Vistara Top 10 News : ದೇಶ ವಿಭಜನೆ ಯತ್ನಕ್ಕೆ ಮೋದಿ ತಿರುಗೇಟು, ತೆರಿಗೆಯಲ್ಲಿ ಅನ್ಯಾಯ ಎಂದ ಸಿದ್ದರಾಮಯ್ಯ ಇತ್ಯಾದಿ ಪ್ರಮುಖ ಸುದ್ದಿಗಳು
Sukhesha Padibagilu
1. ಬಿಜೆಪಿ 400 ಸೀಟು ಗೆಲ್ಲುತ್ತೆ ಅಂದಿದ್ದಾರೆ ಖರ್ಗೆ, ಕಾಂಗ್ರೆಸ್ 40 ದಾಟಲ್ಲ ಅಂದಿದ್ದಾರೆ ಮಮತಾ; ಮೋದಿ ಗೇಲಿ ನವದೆಹಲಿ: “ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರುವ ಮೂಲಕ ಜನರ ಹಕ್ಕುಗಳನ್ನು ಕಸಿದುಕೊಂಡಿದ್ದ ಕಾಂಗ್ರೆಸ್ ಈಗ ದೇಶವನ್ನು ವಿಭಜನೆ ಮಾಡುತ್ತಿದೆ” ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದರು. ರಾಜ್ಯಸಭೆಯಲ್ಲಿ ರಾಷ್ಟ್ರಪತಿ ವಂದನಾ ನಿರ್ಣಯದ ಕುರಿತು ಭಾಷಣ ಮಾಡಿದ ಮೋದಿ, ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. “ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಬಿಜೆಪಿಯು 400 ಸ್ಥಾನಗಳನ್ನು ಗೆಲ್ಲುವುದಿಲ್ಲ ಎಂಬುದಾಗಿ ಹೇಳಿದ್ದಾರೆ. ಅತ್ತ, ಕಾಂಗ್ರೆಸ್ 40 ಸ್ಥಾನಗಳಲ್ಲಿ ಮಾತ್ರ ಗೆಲ್ಲುತ್ತದೆ ಎಂಬುದಾಗಿ ಮಮತಾ ಬ್ಯಾನರ್ಜಿ (Mamata Banerjee) ಹೇಳಿದ್ದಾರೆ. ಆದರೆ, ಕಾಂಗ್ರೆಸ್ ಈ ಬಾರಿ ಕನಿಷ್ಠ 40 ಸೀಟುಗಳನ್ನಾದರೂ ಉಳಿಸಿಕೊಳ್ಳಲಿ” ಎಂದು ಗೇಲಿ ಮಾಡಿದರು. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ. ಈ ಸುದ್ದಿಯನ್ನೂ ಓದಿ : ಅಂಬೇಡ್ಕರ್‌ಗೆ ಭಾರತರತ್ನ ಕೊಡದೆ ನಮಗೆ ತಾವೇ ಪ್ರಶಸ್ತಿ ಕೊಟ್ಟುಕೊಂಡರು! ಕಾಂಗ್ರೆಸ್‌ಗೆ ಮೋದಿ ಚಾಟಿ
3. ಕೇಂದ್ರದಿಂದ ಅನ್ಯಾಯ; ಬಜೆಟ್ ಬಳಿಕ ಶ್ವೇತಪತ್ರ ಹೊರಡಿಸುವೆ ಎಂದ ಸಿಎಂ ಸಿದ್ದರಾಮಯ್ಯ ಬೆಂಗಳೂರು: ಇದು ರಾಜಕೀಯ ಚಳವಳಿ ಅಲ್ಲ. ಕನ್ನಡಿಗರ ಹಿತ ಕಾಯಲು ಈ ಹೋರಾಟವನ್ನು ನಡೆಸುತ್ತಿದ್ದೇವೆ. ತೆರಿಗೆ ಹಂಚಿಕೆಯಲ್ಲಿ ಅನ್ಯಾಯ ಮಾಡಲಾಗಿದೆ. 1 ಲಕ್ಷ 77 ಸಾವಿರ ಕೋಟಿ ರೂಪಾಯಿ ಅನ್ಯಾಯ ಆಗಿದೆ. ಈ ಅನ್ಯಾಯದ ವಿರುದ್ಧ ನಮ್ಮ (Congress Protest) ಪ್ರತಿಭಟನೆಯಾಗಿದೆ. ನಮಗೆ ಪಾಲು ಕೊಟ್ಟಿದ್ದರೆ ಸರಿಸುಮಾರು 52,000 ಕೋಟಿ ರೂಪಾಯಿಯಷ್ಟು ನಮಗೆ ಬರುತ್ತಿತ್ತು. ಆದರೆ, ಕೇಂದ್ರ ಸರ್ಕಾರ ನಮಗೆ ಅನ್ಯಾಯ ಮಾಡಿದೆ. ಬರ ಪರಿಹಾರವಾಗಿ 17,901 ಕೋಟಿ ರೂಪಾಯಿ ನಮಗೆ ಪರಿಹಾರ ಕೊಡಿ ಎಂದು ಕೇಳಿದ್ದೇವೆ. ಇನ್ನೂ ಕೊಟ್ಟಿಲ್ಲ. ಈಗ ಶ್ವೇತಪತ್ರ ಕೇಳುತ್ತಿದ್ದಾರೆ. ಹೀಗಾಗಿ ಬಜೆಟ್ ಬಳಿಕ ಶ್ವೇತಪತ್ರ ಹೊರಡಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದರು. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ. ಈ ಸುದ್ದಿಯನ್ನೂ ಓದಿ : Congress Protest : ಎಷ್ಟು ಹಣ ಕೊಟ್ಟಿದ್ದೀವಿ ನೋಡಿ; ಕಾಂಗ್ರೆಸ್ ಆರೋಪಗಳಿಗೆ ದಾಖಲೆ ಮೂಲಕ ಉತ್ತರಿಸಿದ ಬಿಜೆಪಿ
4. 60 ರೂ.ಗೆ ಮೋದಿಯ ಭಾರತ್ ದಾಲ್; ಖರೀದಿ ಮಾಡುವುದು ಹೇಗೆ? ಬೆಂಗಳೂರು:ಚಿಲ್ಲರೆ ಮಟ್ಟದಲ್ಲಿ ಆಹಾರ ವಸ್ತುಗಳ ಬೆಲೆಗಳನ್ನು ನಿಯಂತ್ರಣದಲ್ಲಿ ಇಡುವ ಪ್ರಯತ್ನಗಳ ಭಾಗವಾಗಿ ಕೇಂದ್ರ ಸರ್ಕಾರವು ‘ಭಾರತ್ ದಾಲ್’ ಬ್ರಾಂಡ್ (Bharat Dal) ಹೆಸರಿನಲ್ಲಿ ಕಡಲೆ ಬೇಳೆಯನ್ನು 1 ಕೆ.ಜಿ ಪ್ಯಾಕ್ಗೆ ಪ್ರತಿ ಕೆ.ಜಿ.ಗೆ 60 ರೂ., 30 ಕೆ.ಜಿಯ ಪ್ಯಾಕ್ಗೆ ಪ್ರತಿ ಕೆ.ಜಿ.ಗೆ 55 ರೂ.ಗಳ ಸಬ್ಸಿಡಿ ದರದಲ್ಲಿ ಮಾರಾಟ ಮಾಡಲು ನಿರ್ಧರಿಸಿದೆ. ಭಾರತ್ ದಾಲ್ ಪ್ರಸ್ತುತ ನಾಫೆಡ್, ಎನ್ಸಿಸಿಎಫ್, ಕೇಂದ್ರೀಯ ಭಂಡಾರ್ ಮತ್ತು ಸಫಲ್ ನಿರ್ವಹಿಸುವ ಚಿಲ್ಲರೆ ಮಳಿಗೆಗಳಲ್ಲಿ ಲಭ್ಯವಿದೆ. ಇದಲ್ಲದೆ, ಇದು ಅನೇಕ ಇ-ಕಾಮರ್ಸ್ ಫ್ಲ್ಯಾಟ್ಫಾರ್ಮ್ಗಳಲ್ಲಿಯೂ ಲಭ್ಯವಿದೆ. ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲು, ರಾಜ್ಯ ಸರ್ಕಾರಗಳು ರಾಜ್ಯ ನಿಯಂತ್ರಿತ ಸಹಕಾರಿ ಸಂಸ್ಥೆಗಳು ಮತ್ತು ನಿಗಮಗಳ ಮೂಲಕ ಕಲ್ಯಾಣ ಯೋಜನೆಗಳಲ್ಲಿ ವಿತರಿಸಲು ಕಡಲೆ ಬೇಳೆಯನ್ನು ಪಡೆಯಬಹುದು. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
5. ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಿದ ದೇಶದ ಮೊದಲ ರಾಜ್ಯ ಉತ್ತರಾಖಂಡ ನವದೆಹಲಿ: ನಾಲ್ಕು ದಿನಗಳ ವಿಶೇಷ ವಿಧಾನಸಭೆ ಅಧಿವೇಶನ ವೇಳೆ ಉತ್ತರಾಖಂಡ(Uttarakhand) ಸರ್ಕಾರವು ಏಕರೂಪ ನಾಗರಿಕ ಸಂಹಿತೆ ವಿಧೇಯಕವನ್ನು ಪಾಸು ಮಾಡಿಕೊಂಡಿದೆ(Uniform Civil Code Bill). ಆ ಮೂಲಕ, ಏಕರೂಪ ನಾಗರಿಕ ಸಂಹಿತೆ ಜಾರಿಗೆ ತಂದ ಸ್ವತಂತ್ರ ಭಾರತದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಗೋವಾದಲ್ಲಿ ಈಗಾಗಲೇ ಏಕರೂಪ ನಾಗರಿಕ ಸಂಹಿತೆ ಜಾರಿಯಲ್ಲಿದೆ. ಪೋರ್ಚುಗೀಸ್ ಆಡಳಿತವಿದ್ದಾಗಲೇ ಗೋವಾದಲ್ಲಿ ನಾಗರಿಕ ಸಂಹಿತೆ ಅನುಷ್ಠಾನಗೊಂಡಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
6. ನೆಕ್ಸ್ಟ್ ಟಾರ್ಗೆಟ್ ಕಾಶಿ, ಮಥುರಾ ಮಸೀದಿಗಳು! ಯುಪಿ ಸಿಎಂ ಯೋಗಿ ಸುಳಿವು ಲಕ್ನೋ: ಮಹಾಭಾರತದಲ್ಲಿ ಶ್ರೀ ಕೃಷ್ಣನು ಪಾಂಡವರಿಗಾಗಿ ಕೇವಲ ಐದು ಹಳ್ಳಿಗಳನ್ನು ಕೇಳಿದ್ದ. ಇಂದು ಹಿಂದೂ ಸಮುದಾಯವು (Hindu Community) ತಮ್ಮ ಪವಿತ್ರ ಮೂರು ಸ್ಥಳಗಳನ್ನು ಕೇಳುತ್ತಿದ್ದಾರೆಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (UP CM Yogi Adityanath) ಅವರು ಹೇಳುವ ಮೂವಲಕ ಅಯೋಧ್ಯೆಯ ಬಳಿಕ, ಕಾಶಿ (Kashi Gyanvapi mosque) ಮತ್ತು ಮಥುರಾದಲ್ಲಿರುವ (Mathura Shahi Idgah mosque) ಮಸೀದಿಗಳನ್ನು ವಶಪಡಿಸಿಕೊಳ್ಳುವ ಬಗ್ಗೆ ಸುಳಿವು ನೀಡಿದ್ದಾರೆ. ಅಯೋಧ್ಯೆಯ ಬಾಬರಿ ಮಸೀದಿ ಇದ್ದ ಜಾಗದಲ್ಲಿ ಈಗ ರಾಮ ಮಂದಿರ ನಿರ್ಮಾಣ ಮಾಡಲಾಗಿದೆ. ಕಾಶಿಯಲ್ಲಿರುವ ಜ್ಞಾನವಾಪಿ ಹಾಗೂ ಮಥುರಾದಲ್ಲಿರುವ ಶಾಹಿ ಈದ್ಗಾ ಮಸೀದಿಯು ಈ ಹಿಂದೆ ಕ್ರಮವಾಗಿ ವಿಶ್ವನಾಥ ಹಾಗೂ ಕೃಷ್ಣನ ಮಂದಿರಗಳಾಗಿದ್ದವು ಎಂದು ಹೇಳಲಾಗುತ್ತಿದೆ. ಈ ಕುರಿತಾದ ವಿವಾದಗಳು ಕೋರ್ಟ್ ಮೆಟ್ಟಿಲೇರಿವೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ|
7.ಲೋಕಸಭೆ ಚುನಾವಣೆಯಲ್ಲಿ 370 ಸೀಟ್ ಗಳಿಸುತ್ತಾ ಬಿಜೆಪಿ? ಲೆಕ್ಕಾಚಾರ ಹೀಗಿದೆ ಹೊಸದಿಲ್ಲಿ: ಇತ್ತೀಚೆಗೆ ಸಂಸತ್ ಅಧಿವೇಶನದ (Parliament Session) ಕೊನೆಯಲ್ಲಿ ಮಾತನಾಡುತ್ತ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು, ಮುಂದಿನ ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಬಿಜೆಪಿ (BJP) 370 ಸ್ಥಾನಗಳನ್ನು ಗೆಲ್ಲಲಿದೆ ಹಾಗೂ ಎನ್‌ಡಿಎ (NDA) 400 ಸ್ಥಾನಗಳೊಂದಿಗೆ ಅಧಿಕಾರಕ್ಕೆ ಏರಲಿದೆ ಎಂದು ಹೇಳಿದ್ದರು. ಇದು ಹೇಗೆ ಸಾಧ್ಯ? ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
8. ನಂ.1 ಸ್ಥಾನ ಅಲಂಕರಿಸಿ ಹಲವು ದಾಖಲೆ ಬರೆದ ಜಸ್ಪ್ರೀತ್ ಬುಮ್ರಾ ಮುಂಬಯಿ: ನೂತನ ಐಸಿಸಿ ಟೆಸ್ಟ್ ಬೌಲಿಂಗ್ ಶ್ರೇಯಾಂಕದಲ್ಲಿ(ICC Test Rankings) ನಂ.1 ಸ್ಥಾನ ಪಡೆದ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ(Jasprit Bumrah) ಅವರು ಹಲವು ದಾಖಲೆಯನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ಟೆಸ್ಟ್ನಲ್ಲಿ ಅಗ್ರಸ್ಥಾನ ಪಡೆದ ಭಾರತದ ಮೊದಲ ವೇಗಿ ಎಂಬ ಹಿರಿಮೆಗೆ ಬುಮ್ರಾ ಪಾತ್ರರಾಗಿದ್ದಾರೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
9. ಸುಶ್ಮಿತಾ ಸೇನ್, ಐಶ್ವರ್ಯ ರೈ ಜತೆಗೆ ಸ್ಪರ್ಧಿಸಿದ್ದ ಖ್ಯಾತ ಮಾಡೆಲ್ ಈಗ ಸನ್ಯಾಸಿ! ಸುಶ್ಮಿತಾ ಸೇನ್, ಐಶ್ವರ್ಯ ರೈ ಅಂತಹ ನಟಿಯರ ಜತೆ ಸ್ಪರ್ಧಿಸಿ ಮೊದಲ ರನ್ನರ್ ಅಪ್ ಆಗಿದ್ದ ಖ್ಯಾತ ಮಾಡೆಲ್, ನಟಿ ಬರ್ಖಾ ಮದನ್ (Barkha Madan) ಈಗ ಸನ್ಯಾಸಿನಿಯಾಗಿದ್ದಾರೆ! 1994ರ ಸೌಂದರ್ಯ ಸ್ಪರ್ಧೆಯಲ್ಲಿ ಇವರು ಮಿಸ್ ಇಂಡಿಯಾದಲ್ಲಿ ಭಾಗವಹಿಸಿದ್ದರು. ಮಲೇಷ್ಯಾದಲ್ಲಿ ನಡೆದ ʻಮಿಸ್ ಟೂರಿಸಂʼ ಇಂಟರ್‌ನ್ಯಾಷನಲ್‌ನಲ್ಲಿ ಮೂರನೇ ರನ್ನರ್ ಅಪ್ ಆಗಿದ್ದರು. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
10. ವೃದ್ಧರಿಗೂ ಮರಳಿ ಯೌವನ ನೀಡಬಲ್ಲ ಬೆಂಗಳೂರು ಹುಡುಗಿಗೆ ಸೈನ್ಸ್ ಪ್ರಶಸ್ತಿ ಬೆಂಗಳೂರು: ವರ್ಣತಂತುಗಳಲ್ಲಿ ಸಣ್ಣಪುಟ್ಟ ಬದಲಾವಣೆಯನ್ನು ಮಾಡಿ ಯೌವನವನ್ನು ಮರಳಿ ಪಡೆಯಬಹುದು ಎಂದು ನಿರೂಪಿಸಿದ ಬೆಂಗಳೂರಿನ 17 ವರ್ಷದ ಹುಡುಗಿ ಬ್ರೇಕ್‌ಥ್ರೂ ಜೂನಿಯರ್ ಚಾಲೆಂಜ್ 2023 (Breakthrough Junior Challenge 2023) ಅನ್ನು ಗೆದ್ದಿದ್ದಾಳೆ. ಸಿಯಾ ಗೋಡಿಕಾ (Sia Godika) ಎಂಬ ಈ ಹುಡುಗಿಯ ಈ ಸೃಜನಶೀಲ ಸಂಶೋಧನೆಗೆ ‘ವಿಜ್ಞಾನದ ಆಸ್ಕರ್’ ಎನ್ನಲಾಗುವ ಬ್ರೇಕ್‌ಥ್ರೂ ಜೂನಿಯರ್ ಚಾಲೆಂಜ್ ಪ್ರಶಸ್ತಿಯ (Breakthrough Challenge) ಜತೆಗೆ 4,00,000 ಡಾಲರ್ ಬಹುಮಾನ ದೊರಕಿದೆ. 4 ಲಕ್ಷ ಡಾಲರ್ ಎಂದರೆ 3,32,16,672.20 ರೂ. (3.3 ಕೋಟಿ ರೂ.) ಬಹುಮಾನ ಸಿಗಲಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.