ಬೆಂಗಳೂರು: ಪಾಕಿಸ್ತಾನದ ವೇಗಿ ಹ್ಯಾರಿಸ್ ರೌಫ್ ಇಂಗ್ಲೆಂಡ್ ವಿರುದ್ಧ ಟಿ20 ಐ ಪಂದ್ಯದಲ್ಲಿ ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಉಭಯ ತಂಡಗಳ ನಡುವಿನ ನಾಲ್ಕು ಪಂದ್ಯಗಳ ಟಿ 20 ಐ ಸರಣಿಯ ಎರಡನೇ ಪಂದ್ಯ ಶನಿವಾರ (ಮೇ 25) ಬರ್ಮಿಂಗ್ಹ್ಯಾಮ್ನ ಎಜ್ಬಾಸ್ಟನ್ನಲ್ಲಿ ನಡೆಯಿತು. ದೀರ್ಘಕಾಲದ ಗಾಯದ ನಂತರ ಪಾಕಿಸ್ತಾನ ತಂಡಕ್ಕೆ ಮರಳಿದ ಹ್ಯಾರಿಸ್ ರವೂಫ್, ಚೆಂಡಿನೊಂದಿಗೆ ತಂಡಕ್ಕೆ ಪ್ರಮುಖ ಪಾತ್ರ ವಹಿಸಿದರು ಮತ್ತು ತಮ್ಮ ತಂಡದ ಪರವಾಗಿ ನಿರ್ಣಾಯಕ ವಿಕೆಟ್ಗಳನ್ನು ಪಡೆದರು. ಆದಾಗ್ಯೂ, ಬರ್ಮಿಂಗ್ಹ್ಯಾಮ್ನ ಎಜ್ಬಾಸ್ಟನ್ನಲ್ಲಿ ನಡೆದ ಪಂದ್ಯ ಗೆಲ್ಲಲು ಅವರು ತಮ್ಮ ತಂಡಕ್ಕೆ ಸಹಾಯ ಮಾಡಲು ಸಾಧ್ಯವಾಗಲಿಲ್ಲ. ಆದರೆ ಅವರಿಗೆ ಕೊಹ್ಲಿ (Virat kohli) ಕಾಡಿದರು.
Kohli Kohli chants in the #ENGvPAK match 🔥 https://t.co/pH9AxMSkZ6 pic.twitter.com/Y6d5h83pxV
— Rajat (@Vk184ever) May 25, 2024
ಹ್ಯಾರಿಸ್ ರವೂಫ್ 5 ನೇ ಓವರ್ನಲ್ಲಿ ಆಕ್ರಮಣ ಮುಂದಾದರು. ಆದರೆ ಮೊದಲ ಓವರ್ನಲ್ಲಿ 17 ರನ್ ನೀಡಿದ ಕಾರಣ ಅವರಿಗೆ ಉತ್ತಮ ಆರಂಭ ಸಿಗಲಿಲ್ಲ. ಆದಾಗ್ಯೂ, ನಂತರ ಅದ್ಭುತ ಪುನರಾಗಮನ ಮಾಡಿದರು. ತಮ್ಮ ವೇಗದಿಂದ ಇಂಗ್ಲೆಂಡ್ ಬ್ಯಾಟರ್ಗಳಿಗೆ ತೊಂದರೆ ನೀಡಿದರು.
ಹ್ಯಾರಿಸ್ ರವೂಫ್ ತಮ್ಮ ಎರಡನೇ ಸ್ಪೆಲ್ನಲ್ಲಿ ಆಕ್ರಮಣಕ್ಕೆ ಬಂದಾಗ, ಅವರಿಗೆ ಪ್ರೇಕ್ಷಕರಿಂದ ಉತ್ತಮ ಸ್ವಾಗತ ಸಿಗಲಿಲ್ಲ. ವೇಗಿ ಎರಡನೇ ಓವರ್ನ ಮೊದಲ ಎಸೆತವನ್ನು ಎಸೆಯುತ್ತಿದ್ದಂತೆ ಅಭಿಮಾನಿಗಳು “ಕೊಹ್ಲಿ ಕೊಹ್ಲಿ” ಎಂದು ಕೂಗಿದರು. ಹ್ಯಾರಿಸ್ ರವೂಫ್ ಅವರನ್ನು ಕೆಲವು ಸಮಯದಿಂದ “ಕೊಹ್ಲಿ ಕೊಹ್ಲಿ” ಎಂದು ಕರೆಯಲಾಗುತ್ತದೆ. ಏಕೆಂದರೆ 2022 ರ ಟಿ 20 ವಿಶ್ವಕಪ್ನಲ್ಲಿ ಎಂಸಿಜಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಸಮಯದಲ್ಲಿ ಕೊಹ್ಲಿ ರವೂಫ್ಗೆ ಸಿಕ್ಸರ್ ಬಾರಿಸಿದ್ದರು.
ಇದನ್ನೂ ಓದಿ: Hardik Pandya : ಮೊದಲ ಲವ್ ಬ್ರೇಕ್ಅಪ್ ಮಾಡಿಕೊಂಡಿದ್ದ ಪಾಂಡ್ಯ; ಇಲ್ಲಿದೆ ಆರಂಭದ ಪ್ರೇಮ ಕಹಾನಿ!
ಇಂಗ್ಲೆಂಡ್ ವಿರುದ್ಧದ ಎರಡನೇ ಟಿ 20 ಐ ಪಂದ್ಯದಲ್ಲಿ, ಹ್ಯಾರಿಸ್ ರೌಫ್ 34 ರನ್ಗಳಿಗೆ 2 ವಿಕೆಟ್ ಪಡೆದರು. ಎದುರಾಳಿಯನ್ನು ಒಟ್ಟು 200 ಕ್ಕಿಂತ ಕಡಿಮೆ ಮೊತ್ತಕ್ಕೆ ನಿಯಂತ್ರಿಸಲು ತಮ್ಮ ತಂಡಕ್ಕೆ ಸಹಾಯ ಮಾಡಿದರು. ಇವರಲ್ಲದೆ, ಶಾಹೀನ್ ಅಫ್ರಿದಿ ಮತ್ತು ಇಮಾದ್ ವಾಸಿಮ್ ಎರಡು ವಿಕೆಟ್ ಪಡೆದು ಎದುರಾಳಿಗಳನ್ನು 183 ರನ್ಗಳಿಗೆ ನಿಯಂತ್ರಿಸಿದರು.
ಇದು ಪಾಕಿಸ್ತಾನದಿಂದ ಉತ್ತಮ ಬ್ಯಾಟಿಂಗ್ ಪ್ರದರ್ಶನವಾಗಿತ್ತು. ಫಖರ್ ಜಮಾನ್ 45 ರನ್ ಗಳಿಸಿದರೆ ನಾಯಕ ಬಾಬರ್ ಅಜಮ್ 32 ರನ್ ಗಳಿಸಿದರು. ಆದಾಗ್ಯೂ ಕೇವಲ 160 ರನ್ಗಳಿಗೆ ಆಲೌಟ್ ಆದರು ಮತ್ತು ಪಂದ್ಯವನ್ನು 23 ರನ್ ಗಳಿಂದ ಕಳೆದುಕೊಂಡರು.
ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಎರಡನೇ ಟಿ 20 ಪಂದ್ಯದ ಸೋಲಿನ ಬಗ್ಗೆ ಮಾತನಾಡಿದ್ದಾರೆ. ಇದು ಅವರಿಂದ ಉತ್ತಮ ಬೌಲಿಂಗ್ ಪ್ರದರ್ಶನ ಎಂದು ಅವರು ಒಪ್ಪಿಕೊಂಡರು. ಆದರೆ ಬ್ಯಾಟಿಂಗ್ನಲ್ಲಿ ವಿಫಲಗೊಂಡೆವು ಎಂದು ಹೇಳಿದ್ದಾರೆ.
ಇದು ಸಾಧಾರಣ ಸ್ಕೋರ್ ಆಗಿತ್ತು, ನಾವು ಉತ್ತಮವಾಗಿ ಬೌಲಿಂಗ್ ಮಾಡಿದ್ದವು. ದೊಡ್ಡ ಜತೆಯಾಟ ಮೂಡಿ ಬರಲಿಲ್ಲ. ಪ್ರತಿಯೊಬ್ಬರೂ ತಮ್ಮ ಪಾತ್ರವನ್ನು ತಿಳಿದಿದ್ದಾರೆ. ನಾವು ಪ್ರತಿಯೊಬ್ಬ ಆಟಗಾರನ ಪಾತ್ರವನ್ನು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.