ನವದೆಹಲಿ: ಮೋದಿ ಸರ್ಕಾರ ಸಿಎಎ (Citizenship Amendment Act) ಜಾರಿಗೆ ತಂದ ಬೆನ್ನಲ್ಲೇ ದೆಹಲಿಯಲ್ಲಿ ವಾಸಿಸುವ ಪಾಕಿಸ್ತಾನಿ ಹಿಂದೂ ನಿರಾಶ್ರಿತರು ಸಂಭ್ರಮ ವ್ಯಕ್ತಪಡಿಸಿದ್ದಾರೆ. ಅವರೆಲ್ಲರೂ ಮುಸ್ಲಿಂ ಬಹುಸಂಖ್ಯಾತ ಪಾಕಿಸ್ತಾನದಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾದವರು. ಅವರೆಲ್ಲರೂ ಕಾಯ್ದೆಯ ಅನುಷ್ಠಾನದ ಬಗ್ಗೆ ಭರವಸೆ ಮತ್ತು ಸಂತೋಷವಾಗಿದೆ ಎಂದಿದ್ದಾರೆ. ಕೊನೆಗೂ ನಮ್ಮನ್ನು ಭಾರತೀಯ ನಾಗರಿಕರು ಎಂದು ಕರೆಯುವ ದಿನಗಳು ಬಂದಿವೆ ಎಂದು ಅವರು ಸಂತೋಷಪಟ್ಟಿದ್ದಾರೆ.
Bharat🇮🇳 Pakistan🇵🇰
— Izlamic Terrorist (@raviagrawal3) March 11, 2024
Hindu Pakistani refugees who were persecuted on the basis of religion in Delhi's Adarsh Nagar camp are jubilant with joy.
Thank you Modi Ji 🥺🙏
Citizenship Amendment Act
1/2 pic.twitter.com/5SW88zamXv
2014ರ ಡಿಸೆಂಬರ್ 31 ಕ್ಕಿಂತ ಮೊದಲು ಭಾರತಕ್ಕೆ ಬಂದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ದಾಖಲೆರಹಿತ ಮುಸ್ಲಿಮೇತರ ವಲಸಿಗರಿಗೆ ಪೌರತ್ವ ನೀಡಲು ಸಿಎಎ 2019 ಅನ್ನು ಜಾರಿಗೆ ತರುವುದಾಗಿ ಕೇಂದ್ರ ಸರ್ಕಾರ ಸೋಮವಾರ ಘೋಷಿಸಿದೆ. ದೆಹಲಿಯಲ್ಲಿರುವ ಪಾಕಿಸ್ತಾನಿ ಹಿಂದೂ ನಿರಾಶ್ರಿತರ ಸಮುದಾಯದ ಮುಖ್ಯಸ್ಥ ಎಂದು ಪರಿಗಣಿಸಲ್ಪಟ್ಟ ಧರ್ಮವೀರ್ ಸೋಲಂಕಿ ಈ ಬಗ್ಗೆ ಮಾತನಾಡಿ, 500 ಜನರು ತಕ್ಷಣವೇ ಪೌರತ್ವ ಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ.
ನಾನು ಮತ್ತು ನನ್ನ ಕುಟುಂಬ ಈಗ ಒಂದು ದಶಕದಿಂದ ಇದಕ್ಕಾಗಿ ಕಾಯುತ್ತಿದ್ದೆವು. ಅಂತಿಮವಾಗಿ ನಮ್ಮನ್ನು ಈಗ ಭಾರತೀಯ ನಾಗರಿಕರು ಎಂದು ಕರೆಯಲಾಗುತ್ತದೆ ಎಂದು ನಮಗೆ ತುಂಬಾ ಸಂತೋಷವಾಗಿದೆ. 2013ರಲ್ಲಿ ತಾಯ್ನಾಡಿಗೆ ಮರಳಲು ನಿರ್ಧರಿಸಿದ್ದಕ್ಕೆ ನನಗೆ ಸಂತೋಷವಾಗಿದೆ’ ಎಂದು ಸೋಲಂಕಿ ಹೇಳಿಕೊಂಡಿದ್ದಾರೆ.
ನಮ್ಮ ಹೆಗಲ ಮೇಲಿದ್ದ ದೊಡ್ಡ ಹೊರೆಯನ್ನು ಇಳಿಸಲಾಗಿದೆ. ಈ ಕಾಯ್ದೆಯ ಅನುಷ್ಠಾನದೊಂದಿಗೆ ಇಲ್ಲಿ ವಾಸಿಸುವ ಸುಮಾರು 500 ಪಾಕಿಸ್ತಾನಿ ಹಿಂದೂ ನಿರಾಶ್ರಿತ ಕುಟುಂಬಗಳು ಪೌರತ್ವ ಪಡೆಯಲಿವೆ” ಎಂದು ಸೋಲಂಕಿ ಮಾಹಿತಿ ನೀಡಿದ್ದಅರೆ.
ಸಿಎಎ ನಿಯಮಗಳನ್ನು ಅಧಿಸೂಚನೆಗೊಳಿಸುವುದರೊಂದಿಗೆ, ಮೋದಿ ಸರ್ಕಾರವು ಈಗ ಈ ದೇಶಗಳಿಂದ ಕಿರುಕುಳಕ್ಕೊಳಗಾದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವವನ್ನು ನೀಡಲು ಪ್ರಾರಂಭಿಸಲಿದೆ. ಇವರಲ್ಲಿ ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರು ಸೇರಿಕೊಂಡಿದ್ದಾರೆ.
ಕಾಯಿದೆಯ ವ್ಯಾಪ್ತಿಯೇನು?
2015ಕ್ಕಿಂತ ಮೊದಲು ಭಾರತಕ್ಕೆ ಬಂದ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಮುಸ್ಲಿಮೇತರ ವಲಸಿಗರಿಗೆ ಸರ್ಕಾರ ಭಾರತೀಯ ಪೌರತ್ವ ನೀಡಬಹುದು. ನಿಯಮಗಳನ್ನು ಸಿದ್ಧಪಡಿಸಲಾಗಿದೆ ಮತ್ತು ಈಗಾಗಲೇ ಆನ್ಲೈನ್ ಪೋರ್ಟಲ್ ಅನ್ನು ಸ್ಥಾಪಿಸಲಾಗಿದೆ. ಅರ್ಜಿದಾರರು ಪ್ರಯಾಣದ ದಾಖಲೆಗಳಿಲ್ಲದೆ ಪ್ರವೇಶದ ವರ್ಷವನ್ನು ಬಹಿರಂಗಪಡಿಸಬಹುದು. ಯಾವುದೇ ಹೆಚ್ಚುವರಿ ದಾಖಲೆಗಳ ಅಗತ್ಯವಿಲ್ಲ ಎಂದು ಮೂಲಗಳು ತಿಳಿಸಿವೆ.
ಏಪ್ರಿಲ್/ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಸಿಎಎಯನ್ನು ಜಾರಿಗೆ ತರಲಾಗುವುದು ಎಂದು ಗೃಹ ಸಚಿವ ಅಮಿತ್ ಶಾ ಒತ್ತಿ ಹೇಳಿದ ಒಂದು ತಿಂಗಳ ನಂತರ ಈ ಬೆಳವಣಿಗೆ ನಡೆದಿದೆ.
ಸಿಎಎ ಮತ್ತು ಅಷ್ಟೇ ವಿವಾದಾತ್ಮಕ ಎನ್ಆರ್ಸಿ ಅಥವಾ ರಾಷ್ಟ್ರೀಯ ನಾಗರಿಕರ ನೋಂದಣಿಯನ್ನು ಅಲ್ಪಸಂಖ್ಯಾತ ಸಮುದಾಯಗಳನ್ನು ಗುರಿಯಾಗಿಸಲು ಸಂಯೋಜಿಸಲಾಗುವುದು ಎಂಬ ಭಯವನ್ನು ಅಮಿತ್ ಶಾ ಕಳೆದ ತಿಂಗಳು ನಿವಾರಿಸಿದ್ದರು. “ನಮ್ಮ ಮುಸ್ಲಿಂ ಸಹೋದರರನ್ನು ದಾರಿ ತಪ್ಪಿಸಲಾಗುತ್ತಿದೆ ಮತ್ತು ಪ್ರಚೋದಿಸಲಾಗುತ್ತಿದೆ. ಸಿಎಎ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಕಿರುಕುಳವನ್ನು ಎದುರಿಸಿದ ನಂತರ ಭಾರತಕ್ಕೆ ಬಂದವರಿಗೆ ಮಾತ್ರ ಪೌರತ್ವ ನೀಡುವ ಉದ್ದೇಶವನ್ನು ಹೊಂದಿದೆ. ಇದು ಯಾರ ಪೌರತ್ವವನ್ನೂ ಕಸಿದುಕೊಳ್ಳಲು ಅಲ್ಲ ಎಂದು ಹೇಳಿದ್ದರು.
ಬಿಜೆಪಿಯ ಚುನಾವಣಾ ಭರವಸೆ
ಸಿಎಎ ಜಾರಿಗೆ ತರಲಾಗುವುದು ಎಂಬ ಭರವಸೆಯನ್ನು 2019 ರ ಲೋಕಸಭಾ ಚುನಾವಣೆಯಲ್ಲಿ ಮತ್ತು ವಿವಿಧ ರಾಜ್ಯ ಚುನಾವಣೆಗಳಲ್ಲಿ ಬಿಜೆಪಿಯ ಪ್ರಮುಖ ಭರವಸೆಯಾಗಿತ್ತು. ಬಂಗಾಳದಲ್ಲಿ 2021 ರ ಚುನಾವಣೆ ವೇಳೆಯೂ ಪ್ರತಿಫಲಿಸಿತ್ತು.
ಇದನ್ನೂ ಓದಿ : Citizenship Amendment Act : ಸಿಎಎ ಎಂದರೇನು? ಕಾನೂನು ಜಾರಿ ಮಾಡಿದ್ದು ಯಾಕೆ? ಇಲ್ಲಿದೆ ಎಲ್ಲ ವಿವರ
ಡಿಸೆಂಬರ್ನಲ್ಲಿ ಬಂಗಾಳದಲ್ಲಿ ನಡೆದ ರ್ಯಾಲಿಯಲ್ಲಿ, ಅಮಿತ್ ಶಾ ವಿರುದ್ಧ ಇದೇ ವಿಚಾರವಾಗಿ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದರು. ನಮ್ಮ ರಾಜ್ಯದಲ್ಲಿ ಅದನ್ನು ಜಾರಿಗೆ ತರುವುದಿಲ್ಲ ಎಂದು ಹೇಳಿದ್ದರು. ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಕೂಡ ಇದೇ ರೀತಿ ಹೇಳಿಕೆ ನೀಡಿದ್ದಾರೆ.
ಕೇರಳ ಮತ್ತು ಪಂಜಾಬ್ನಂಥ ಇತರ ರಾಜ್ಯಗಳು ಮತ್ತು ಆಗ ಕಾಂಗ್ರೆಸ್ ಆಡಳಿತದಲ್ಲಿದ್ದ ರಾಜಸ್ಥಾನ ಮತ್ತು ಛತ್ತೀಸ್ಗಢದಂತ ಇತರ ರಾಜ್ಯಗಳು ಸಹ ಸಿಎಎ ವಿರೋಧಿಸಿ ನಿರ್ಣಯಗಳನ್ನು ಅಂಗೀಕರಿಸಿದವು. ವಾಸ್ತವವಾಗಿ, ಬಂಗಾಳ ಮತ್ತು ಕೇರಳ ಸರ್ಕಾರಗಳು ಇದಕ್ಕೆ ಸಂಬಂಧಿಸಿದ ಕೆಲಸಗಳನ್ನು ನಿಲ್ಲಿಸಿವೆ.
ತೆಲಂಗಾಣದಲ್ಲಿ, ಆಗಿನ ಆಡಳಿತಾರೂಢ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಭಾರತ್ ರಾಷ್ಟ್ರ ಸಮಿತಿ ಕೂಡ ಇದರ ವಿರುದ್ಧ ನಿರ್ಣಯಗಳನ್ನು ಅಂಗೀಕರಿಸಿದ್ದರು.
ಮುಸ್ಲಿಂ ಪ್ರಾಬಲ್ಯದ ದೇಶಗಳ ಅಲ್ಪಸಂಖ್ಯಾತರು ಧಾರ್ಮಿಕ ಕಿರುಕುಳದಿಂದಾಗಿ ಪಲಾಯನ ಮಾಡಿದರೆ ಪೌರತ್ವ ಪಡೆಯಲು ಪೌರತ್ವ ತಿದ್ದುಪಡಿ ಕಾಯ್ದೆ ಸಹಾಯ ಮಾಡುತ್ತದೆ ಎಂದು ಸರ್ಕಾರ ಹೇಳಿದೆ. ಆದಾಗ್ಯೂ, ಇದು ಮುಸ್ಲಿಮರ ವಿರುದ್ಧ ತಾರತಮ್ಯ ಮಾಡಲು ವಿನ್ಯಾಸಗೊಳಿಸಲಾಗಿದೆ ಮತ್ತು ಸಂವಿಧಾನದ ಜಾತ್ಯತೀತ ತತ್ವಗಳನ್ನು ಉಲ್ಲಂಘಿಸುತ್ತದೆ ಎಂದು ಕಾನೂನಿನ ವಿರೋಧಿಗಳು ಹೇಳುತ್ತಿದ್ದಾರೆ.