Site icon Vistara News

Hardik Pandya : ಕಪಿಲ್​ ದೇವ್​ ರೀತಿ ಮೀಸೆ ಬಿಟ್ಟುಕೊಂಡು ಫೈನಲ್ ಪಂದ್ಯ ಆಡಲು ಬಂದ ಹಾರ್ದಿಕ್ ಪಾಂಡ್ಯ

Hardik Pandya

ಬೆಂಗಳೂರು: ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್​​ನಲ್ಲಿ ಭಾರತ ಮತ್ತು ಏಡೆನ್ ಮಾರ್ಕ್ರಮ್ ನೇತೃತ್ವದ ದಕ್ಷಿಣ ಆಫ್ರಿಕಾ ನಡುವಿನ ಟಿ 20 ವಿಶ್ವಕಪ್ 2024 ರ ಫೈನಲ್ ಪಂದ್ಯದಲ್ಲಿ ಆಡುತ್ತಿದೆ. ದಕ್ಷಿಣ ಆಫ್ರಿಕಾ ತನ್ನ ಮೊದಲ ವಿಶ್ವಕಪ್ ಫೈನಲ್ ಆಡುತ್ತಿದ್ದರೆ, ಭಾರತವು ಒಮ್ಮೆ ಟಿ 20 ವಿಶ್ವಕಪ್ ಗೆದ್ದಿದೆ, ಮತ್ತು ಎರಡೂ ತಂಡಗಳು ಪಂದ್ಯಾವಳಿಯಲ್ಲಿ ಅಜೇಯವಾಗಿವೆ. ಟಾಸ್​ ಗೆದ್ದಿರುವ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಅಂತೆಯ ಮೊದಲು ಬ್ಯಾಟ್ ಮಾಡಿರುವ ಭಾರತ ತಂಡ ಸಾಧಾರಣ ಮೊತ್ತವನ್ನು ಪೇರಿಸುವ ಹಾದಿಯಲ್ಲಿ ಸಾಗಿದೆ.

ರೋಹಿತ್ ಶರ್ಮಾ ನೇತೃತ್ವದ ಮೆನ್ ಇನ್ ಬ್ಲೂ ತಂಡವು ಇದುವರೆಗೆ ಒಂದು ಅತ್ಯುತ್ತಮ ಘಟಕದಂತೆ ಆಡಿದೆ. ಬಹುತೇಕ ಎಲ್ಲರೂ ಗೆಲುವಿಗಾಗಿ ಕೊಡುಗೆ ನೀಡಿದ್ದಾರೆ. ಆದರೆ ಹಾರ್ದಿಕ್ ಪಾಂಡ್ಯ ಅವರ ಪಾತ್ರವು ವಿಶೇಷವಾಗಿ ನಿರ್ಣಾಯಕವಾಗಿದೆ. ಸೀಮ್-ಬೌಲಿಂಗ್ ಆಲ್ರೌಂಡರ್ ಕೆಲವು ಪ್ರಮುಖ ಓವರ್​ಗಳನ್ನು ಕೂಡ ಮಾಡಿದ್ದಾರೆ. ಮತ್ತು ಕೆಲವು ಉಪಯುಕ್ತ ಬ್ಯಾಟಿಂಗ್​ ಪಾತ್ರಗಳನ್ನು ಹೊಂದಿದ್ದಾರೆ. ಅವರು ಫೈನಲ್​​ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ ಎಂದು ಭಾರತ ಆಶಿಸುತ್ತಿದೆ. ಆದರೆ, ವಿಶೇಷ ಅನಿಸಿದ್ದು ಅವರು ಫೈನಲ್​ ಪಂದ್ಯಕ್ಕಾಗಿ ಎಂಟ್ರಿ. ಅವರು ವಿಶೇಷವಾಗಿರುವ ಮೀಸೆ ಲುಕ್​ನಲ್ಲಿ ಕಾಣಿಸಿಕೊಂಡಿದ್ದರು. ಹೇಗಿತ್ತು ಎಂದರೆ 1983ರ ಏಕ ದಿನ ವಿಶ್ವ ಕಪ್​ನಲ್ಲಿ ಅಂದಿನ ನಾಯಕ ಕಪಿಲ್ ದೇವ್​ ಕಾಣಿಸಿಕೊಂಡ ರೀತಿಯಲ್ಲಿ.

ಸ್ಟಾರ್ ಸ್ಪೋರ್ಟ್ಸ್ ಬಿಡುಗಡೆ ಮಾಡಿದ ವೀಡಿಯೊದಲ್ಲಿ, ಹಾರ್ದಿಕ್ ಪಾಂಡ್ಯ ನಯವಾಗಿ ಶೇವ್ ಮಾಡಿಕೊಂಡಿದ್ದಾರೆ ತಂಪಾದ ಕಪ್ಪು ಕನ್ನಡಕ ಹಾಕಿಕೊಂಡು ಬಂದಿದ್ದ ಅವರು ತೆಳ್ಳಗಿನ ಮೀಸೆಯೊಂದಿಗೆ ಕಾಣಿಸಿಕೊಂಡಿದ್ದಾರೆ. ಹಾರ್ದಿಕ್ ಜೊತೆಗೆ ರವೀಂದ್ರ ಜಡೇಜಾ, ವಿರಾಟ್ ಕೊಹ್ಲಿ ಮತ್ತು ಶಿವಂ ದುಬೆ ಕೂಡ ಮೈದಾನಕ್ಕೆ ಪ್ರವೇಶಿಸುತ್ತಿರುವುದು ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ:T20 World Cup Final : ಟಾಸ್​ ಗೆದ್ದವರು ಮ್ಯಾಚ್​ ಗೆಲ್ತಾರೆ; ವಿಶ್ವ ಕಪ್​ ಫೈನಲ್ ಪಂದ್ಯದ ಇತಿಹಾಸ ಹೀಗಿದೆ

ಟಿ 20 ವಿಶ್ವಕಪ್​ಗೆ ಮುಂಚಿತವಾಗಿ ಐಪಿಎಲ್​ನಲ್ಲಿ ಹಾರ್ದಿಕ್ ಪಾಂಡ್ಯ ಟೀಕೆಯ ಕೇಂದ್ರಬಿಂದುವಾಗಿದ್ದರು. ಇದೀಗ ಅವರು ಫೈನಲ್​​ನಲ್ಲಿ ದೊಡ್ಡ ಪ್ರದರ್ಶನದೊಂದಿಗೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಮತ್ತು ರಾಷ್ಟ್ರೀಯ ಹೀರೋ ಆಗಲು ಪ್ರಯತ್ನಿಸುತ್ತಿದ್ದಾರೆ.

Exit mobile version