Site icon Vistara News

Hardik Pandya : ಮೊದಲ ಲವ್​ ಬ್ರೇಕ್​ಅಪ್​ ಮಾಡಿಕೊಂಡಿದ್ದ ಪಾಂಡ್ಯ; ಇಲ್ಲಿದೆ ಆರಂಭದ ಪ್ರೇಮ ಕಹಾನಿ!

Hardik Pandya

ನವದೆಹಲಿ: ಭಾರತೀಯ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ (Hardik Pandya) ಈಗ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರು ಸುದ್ದಿಯಾಗಿರುವುದು ಕ್ರಿಕೆಟ್​ ಕಾರಣಕ್ಕೆ ಅಲ್ಲ. ಬದಲಾಗಿ ಅವರ ವೈವಾಹಿಕ ಜೀವನದ ಕಾರಣಕ್ಕೆ. ಅವರ ಪತ್ನಿ ನತಾಶಾ ಸ್ಟಾಂಕೊವಿಕ್ ಅವರನ್ನು ತೊರೆದು ಹೋಗಿದ್ದಾರೆ ಎಂಬುದಾಗಿ ಸುದ್ದಿಯಾಗಿದೆ. ಹೀಗಾಗಿ ಅವರ ಪರ್ಸನಲ್ ವಿಚಾರಗಳ ಬಗ್ಗೆ ಹೆಚ್ಚು ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಅವರು ಆರಂಭದಲ್ಲಿಯೂ ಒಂದು ಬಾರಿ ಲವ್​ ಬ್ರೇಕ್ ಅಪ್​ ಮಾಡಿಕೊಂಡಿದ್ದರು ಎಂಬ ಸುದ್ದಿಯೊಂದು ಇದೀಗ ಮತ್ತೆ ತಲೆ ಎತ್ತಿದೆ. ಅವರು ರಾಷ್ಟ್ರೀಯ ತಂಡಕ್ಕೆ ಪ್ರವೇಶಿಸಿದ ಕೆಲವು ವರ್ಷಗಳ ನಂತರ, ಬಾಲಿವುಡ್ ನಟಿ ಎಲಿ ಅವ್ರಾಮ್ ಅವರೊಂದಿಗೆ ಸಣ್ಣ ಅವಧಿಯಲ್ಲಿ ಡೇಟಿಂಗ್ ಮಾಡುತ್ತಿದ್ದರು. ಆದಾಗ್ಯೂ, ಪಾಂಡ್ಯ ಅವರ ವಿವಾದಾತ್ಮಕ ಟಿವಿ ಶೋನಲ್ಲಿ (ಕಾಫಿ ವಿತ್ ಕರಣ್​​) ಕಾಣಿಸಿಕೊಂಡ ನಂತರ ಅವರ ಕುತೂಹಲಕಾರಿ ಪ್ರೇಮಕಥೆ ಅಂತ್ಯಗೊಂಡಿತ್ತು.

ಹಾರ್ದಿಕ್ ಪಾಂಡ್ಯ ಕೆಲವು ವರ್ಷಗಳ ಹಿಂದೆ ತಮ್ಮ ವೃತ್ತಿಪರ ಕ್ರಿಕೆಟ್ ಪ್ರಯಾಣ ಪ್ರಾರಂಭಿಸಿದ ಬಳಿಕ ಕೆಟ್ಟ ಕಾರಣಗಳಿಗೋಸ್ಕರವೇ ಆಗಾಗ ಸುದ್ದಿಯಾಗುತ್ತಾರೆ. ಜನರು ಅವರ ವೈಯಕ್ತಿಕ ಜೀವನದ ಬಗ್ಗೆ ತೀವ್ರ ಆಸಕ್ತಿ ಹೊಂದಿದ್ದಾರೆ. ನತಾಶಾ ಅವರನ್ನು ಮದುವೆಯಾಗುವ ಮೊದಲು ಮಗುವಾಗಿದ್ದೆಲ್ಲ ಘಟನೆಗಳು ನಡೆದಿದೆ. ಹಾರ್ದಿಕ್ ಪಾಂಡ್ಯ ಅವರು ಸ್ಟಾಂಕೋವಿಕ್ ಅವರನ್ನು ಮದುವೆಯಾಗುವ ಮೊದಲು, ಬಾಲಿವುಡ್ ನಟಿ ಎಲಿ ಅವ್ರಾಮ್ ಅವರೊಂದಿಗೆ ಸ್ವಲ್ಪ ಸಮಯದವರೆಗೆ ಡೇಟಿಂಗ್ ಮಾಡಿದ್ದರು.

ಹಲವಾರು ಊಹಾಪೋಹಗಳು, ಸುದ್ದಿಗಳ ನಂತರ ಇಬ್ಬರೂ ಒಟ್ಟಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಪ್ರಾರಂಭಿಸಿದ್ದರು. ಹಾರ್ದಿಕ್ ಅವರ ಹಿರಿಯ ಸಹೋದರ ಕೃನಾಲ್ ಪಾಂಡ್ಯ ಅವರ ಮದುವೆಯ ವೇಳೆ ಎಲಿ ಕಾಣಿಸಿಕೊಂಡಿದ್ದರು. ಅಲ್ಲೆಲ್ಲ ಓಡಾಡಿದ್ದರು.ಅವರ ಬೇಟಿಯ ಉದ್ದಕ್ಕೂ, ಹಾರ್ದಿಕ್ ಅಥವಾ ಎಲಿ ಇಬ್ಬರ ನಡುವೆ ಪ್ರಣಯ ಸಂಬಂಧವಿದೆ ಎಂಬ ವದಂತಿಗಳನ್ನು ದೃಢಪಡಿಸಲಿಲ್ಲ ಅಥವಾ ನಿರಾಕರಿಸಿರಲಿಲ್ಲ.

ಎಲಿ ಅವ್ರಾಮ್ ಜತೆ ಬ್ರೇಕ್​ಅಪ್​​

ಟಿವಿ ಶೋ ‘ಕಾಫಿ ವಿತ್ ಕರಣ್’ ನಲ್ಲಿ ಹಾರ್ದಿಕ್ ಅವರ ವಿವಾದಾತ್ಮಕ ಹೇಳಿಕೆಯೂ ಅವರಿಬ್ಬರ ಬ್ರೇಕ್​ಅಪ್​ಗೆ ಕಾರಣ ಎನ್ನಲಾಗಿದೆ. ಅಲ್ಲಿ ಕ್ರಿಕೆಟಿಗ ಮಹಿಳೆಯರ ಬಗ್ಗೆ ಕೆಲವು ಆಕ್ಷೇಪಾರ್ಹ ಕಾಮೆಂಟ್​ಗಳನ್ನು ಮಾಡಿದ್ದರು. ಈ ಕಾರಣಕ್ಕೆ ಬಿಸಿಸಿಐನಿಂದ ದಂಡನೆಯನ್ನೂ ಎದುರಿಸಿದ್ದರು.

ಇದನ್ನೂ ಓದಿ: Shikhar Dhawan : ಶಿಖರ್ ಧವನ್ ಮಿಥಾಲಿ ರಾಜ್ ಮದುವೆ? ಬಗ್ಗೆ ಮೌನ ಮುರಿದ ಭಾರತದ ಸ್ಟಾರ್

ವಿವಾದ ಭುಗಿಲೆದ್ದ ನಂತರ ಎಲಿ ಅವ್ರಾಮ್ ತನ್ನ ಆಘಾತ ವ್ಯಕ್ತಪಡಿಸಿ ಹೇಳಿಕೆ ನೀಡಿದ್ದರು. ಹಾರ್ದಿಕ್ ಅವರನ್ನು ವೈಯಕ್ತಿಕವಾಗಿ ಬಲ್ಲೆ ಮತ್ತು ಇತರ ಹೆಣ್ಣಿನ ಬಗ್ಗೆ ಇಷ್ಟು ಅಸಹ್ಯಕರ ರೀತಿಯಲ್ಲಿ ಮಾತನಾಡಿದ ಅವರ ಲಜ್ಜೆಯಿಲ್ಲ. ಅವರಿಗೆ ಟೀಕೆ ಮಾಡಲಾಗುತ್ತಿರುವುದು ಸರಿಯಾದ ಕ್ರಮ ಎಂದಿದ್ದರು.

ಎಲಿ ಜತೆ ಬ್ರೇಕಪ್ ಆದ ನಂತರ ಹಾರ್ದಿಕ್ ಪಾಂಡ್ಯ ಮತ್ತೊಬ್ಬ ಬಾಲಿವುಡ್ ನಟಿ ನತಾಶಾ ಸ್ಟಾಂಕೋವಿಕ್ ಅವರೊಂದಿಗೆ ಮತ್ತೆ ಪ್ರೀತಿಯನ್ನು ಕಂಡುಕೊಂಡರು. ಇವರಿಬ್ಬರು 2020 ರಲ್ಲಿ ವಿವಾಹವಾದರು ಮತ್ತು ಕೆಲವು ತಿಂಗಳ ನಂತರ ತಮ್ಮ ಮೊದಲ ಮಗು ಅಗಸ್ತ್ಯನನ್ನು ಸ್ವಾಗತಿಸಿದ್ದರು.

Exit mobile version