Site icon Vistara News

Meta | ಮೆಟಾ ಇಂಡಿಯಾದ ಮುಖ್ಯಸ್ಥರಾಗಿ ಸಂಧ್ಯಾ ದೇವನಾಥನ್‌ ನೇಮಕ

meta sandhya

ನವ ದೆಹಲಿ: ಫೇಸ್‌ಬುಕ್‌ನ ಮಾತೃ ಸಂಸ್ಥೆ ಮೆಟಾ, ತನ್ನ ಭಾರತೀಯ ಘಟಕವಾದ ಮೆಟಾ ಇಂಡಿಯಾದ (Meta) ನೂತನ ಮುಖ್ಯಸ್ಥರನ್ನಾಗಿ ಸಂಧ್ಯಾ ದೇವನಾಥಮ್‌ ಅವರನ್ನು ನೇಮಿಸಿದೆ.

ಸಂಧ್ಯಾ ದೇವನಾಥನ್‌ ಅವರು ಬ್ಯಾಂಕಿಂಗ್‌, ಪೇಮೆಂಟ್‌ ಟೆಕ್ನಾಲಜಿಯಲ್ಲಿ ಅಂತಾರಾಷ್ಟ್ರೀಯ ವೃತ್ತಿಪರ ಅನುಭವ ಗಳಿಸಿದ್ದಾರೆ. ದಿಲ್ಲಿ ವಿವಿಯಲ್ಲಿ ಎಂಬಿಎಯನ್ನು 2000ರಲ್ಲಿ ಪೂರ್ಣಗೊಳಿಸಿದ್ದರು.

2016ರಲ್ಲಿ ಅವರು ಮೆಟಾವನ್ನು ಸೇರಿದ್ದರು. ಕಂಪನಿಯ ಸಿಂಗಾಪುರ ಮತ್ತು ವಿಯೆಟ್ನಾಂ ವಿಭಾಗದ ಬಿಸಿನೆಸ್‌ ಅನ್ನು ಅಭಿವೃದ್ಧಿಪಡಿಸಿದ್ದರು. 2020ರಲ್ಲಿ ಕಂಪನಿಯ ಗೇಮಿಂಗ್‌ ಉಪಕ್ರಮಗಳ ನೇತೃತ್ವ ವಹಿಸಿದ್ದರು.

ಮೆಟಾ ಇಂಡಿಯಾದ ಮುಖ್ಯಸ್ಥ ಅಜಿತ್‌ ಮೋಹನ್‌ ಇತ್ತೀಚೆಗೆ ರಾಜೀನಾಮೆ ನೀಡಿದ್ದರು. ಅವರು ಸೋಶಿಯಲ್‌ ನೆಟ್‌ ವರ್ಕಿಂಗ್‌ ಕಂಪನಿ ಸ್ನಾಪ್‌ ಅನ್ನು ಸೇರಿಕೊಳ್ಳುವ ಸಾಧ್ಯತೆ ಇದೆ.

Exit mobile version