ಬೆಂಗಳೂರು: ತಮಿಳುನಾಡಿನ ಕಲ್ಲಕುರಿಚಿ ಕಳ್ಳಬಟ್ಟಿ (Tamil Nadu hooch tragedy) ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಶನಿವಾರ 53ಕ್ಕೆ ಏರಿಕೆಯಾಗಿದೆ. ಕಳ್ಳಬಟ್ಟಿ ದುರಂತವು ತಮಿಳುನಾಡಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ನೂರಕ್ಕೂ ಹೆಚ್ಚು ಜನರ ಜೀವನದ ಮೇಲೆ ಗಂಭೀರ ಪರಿಣಾಮ ಬೀರಿದೆ. ಕಳ್ಳಬಟ್ಟಿ ದುರಂತದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರದ ವಿರುದ್ಧ ಪ್ರತಿಪಕ್ಷ ಎಐಎಡಿಎಂಕೆ ಪ್ರತಿಭಟನೆ ನಡೆಸುತ್ತಿದೆ. ಜೂನ್ 19ರಂದು ಕಲ್ಲಕುರಿಚಿಯಲ್ಲಿ ಘಟನೆ ನಡೆದಿದ್ದು, ಮೆಥನಾಲ್ ಮಿಶ್ರಿತ ವಿಷಕಾರಿ ಅಕ್ರಮ ಮದ್ಯ ಸೇವಿಸಿ 47 ಹಲವರು ಅಸ್ವಸ್ಥಗೊಂಡಿದ್ದರು. ಅವರಲ್ಲೀಗ 53 ಮಂದಿ ಮೃತಪಟ್ಟಿದ್ದಾರೆ.
ಅಕ್ರಮ ಸಾರಾಯಿ ಸೇವಿಸಿದ 193 ಜನರಲ್ಲಿ 140 ಜನರು ಸುರಕ್ಷಿತವಾಗಿದ್ದಾರೆ ಎಂದು ಕಲ್ಲಕುರಿಚಿ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ಅಕ್ರಮ ಮದ್ಯ ಸೇವಿಸಿದ 193 ಮಂದಿ ಆಸ್ಪತ್ರೆಗೆ ಬಂದಿದ್ದಾರೆ. ಈ ಪೈಕಿ 140 ಮಂದಿ ಸುರಕ್ಷಿತವಾಗಿದ್ದಾರೆ. ಕೆಲವರು ವೆಂಟಿಲೇಟರ್ನಲ್ಲಿದ್ದು 53 ಜನರು ಸಾವನ್ನಪ್ಪಿದ್ದಾರೆ” ಎಂದು ಅವರು ಹೇಳಿದರು.
ಕಲ್ಲಕುರಿಚಿ ಕಳ್ಳಬಟ್ಟಿ ದುರಂತ ಪ್ರಕರಣದಲ್ಲಿ ತಮಿಳುನಾಡು ಅಧಿಕಾರಿಗಳು ಈವರೆಗೆ ಏಳು ಜನರನ್ನು ಬಂಧಿಸಿದ್ದಾರೆ. ಕಲ್ಲಕುರಿಚಿ ಕಳ್ಳಬಟ್ಟಿ ದುರಂತದ ನಂತರ ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯಲ್ಲಿ 250 ಲೀಟರ್ ಅಕ್ರಮ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
ಪರಿಹಾರ ಪ್ರಮಾಣ ಹೀಗಿದೆ
ದುರಂತದಲ್ಲಿ ಎರಡೂ ಪೋಷಕರನ್ನು ಕಳೆದುಕೊಂಡ ಮಕ್ಕಳ ಹೆಸರಿನಲ್ಲಿ ಸರ್ಕಾರ 5 ಲಕ್ಷ ರೂ.ಗಳನ್ನು ಠೇವಣಿ ಇಡಲಿದೆ. ಮಕ್ಕಳಿಗೆ 18 ವರ್ಷ ತುಂಬಿದ ನಂತರ ಬಡ್ಡಿಯೊಂದಿಗೆ ನೀಡಲಾಗುವುದು ಎಂದು ಸಿಂಎ ಸ್ಟಾಲಿನ್ ಹೇಳಿದ್ದಾರೆ. ಒಬ್ಬರು ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ 3 ಲಕ್ಷ ರೂಪಾಯಿ ಠೇವಣಿ ಹಾಗೂ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ತಕ್ಷಣದಲ್ಲಿ ತಲಾ 5,000 ರೂ.ಗಳನ್ನು ನೀಡಲಾಗುವುದು ಎಂದು ಅವರು ಹೇಳಿದ್ದಾರೆ. ಮೃತರ ಕುಟುಂಬಗಳಿಗೆ ಸರ್ಕಾರ 10 ಲಕ್ಷ ರೂ.ಗಳ ಹೆಚ್ಚುವರಿ ಪರಿಹಾರ ನೀಡಿದೆ.
ಇದನ್ನೂ ಓದಿ: Swamji Murder : ಆಸ್ತಿ, ಅಧಿಕಾರಕ್ಕಾಗಿ ಗಲಾಟೆ; ಸ್ವಾಮೀಜಿಯೊಬ್ಬರನ್ನು ಕೊಲೆ ಮಾಡಿದ ಸ್ವಾಮೀಜಿಗಳ ಗುಂಪು
ಎಐಎಡಿಎಂಕೆ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, “ಕಳೆದ ಮೂರು ವರ್ಷಗಳಿಂದ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಸ್ಥಳವು ಪೊಲೀಸ್ ಠಾಣೆ 200 ಮೀಟರ್ ದೂರದಲ್ಲಿದೆ. ಹೀಗಾಗಿ ಇದು ಆಡಳಿತ ವೈಫಲ್ಯ ಎಂದು ಘೋಷಿಸಿದ್ದಾರೆ.
ವಿಧಾನಸಭೆಯಲ್ಲಿ ಕೋಲಾಹಲ
ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಕಲ್ಲಕುರಿಚಿ ಕಳ್ಳಭಟ್ಟಿ ದುರಂತದಿಂದ ಮೃತಪಟ್ಟವರು ಮಕ್ಕಳ ಶಿಕ್ಷಣ ಮತ್ತು ಹಾಸ್ಟೆಲ್ ವೆಚ್ಚಗಳನ್ನು ರಾಜ್ಯ ಸರ್ಕಾರ ಭರಿಸುತ್ತದೆ ಎಂದು ಭರವಸೆ ನೀಡಿದ್ದಾರೆ. ಆದರೆ ದುರಂತದ ಬಗ್ಗೆ ಚರ್ಚೆಗೆ ಒತ್ತಾಯಿಸಿ ಎಐಎಡಿಎಂಕೆ ನಾಯಕರು ಘೋಷಣೆಗಳನ್ನು ಕೂಗಿದ ಕಾರಣ ತಮಿಳುನಾಡು ವಿಧಾನಸಭೆಯಲ್ಲಿ ಕೋಲಾಹಲವೂ ಉಂಟಾಗಿತ್ತು.
ಮದ್ರಾಸ್ ಹೈಕೋರ್ಟ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಈ ವಿಷಯವನ್ನು ಸರ್ಕಾರ ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಇದು ವ್ಯಕ್ತಿಗಳ ಜೀವನದ ಬಗ್ಗೆ. ಕಳೆದ ಒಂದು ವರ್ಷದಿಂದ ಇದೇ ರೀತಿಯ ಘಟನೆ ನಡೆದಾಗ ರಾಜ್ಯಪಾಲರು ಯಾವ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಯಲು ನಾವು ಬಯಸುತ್ತೇವೆ” ಎಂದು ನ್ಯಾಯಮೂರ್ತಿಗಳಾದ ಡಿ ಕೃಷ್ಣಕುಮಾರ್ ಮತ್ತು ಕೆ ಕುಮರೇಶ್ ಬಾಬು ಅವರನ್ನೊಳಗೊಂಡ ಹೈಕೋರ್ಟ್ ವಿಭಾಗೀಯ ಪೀಠ ಹೇಳಿದೆ.