Site icon Vistara News

Healthcare Workers : ಆರೋಗ್ಯ ಸೇವಕರ ಮೇಲೆ ದಾಳಿಯಾದರೆ 6 ಗಂಟೆಯೊಳಗೆ ಎಫ್​ಐಆರ್​ ದಾಖಲಿಸಿ; ಸರ್ಕಾರಿ ಆಸ್ಪತ್ರೆಗಳಿಗೆ ಕೇಂದ್ರ ಸರ್ಕಾರದ ನಿರ್ದೇಶನ

Healthcare Workers:

ನವದೆಹಲಿ: ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಕ್ಯಾಂಪಸ್​ನಲ್ಲಿ ಹಿಂಸಾಚಾರ ನಡೆದರೆ ಅಥವಾ ಆರೋಗ್ಯ ಸೇವಕರ ಮೇಲೆ ದಾಳಿ ನಡೆದರೆ (Healthcare Workers) ಆರು ಗಂಟೆಗಳ ಒಳಗೆ ಪೊಲೀಸ್ ದೂರುಗಳನ್ನು ದಾಖಲಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯವು ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಆದೇಶಿಸಿದೆ. ನಿಗದಿತ ಸಮಯದೊಳಗೆ ಅಂತಹ ಯಾವುದೇ ದೂರು ನೀಡದಿದ್ದರೆ ಸಂಬಂಧಪಟ್ಟ ಸಂಸ್ಥೆಯ ಮುಖ್ಯಸ್ಥರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಶುಕ್ರವಾರ ಹೊರಡಿಸಲಾದ ನೋಟಿಸ್ ನಲ್ಲಿ ತಿಳಿಸಲಾಗಿದೆ.

ಇತ್ತೀಚೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಇತರ ಆರೋಗ್ಯ ಸಿಬ್ಬಂದಿಯ ವಿರುದ್ಧದ ದಾಳಿಗಳು ಸಾಮಾನ್ಯವಾಗಿದೆ. ಹಲವಾರು ಆರೋಗ್ಯ ಕಾರ್ಯಕರ್ತರು ತಮ್ಮ ಕರ್ತವ್ಯದ ಸಮಯದಲ್ಲಿ ದೈಹಿಕ ಹಿಂಸೆ ಅನುಭವಿಸಿದ್ದಾರೆ. ಅನೇಕರು ಬೆದರಿಕೆಗೆ ಒಳಗಾಗಿದ್ದಾರೆ. ಅಥವಾ ಮೌಖಿಕ ಆಕ್ರಮಣಕ್ಕೆ ಒಳಗಾಗುತ್ತಿದ್ದಾರೆ ಎಂದು ಹೇಳಿದ್ದಾರೆ ಎಂದು ನಿರ್ದೇಶನದಲ್ಲಿ ತಿಳಿಸಲಾಗಿದೆ.

ಈ ದಾಳಿಯನ್ನು ಬಹುತೇಕ ಸಂದರ್ಭಗಳಲ್ಲಿ ರೋಗಿಗಳು ಅಥವಾ ರೋಗಿಗಳ ಸಂಬಂಧಿಕರು ಮಾಡುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಕರ್ತವ್ಯದಲ್ಲಿರುವಾಗ ಯಾವುದೇ ಆರೋಗ್ಯ ಕಾರ್ಯಕರ್ತರ ವಿರುದ್ಧ ಯಾವುದೇ ಹಿಂಸಾಚಾರ ನಡೆದರೆ ಸಂಸ್ಥೆಯ ಮುಖ್ಯಸ್ಥರು ಗರಿಷ್ಠ ಆರು ಗಂಟೆಗಳ ಒಳಗೆ ಎಫ್ಐಆರ್ ದಾಖಲಿಸಲು ಜವಾಬ್ದಾರರಾಗಿರುತ್ತಾರೆ ಎಂದು ನೋಟಿಸ್​ನಲ್ಲಿ ಹೇಳಲಾಗಿದೆ.

ಇದನ್ನೂ ಓದಿ: Indian Economy : 2027ರ ವೇಳೆಗೆ ಭಾರತ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ: ಐಎಂಎಫ್​ನ ಗೀತಾ ಗೋಪಿನಾಥ್

ಕೋಲ್ಕತಾದ ಆರ್​ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆಯ ಬಗ್ಗೆ ರಾಷ್ಟ್ರವ್ಯಾಪಿ ತೀವ್ರ ಪ್ರತಿಭಟನೆಗಳ ಮಧ್ಯೆ ಈ ನೋಟಿಸ್ ಹೊರಡಿಸಲಾಗಿದೆ. ಘಟನೆಯ ಬಳಿಕ ದೇಶಾದ್ಯಂತ ವೈದ್ಯಕೀಯ ವೃತ್ತಿಪರರು ಉತ್ತಮ ರಕ್ಷಣೆ ಮತ್ತು ಸುರಕ್ಷಿತ ಕೆಲಸದ ವಾತಾವರಣಕ್ಕಾಗಿ ಒತ್ತಾಯಿಸಿ ಮುಷ್ಕರ ನಡೆಸುತ್ತಿದ್ದಾರೆ.

ಈ ಹಿಂದೆ ಆಸ್ಪತ್ರೆಯ ಆಡಳಿತದ ಲೋಪಗಳ ಬಗ್ಗೆ ವೈದ್ಯರ ಪೋಷಕರು ಸೇರಿದಂತೆ ಈ ವಿಷಯದ ಬಗ್ಗೆ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಕಲ್ಕತ್ತಾ ಹೈಕೋರ್ಟ್ ಬಂಗಾಳ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

ಆಗಸ್ಟ್ 9 ರಂದು ಆರ್​ಜಿ ಕಾರ್ ಆಸ್ಪತ್ರೆಯ ಕ್ಯಾಂಪಸ್​​ನ ಸೆಮಿನಾರ್ ಕೋಣೆಯಲ್ಲಿ ವೈದ್ಯೆಯ ಶವ ಪತ್ತೆಯಾಗಿತ್ತು. ಶವಪರೀಕ್ಷೆಯು ಸಂತ್ರಸ್ತೆಯ ತೋಳುಗಳು ಮತ್ತು ಕಾಲುಗಳಿಂದ ಅವಳ ಜನನಾಂಗಗಳವರೆಗೆ ಅನೇಕ ಘೋರ ಗಾಯಗಳಾಗಿದ್ದವು. ಈ ಭೀಕರ ಹತ್ಯೆಯು ಕೋಲ್ಕತಾ ಮತ್ತು ಬಂಗಾಳದಾದ್ಯಂತ ಮತ್ತು ಭಾರತದಾದ್ಯಂತ ಆಸ್ಪತ್ರೆಯ ವೈದ್ಯರಿಂದ ಬೃಹತ್ ಆಂದೋಲನವನ್ನು ಹುಟ್ಟುಹಾಕಿತು. ಪ್ರತಿಭಟನೆಯ ನಂತರ ಆರ್ ಜಿ ಕಾರ್ ಆಸ್ಪತ್ರೆಯಲ್ಲಿ ವಿಧ್ವಂಸಕ ಕೃತ್ಯಗಳು ನಡೆದಿವೆ.

Exit mobile version