ಹೈದರಾಬಾದ್: ಒಂದು ವರ್ಷದೊಳಗೆ ಕನಿಷ್ಠ 15,000 ಭಾರತೀಯರು 700 ಕೋ7ಟಿ ರೂ.ಗೂ ಹೆಚ್ಚು ವಂಚನೆ ಮಾಡಿರುವ ಚೀನಾದ ಹ್ಯಾಂಡ್ಲರ್ಗಳನ್ನು (Handler from China) ಒಳಗೊಂಡಿರುವ ಬೃಹತ್ ಸೈಬರ್ ವಂಚನೆಯ (Cyber Fraud) ಜಾಲವನ್ನು ಹೈದರಾಬಾದ್ ಪೊಲೀಸರು (Hyderabad Police) ಪತ್ತೆಹಚ್ಚಿದ್ದಾರೆ. ಈ ಹಣವನ್ನು ದುಬೈ ಮೂಲಕ ಚೀನಾಕ್ಕೆ ರವಾನಿಸಲಾಗಿದೆ. ಈ ಪೈಕಿ ಕೆಲವನ್ನು ಲೆಬನಾನ್ ಮೂಲದ ಭಯೋತ್ಪಾದಕ ಗುಂಪು ಹೆಜ್ಬುಲ್ಲಾ ನಿರ್ವಹಿಸುತ್ತಿರುವ ಖಾತೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರ(Cyber Crime).
ನಾವು ಈ ಬಗ್ಗೆ ಕೇಂದ್ರ ಏಜೆನ್ಸಿಗಳಿಗೆ ಮಾಹಿತಿ ನೀಡಿದ್ದೇವೆ. ಕೇಂದ್ರ ಗೃಹ ಸಚಿವಾಲಯದ ಸೈಬರ್ ಕ್ರೈಂ ಘಟಕಕ್ಕೆ ವಿವರಗಳನ್ನು ನೀಡಲಾಗಿದೆ. ಹೆಚ್ಚು ಸಂಭಾವನೆ ಪಡೆಯುವ ಸಾಫ್ಟ್ವೇರ್ ವೃತ್ತಿಪರರು ಸಹ 82 ಲಕ್ಷ ರೂ.ದಷ್ಟು ಹಣವನ್ನು ಕಳೆದುಕೊಂಡಿರುವುದು ಆಘಾತಕಾರಿ ಮತ್ತು ಆಶ್ಚರ್ಯಕರವಾಗಿದೆ ಎಂದು ಹೈದರಾಬಾದ್ ಪೊಲೀಸ್ ಕಮಿಷನರ್ ಸಿವಿ ಆನಂದ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಹೀಗೆ ಲಪಟಾಯಿಸಲಾದ ಹಣದ ಒಂದು ಭಾಗವನ್ನು ಕ್ರಿಪ್ಟೋಕರೆನ್ಸಿಯಾಗಿ ಪರಿವರ್ತಿಸಲಾಗಿದೆ. ಹಿಜ್ಬುಲ್ಲಾ ನಿರ್ವಹಿಸುವ ವ್ಯಾಲೆಟ್ಗೆ ಠೇವಣಿ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಒಟ್ಟು 9 ಜನರನ್ನು ಬಂಧಿಸಲಾಗಿದೆ. ಈ ಪೈಕಿ ನಾಲ್ವರು ಹೈದರಾಬಾದ್, ಮೂವರು ಮುಂಬೈ ಹಾಗೂ ಇಬ್ಬರು ಅಹಮದಾಬಾದ್ನವರಾಗಿದ್ದಾರೆ. ಅಲ್ಲದೇ ಇನ್ನೂ 6 ಜನರಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆಂದು ಎಂದು ಹೈದರಾಬಾದ್ ಪೊಲೀಸ್ ಕಮಿಷನರ್ ಸಿವಿ ಆನಂದ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Money For Likes ಎಂಬ ಸೈಬರ್ ವಂಚನೆಗೆ 1 ಕೋಟಿ ರೂ. ಕಳೆದುಕೊಂಡ ಸೇನಾ ನಿವೃತ್ತ ಅಧಿಕಾರಿ; ಈ ಜಾಲದ ಬಗ್ಗೆ ಇರಲಿ ಎಚ್ಚರ
ಏಪ್ರಿಲ್ ತಿಂಗಳಲ್ಲಿ ವ್ಯಕ್ತಿಯೊಬ್ಬರು 28 ಲಕ್ಷ ಹಣವನ್ನು ಕಳೆದುಕೊಂಡ ಕುರಿತು ದೂರು ನೀಡಿದ ಬಳಿಕ ಈ ಬಗ್ಗೆ ಹೈದ್ರಾಬಾದ್ ಸೈಬಲ್ ಪೊಲೀಸರು ಗಂಭೀರವಾಗಿ ತನಿಖೆಯನ್ನು ಆರಂಭಿಸಿದರು. ವಂಚಕರು, ಅರೆಕಾಲಿಕ ಉದ್ಯೋಗಗಳ ಹೆಸರಿನಲ್ಲಿ ಆಮಿಷವೊಡ್ಡಿ ಹಣವನ್ನು ಲಪಟಾಯಿಸುತ್ತಿರುವುದು ತನಿಖೆ ವೇಳೆ ಗೊತ್ತಾಗಿದೆ. ಸೈಬರ್ ವಂಚಕರು, ಯುಟ್ಯೂಬ್ ವಿಡಿಯೋ ಲೈಕ್ ಮಾಡುವುದು ಗೂಗಲ್ನಲ್ಲಿ ವಿಮರ್ಶೆಗಳನ್ನುಬರೆಯುವ ಅರೆಕಾಲಿಕ ಉದ್ಯೋಗಗಳ ಆಮಿಷವೊಡ್ಡಿ ಜನರಿಂದ ದುಡ್ಡು ಪಡೆದುಕೊಳ್ಳುತ್ತಿದ್ದಾರೆ. ಈ ಅರೆಕಾಲಿಕ ಉದ್ಯೋಗಕ್ಕೆ ಬಲಿ ಬಿದ್ದ ನೂರಾರು ಜನರು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.