Site icon Vistara News

Dalip Singh Majithia : 2ನೇ ಮಹಾಯುದ್ಧದಲ್ಲಿ ಸೇವೆ ಸಲ್ಲಿಸಿದ ಐಎಎಫ್ ಯೋಧ 103 ನೇ ವಯಸ್ಸಿನಲ್ಲಿ ನಿಧನ

Dalip Singh Majithia

ನವದೆಹಲಿ: ಎರಡನೇ ಮಹಾಯುದ್ಧದ ಪ್ರಕ್ಷುಬ್ಧ ವರ್ಷಗಳಲ್ಲಿ ಭಾರತೀಯ ವಾಯುಪಡೆಗೆ ಸೇರಿದ ಮತ್ತು ತಮ್ಮ ವೃತ್ತಿಜೀವನದಲ್ಲಿ “ನಿರ್ಭೀತ ವಿಮಾನಯಾನಿ” ಎಂದು ಗುರುತಿಸಿಕೊಂಡಿದ್ದ ಹಿರಿಯ ಪೈಲೆಟ್ ಸ್ಕ್ವಾಡ್ರನ್ ಲೀಡರ್ ದಲೀಪ್ ಸಿಂಗ್ ಮಜಿಥಿಯಾ (ನಿವೃತ್ತ) ನಿಧನರಾಗಿದ್ದಾರೆ. ಅವರು 103 ವರ್ಷಗಳ ಬದುಕಿದ್ದರು.

ಚಂಡಮಾರುತದಂಥ ಕಠಿಣ ಪರಿಸ್ಥಿತಿ ಸೇರಿದಂತೆ ಹಲವಾರು ಪ್ರಕ್ಷುಬ್ಧ ಪರಿಸ್ಥಿಯಲ್ಲಿ ಯುದ್ಧ ವಿಮಾನಗಳ ಕಾರ್ಯಾಚರಣೆ ನಡೆಸಿದ್ದರು ದಲೀಪ್​​ ಸಿಂಗ್​. ಅವರು 1,100 ಕ್ಕೂ ಹೆಚ್ಚು ಗಂಟೆಗಳ ಕಾಲ ಹಾರಾಟ ನಡೆಸಿದ್ದಾರೆ. ಅವರು ಮಂಗಳವಾರ ಮುಂಜಾನೆ ಉತ್ತರಾಖಂಡದ ರುದ್ರಪುರದಲ್ಲಿ ನಿಧನ ಹೊಂದಿದ್ದಾರೆ ಎಂದು ಐಎಎಫ್ ಮೂಲಗಳು ತಿಳಿಸಿವೆ. ಅವರನ್ನು ಅವರ ಸಹ ವಾಯು ಯೋಧರು ಪ್ರೀತಿಯಿಂದ ‘ಮಾಜಿ’ ಎಂದೇ ಕರೆಯುತ್ತಿದ್ದರು.

ಆಕಾಶದಲ್ಲಿ ಗಸ್ತು ತಿರುಗುವುದರಿಂದ ಹಿಡಿದು ಬೇಹುಗಾರಿಕೆ ಮತ್ತು ಬಾಂಬ್ ದಾಳಿ ಕಾರ್ಯಾಚರಣೆಗಳವರೆಗೆ, ಅವರು ಪ್ರತಿ ಸವಾಲನ್ನು ಧೈರ್ಯ, ಕೌಶಲ್ಯ ಮತ್ತು ಸಾಟಿಯಿಲ್ಲದ ಧೈರ್ಯದಿಂದ ಸ್ವೀಕರಿಸಿದ್ದರು. 1942 ರಿಂದ 1943 ರವರೆಗೆ ಬರ್ಮಾದಲ್ಲಿ ಸಂಖ್ಯೆ 4 ಸ್ಕ್ವಾಡ್ರನ್ – ‘ದಿ ಫೈಟಿಂಗ್ ಓರಿಯಲ್ಸ್’ ನ ಫ್ಲೈಟ್ ಕಮಾಂಡರ್ ಆಗಿ ಅವರು ಸೇವೆ ಸಲ್ಲಿಸಿದ್ದರು ಎಂದು ಐಎಎಫ್ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Lok Sabah Election : ಹೇಮಮಾಲಿನಿಗೆ ಅವಹೇಳನ; ಕಾಂಗ್ರೆಸ್​ ನಾಯಕ ಸುರ್ಜೇವಾಲಾಗೆ 48 ಗಂಟೆ ನಿಷೇಧ

ದಲೀಪ ಸಿಂಗ್​ ಜುಲೈ 27, 1920 ರಂದು ಶಿಮ್ಲಾದಲ್ಲಿ ಜನಿಸಿದದರು. ವಾಯುಯಾನದ ಮೇಲಿನ ಅವರ ಉತ್ಸಾಹವು ಎರಡನೇ ಮಹಾಯುದ್ಧದ ಪ್ರಕ್ಷುಬ್ಧ ವರ್ಷಗಳಲ್ಲಿ 1940ರಲ್ಲಿ ಐಎಎಫ್ ಸ್ವಯಂಸೇವಕ ಮೀಸಲು ಪಡೆಗೆ ಸೇರಲು ಅವರನ್ನು ಪ್ರೇರೇಪಿಸಿತು ಎಂದು ಐಎಎಫ್ ಮೂಲಗಳು ತಿಳಿಸಿವೆ. ಲಾಹೋರ್ನ ವಾಲ್ಟನ್​ನಲ್ಲಿರುವ ಆರಂಭಿಕ ತರಬೇತಿ ಶಾಲೆಯಲ್ಲಿ ಅವರು ತರಬೇತಿ ಪಡೆದಿದದ್ದರು. ಈ ವೇಳೆ ಅವರು ‘ಅತ್ಯುತ್ತಮ ಪೈಲಟ್ ಟ್ರೋಫಿ’ ಗಳಿಸಿದ್ದರು.

Exit mobile version