Site icon Vistara News

Happy Independence Day : ನೀರಜ್​ನಿಂದ ಹಿಡಿದು ರೋಹಿತ್​ ಶರ್ಮಾ ; ಭಾರತೀಯ ಅಥ್ಲೀಟ್​​ಗಳ ಸ್ವಾತಂತ್ರ್ಯೋತ್ಸವ ಆಚರಣೆಯ ಪೋಸ್ಟ್​ಗಳು ಇಲ್ಲಿವೆ…

Happy Independence Day

ಬೆಂಗಳೂರು: ಭಾರತವು ತನ್ನ 78 ನೇ ಸ್ವಾತಂತ್ರ್ಯ ದಿನಾಚರಣೆ (Happy Independence Day) ಸಂಭ್ರಮದಲ್ಲಿದೆ. ರಾಷ್ಟ್ರ ವ್ಯಾಪಿ ದೇಶಭಕ್ತಿಯ ಭಾವದಲ್ಲಿ ತುಂಬಿಕೊಂಡಿದೆ. ಅಂತೆಯೇ ಭಾರತದ ಕ್ರೀಡಾ ಭ್ರಾತೃತ್ವವು ಸ್ವಾತಂತ್ರ್ಯ ದಿನವನ್ನು ಸಂಭ್ರದಿಂದ ಆಚರಿಸಿದೆ. ಪ್ರಖ್ಯಾತ ಕ್ರೀಡಾಪಟುಗಳು ದೇಶ ಭಕ್ತಿಯ ಸಾರವನ್ನು ಸಾರಿದ್ದಾರೆ. ದೇಶದ ಜನರಿಗೆ ತಮ್ಮ ಅಭಿಮಾನಿಗಳಿಗೆ ಶುಭಾಶಯ ಕೋರಿದ್ದಾರೆ. ರೋಹಿತ್ ಶರ್ಮಾ, ನೀರಜ್ ಚೋಪ್ರಾ, ಭಾರತ ತಂಡದ ನೂತ ಗೌತಮ್ ಗಂಭೀರ್ ಸೇರಿದಂತೆ ಎಲ್ಲರೂ ದೇಶ ಪ್ರೇಮದ ಭಾವವನ್ನು ಸ್ಪುರಿಸಿದ್ದಾರೆ. ‘

ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಗೋಲ್ಡನ್ ಬಾಯ್ ಮತ್ತು ಸ್ಟಾರ್ ಅಥ್ಲೀಟ್ ನೀರಜ್ ಚೋಪ್ರಾ ರಾಷ್ಟ್ರಧ್ವಜವನ್ನು ಹಿಡಿದಿರುವ ಚಿತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರೆ, ಐತಿಹಾಸಿಕ ಟಿ 20 ವಿಶ್ವಕಪ್ 2024 ರ ಗೆಲುವಿನ ಸಮಯದಲ್ಲಿ ಬಾರ್ಬಡೋಸ್​ನಲ್ಲಿ ತ್ರಿವರ್ಣಧ್ವಜವನ್ನು ಎತ್ತಿ ಹಿಡಿದಿರುವ ಚಿತ್ರವನ್ನು ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ ಪೋಸ್ಟ್ ಮಾಡಿದ್ದಾರೆ. ಭಾರತೀಯ ಕ್ರೀಡಾಪಟುಗಳಿಗೆ ವಿದೇಶ ನೆಲದಲ್ಲಿ ಸೇರಿದಂತೆ ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಲು ಭಾರತದ ಧ್ವಜವೇ ಪ್ರೇರಣೆಯಾಗಿರುತ್ತದೆ. ಭಾರತಕ್ಕಾಗಿ ಆಡುವ ಮತ್ತು ಗೆದ್ದು ಧ್ವಜ ಹಿಡಿದು ಸಂಭ್ರಮಿಸುವ ಕನಸು ಅವರದ್ದಾಗಿರುತ್ತದೆ. ಹೀಗಾಗಿ ಕ್ರೀಡಾಪಟುಗಳು ದೇಶದ ಧ್ವಜದ ಬಗ್ಗೆ ಅಪಾರ ಅಭಿಮಾನ ಹೊಂದಿರುತ್ತಾರೆ. ಅಂತೆಯೇ ಸ್ವಾತಂತ್ರ್ಯ ದಿನದಂದೂ ಧ್ವಜದೊಂದಿಗೆ ಸಂಭ್ರಮಿಸಿದ್ದಾರೆ.

ಕ್ರೀಡಾಪಟುಗಳು ದೇಶದ ಹೆಮ್ಮೆಯ ಕಲಿಗಳು. ಭಾರತದಲ್ಲಿ ಅವರ ಮೇಲೆ ದೊಡ್ಡ ಪ್ರಮಾಣದ ನಿರೀಕ್ಷೆಗಳ ಇರುತ್ತವೆ. ಕ್ರೀಡಾಪಟುಗಳು ತಾವು ಕೇವಲ ತಮಗಾಗಿ ಸ್ಪರ್ಧಿಸುತ್ತಿಲ್ಲ. ಶತಕೋಟಿ ಜನರ ಭರವಸೆಗಳು ಮತ್ತು ಆಕಾಂಕ್ಷೆಗಳಿಗಾಗಿ ಆಡುತ್ತಾರೆ. ಈ ಗುರಿಯು ಅವರ ಮಿತಿಗಳನ್ನು ಮೀರಲು, ಸವಾಲುಗಳನ್ನು ಜಯಿಸಲು ಮತ್ತು ಅತ್ಯುತ್ತಮ ಕಾರ್ಯಕ್ಷಮತೆ ಪಡೆಯಲು ನೆರವಾಗುತ್ತದೆ.

ಇದನ್ನೂ ಓದಿ: Happy Independence day 2024: ಸ್ವಾತಂತ್ರ್ಯ ದಿನಾಚರಣೆಯಂದು ಒಲಿಂಪಿಯನ್​ಗಳನ್ನು ಭೇಟಿಯಾದ ಪ್ರಧಾನಿ ಮೋದಿ ಗೆ ಜೆರ್ಸಿ ಉಡುಗೊರೆ

ಒಲಿಂಪಿಕ್ಸ್​​ನಂಥ ಜಾಗತಿಕ ಕ್ರಿಡಾಕೂಟಲ್ಲಿ ಭಾರತವನ್ನು ಪ್ರತಿನಿಧಿಸುವುದು ಕ್ರೀಡಾಪಟುಗಳಿಗೆ ವಿಶೇಷ ಭಾವವಾಗಿದೆ. ದೇಶದ ಗೌರವನ್ನು ವಿಶ್ವ ವೇದಿಕೆಗೆ ಏರಿಸಲು ಅವರಿಗೆ ಅವಕಾಶ ಸಿಗುತ್ತದೆ. ಈ ಕ್ಷೇತ್ರಗಳಲ್ಲಿನ ಯಶಸ್ಸು ರಾಷ್ಟ್ರದ ಖ್ಯಾತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಮುಂದಿನ ಪೀಳಿಗೆಯ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುತ್ತದೆ. ಭಾರತೀಯ ಕ್ರೀಡಾಪಟುಗಳಿಗೆ, ತಮ್ಮ ದೇಶವನ್ನು ಪ್ರತಿನಿಧಿಸುವ ಗೌರವವು ಹೆಮ್ಮೆಯ ಸಂಕೇತವಾಗಿದೆ.

Exit mobile version