1. ಬೆಂಗಳೂರಿನ ಇಸ್ರೋ ಕಚೇರಿಗೆ ಶನಿವಾರ ಬೆಳಗ್ಗೆ ಪ್ರಧಾನಿ ಮೋದಿ ಭೇಟಿ; ಏನೇನು ಕಾರ್ಯಕ್ರಮ?
ಬೆಂಗಳೂರು: ಬ್ರಿಕ್ಸ್ ಶೃಂಗಸಭೆಗಾಗಿ ದಕ್ಷಿಣ ಆಫ್ರಿಕಾಗೆ ತೆರಳಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಜೊಹಾನ್ಸ್‌ಬರ್ಗ್‌ನಿಂದ ನೇರವಾಗಿ ಶನಿವಾರ (ಆ.26) ಬೆಳಗ್ಗೆ ಬೆಂಗಳೂರಿಗೆ (Modi in Bangalore) ಆಗಮಿಸಲಿದ್ದಾರೆ. ಚಂದ್ರಯಾನ- 3 (Chandrayaan 3) ಮಿಷನ್ ಯಶಸ್ವಿಯಾದ ಹಿನ್ನೆಲೆಯಲ್ಲಿ ಅವರು ಇಸ್ರೋ ಕಚೇರಿಗೆ ಭೇಟಿ ನೀಡಿ ಇಸ್ರೋ (ISRO) ವಿಜ್ಞಾನಿಗಳನ್ನು ಅಭಿನಂದಿಸಲಿದ್ದಾರೆ. ಪ್ರಧಾನಿ ಕಾರ್ಯಕ್ರಮದ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
2. ರೋವರ್ ಚಂದ್ರನ ಮೇಲೆ ಅನ್ವೇಷಣೆ ಮಾಡಲು ಹೊರಟ ವಿಡಿಯೊ ಬಿಡುಗಡೆ ಮಾಡಿದ ಇಸ್ರೊ
ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೊ (isro) ಚಂದ್ರನ (Chandrayaan -3) ಮೇಲೆ ಇಳಿಸಿರುವ ಚಂದ್ರಯಾನ 3 ಲ್ಯಾಂಡರ್ನ ಒಳಗಿದ್ದ ರೋವರ್ (Rover) ಹೊರಕ್ಕೆ ಬಂದು ಅನ್ವೇಷಣೆ ಆರಂಭ ಮಾಡಿದೆ. ಇದರ ವಿಡಿಯೊವನ್ನು ಇಸ್ರೊ ಸಂಸ್ಥೆ ಬಿಡುಗಡೆ ಮಾಡಿದೆ. ಪ್ರಜ್ಞಾನ್ ರೋವರ್ ಲ್ಯಾಂಡರ್ ಒಳಗಿಂದ ಹೊರಕ್ಕೆ ಬರುತ್ತಿರುವ ವಿಡಿಯೊವನ್ನು ಶೇರ್ ಮಾಡಿದ ತಕ್ಷಣವೇ ಕುತೂಹಲಿಗರ ಗಮನ ಸೆಳೆದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
2. ಪ್ರಧಾನಿ ನರೇಂದ್ರ ಮೋದಿಗೆ ಗ್ರೀಸ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಪ್ರದಾನ
ವದೆಹಲಿ: ಗ್ರೀಸ್ (Greece) ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಗ್ರೀಸ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ (Grand Cross of the Order of Honour) ಪ್ರಶಸ್ತಿಯನ್ನು ಗ್ರೀಸ್ ಅಧ್ಯಕ್ಷೆ ಕಟೆರಿನಾ ಎನ್. ಸಕೆಲ್ಲರೊಪೌಲೌ (Greek President Katerina N. Sakellaropoulou) ಅವರು ಶುಕ್ರವಾರ ಪ್ರದಾನ ಮಾಡಿದರು. ಈ ಗೌರವ ಸ್ವೀಕರಿಸಿದ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತದ ಜನರೆಡೆಗೆ ಗ್ರೀಸ್ ಹೊಂದಿರುವ ಗೌರವವನ್ನು ಈ ಪ್ರಶಸ್ತಿ ಸಂಕೇತಿಸುತ್ತಿದೆ. ಇದಕ್ಕಾಗಿ ಗ್ರೀಸ್ ಅಧ್ಯಕ್ಷೆ ಹಾಗೂ ಜನರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. ಮಧ್ಯಂತರ ಆದೇಶಕ್ಕೆ ಸುಪ್ರೀಂ ಕೋರ್ಟ್ ನಕಾರ, ನೀರಿಗೆ ಬೇಡಿಕೆ ಇಟ್ಟಿದ್ದ ತಮಿಳುನಾಡಿಗೆ ಹಿನ್ನಡೆ
ನವದೆಹಲಿ: 24,000 ಕ್ಯುಸೆಕ್ ಕಾವೇರಿ ನೀರು ಬಿಡುಗಡೆಗೆ ತಮಿಳುನಾಡು (Tamil Nadu Plea) ಸಲ್ಲಿಸಿದ್ದ ಮನವಿಗೆ ಮಧ್ಯಂತರ ಆದೇಶ (No Interim Order) ನೀಡಲು ಸುಪ್ರೀಂ ಕೋರ್ಟ್ (Supreme Court) ಶುಕ್ರವಾರ ನಿರಾಕರಿಸಿದ್ದು, ನ್ಯಾಯಾಲಯಕ್ಕೆ ಈ ವಿಚಾರದಲ್ಲಿ ಯಾವುದೇ ಪರಿಣತಿ ಇಲ್ಲ ಎಂದು ಅಭಿಪ್ರಾಯಪಟ್ಟಿದೆ. ಈ ಮೊದಲು ಕರ್ನಾಟಕ ಸರ್ಕಾರವು(Karnataka Government) ಬಿಡುಗಡೆ ಮಾಡಿದ ನೀರಿನ ಪ್ರಮಾಣದ ಬಗ್ಗೆ ನ್ಯಾಯಾಲಯವು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಿಂದ (Cauvery Water Management Authority – CWMA)ವರದಿ ಕೇಳಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. ಕಾಸರಗೋಡು ಕನ್ನಡ ಶಾಲೆಗೆ ಕನ್ನಡ ಶಿಕ್ಷಕರ ನೇಮಕಕ್ಕೆ ಕೇರಳ ಹೈಕೋರ್ಟ್ ನಿರ್ದೇಶನ
ಬೆಂಗಳೂರು: ಗಡಿನಾಡು ಕೇರಳದ ಕಾಸರಗೋಡಿನ ಅಡೂರಿನ ಸರ್ಕಾರಿ ಹಿರಿಯ ಪ್ರೌಢಶಾಲೆಯಲ್ಲಿ (Govt School) ಕನ್ನಡ ವಿಷಯಕ್ಕೆ (Kannada Subject) ಮಲಯಾಳಂ ಶಿಕ್ಷಕಿಯನ್ನು ನೇಮಿಸಿ ಅಲ್ಲಿನ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಕೇರಳ ಹೈಕೋರ್ಟ್ (Kerala High Court) ತಡೆ ನೀಡಿದೆ. ಈ ಮೂಲಕ ಕನ್ನಡ ಭಾಷೆ (Kannada Language) ಮಕ್ಕಳಿಗೆ ಸಂಬಂಧಪಟ್ಟಂತೆ ಶಿಕ್ಷಕರ ನೇಮಕಾತಿ (Recruitment of Teachers) ವಿವಾದಕ್ಕೆ ತೆರೆಬಿದ್ದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. ಜಿ20 ಶೃಂಗ ಸಭೆಯ ಆತಿಥ್ಯ ರಾಷ್ಟ್ರ ಭಾರತದಿಂದ ಭರದ ಸಿದ್ಧತೆ! ವಿಶ್ವ ನಾಯಕರಿಗೆ ಬುಲೆಟ್‌ಪ್ರೂಫ್ ಕಾರ್
7. ಸಿಎಂ, ಡಿಸಿಎಂ ಭೇಟಿ ಮಾಡಿದ ರೇಣುಕಾಚಾರ್ಯ; ದಾವಣಗೆರೆಗೆ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ?
8. ಮೆಟ್ರೋ ಪ್ರಯಾಣಿಕರೇ ಗಮನಿಸಿ, ಭಾನುವಾರ 7ರಿಂದ 1 ಗಂಟೆವರೆಗೆ ರೈಲು ಓಡಲ್ಲ; ಎಲ್ಲೆಲ್ಲಿ ಅಂತ ನೋಡಿ
9. ಈ ಹಿಂದಿನ ಕಹಿ ಘಟನೆಗಳನ್ನು ಮರೆಯೋಣ; ಮಾಧ್ಯಮಗಳಿಗೆ ನಟ ದರ್ಶನ್ ಸಂದೇಶ
10. ಲಂಕಾದಲ್ಲಿ ಕೊರೊನಾ ಅಟ್ಟಹಾಸ; ಆಟಗಾರರಿಗೆ ಪಾಸಿಟಿವ್, ಏಷ್ಯಾಕಪ್ ಅನುಮಾನ