1. Chandrayaan 3: ಇಸ್ರೋ ಮೈಲುಗಲ್ಲಿಗೆ ಇನ್ನೊಂದೇ ಹೆಜ್ಜೆ ಬಾಕಿ; ನೌಕೆಯಿಂದ ಬೇರ್ಪಟ್ಟ ಲ್ಯಾಂಡರ್
ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನೆ ಕೇಂದ್ರ (ISRO)ದ ಮಹತ್ವಾಕಾಂಕ್ಷೆಯ ಚಂದ್ರಯಾನ 3 (Chandrayaan 3) ಮಿಷನ್ ಯಶಸ್ಸಿಗೆ ಇನ್ನೊಂದೇ ಹೆಜ್ಜೆ ಬಾಕಿ ಉಳಿದಿದೆ. ಚಂದ್ರಯಾನ 3 ನೌಕೆಯಿಂದ (ಪ್ರಾಪಲ್ಶನ್ ಮಾಡ್ಯೂಲ್) ವಿಕ್ರಮ್ ಲ್ಯಾಂಡರ್‌ಅನ್ನು ಬೇರ್ಪಡಿಸಲಾಗಿದ್ದು, ಇದರೊಂದಿಗೆ ಚಂದ್ರನ ಅಂಗಳದಲ್ಲಿ ಸಾಫ್ಟ್ ಲ್ಯಾಂಡಿಂಗ್ ಆಗಲು ದಿನಗಣನೆ ಆರಂಭವಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : Fact Check: ಚಂದ್ರಯಾನ 3 ವಿಜ್ಞಾನಿಗಳಿಗೆ ಕೇಂದ್ರ ಸರ್ಕಾರ 3 ತಿಂಗಳಿಂದ ಸಂಬಳ ನೀಡಿಲ್ಲವೇ? ಇಲ್ಲಿದೆ ವಾಸ್ತವ
2. ಇಸ್ಲಾಂಗಿಂತ ಹಿಂದುತ್ವ ಹಳೆಯದು, ಭಾರತದ ಮುಸ್ಲಿಮರು ಹಿಂದುಗಳಾಗಿದ್ದರು; ಗುಲಾಂ ನಬಿ ಆಜಾದ್ ಮತ್ತೇನು ಹೇಳಿದರು?
ಶ್ರೀನಗರ: ಹಿಂದುತ್ವ ಹಾಗೂ ಇಸ್ಲಾಂ ಕುರಿತು ಡೆಮಾಕ್ರಸಿ ಪ್ರೊಗ್ರೆಸ್ಸಿವ್ ಆಜಾದ್ ಪಕ್ಷದ ಮುಖ್ಯಸ್ಥ, ಕಾಂಗ್ರೆಸ್ ಮಾಜಿ ನಾಯಕ ಗುಲಾಂ ನಬಿ ಆಜಾದ್ (Ghulam Nabi Azad) ಮಹತ್ವದ ಹೇಳಿಕೆ ನೀಡಿದ್ದಾರೆ. “ಇಸ್ಲಾಂಗಿಂತ (Islam) ಹಿಂದು ಧರ್ಮವು ಪುರಾತನ ಇತಿಹಾಸ ಹೊಂದಿದೆ. ಭಾರತದಲ್ಲಿರುವ ಮುಸ್ಲಿಮರು (Muslims) ಮೊದಲು ಹಿಂದುಗಳಾಗಿದ್ದರು, ಅವರನ್ನು ಮತಾಂತರಗೊಳಿಸಿ ಮುಸ್ಲಿಮರನ್ನಾಗಿ ಮಾಡಲಾಗಿದೆ” ಎಂದು ಅವರು ನೀಡಿದ ಹೇಳಿಕೆ ಈಗ ಚರ್ಚೆಗೆ ಗ್ರಾಸವಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
3. Lokayukta Raid : ಕೊಡಗಿನ ಅಪರ ಜಿಲ್ಲಾಧಿಕಾರಿ ಕೈಲಿ 52 ಎಕರೆ ಆಸ್ತಿ, 4 ಸೈಟು; ಮನೆಯಲ್ಲೇ ಸಿಕ್ತು 23 ಲಕ್ಷ ನಗದು!
ಮಡಿಕೇರಿ: ಕೊಡಗಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ದಾಳಿಗೆ (Lokayukta raid) ಒಳಗಾಗಿದ್ದಾರೆ. ಅವರಲ್ಲಿ ಒಬ್ಬರು ನೀರಾವರಿ ನಿಗಮದಲ್ಲಿ ಕಾರ್ಯ ನಿರ್ವಾಹಕ ಎಂಜಿನಿಯರ್ ಆಗಿರುವ ಹಾರಂಗಿ ಡ್ಯಾಂ ಅಧೀಕ್ಷಕ ರಘುಪತಿ ಮತ್ತು ಇನ್ನೊಬ್ಬರು ಕೊಡಗು ಜಿಲ್ಲಾ ಅಪರ ಜಿಲ್ಲಾಧಿಕಾರಿ (Kodagu Additional deputy Commissioner) ನಂಜುಂಡೇಗೌಡ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ: Lokayukta Raid : ನೀರಾವರಿ ಇಲಾಖೆ ಎಂಜಿನಿಯರ್ ರಘುಪತಿ ಭವ್ಯ ಬಂಗಲೆಯಲ್ಲಿ ಕೋಟಿ ಬಾಳುವ ವುಡನ್ ಡಿಸೈನ್!
4. ಕನ್ನಡಿಗರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ; ಕನ್ನಡ ಸೇರಿ 15 ಭಾಷೆಗಳಲ್ಲಿ ನೇಮಕಾತಿ ಪರೀಕ್ಷೆ, ಯಾವ ಹುದ್ದೆಗೆ ಅನ್ವಯ?
ನವದೆಹಲಿ: ಕೇಂದ್ರ ಸರ್ಕಾರವು ಹಿಂದಿ ಹೇರಿಕೆ ಮಾಡುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರವು ಕನ್ನಡಿರಿಗೆ ಸಿಹಿ ಸುದ್ದಿ ನೀಡಿದೆ. “ಯುವಕರು ಅವಕಾಶಗಳಿಂದ ವಂಚಿತರಾಗಬಾರದು ಎಂಬ ಕಾರಣಕ್ಕಾಗಿ ಸಿಬ್ಬಂದಿ ನೇಮಕಾತಿ ಆಯೋಗದ (SSC) ಪರೀಕ್ಷೆಗಳನ್ನು ಕನ್ನಡ (Kannada) ಸೇರಿ 15 ಭಾಷೆಗಳಲ್ಲಿ ನಡೆಸಲು ಇತ್ತೀಚೆಗೆ ಕೇಂದ್ರ ಸರ್ಕಾರ ತೀರ್ಮಾನಿಸಿದೆ” ಎಂದು ಕೇಂದ್ರ ಸಿಬ್ಬಂದಿ, ಕುಂದುಕೊರತೆಗಳು ಹಾಗೂ ಪಿಂಚಣಿ ಖಾತೆ ಸಹಾಯಕ ಸಚಿವ ಜಿತೇಂದ್ರ ಸಿಂಗ್ ಮಾಹಿತಿ ನೀಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5.Nitin Gadkari: ಹೆದ್ದಾರಿಗಳ ಡೇಂಜರ್ ಸ್ಪಾಟ್ ನಿವಾರಣೆಗೆ ನಿತಿನ್ ಗಡ್ಕರಿ ಕಠಿಣ ಸೂಚನೆ
ಹೊಸದಿಲ್ಲಿ: ಹೆದ್ದಾರಿಗಳಲ್ಲಿನ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಮುಂದಾಗಿದ್ದಾರೆ. ರಸ್ತೆಗಳು ಮತ್ತು ಹೆದ್ದಾರಿಗಳಲ್ಲಿನ ಬ್ಲ್ಯಾಕ್‌ಸ್ಪಾಟ್‌ಗಳನ್ನು (Blackspots – ಅಪಾಯದ ತಾಣ) ಗುರುತಿಸಲು ಮತ್ತು ಅವುಗಳನ್ನು ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅವರು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (NHAI) ಸೂಚನೆ ನೀಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. Operation Hasta : ʼಆಪರೇಷನ್ ಹಸ್ತʼದ ಹಿಟ್ ಲಿಸ್ಟ್‌ನಲ್ಲಿ ಇರೋದು ಈ 14 ಜನ!
ಬೆಂಗಳೂರು: ಲೋಕಸಭಾ ಚುನಾವಣೆಯ (Lok Sabha Election 2024) ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯದಲ್ಲಿ (Karnataka Politics) ಅನೇಕ ಬೆಳವಣಿಗೆಗಳು ನಡೆಯುತ್ತಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ನಲ್ಲಿ ಆಂತರಿಕ ಲೆಕ್ಕಾಚಾರಗಳು ಜೋರಾಗಿಯೇ ಇವೆ. ಯಾವ ಮಾರ್ಗವನ್ನು ಅನುಸರಿಸಿದರೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬಹುದು ಎಂಬ ನಿಟ್ಟಿನಲ್ಲಿ ಕಾರ್ಯತಂತ್ರಗಳನ್ನು ಹೆಣೆಯಲಾಗುತ್ತಿದೆ. ಇನ್ನು ಲೋಕಸಭೆಯಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲಬೇಕೆಂದು ಕಾಂಗ್ರೆಸ್ ಹೈಕಮಾಂಡ್ (Congress High Command) ಟಾಸ್ಕ್ ನೀಡಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ (KPCC president and Deputy CM DK Shivakumar) ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಹೀಗಾಗಿ ಅವರು ಅವರದ್ದೇ ಆದ ರೀತಿಯಲ್ಲಿ ರಾಜಕೀಯ ಆಟವನ್ನು ಪ್ರಾರಂಭಿಸಿದ್ದಾರೆ. ಆಪರೇಷನ್ ಹಸ್ತಕ್ಕೆ (Operation Hasta) ಮುಂದಡಿ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದ್ದು, ಇದಕ್ಕಾಗಿ ಕಳೆದ ಬಾರಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಶಾಸಕರನ್ನು ವಾಪಸ್ ಕರೆತರಲು (ಘರ್ ವಾಪಸಿ- Ghar Wapsi) ಯೋಜನೆ ರೂಪಿಸಿದ್ದಾರೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಕೈಯಲ್ಲಿ ಬಿಜೆಪಿಯ 14 ಶಾಸಕರು ಹಿಟ್ ಲಿಸ್ಟ್‌ನಲ್ಲಿದ್ದಾರೆ ಎಂದು ತಿಳಿದುಬಂದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ: Operation Hasta : ಬಿಜೆಪಿಯಲ್ಲಿ ಬೇಸರ ಆಗಿದೆ ಎಂದ ಎಸ್.ಟಿ. ಸೋಮಶೇಖರ್; 4 ದಿನದ ಡೆಡ್‌ಲೈನ್ ಕೊಟ್ಟರೇ?
7. Kaveri River : ಡಿಕೆಶಿ ಕರ್ನಾಟಕಕ್ಕೆ ಮಂತ್ರಿಯೋ, ತಮಿಳುನಾಡಿಗೋ? ಸರ್ವಪಕ್ಷ ಸಭೆ ಕರೆಯಲು ಎಚ್‌ಡಿಕೆ ಆಗ್ರಹ
ಈ ಸುದ್ದಿಯನ್ನೂ ಓದಿ: Weather report: ಮಳೆ ಕೊರತೆ, ಕರ್ನಾಟಕ ಇನ್ನಷ್ಟು ಬಿಸಿ
8. Article 370: ರಾಷ್ಟ್ರಪತಿಯವರೇ ರಾಜ್ಯದ ಸ್ಥಾನ ನೀಡಬಹುದು; ಕಾಶ್ಮೀರ ವಿಷಯದಲ್ಲಿ ಸುಪ್ರೀಂ ಮಹತ್ವದ ಪ್ರಸ್ತಾಪ
9. Rakshit Shetty: ರಕ್ಷಿತ್ ಶೆಟ್ಟಿ ಅಭಿನಯದ ‘ಸಪ್ತ ಸಾಗರದಾಚೆ ಎಲ್ಲೊ ಟ್ರೈಲರ್’ ಬಿಡುಗಡೆ
10. Viral News : ಬೆತ್ತಲೆ ತೋರಿಸುವ ʼಮ್ಯಾಜಿಕ್ ಕನ್ನಡಿʼಗಾಗಿ 9 ಲಕ್ಷ ರೂ. ಕಳೆದುಕೊಂಡ ಕಿಲಾಡಿ ಮುದುಕ!
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ