ಬೆಂಗಳೂರು : ಪೆನ್ಡ್ರೈವ್ ಅಶ್ಲೀಲ ವಿಡಿಯೊ ಪ್ರಕರಣದಲ್ಲಿ ಎಸ್ಐಟಿ ವಶದಲ್ಲಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಪ್ರತಿ ದೂರು ನೀಡುವುದಕ್ಕೆ ಸಜ್ಜಾಗಿದ್ದಾರೆ ಎಂಬುದಾಗಿ ವರದಿಯಾಗಿದೆ. ತಮ್ಮ ತೇಜೋವಧೆ ಮಾಡಲಾಗುತ್ತಿದೆ ಎಂದು ಅವರು ಪ್ರತಿದೂರು ದಾಖಲಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಪೆನ್ಡ್ರೈವ್ ವಿಡಿಯೊ ಬಹಿರಂಗಗೊಂಡ ಬಳಿಕ ಅದನ್ನು ನನ್ನ ಹೆಸರಿಗೆ ತಳುಕು ಹಾಕಲಾಗುತ್ತಿದೆ. ಇದರಿಂದ ನನ್ನ ಕುಟುಂಬದ ಮಾನ ಹರಾಜಾಗುತ್ತಿದೆ ಎಂದು ಪ್ರಜ್ವಲ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನನ್ನ ವಿರುದ್ಧ ಮಾನಹಾನಿಕರವಾದಂತಹ ಆರೋಪಗಳನ್ನ ಮಾಡಲಾಗುತ್ತಿದೆ. ತನ್ನ ಕುಟುಂಬ ಹಾಗು ನನ್ನ ಮೇಲೆ ಕೀಳು ಮಟ್ಟದಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ನನ್ನ ಭಾವಚಿತ್ರವನ್ನು ಮಾರ್ಫ್ ಮಾಡಿ ಹಂಚಿ ನನ್ನ ರಾಜಕೀಯ ಭವಿಷ್ಯಕ್ಕೆ ಕುಂದುಂಟು ಮಾಡಿದ್ದಾರೆ ಎಂದು ಪ್ರಜ್ವಲ್ ರೇವಣ್ಣ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಇಡೀ ಸಮಾಜದ ಮುಂದೆ ತನ್ನ ಹೆಸರನ್ನ ಬಳಸಿ ತೇಜೋವಧೆ ಮಾಡಲಾಗುತ್ತಿದೆ. ನನ್ನನ್ನು ಅತ್ಯಾಚಾರಿ ಎಂದು ಬಿಂಬಿಸಿ ತನ್ನ ಮಾನಕ್ಕೆ ಕುಂದುಂಟು ಮಾಡಿದ್ದಾರೆಂದು ದೂರು ನೀಡುವ ಸಾಧ್ಯತೆಯಿದೆ. ಈ ಕುರಿತು ಅವರು ವಕೀಲರ ಜತೆ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ.
ನಾನವನಲ್ಲ, ನಾನವನಲ್ಲ; ಪೊಲೀಸರ ಪ್ರಶ್ನೆಗೆ ಈ ಒಂದೇ ಉತ್ತರ ನೀಡುತ್ತಿರುವ ಪ್ರಜ್ವಲ್ ರೇವಣ್ಣ!
ಲೈಂಗಿಕ ದೌರ್ಜನ್ಯ ಪ್ರಕರಣದ ಪೆನ್ಡ್ರೈವ್ ಹಗರಣದ ಪ್ರಮುಖ ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣನನ್ನು (Prajwal Revanna) ಎಸ್ಐಟಿ ತನಿಖಾಧಿಕಾರಿಗಳು ಪ್ರಾಥಮಿಕ ತನಿಖೆ ನಡೆಸಿದ್ದಾರೆ. ಆದರೆ, ಪೊಲೀಸರು ಕೇಳುವ ಎಲ್ಲ ಪ್ರಶ್ನೆಗಳಿಗೆ ಪ್ರಜ್ವಲ್ ರೇವಣ್ಣ ‘ನಾನವನಲ್ಲ, ನನಗೆ ಗೊತ್ತಿಲ್ಲ’ ಎಂಬ ಉತ್ತರವನ್ನೇ ನೀಡುತ್ತಿದ್ದಾರೆ. ಈ ಮೂಲಕ ಆರಂಭಿಕ ಹಂತದಲ್ಲಿ ಯಾವುದೇ ಮಾಹಿತಿಯನ್ನು ಪೊಲೀಸರಿಗೆ ನೀಡಲು ಸಿದ್ದತೆ ನಡೆಸಿಕೊಂಡು ಬಂದಿದ್ದಾನೆ ಪ್ರಜ್ವಲ್ ರೇವಣ್ಣ.
ಇದನ್ನೂ ಓದಿ: Prajwal Revanna : ನಾನವನಲ್ಲ, ನಾನವನಲ್ಲ; ಪೊಲೀಸರ ಪ್ರಶ್ನೆಗೆ ಈ ಒಂದೇ ಉತ್ತರ ನೀಡುತ್ತಿರುವ ಪ್ರಜ್ವಲ್ ರೇವಣ್ಣ!
ಎಸ್ಐಟಿ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರುಪಡಿಸುವ ಮೂದಲು 24 ಗಂಟೆಗಳ ಅವಧಿಯನ್ನು ಹೊಂದಿದ್ದಾರೆ. ಹೀಗಾಗಿ ಪೊಲೀಸರು ಪ್ರಾಥಮಿಕ ಹಂತದ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ, ಪ್ರಜ್ವಲ್ ರೇವಣ್ಣ ಮಾತ್ರ ಯಾವುದೆಕ್ಕೂ ಸಮರ್ಥ ಉತ್ತರ ನೀಡುತ್ತಿಲ್ಲ ಎಂದು ಹೇಳಲಾಗಿದೆ.
ಎಸ್ಐಟಿ ಪೊಲೀಸರು ಪ್ರಜ್ವಲ್ ರೇವಣ್ಣ ಅವರ ವಿರುದ್ಧ ದಾಖಲಾಗಿರುವ ಮೂರು ಎಫ್ಐಆರ್ ಕುರಿತಾಗಿ ಪ್ರಶ್ನೆಗಳನ್ನು ಕೇಳುತತಿದ್ದಾರೆ. ಅವರ ಹೇಳಿಕೆಗಳ ಕುರಿತು ವಿಡಿಯೊ ದಾಖಲೆಯನ್ನು ಸೃಷ್ಟಿಸಲು ಪೊಲೀಸರು ಮುಂದಾಗಿದ್ದಾರೆ. ಅದೇ ರೀತಿ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ್ದು ಎಂದು ಹೇಳಲಾದ ವಿಡಿಯೊಗಳಲ್ಲಿರುವ ಕೆಲವು ದೃಶ್ಯಗಳ ಕುರಿತೂ ಅವರಿಗೆ ಪ್ರಶ್ನೆಗಳನ್ನು ಕೇಳಲಾಗುತ್ತಿದೆ.
ಆಮೀಷ ಒಡ್ಡಿ ಮಹಿಳೆಯರನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದೀರಾ? ಬಿಡುಗಡೆಗೊಂಡ ವಿಡಿಯೊದಲ್ಲಿ ಇರುವವರು ನೀವೇನಾ ಎಂಬ ಪ್ರಶ್ನೆಗಳನ್ನು ಪೊಲೀಸರು ಕೇಳುತ್ತಿದ್ದಾರೆ. ಆದರೆ, ಎಲ್ಲ ಪ್ರಶ್ನೆಗಳಿಗೆ ಪ್ರಜ್ವಲ್ ಒಂದೇ ಉತ್ತರ ನೀಡುತ್ತಿದ್ದಾರೆ. ಇವೆಲ್ಲವೂ ತನ್ನ ವಿಡಿಯೊಗಳು ಅಲ್ಲ. ಎಲ್ಲವನ್ನೂ ಎಡಿಟ್ ಮಾಡಿ ಮಾರ್ಫ್ ಮಾಡಲಾಗಿದೆ. ವಿಡಿಯೊದಲ್ಲಿ ನಾನು ಇದ್ದೇನೆ ಎಂಬುದಕ್ಕೆ ಯಾವ ಸಾಕ್ಷಿಯೂ ಇಲ್ಲ. ಎಲ್ಲವನ್ನೂ ದ್ವೇಷದಿಂದ ಮಾಡಿರುವಂಥದ್ದು. ಎಲ್ಲಾ ವಿಡೀಯೋಗಳನ್ನು ತಿರುಚಲಾಗಿದೆ. ಇದು ತನ್ನದಲ್ಲ ಎಂದ ಮೇಲೆ ಉಳಿದ ಪ್ರಶ್ನೆಗಳಿಗೆ ನನ್ನ ಬಳಿ ಉತ್ತರ ಇಲ್ಲ ಎಂದು ಪ್ರಜ್ವಲ್ ಹೇಳಿಕೆ ನೀಡಿದ್ದಾರ ಎಂಬುದಾಗಿ ಮೂಲಗಳು ತಿಳಿಸಿವೆ.