ಹೈದರಾಬಾದ್: ಆನ್ಲೈನ್ ಕ್ರಿಕೆಟ್ ಬೆಟ್ಟಿಂಗ್ ಜಾಲವೊಂದನ್ನು ಭೇದಿಸಿದ ಸೈಬರಾಬಾದ್ ಪೊಲೀಸರು ನಾಲ್ವರು ಬುಕ್ಕಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 40 ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದ್ದು, 3.57 ಲಕ್ಷ ರೂ.ಗಳ ಐದು ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ.
ವಿಶ್ವಾಸಾರ್ಹ ಮಾಹಿತಿಯ ಮೇರೆಗೆ ಮಾಧಾಪುರ ಮತ್ತು ಮಿಯಾಪುರ್ ಪೊಲೀಸರ ವಿಶೇಷ ಕಾರ್ಯಾಚರಣೆ ತಂಡ (ಎಸ್ಒಟಿ) ಜಂಟಿಯಾಗಿ ಮಿಯಾಪುರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಮಾತೃಶ್ರೀ ನಗರದ ಅಪಾರ್ಟ್ಮೆಂಟ್ನಿಂದ ಬುಕ್ಕಿಗಳನ್ನು ಬಂಧಿಸಿದೆ.
ಬಂಧಿತರನ್ನು ಆಲೂರು ತ್ರಿನಾಥ್, ಮನಂ ರಾಜೇಶ್, ಬೊಳ್ಳೆ ಸ್ವಾಮಿ ಮತ್ತು ಮಾರ್ಪೆನ್ನ ಗಣಪತಿ ರಾವ್ ಎಂದು ಗುರುತಿಸಲಾಗಿದ್ದು, ಇವರು ಕ್ರಿಕೆಟ್ ಲೈವ್ ಗುರು ಮತ್ತು ಲಕ್ಕಿ ಆನ್ಲೈನ್ ಅಪ್ಲಿಕೇಶನ್ಗಳ ಮೂಲಕ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದರು. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಲಂಡನ್ ಮೂಲದ ಶಕಮುರಿ ವೆಂಕಟೇಶ್ವರ ರಾವ್ ಅಲಿಯಾಸ್ ಚಿನ್ನು ಆನ್ಲೈನ್ ಕ್ರಿಕೆಟ್ ಬೆಟ್ಟಿಂಗ್ ಆಯೋಜಿಸುತ್ತಿದ್ದ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಬಂಧಿತ ನಾಲ್ವರು ಆಂಧ್ರಪ್ರದೇಶ ಮೂಲದವರಾಗಿದ್ದು, ಆತನ ಪರವಾಗಿ ಬುಕ್ಕಿಗಳಾಗಿ ಕಾರ್ಯನಿರ್ವಹಿಸಿದ್ದಾರೆ.
IPL 2024: ಬಾಸ್ಗೆ ಸುಳ್ಳು ಹೇಳಿ ಪಂದ್ಯ ವೀಕ್ಷಿಸುವಾಗ ಟಿವಿಯಲ್ಲಿ ಸಿಕ್ಕಿಬಿದ್ದ ಆರ್ಸಿಬಿ ಅಭಿಮಾನಿ!
ಬೆಂಗಳೂರು: 17ನೇ ಆವೃತ್ತಿಯ ಐಪಿಎಲ್(IPL 2024) ಟೂರ್ನಿಯ ಪಂದ್ಯಾವಳಿಗಳು ದಿನದಿಂದ ದಿನಕ್ಕೆ ಕೆಚ್ಚು ಕಾವೆರುತ್ತಿದೆ. 10 ತಂಡಗಳು ಗೆಲುವಿಗಾಗಿ ತೀವ್ರ ಪೈಪೋಟಿ ನಡೆಸುತ್ತಿವೆ. ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ತಂಡಗಳ ಕಾದಾಟ ಕಣ್ತುಂಬಿಕೊಳ್ಳಲು ದುಬಾರಿ ಬೆಲೆಯ ಟಿಕೆಟ್ ನೀಡಿ ಪಂದ್ಯಕ್ಕೆ ಹಾಜರ್ ಆಗುತ್ತಿದ್ದಾರೆ. ಆದರೆ, ಆರ್ಸಿಬಿಯ ಅಪ್ಪಟ ಅಭಿಮಾನಿಯೊಬ್ಬಳು(RCB fan) ಪಂದ್ಯ ನೋಡುವ ಸಲುವಾಗಿ ತನ್ನ ಬಾಸ್ಗೆ ಸುಳ್ಳು ಹೇಳಿ ಸಿಕ್ಕಿಬಿದ್ದಿದ್ದಾಳೆ. ಈ ಘಟನೆಯ ವಿಡಿಯೊ ಮತ್ತು ಫೋಟೊ ವೈರಲ್ ಆಗಿದೆ.
ಇದನ್ನೂ ಓದಿ: IPL 2024 : ಸನ್ರೈಸರ್ಸ್ ಬಳಗಕ್ಕೆ ವಿಜಯ, ಪಂಜಾಬ್ ತಂಡಕ್ಕೆ ಸೋಲು
ಹೌದು, ಆರ್ಸಿಬಿಯ ಪಂದ್ಯ ನೋಡಲೆಂದು ಮಹಿಳೆಯೊಬ್ಬಳು ಸ್ಟೇಡಿಯಂನಲ್ಲಿ ಪಂದ್ಯ ವೀಕ್ಷಿಸಲು ತೆರಳಿದ್ದರು. ಆದರೆ, ಆಫೀಸ್ನಿಂದ ಹೊರಡುವಾಗ, ತಮ್ಮ ಕುಟುಂಬದಲ್ಲಿ ಎಮರ್ಜೆನ್ಸಿ ಇದೆ ಎಂದು ಬಾಸ್ಗೆ ಸುಳ್ಳು ಹೇಳಿ ಹೋಗಿದ್ದರು. ದುರಾದೃಷ್ಟವಶಾತ್ ಈ ಪಂದ್ಯವನ್ನು ಆಯಕೆ ಬಾಸ್ ಕೂಡ ತಮ್ಮ ಮನೆಯಲ್ಲಿ ಟಿವಿಯಲ್ಲಿ ನೋಡಿದ್ದಾರೆ. ಈ ವೇಳೆ ಟಿವಿ ಪರದೆಯಲ್ಲಿ ಬಾಸ್ ಕಣ್ಣಿಗೆ ಆಕೆ ಸಿಕ್ಕಿಬಿದ್ದಿದ್ದಾಳೆ.