Site icon Vistara News

Hardik Pandya : ಭಾರತಕ್ಕೆ ಆಡುವುದೇ ಕನಸು; ಹಾರ್ದಿಕ್ ಪಾಂಡ್ಯನ ಹಳೆ ವಿಡಿಯೊ ವೈರಲ್​

Hardik Pandya

ಬೆಂಗಳೂರು: ಭಾರತ ತಂಡದ ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ (Hardik Pandya) 2024ರ ಟಿ 20 ವಿಶ್ವಕಪ್ ಗೆಲುವಿನಲ್ಲಿ (T20 World Cup 2024) ಪ್ರಮುಖ ಪಾತ್ರ ವಹಿಸಿದ ಬಳಿಕ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಅವರ ಬಗ್ಗೆ ಜೋರು ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಅವರು ತಮ್ಮ ಬಾಲ್ಯದ ದಿನಗಳ ಕ್ರಿಕೆಟ್ ಕನಸನ್ನು ವ್ಯಕ್ತಪಡಿಸುವ​ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಎಕ್ಸ್​ ಪೋಸ್ಟ್​​ನಲ್ಲಿ ಬೌಲಿಂಗ್ ಆಲ್ರೌಂಡರ್ ತಮ್ಮ ದೇಶಕ್ಕಾಗಿ ಆಡುವುದು ತನ್ನ ದೊಡ್ಡ ಗೌರವವಾಗಿ ಉಳಿಯುತ್ತದೆ ಎಂದು ಹೇಳಿಕೊಂಡಿದ್ದಾರೆ.

ಐಪಿಎಲ್ 2024 ರ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿದ್ದ 30 ವರ್ಷದ ಪಾಂಡ್ಯ ಭಾರತದ ವಿಶ್ವಕಪ್ ಗೆಲುವಿನ ರೂವಾರಿಗಳಲ್ಲೊಬ್ಬರು. ಶನಿವಾರ ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್​ನಲ್ಲಿ ಅವರು ತಮ್ಮ ಕೊನೇ ಓವರ್​​ನಲ್ಲಿ 16 ರನ್​ಗಳನ್ನು ಕಾಪಾಡಿಕೊಂಡಿದ್ದರು. ಅಲ್ಲಿ ಅವರು ಕೇವಲ 9 ರನ್​ ನೀಡಿದ್ದರು. ಅಂತೆಯೇ ಬರೋಡಾ ಮೂಲದ ಕ್ರಿಕೆಟಿಗ ದಕ್ಷಿಣ ಆಫ್ರಿಕಾ ತಂಡವು ಮುನ್ನಡೆ ಸಾಧಿಸುತ್ತಿದ್ದಾಗ ಹೆನ್ರಿಚ್​​ ಕ್ಲಾಸೆನ್ ಅವರ ವಿಕೆಟ್ ಪಡೆದಿದ್ದರು. ಒಟ್ಟು 3 ವಿಕೆಟ್ ಪಡೆದ ಅವರು ಸಂಭ್ರಮಿಸಿದ್ದರು.

“ಬರೋಡಾದ ಒಬ್ಬ ಹುಡುಗ ತನ್ನ ಕನಸನ್ನು ಸಾಕಾರಗೊಳಿಸಿದ್ದಾನೆ. ಮತ್ತು ತನ್ನ ದಾರಿಯಲ್ಲಿ ಎದುರಾಗಿರುವ ಎಲ್ಲ ರಿಗೂ ಕೃತಜ್ಞನಾಗಿದ್ದಾನೆ. ಇದಕ್ಕಿಂತ ಹೆಚ್ಚಿನದನ್ನು ಕೇಳಲು ಸಾಧ್ಯವಿಲ್ಲ. ನನ್ನ ದೇಶಕ್ಕಾಗಿ ಆಡುವುದು ಯಾವಾಗಲೂ ದೊಡ್ಡ ಗೌರವ. ಎಂದಿಗೂ ಪದಗಳಿಂದ ಪ್ರತಿಕ್ರಿಯಿಸುವುದಿಲ್ಲ ಎಂದು ನಾನು ಯಾವಾಗಲೂ ಜೀವನದಲ್ಲಿ ನಂಬಿಕೆ ಇಟ್ಟಿದ್ದೇನೆ ಎಂದು ಪಾಂಡ್ಯ ಬರೆದುಕೊಂಡಿದ್ದಾರೆ. ಅದಕ್ಕೆ ತಾವು ಬಾಲ್ಯದಲ್ಲಿ ಬರೋಡಾ ಹಾಗೂ ಭಾರತಕ್ಕೆ ಆಡುವ ಕನಸು ಹೊಂದಿದ್ದೇನೆ ಎಂದು ಹೇಳುವ ವಿಡಿಯೊವನ್ನು ಅಪ್​ಲೋಡ್​ ಮಾಡಿದ್ದಾರೆ.

ಪಂದ್ಯದ ನಂತರ ಮಾತನಾಡಿದ ಪಾಂಡ್ಯ, ತಮ್ಮನ್ನು ಅವಮಾನ ಮಾಡಿದ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ. ಉತ್ತಮ ಪ್ರದರ್ಶನಗಳೊಂದಿಗೆ ಅವರೆಲ್ಲರನ್ನೂ ಮೌನಗೊಳಿಸುವುದು ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: T20 World Cup 2024 : ಗೆಲುವಿನ ಸಂಭ್ರಮದಲ್ಲಿ ಪಾಂಡ್ಯ ಕೆನ್ನೆಗೆ ಮುತ್ತಿಟ್ಟ ನಾಯಕ ರೋಹಿತ್; ಇಲ್ಲಿದೆ ವಿಡಿಯೊ

ನಾನು ಒಳ್ಳೆಯದನ್ನು ನಂಬುತ್ತೇನೆ. ಒಬ್ಬ ವ್ಯಕ್ತಿಯಾಗಿ ನನ್ನ ಬಗ್ಗೆ ಸ್ವಲ್ಪವೂ ತಿಳಿಯದ ಜನರು ಬಹಳಷ್ಟು ಮಾತನಾಡಿದ್ದಾರೆ. ಅದರಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಆದರೆ ನಾನು ಎಂದಿಗೂ ಪದಗಳಿಂದ ಪ್ರತಿಕ್ರಿಯಿಸುವುದಿಲ್ಲ. ಸಂದರ್ಭಗಳಿಂದ ಪ್ರತಿಕ್ರಿಯಿಸುತ್ತೇನೆ. ನಾನು ಯಾವಾಗಲೂ ಜೀವನದಲ್ಲಿ ನಂಬಿಕೆ ಇಟ್ಟಿದ್ದೇನೆ. ಕಷ್ಟದ ಸಮಯಗಳು ಸಹ ಶಾಶ್ವತವಾಗಿ ಉಳಿಯುವುದಿಲ್ಲ. ಗೆದ್ದರೂ. ಸೋತರೂ ಉತ್ತಮವಾಗಿರುವುದು ಮುಖ್ಯ. ಅಭಿಮಾನಿಗಳು ಮತ್ತು ಪ್ರತಿಯೊಬ್ಬರೂ ಕಲಿಯಬೇಕು ಎಂದು ಪಾಂಡ್ಯ ಹೇಳಿದ್ದಾರೆ.

Exit mobile version