ಹೈದರಾಬಾದ್: ಬುಧವಾರ ನಡೆದ ಸನ್ರೈಸರ್ಸ್ ಹೈದರಾಬಾದ್ (Sun Risers Hyderabad) ಮತ್ತು ಮುಂಬೈ ಇಂಡಿಯನ್ಸ್ (Mumbai Indians ) ನಡುವಿನ ಐಪಿಎಲ್ 2024 ರ 8 ನೇ ಪಂದ್ಯವು ಹಲವು ದಾಖಲೆಗಳಿಗೆ ಕಾರಣವಾಗಿದ್ದವು. ಇದು ಟಿ20 ಮಾದರಿಯಲ್ಲಿ ತಂಡವೊಂದರ ಗರಿಷ್ಠ ಸ್ಕೋರ್, ಐಪಿಎಲ್ನಲ್ಲಿ (IPL 2024) ಪಂದ್ಯವೊಂದರ ಒಟ್ಟು ಅತ್ಯಧಿಕ ಸ್ಕೋರ್ ಸೇರಿದಂತೆ ಹಲವು ದಾಖಲೆಗಳಿಗೆ ಕಾರಣವಾದರು. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟರ್ ಹೆನ್ರಿಚ್ ಕ್ಲಾಸೆನ್ 34 ಎಸೆತಗಳಲ್ಲಿ 80 ರನ್ ಬಾರಿಸಿದ್ದರು. ಆದಾಗ್ಯೂ, ಎಲ್ಲಾ ಕ್ರಿಕೆಟ್ ಚಟುವಟಿಕೆಗಳ ನಡುವೆ, ಕ್ಲಾಸೆನ್ ಅವರ 14 ತಿಂಗಳ ಪುತ್ರಿ ಲಯಾ ಸ್ಟ್ಯಾಂಡ್ನಲ್ಲಿ ತಂದೆಯವನ್ನು ಬೆಂಬಲಿಸುವ ಅಪರೂಪದ ಕ್ಷಣ ವೈರಲ್ ಆಗಿದೆ.
ಎಸ್ಆರ್ಎಚ್ನ ಬ್ಯಾಟರ್ಗಳು ಆರು ಹೊಡೆತಗಳ ಉತ್ಸಾಹದಲ್ಲಿದ್ದಾಗ ಕ್ಲಾಸೆನ್ ಕೇವಲ 34 ಎಸೆತಗಳಲ್ಲಿ ನಾಲ್ಕು ಬೌಂಡರಿಗಳು ಮತ್ತು ಏಳು ಅತ್ಯುನ್ನತ ಸಿಕ್ಸರ್ಗಳನ್ನು ಒಳಗೊಂಡಂತೆ 80* ರನ್ ಗಳಿಸಿದ್ದರು. ಆದಾಗ್ಯೂ, ದಕ್ಷಿಣ ಆಫ್ರಿಕಾದ ಆಟಗಾರನನ್ನು ಸ್ಥಳೀಯ ಅಭಿಮಾನಿಗಳು ಹುರಿದುಂಬಿಸುವ ನಡುವೆ ಅವರ ಮಗಳು ಎಸ್ಆರ್ಎಚ್ ಬಾವುಟ ಬೀಸಿ ಅವರಿಗೆ ಬೆಂಬಲ ನೀಡಿದರು.
ಎಸ್ಆರ್ಎಚ್ ಅಪರೂಪದ ದಾಖಲೆ
ಸನ್ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ನಲ್ಲಿ ನೂತನ ದಾಖಲೆಯೊಂದನ್ನು ಬರೆದಿದೆ. ಐಪಿಎಲ್(IPL 2024) ಇತಿಹಾಸದಲ್ಲೇ ಅತ್ಯಧಿಕ ರನ್ ಪೇರಿಸಿದ ಮೊದಲ ತಂಡ ಎನಿಸಿಕೊಂಡಿದೆ. ಈ ಮೂಲಕ ಆರ್ಸಿಬಿ ಹೆಸರಿನಲ್ಲಿದ ದಾಖಲೆಯನ್ನು ಮುರಿದಿದೆ.
ಇದನ್ನೂ ಓದಿ : IPL 2024 : ಕೊಹ್ಲಿ- ಗಂಭೀರ್ ಮುಖಾಮುಖಿಯಲ್ಲಿ ವಿಜಯ ಯಾರಿಗೆ?
ಇಲ್ಲಿನ ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯುತ್ತಿರುವ ಈ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿ 20 ಓವರ್ಗಳಲ್ಲಿ 3 ವಿಕೆಟ್ಗೆ 277 ರನ್ ಬಾರಿಸಿದೆ. ಈ ಮೂಲಕ ಆರ್ಸಿಬಿ ಹೆಸರಿನಲ್ಲಿದ್ದ ದಾಖಲೆಯನ್ನು ಹಿಂದಿಕ್ಕಿದೆ. ಆರ್ಸಿಬಿ 2013ರಲ್ಲಿ ಪುಣೆ ವಾರಿಯರ್ಸ್ ವಿರುದ್ಧ 5 ವಿಕೆಟ್ಗೆ 263 ರನ್ ಬಾರಿಸಿತ್ತು. ಇದೀಗ ಈ ದಾಖಲೆಯನ್ನು ಹೈದರಾಬಾದ್ 11 ವರ್ಷಗಳ ಬಳಿಕ ಮೀರಿ ನಿಂತಿದೆ.
10 ಓವರ್ನಲ್ಲಿ ಗರಿಷ್ಠ ಮೊತ್ತ
ಹೈದರಾಬಾದ್ ತಂಡ 10 ಓವರ್ಗಳಲ್ಲಿ ಕೇವಲ 2 ವಿಕೆಟ್ಗೆ 148 ರನ್ ಬಾರಿಸುವ ಮೂಲಕ ಇದುವರೆಗಿನ ಐಪಿಎಲ್ ಇತಿಹಾಸದಲ್ಲಿಯೇ 10 ಓವರ್ಗೆ ಅ್ಯಧಿಕ ಮೊತ್ತ ಗಳಿಸಿದ ಮೊದಲ ತಂಡ ಹೆಗ್ಗಳಿಕೆಗೆ ಪಾತ್ರವಾಯಿತು. ಇದುವರೆಗೂ ಈ ದಾಖಲೆ ಮುಂಬೈ ತಂಡದ ಪರವಾಗಿತ್ತು. ಮುಂಬೈ 2021 ರಲ್ಲಿ ಹೈದರಾಬಾದ್ ವಿರುದ್ಧವೇ 131/3 ಬಾರಿಸಿತ್ತು. ಇದೀಗ ಹೈದರಾಬಾದ್ ಈ ದಾಖಲೆಯನ್ನು ಮುಂಬೈ ವಿರುದ್ಧವೇ ಆಡಿ ಸೇಡು ತೀರಿಸಿಕೊಂಡಿದೆ.
ಅತಿ ಕಡಿಮೆ ಓವರ್ನಲ್ಲಿ 100 ರನ್
7 ಓವರ್ನಲ್ಲಿ 100 ರನ್ ಗಡಿ ದಾಟುವ ಮೂಲಕ ಐಪಿಎಲ್ ಇತಿಹಾಸದ ಅತಿ ಕಡಿಮೆ ಓವರ್ನಲ್ಲಿ 100 ರನ್ ಬಾರಿಸಿದ ತಂಡಗಳ ದಾಖಲೆಪಟ್ಟಿಯಲ್ಲಿ ಹೈದರಾಬಾದ್ 4ನೇ ಸ್ಥಾನ ಪಡೆದುಕೊಂಡಿತು. ದಾಖಲೆ ಮುಂಬೈ ತಂಡದ ಹೆಸರಿನಲ್ಲಿದೆ. 2014ರಲ್ಲಿ ಪಂಜಾಬ್ ವಿರುದ್ಧ ಮುಂಬೈ ಕೇವಲ 6 ಓವರ್ನಲ್ಲಿ ಈ ಸಾಧನೆ ಮಾಡಿತ್ತು. ಪವರ್ ಪ್ಲೇಯಲ್ಲಿ ಅತ್ಯಧಿಕ ರನ್ ಗಳಿಸಿದ ಮೊದಲ ತಂಡ ಎಂಬ ದಾಖಲೆ ಕೂಡ ಮುಂಬೈ ಪರವೇ ಇದೆ.