ನವದೆಹಲಿ: ಹಿಂದುಗಳು ಹಾಗೂ ಹಿಂದುತ್ವದ ಕುರಿತು ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಸಂಸತ್‌ನಲ್ಲಿ ಮಾಡಿದ ಆರೋಪಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಲೋಕಸಭೆಯಲ್ಲಿ (Lok Sabha) ತಿರುಗೇಟು ನೀಡಿದರು. “ಹಿಂದುತ್ವವನ್ನು, ಹಿಂದುಗಳನ್ನು ಅವಮಾನಿಸುವುದೇ ಕಾಂಗ್ರೆಸ್ ಉದ್ದೇಶವಾಗಿದೆ. ಇದೇ ಕಾರಣಕ್ಕಾಗಿ ಕಾಂಗ್ರೆಸ್ ನಾಯಕರೊಬ್ಬರು ಸಂಸತ್‌ನಲ್ಲಿ ಹಿಂದುಗಳ ಕುರಿತು ಮಾತನಾಡಿದ್ದಾರೆ. ಇದನ್ನು ಇಡೀ ದೇಶವೇ ನೋಡಿದೆ” ಎಂದು ಟೀಕಿಸಿದರು.
“ಸ್ವಾಮಿ ವಿವೇಕಾನಂದರು ಯಾವ ಧರ್ಮದ ಕುರಿತು ಅಭಿಮಾನದಿಂದ ಹೇಳಿದ್ದರೋ, ಯಾವ ಧರ್ಮದ ಮಹತ್ವ, ಸಹಿಷ್ಣುತೆಯನ್ನು ಜಗತ್ತಿಗೇ ತಿಳಿಸಿದ್ದರೋ, ಅದೇ ಧರ್ಮದವರು ನಾವು. ಹಿಂದು ಧರ್ಮವು ಎಂದಿಗೂ ದ್ವೇಷ, ಹಿಂಸೆಯನ್ನು ಪ್ರಚೋದಿಸಿಲ್ಲ. ಬಿಜೆಪಿಯು ಇಂತಹ ಧರ್ಮದಲ್ಲಿ ನಂಬಿಕೆ ಇರಿಸಿದ್ದು, ರಾಜಕೀಯ ಕಾರಣಕ್ಕಾಗಿ ಕಾಂಗ್ರೆಸ್ ಹಿಂದುಗಳನ್ನು ಅವಮಾನಿಸುತ್ತಿದೆ. ಹಿಂದುಗಳು ಕಾಂಗ್ರೆಸ್‌ನ ಈ ಷಡ್ಯಂತ್ರವನ್ನು ತಿಳಿಯಬೇಕು. ದೇಶದಲ್ಲಿ ಹಿಂದುಗಳು ಕಾಂಗ್ರೆಸ್ ಬಗ್ಗೆ ಎಚ್ಚರದಿಂದ ಇರಬೇಕು” ಎಂದು ಹೇಳಿದರು.
Unapologetic HINDU Narendra MODI ji takes a stand for the whole Hindu community in the Parliament today 🙌🏻🔥 pic.twitter.com/ukgcEbgUuy
— Naresh Yadav (@Naresh4Sambhal) July 2, 2024
“ಹಿಂದುಗಳ ಕುರಿತು ರಾಹುಲ್ ಗಾಂಧಿ ಅವರು ಸುಳ್ಳುಗಳನ್ನು ಹರಡಿಸುತ್ತಿದ್ದಾರೆ. ಹಿಂದುಗಳು ಹಿಂಸಾವಾದಿಗಳು ಎಂದು ಹೇಳುವ ಮೂಲಕ ಪ್ರಚೋದನೆ ನೀಡುತ್ತಿದೆ. ಇದು ಕಾಂಗ್ರೆಸ್ ಹಾಗೂ ಕಾಂಗ್ರೆಸ್ ನಾಯಕನ ಸಂಸ್ಕೃತಿ, ಇದು ನಿಮ್ಮ ವ್ಯಕ್ತಿತ್ವ, ಇವು ನಿಮ್ಮ ಕೆಟ್ಟ ವಿಚಾರಗಳು, ಹಿಂದುಗಳ ಮೇಲೆ ನೀವು ಹೊಂದಿರುವ ದ್ವೇಷ, ನಿಮ್ಮ ಚಟುವಟಿಕೆಗಳು ಹಿಂದುಗಳ ವಿರೋಧಿಯಾಗಿವೆ. ಇದನ್ನು ಹಿಂದುಗಳು ಗಮನಿಸುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.
ರಾಹುಲ್ ಗಾಂಧಿ ಹೇಳಿದ್ದೇನು?
“ಹಿಂದೂ ಧರ್ಮ ಹಾಗೂ ನಮ್ಮ ಅನೇಕ ಹಿಂದೂ ಮಹಾಪುರುಷರು ಅಹಿಂಸೆಯನ್ನು ಪ್ರತಿಪಾದಿಸುತ್ತಾರೆ. ಜೀಸಸ್ ಕ್ರೈಸ್ಟ್ ಕೂಡ ಅಹಿಂಸೆಯನ್ನೇ ಪ್ರತಿಪಾದಿಸುತ್ತಾನೆ. ಸ್ವತಃ ಕೈಯಲ್ಲಿ ತ್ರಿಶೂಲ ಹಿಡಿದಿರುವ ಮಹಾಶಿವನೂ ಅಹಿಂಸೆಯನ್ನೇ ಹೇಳುತ್ತಾನೆ. ಆದರೆ ದಿನದ 24 ಗಂಟೆ ಹಿಂದೂಗಳೆಂದು ಹೇಳುತ್ತಾ ತಿರುಗಾಡುವವರು ಹಿಂಸೆ, ಶತ್ರುತ್ವ, ಅಸತ್ಯವನ್ನೇ ಹೇಳುತ್ತಿದ್ದಾರೆ. ನೀವು ಹಿಂದೂಗಳೇ ಅಲ್ಲ” ಎಂದು ರಾಹುಲ್ ಗಾಂಧಿ ಸಂಸತ್‌ನಲ್ಲಿ ಹೇಳಿದ್ದರು.
ಇದನ್ನೂ ಓದಿ: Narendra Modi: ರಾಹುಲ್ ಗಾಂಧಿಯನ್ನು ‘ಬಾಲ ಬುದ್ಧಿಯವನು’ ಎಂದ ಮೋದಿ; ಅವರು ಹೇಳಿದ ‘ಸೈಕಲ್ ಕತೆ’ಯೂ ಇಲ್ಲಿದೆ!