Site icon Vistara News

Sourav Ganguly : ಸೌರವ್​ ಗಂಗೂಲಿಗೆ 52ನೇ ಜನ್ಮದಿನ; ದಾದಾನ ಅಭೂತಪೂರ್ವ ವೃತ್ತಿ ಜೀವನದ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ವಿವರ

Sourav Ganguly

ನವದೆಹಲಿ: ಬಿಸಿಸಿಐ ಮಾಜಿ ಅಧ್ಯಕ್ಷ ಹಾಗೂ ಭಾರತ ಕ್ರಿಕೆಟ್ ತಂಡ ಅತ್ಯಂತ ಯಶಸ್ವಿ ನಾಯಕ ಸೌರವ್ ಗಂಗೂಲಿ (Sourav Ganguly) 52ನೇ ವರ್ಷದ ಜನುಮ ದಿನದ ಸಂಭ್ರಮದಲ್ಲಿದ್ದಾರೆ. ಅವರು ತಮ್ಮ ಸಹ ಆಟಗಾರ ರಾಹುಲ್ ದ್ರಾವಿಡ್ ಅವರಿಂದ ‘ಆಫ್ ಸೈಡ್ ದೇವರು’ ಎಂದು ಕರೆಸಿಕೊಂಡವರು. ಇಂಥ ಪ್ರಚಂಡ ಕ್ರಿಕೆಟಿಗ ಅನೇಕ ಅದ್ಭುತ ಕೊಡುಗೆಗಳನ್ನು ಕ್ರಿಕೆಟ್ ಕ್ಷೇತ್ರಕ್ಕೆ ನೀಡಿದ್ದಾರೆ ಆಟದ ಸಮಯದಲ್ಲಿ ಬ್ಯಾಟಿಂಗ್​ನಲ್ಲಿ ಅಬ್ಬರಿಸಿದ್ದ ಅವರು ಬಳಿಕ ಕೊಲ್ಕೊತಾ ಕ್ರಿಕೆಟ್ ಸಂಸ್ಥೆ ಹಾಗೂ ಬಿಸಿಸಿಐ ಅಧ್ಯಕ್ಷರಾಗಿಯೂ ಅದ್ಭುತ ಕೆಲಸಗಳನ್ನು ಮಾಡಿದ್ದರು. ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್​ನಲ್ಲಿ ನಿರ್ದೇಶಕರಾಗಿದ್ದಾರೆ. ಹೀಗೆ ಸುಮಾರು ಎರಡು ದಶಕಗಳ ವೃತ್ತಿಜೀವನದಲ್ಲಿ ಅಪಾರ ಸಾಧನೆ ಮಾಡಿದ್ದಾರೆ.

ಗಂಗೂಲಿ ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕರಾಗಿದ್ದರು. ಪ್ರತಿಭಾನ್ವಿತ ಆಟಗಾರರ ಗುಂಪಿನಿಂದ ವಿಜೇತ ತಂಡವನ್ನು ಮುನ್ನಡೆಸಿದ್ದರು ಅವರು ಇತಿಹಾಸದ ಅತ್ಯುತ್ತಮ ಏಕದಿನ ಬ್ಯಾಟರ್​ಗಳಲ್ಲಿ ಒಬ್ಬರಾಗಿದ್ದಾರೆ. ಅವರು 1996 ರಲ್ಲಿ ಲಾರ್ಡ್ಸ್​​ನಲ್ಲಿ ನಡೆದ ಚೊಚ್ಚಲ ಪಂದ್ಯದಲ್ಲಿ ಅದ್ಭುತ ಶತಕವನ್ನು ಗಳಿಸಿದ್ದರು. ಆ ವರ್ಷದ ಕೊನೆಯಲ್ಲಿ ಅವರನ್ನು ಏಕದಿನ ಕ್ರಮಾಂಕದ ಅಗ್ರಸ್ಥಾನಕ್ಕೆ ಏರಿದ್ದರು. ಸೌರವ್​ ಗಂಗೂಲಿ ಮತ್ತು ಸಚಿನ್ ತೆಂಡೂಲ್ಕರ್ ಒಟ್ಟಾಗಿ ಕ್ರಿಕೆಟ್​ ಇತಿಹಾಸದ ಅತ್ಯಂತ ಪ್ರಬಲ ಆರಂಭಿಕ ಬ್ಯಾಟರ್​ಗಳೆನಿಸಿಕೊಂಡಿದ್ದರು.

ಗಂಗೂಲಿ ಮೈದಾನದಲ್ಲಿ ಇದ್ದ ತಮ್ಮ ಸಮಯದುದ್ದಕ್ಕೂ ತಮ್ಮ ವಿಶಿಷ್ಟ ನಾಯಕತ್ವದ ಮೂಲಕ ಹೆಸರುವಾಸಿಯಾಗಿದ್ದರು. 1996 ರ ಬೇಸಿಗೆಯಲ್ಲಿ, ಅವರು ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ‘ದಾದಾ’ ಎಂಬ ಅಡ್ಡಹೆಸರನ್ನು ಗಳಿಸಿಕೊಂಡ ಅವರು ಲಾರ್ಡ್ಸ್​​ನಲ್ಲಿ ತಮ್ಮ ಮೊದಲ ಟೆಸ್ಟ್​​ನಲ್ಲಿ ಶತಕ ಗಳಿಸಿದ ನಂತರ ಸುದ್ದಿಯಾದರು. ನಂತರ ‘ಪ್ರಿನ್ಸ್ ಆಫ್ ಕೋಲ್ಕತ್ತಾ’ ಎಂಬ ಹೆಸರಿನಿಂದ ಕರೆಸಲ್ಪಟ್ಟರು. ಬಳಿಕ ಅವರು ಎರಡನೇ ಟೆಸ್ಟ್​​ ಪಂದ್ಯದಲ್ಲೂ ಶತಕ ಬಾರಿಸಿದ್ದರು. ಇತಿಹಾಸದಲ್ಲಿ ತಮ್ಮ ಮೊದಲ ಎರಡು ಟೆ್ಸ್ಟ್​ ಇನ್ನಿಂಗ್ಸ್​ಗಳಲ್ಲಿ ಶತಕ ಗಳಿಸಿದ ಮೂರನೇ ಬ್ಯಾಟರ್​​ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಇದನ್ನೂ ಓದಿ: Team India : ಭಾರತ ತಂಡಕ್ಕೆ ಸಿಕ್ಕಿದ 125 ಕೋಟಿ ರೂ. ಬಹುಮಾನದಲ್ಲಿ ಯಾರಿಗೆ ಎಷ್ಟು? ಮಾಹಿತಿ ಬಹಿರಂಗ

2000ನೇ ಇಸವಿಯಲ್ಲಿ ಟೀಮ್ ಇಂಡಿಯಾ ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿಕೊಂಡಿತ್ತು. ನಂತರ ಗಂಗೂಲಿ ಅವರನ್ನು ತಂಡದ ನಾಯಕರನ್ನಾಗಿ ನೇಮಿಸಲಾಯಿತು. ಅಲ್ಲಿ ಅವರು ಹೊಸ ಪ್ರತಿಭೆಗಳನ್ನು ಬೆಳೆಸಲು ಪ್ರಾರಂಭಿಸಿದರು.

ಗಂಗೂಲಿ ನಾಯಕತ್ವದಲ್ಲಿ ಭಾರತ ತಂಡ 2000ರಲ್ಲಿ ನಡೆದ ಐಸಿಸಿ ನಾಕೌಟ್ ಟ್ರೋಫಿಯಲ್ಲಿ ಮೊದಲ ಬಾರಿಗೆ ಫೈನಲ್ ತಲುಪಿತ್ತು. 2001ರಲ್ಲಿ ಗಂಗೂಲಿ ನೇತೃತ್ವದ ಭಾರತ ತಂಡ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾವನ್ನು 2-1 ಅಂತರದಿಂದ ಸೋಲಿಸಿತ್ತು. ಸ್ಟೀವ್ ವಾ ನೇತೃತ್ವದ ಆಸ್ಟ್ರೇಲಿಯಾ ತಂಡವು ಸರಣಿಯಲ್ಲಿ ಭಾರತಕ್ಕೆ ಸವಾಲು ಹಾಕಿತು. ಆದರೆ ವಿವಿಎಸ್ ಲಕ್ಷ್ಮಣ್ ಮತ್ತು ರಾಹುಲ್ ದ್ರಾವಿಡ್ ಭಾರತೀಯ ಕ್ರಿಕೆಟ್ ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದರು.

ಅಂಗಿ ಬಿಚ್ಚಿ ಕುಣಿದಿದ್ದರು

2002 ರಲ್ಲಿ ನಾಟ್​ವೆಸ್ಟ್​​ ಟ್ರೋಫಿ ಫೈನಲ್​​ನಲ್ಲಿ ಭಾರತವು ಇಂಗ್ಲೆಂಡ್ ವಿರುದ್ದ ಗೆದ್ದಿತ್ತು. ಭಾರತವನ್ನು ಸೋಲಿನ ದವಡೆಯಿಂದ ಯುವರಾಜ್ ಸಿಂಗ್ ಹಾಗೂ ಮೊಹಮ್ಮದ್​ ಕೈಫ್​ ಕಾಫಾಡಿದ್ದರು. ಈ ವೇಲೆ ಲಾರ್ಡ್ಸ್ ಬಾಲ್ಕನಿಯಲ್ಲಿ ತನ್ನ ಅಂಗಿ ಬಿಚ್ಚಿದ ಕುಣಿದಿದ್ದರು ಗಂಗೂಲಿ. ಅದು ಕ್ರಿಕೆಟ್ ಇತಿಹಾಸದ ಸ್ಮರಣೀಯ ವಿಷಯವಾಗಿ ದಾಖಲಾಗಿದೆ.

ಗಂಗೂಲಿ 2003 ರಲ್ಲಿ ಭಾರತವನ್ನು ವಿಶ್ವಕಪ್ ಫೈನಲ್​ ತನಕ ಮುನ್ನಡೆಸಿದ್ದರು. ಅಲ್ಲಿ ಅವರ ನೇತೃತ್ವದ ತಂಡ ಆಸ್ಟ್ರೇಲಿಯಾ ವಿರುದ್ಧ ಸೋತಿತ್ತು. 2004 ರಲ್ಲಿ, ಅವರು ಪಾಕಿಸ್ತಾನದಲ್ಲಿ ಏಕದಿನ ಮತ್ತು ಟೆಸ್ಟ್ ಸರಣಿಯ ಮುಂದಾಳತ್ವ ವಹಿಸಿದ್ದರು. ಪಾಕಿಸ್ತಾನದ ನೆಲದಲ್ಲಿ ಭಾರತದ ಮೊದಲ ಟೆಸ್ಟ್ ಸರಣಿ ಗೆಲುವು ತಂದುಕೊಟ್ಟಿದ್ದರು.

2005-06ರಲ್ಲಿ ಆಗಿನ ಕೋಚ್ ಗ್ರೆಗ್ ಚಾಪೆಲ್ ಅವರೊಂದಿಗೆ ಗಲಾಟೆ ಸುದ್ದಿಯಾಗಿತ್ತು. ಮತ್ತೊಂದೆಡೆ, ಗಂಗೂಲಿ ತಂಡಕ್ಕೆ ಮರಳಿದ್ದರು ಮತ್ತು ದಕ್ಷಿಣ ಆಫ್ರಿಕಾದ ಜೋಹಾನ್ಸ್​ಬರ್ಗ್​ನಲ್ಲಿ 50ಪ್ಲಸ್ ಸ್ಕೋರ್ ದಾಖಲಿಸಿದ್ದರು.

ಗಂಗೂಲಿ 2008ರಲ್ಲಿ ನಾಗ್ಪುರದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಟೆಸ್ಟ್ ಪಂದ್ಯವನ್ನಾಡಿದ್ದರು. 2012ರಲ್ಲಿ ದೇಶೀಯ ಕ್ರಿಕೆಟ್​​ನಿಂದ ನಿವೃತ್ತರಾಗುವವರೆಗೂ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಆಡಿದ್ದರು. ದಾದಾ ಭಾರತ ಪರ 113 ಟೆಸ್ಟ್ ಮತ್ತು 311 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ, ಎಡಗೈ ಬ್ಯಾಟ್ಸ್ಮನ್ ಎಲ್ಲಾ ಸ್ವರೂಪಗಳಲ್ಲಿ ಸೇರಿ 18,575 ರನ್ ಗಳಿಸಿದ್ದಾರೆ.

ಗಂಗೂಲಿ ಎಲ್ಲಾ ಸ್ವರೂಪಗಳಲ್ಲಿ 195 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದರು/ ಅವುಗಳಲ್ಲಿ 97 ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಮಾಜಿ ನಾಯಕ ನಂತರ ಕ್ರಿಕೆಟ್ ಅಸೋಸಿಯೇಷನ್ ಆಫ್ ಬಂಗಾಳದ (ಸಿಎಬಿ) ಅಧ್ಯಕ್ಷರಾದರು ಮತ್ತು ಬಿಸಿಸಿಐನ ಮಾಜಿ ಅಧ್ಯಕ್ಷರಾಗಿದ್ದಾರೆ.

ಆಡಳಿತಾತ್ಮಕ ಬುದ್ಧಿವಂತಿಕೆ

ಭಾರತದಲ್ಲಿ ಹಗಲು-ರಾತ್ರಿ ಟೆಸ್ಟ್​ ಕ್ರಿಕೆಟ್​ ಕ ಲ್ಪನೆ ಹೊರಹೊಮ್ಮಲು ಗಂಗೂಲಿ ಪ್ರಮುಖ ಕಾರಣಗಳಲ್ಲಿ ಒಬ್ಬರು. ಅವರು ಈ ಅವಧಿಯಲ್ಲಿ ಬಿಸಿಸಿಐ ಅಧ್ಯಕ್ಷರಾಗಿದ್ದರು. 2019 ರಲ್ಲಿ ಈಡನ್ ಗಾರ್ಡನ್ಸ್​ನಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ತನ್ನ ಮೊದಲ ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನು ಆಡಿತ್ತು.

Exit mobile version