ಬೆಂಗಳೂರು: ಸುಮಾರು ಒಂದು ವಾರದ ಹಿಂದೆ ಹೇಮ ಮಾಲಿನಿ ನಟಿ ಇಶಾ ಡಿಯೋಲ್ (Esha Deol) ಮತ್ತು ಅವರ ಉದ್ಯಮಿ ಪತಿ ಭರತ್ ತಖ್ತಾನಿ ತಮ್ಮ 11 ವರ್ಷಗಳ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಈ ದಂಪತಿಗೆ ರಾಧ್ಯ ಮತ್ತು ಮಿರಾಯಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇದೀಗ ಇಶಾ ಅವರ ತಾಯಿ, ಜನಪ್ರಿಯ ನಟಿ ಹೇಮಾ ಮಾಲಿನಿ ತಮ್ಮ ಮಗಳ ರಾಜಕೀಯದಲ್ಲಿ ಆಸಕ್ತಿ ಹೊಂದಿದ್ದಾರೆ ಎಂಬುದಾಗಿ ಹೇಳಿದ್ದಾರೆ.
ಎಬಿಪಿ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಹೇಮಾ “ಇಶಾ ರಾಜಕೀಯದಲ್ಲಿ ತುಂಬಾ ಆಸಕ್ತಿ ಹೊಂದಿದ್ದಾರೆ. ಮುಂಬರುವ ವರ್ಷಗಳಲ್ಲಿ, ಅವರು ಬಯಸಿದರೆ ರಾಜಕೀಯಕ್ಕೆ ಸೇರುತ್ತಾರೆ ಎಂದ ಹೇಳಿದ್ದಾರೆ.
201ರಲ್ಲಿ ವಿವಾಹವಾಗಿದ್ದ ಇಶಾ ಡಿಯೋಲ್ ಮತ್ತು ಭರತ್ ತಖ್ತಾನಿ ಜಂಟಿ ಹೇಳಿಕೆಯೊಂದಿಗೆ ತಮ್ಮ ಪ್ರತ್ಯೇಕತೆಯನ್ನು ಘೋಷಿಸಿದ್ದರು. ನಾವು ಪರಸ್ಪರ ಮತ್ತು ಸೌಹಾರ್ದಯುತವಾಗಿ ಬೇರ್ಪಡಲು ನಿರ್ಧರಿಸಿದ್ದೇವೆ. ನಮ್ಮ ಜೀವನದಲ್ಲಿನ ಈ ಪರಿವರ್ತನೆ ಬಳಿಕವೂ ನಮ್ಮ ಇಬ್ಬರು ಮಕ್ಕಳ ಯೋಗಕ್ಷೇಮ ಮತ್ತು ಕಲ್ಯಾಣವು ಆದ್ಯತೆಯಾಗಿದೆ. ಈ ಸಮಯದಲ್ಲಿ ನಮ್ಮ ಗೌಪ್ಯತೆಯನ್ನು ಗೌರವಿಸಬೇಕೆಂದು ನಾವು ದಯವಿಟ್ಟು ವಿನಂತಿಸುತ್ತೇವೆ ಎಂದು ಹೇಳಿಕೆ ನೀಡಿದ್ದರು.
ಹೇಮಾ ಮಾಲಿನಿ ಸದಾ ಇಶಾ ಡಿಯೋಲ್ ಬೆಂಬಲಕ್ಕೆ ನಿಲ್ಲುತಾರೆ. 69 ನೇ ಫಿಲ್ಮ್ಫೇರ್ ಪ್ರಶಸ್ತಿ ಸಮಾರಂಭದಲ್ಲಿ, ಇಶಾ ಅವರ ಚಿತ್ರ ಏಕ್ ದುವಾ ಚಿತ್ರ ವಿಶೇಷ ಪ್ರಶಸ್ತಿ ಪಡೆದಾಗ, ಹೇಮಾ ತನ್ನ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ಇಶಾ ಅವರನ್ನು ಅಭಿನಂದಿಸಿದ್ದರು. ನೀಲಿ ಸೀರೆಯಲ್ಲಿ ಮಿಂಚುವ ತಮ್ಮ ಮಗಳ ಚಿತ್ರವನ್ನು ಹಂಚಿಕೊಂಡಿದ್ದರು. ಇದು ನನ್ನ ಪ್ರೀತಿಯ ಇಶಾಗೆ ಹೆಮ್ಮೆಯ ಕ್ಷಣವಾಗಿದೆ. ನಿರ್ಮಾಪಕರಾಗಿ ಅವರ ಮೊದಲ ಚಿತ್ರ ಏಕ್ ದುವಾ 69 ನೇ ರಾಷ್ಟ್ರೀಯ ಪ್ರಶಸ್ತಿಗಳಲ್ಲಿ ನಾನ್-ಫೀಚರ್ ಚಿತ್ರಗಳ ವಿಭಾಗದಲ್ಲಿ ವಿಶೇಷ ಪಡೆದಿದೆ. ಅವಳ ಮುಕುಟಕ್ಕೆ ಮತ್ತೊಂದು ಗರಿ! ನನ್ನ ಮಗುವಿಎ ಅಭಿನಂದನೆಗಳು ಎಂದು ಬರೆದುಕೊಂಡಿದ್ದರು.
ಇದನ್ನೂ ಓದಿ : Sadhguru Jaggi Vasudev: ಹಾಲಿವುಡ್ ಸಾಂಗ್‌ನಲ್ಲಿ ಮಿಂಚಿದ ಸದ್ಗುರು ಜಗ್ಗಿ ವಾಸುದೇವ್!
ಇಶಾ ಡಿಯೋಲ್ ಕೂಡ ಈ ಸಂತಸ ಹಂಚಿಕೊಂಡಿದ್ದರು. ನನ್ನ ಚಿತ್ರ ಏಕ್ ದುವಾ 69 ನೇ ರಾಷ್ಟ್ರೀಯ ಪ್ರಶಸ್ತಿಗಳಲ್ಲಿ ಗೆದ್ದಿದೆ. ಈ ಚಿತ್ರದ ನಿರ್ಮಾಪಕ ಮತ್ತು ನಟಿಯಾಗಿ -ಫೀಚರ್ ಸ್ಪೆಷಲ್ ರೆಫರೆನ್ಸ್ ಪ್ರಶಸ್ತಿಯಲ್ಲಿ ಈ ಮಾನ್ಯತೆಯನ್ನು ಪಡೆಯುವುದು ಖುಷಿಯ ವಿಚಾರ. ನಮ್ಮ ಚಿತ್ರದ ವಿಷಯವು ಹೆಣ್ಣು ಭ್ರೂಣ ಹತ್ಯೆಗೆ ಸಂಬಂಧಸಿದ್ದು ಎಂದು ಹೇಳಿದ್ದರು.
ಹಲವಾರು ಚಿತ್ರಗಳಲ್ಲಿ ನಟಿಸುವುದರ ಹೊರತಾಗಿ,ಇಶಾ ಡಿಯೋಲ್ ಅಮ್ಮಾ ಮಿಯಾ ಎಂಬ ಪುಸ್ತಕ ಬರೆದಿದ್ದರು.