Site icon Vistara News

Hardik Pandya : ಹಾರ್ದಿಕ್ ಪಾಂಡ್ಯ ನತಾಶಾಗೆ ವಿಚ್ಛೇದನ ಕೊಡುವುದು ಖಾತರಿ ಎಂದ ಟೀಮ್​ ಇಂಡಿಯಾ ಆಟಗಾರ

Hardik Pandya

ಬೆಂಗಳೂರು: ಪ್ರಸ್ತುತ ನಡೆಯುತ್ತಿರುವ ಐಸಿಸಿ ಟಿ 20 ವಿಶ್ವಕಪ್ 2024 ರಲ್ಲಿ (T20 World Cup 2024) ಭಾರತದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಅವರ ಪ್ರದರ್ಶನವು ಗಮನ ಸೆಳೆದಿದೆ. ಮುಂಬೈ ಇಂಡಿಯನ್ಸ್ ನಾಯಕರಾಗಿ ಅವರು ಐಪಿಎಲ್ 2024 ರ ಕಳಪೆ ಋತುವಿನ ನಂತರ ವಿಶ್ವ ಕಪ್​ಗೆ ಪ್ರವೇಶ ಪಡೆದಿದ್ದಾರೆ. ಹೀಗಾಗಿ ಅವರು ಪ್ರದರ್ಶನದ ಬಗ್ಗೆ ಅನುಮಾನಗಳು ಇದ್ದವು. ಇದೀಗ ಎಲ್ಲ ಅನುಮಾನಗಳಿಗೆ ಪರಿಹಾರ ಕೊಟ್ಟಿದ್ದು, ಬ್ಯಾಟ್ ಮೂಲಕ ಮಿಂಚಿದ್ದಾರೆ.

ಐಪಿಎಲ್ 2024 ರಲ್ಲಿ ರೋಹಿತ್ ಶರ್ಮಾ ಅವರನ್ನು ಮುಂಬೈ ಇಂಡಿಯನ್ಸ್ (ಎಂಐ) ನಾಯಕನ ಸ್ಥಾನದಿಂದ ಇಳಿಸಿ ಹಾರ್ದಿಕ್​ಗೆ ಪಟ್ಟ ಕಟ್ಟಿದ್ದಕ್ಕಾಗಿ ಭಾರಿ ಟೀಕೆಗಳನ್ನು ಎದುರಿಸಿದ್ದರು. ನಂತರ ಪತ್ನಿ ನತಾಶಾ ಸ್ಟಾಂಕೋವಿಕ್ ಅವರಿಂದ ವಿಚ್ಛೇದನದ ವರದಿಗಳೊಂದಿಗೆ ಅವರ ಜೀವನದಲ್ಲಿ ಭಾವನಾತ್ಮಕ ಪ್ರಕ್ಷುಬ್ಧತೆಗೆ ಕಾರಣವಾಯಿತು. ಇದೀಗ ಅವರ ಕುಟುಂಬದಲ್ಲಿ ಸಮಸ್ಯೆ ಆಗಿರುವುದು ಹೌದು ಎಂದು ಟೀಮ್ ಇಂಡಿಯಾ ಆಟಗಾರರೊಬ್ಬರು ಹೇಳಿದ್ದಾರೆ. ನತಾಶಾ ಜತೆಗೆ ಅವರ ಸಂಬಂಧ ಮುರಿದು ಬೀಳುವುದು ಬಹುತೇಕ ಖಚಿತ ಎಂಬುದಾಗಿ ಅವರು ಹೇಳಿದ್ದಾರೆ.

ನತಾಶಾ ಮತ್ತು ಹಾರ್ದಿಕ್ ದಾಂಪತ್ಯದಲ್ಲಿ ಬಿರುಕು ಬಿಟ್ಟಿದೆ ಎಂಬುದಾಗಿ ಐಪಿಎಲ್ ಮುಕ್ತಾಯಗೊಂಡ ತಕ್ಷಣ ಸುದ್ದಿಯಾಗಿತ್ತು. ಈ ಸುದ್ದಿಗೆ ರೆಕ್ಕೆ ಪುಕ್ಕಗಳು ಹುಟ್ಟಿಕೊಂಡ ಕಾರಣ ಅದು ಚರ್ಚೆಯ ವಿಷಯವಾಯಿತು. ನತಾಶಾ ಸ್ಟಾಂಕೊವಿಕ್​ ಪತಿಯನ್ನು ತೊರೆದಿದ್ದಾರೆ ಎಂಬುದಾಗಿ ಸುದ್ದಿಯಾಯಿತು. ತನ್ನ ಇನ್​​ಸ್ಟಾಗ್ರಾಮ್​ ಬಯೊದಲ್ಲಿ ಪಾಂಡ್ಯ ಹೆಸರನ್ನು ತೆಗೆದಿರುವುದೇ ಅದಕ್ಕೆ ಕಾರಣ. ಕೊನೆಯಲ್ಲಿ ಅದಕ್ಕೆ ತೇಪೆ ಹಚ್ಚಲಾಯಿತು. ತಾವು ಜತೆಗೆ ಇದ್ದೇವೆ ಎಂಬ ಪರೋಕ್ಷ ಸಂದೇಶವನ್ನು ನತಾಶಾ ಕಳುಹಿಸಿದ್ದರು. ಆದರೆ ಅದು ಖಾತರಿಯಾಗಿರಲಿಲ್ಲ. ಇದೀಗ ಆ ಸುದ್ದಿಯನ್ನೂ ನಿರಾಕರಿಸಲಾಗಿದೆ.

ಟೀಕಾಕಾರರ ಬಾಯಿ ಮುಚ್ಚಿದ ಹಾರ್ದಿಕ್ ಪಾಂಡ್ಯ

ಐರ್ಲೆಂಡ್ ವಿರುದ್ಧದ ಭಾರತದ ಆರಂಭಿಕ ಪಂದ್ಯದಲ್ಲಿ, ಪಾಂಡ್ಯ ತಮ್ಮ ನಾಲ್ಕು ಓವರ್​​ಗಳಲ್ಲಿ 27 ರನ್​​ಗಳಿಗೆ ಮೂರು ವಿಕೆಟ್​​ಗಳನ್ನು ಪಡೆದಿದ್ದದರು. 2024 ರ ಟಿ 20 ವಿಶ್ವಕಪ್ ಅಭಿಯಾನದಲ್ಲಿ ತಮ್ಮ ತಂಡದ ಗೆಲುವಿನ ಪ್ರಾರಂಭದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದು ಪಾಂಡ್ಯ ಮತ್ತು ಟೀಮ್ ಇಂಡಿಯಾ ಇಬ್ಬರಿಗೂ ಗಮನಾರ್ಹ ಆತ್ಮವಿಶ್ವಾಸವನ್ನು ಹೆಚ್ಚಿಸಿತು.

ಐಪಿಎಲ್ 2024 ಫಾರ್ಮ್ ಕಾರಣದಿಂದಾಗಿ ಟಿ 20 ವಿಶ್ವಕಪ್ 2024 ತಂಡದಲ್ಲಿ ಅವರನ್ನು ಸೇರಿಸುವ ಬಗ್ಗೆ ಆರಂಭಿಕ ಅನುಮಾನಗಳ ಹೊರತಾಗಿಯೂ, ಸ್ಟಾರ್ ಭಾರತೀಯ ಆಲ್ರೌಂಡರ್ ಪ್ರಸ್ತುತ ನಡೆಯುತ್ತಿರುವ ಮೆಗಾ ಐಸಿಸಿ ಈವೆಂಟ್​​ನ್ಲಿ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ತಮ್ಮ ಪರಿಣಾಮಕಾರಿ ಪ್ರದರ್ಶನ ನೀಡುತ್ತಿದ್ದಾರೆ.

ಅವರು ಭಾರತೀಯ ಕ್ರಿಕೆಟ್ ತಂಡಕ್ಕೆ ಉತ್ತಮ ಸಮತೋಲನ ಒದಗಿಸುತ್ತಿದ್ದಾರೆ, ಪ್ಲೇಯಿಂಗ್ ಇಲೆವೆನ್​ ಸಂಯೋಜನೆಗಳಿಗೆ ಪೂರಕವಾಗಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಟಿ 20 ವಿಶ್ವಕಪ್ 2024 ಪ್ರಗತಿಯಲ್ಲಿ, ಮೆನ್ ಇನ್ ಬ್ಲೂ ಪಂದ್ಯಾವಳಿಯಲ್ಲಿ ಪಾಂಡ್ಯ ಅವರ ಅದ್ಭುತ ಫಾರ್ಮ್ ಅನ್ನು ಮುಂದುವರಿಸಲು ಇಲ್ಲಿಯವರೆಗೆ ಅವರ ಮೂರು ಇನ್ನಿಂಗ್ಸ್​ಗಳಲ್ಲಿ 7, 32, 50* ರನ್ ಬಾರಿಸಿದ್ದಾರೆ.

ಇದನ್ನೂ ಓದಿ: T20 World Cup 2024 : ದಕ್ಷಿಣ ಆಫ್ರಿಕಾ ತಂಡ ಸೆಮೀಸ್​ಗೆ, ಆತಿಥೇಯ ವಿಂಡೀಸ್ ಔಟ್​

ಬಾಂಗ್ಲಾದೇಶ ವಿರುದ್ಧ 27 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಹಾರ್ದಿಕ್ ಅವರ ಬೌಲಿಂಗ್ ಪ್ರದರ್ಶನದ ಬಗ್ಗೆ ಮಾತನಾಡುತ್ತಾ, ಭಾರತದ ಸ್ಟಾರ್ ಆಲ್ರೌಂಡರ್ ಪ್ರಸ್ತುತ ನಡೆಯುತ್ತಿರುವ ಟಿ 20 ವಿಶ್ವಕಪ್ 2024 ರಲ್ಲಿ ಇಲ್ಲಿಯವರೆಗೆ 8 ವಿಕೆಟ್​​ ಪಡೆಯುವ ಮೂಲಕ ಸ್ಥಿರವಾಗಿ ಬೌಲಿಂಗ್ ಮಾಡುತ್ತಿದ್ದಾರೆ.

ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಮತ್ತು ಬೌಲಿಂಗ್​ಗೆ ಮೆಚ್ಚುಗೆ ತೋರಿದ ರಾಬಿನ್ ಉತ್ತಪ್ಪ

ಪ್ರಸ್ತುತ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಪಾಂಡ್ಯ ಅವರ ಅಸಾಧಾರಣ ಪಾತ್ರವನ್ನು ಶ್ಲಾಘಿಸಿದ ಮಾಜಿ ಬ್ಯಾಟರ್​ ರಾಬಿನ್​ ಉತ್ತಪ್ಪ, ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಅವರ ಪ್ರಭಾವಶಾಲಿ ಪ್ರದರ್ಶನ ತಂಡಕ್ಕೆ ನೆರವಾಗಿದೆ ಎಂದು ಹೇಳಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ ವೃತ್ತಿಪರವಾಗಿ ಮತ್ತು ವೈಯಕ್ತಿಕವಾಗಿ ಅವರು ಎದುರಿಸಿದ ಸವಾಲುಗಳನ್ನು ಪರಿಗಣಿಸಿ ಪಾಂಡ್ಯ ಅವರ ಪ್ರಸ್ತುತ ಫಾರ್ಮ್ ಇನ್ನೂ ಗಮನಾರ್ಹ ಎಂದು ಹೇಳಿದರು.

Exit mobile version