಾದ್ ಸನ್​ರೈಸರ್ಸ್​ ನಡುವೆ) ನಡೆದಿದೆ. ಈ ಸಂದರ್ಭದಲ್ಲಿ ಅವಧಿಗಳನ್ನು ಹೊಂದಿಲ್ಲದಿರುವುದು ಹೊಸದೇನಲ್ಲ. ಆಟಗಾರರು ದೀರ್ಘ ಅಭಿಯಾನದ ನಂತರ ಪಂದ್ಯಕ್ಕೆ ತಾಜಾವಾಗಿರಲು ಪ್ರಯತ್ನಿಸುತ್ತಾರೆ ಎಂದು ಅವರು ಹೇಳಿದ್ದಾರೆ.

Exit mobile version