ಬೆಂಗಳೂರು: ಬಿಸಿಸಿಐ ಶಾಲಾ ಮಕ್ಕಳ ಕ್ರಿಕೆಟ್ನ ಸಣ್ಣ ಟೂರ್ನಿಯನ್ನು ಆಯೋಜಿಸಿದರೂ ಮಾಧ್ಯಮಗಳು ಅದರ ಪ್ರಸಾರದ ಹಕ್ಕನ್ನು ಪಡೆಯಲು ಕ್ಯೂ ನಿಲ್ಲುತ್ತಾರೆ. ಕೊಟ್ಯಂತರ ರೂಪಾಯಿ ಸುರಿದು ಅದರ ಹಕ್ಕನ್ನು ಪಡೆಯಲು ಮುಂದಾಗುತ್ತಾರೆ. ಆದರೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಹಾಕಿದ ಅಂತಾರಾಷ್ಟ್ರೀಯ ಬಿಡ್ ಕೇಳುವವರೇ ಇಲ್ಲದಂತಾಗಿದೆ. ಹೀಗಾಗಿ ಮಂಡಳಿ (PCB) ತನ್ನ ನಿರೀಕ್ಷೆಗಳನ್ನು ಪೂರೈಸದ ಕಾರಣ ಅಂತರರಾಷ್ಟ್ರೀಯ ಮಾಧ್ಯಮ ಹಕ್ಕುಗಳನ್ನು ಪಡೆಯುವಲ್ಲಿ ಮತ್ತೊಮ್ಮೆ ಹಿನ್ನಡೆಯನ್ನು ಎದುರಿಸಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ (ICC Champions Trophy) ಮುನ್ನ ಇದು ದೊಡ್ಡ ಹಿನ್ನಡೆಯಾಗಿದೆ.
ಆಗಸ್ಟ್ 2024 ರಿಂದ ಡಿಸೆಂಬರ್ 2026 ರವರೆಗೆ ದೂರದರ್ಶನ, ಡಿಜಿಟಲ್, ಆಡಿಯೋ, ವೆಬ್ ಮತ್ತು ಮೊಬೈಲ್ ಪ್ಲಾಟ್ಫಾರ್ಮ್ಗಳಲ್ಲಿ ಕ್ರಿಕೆಟ್ ಪಂದ್ಯಗಳನ್ನು ಪ್ರಸಾರ ಮಾಡಲು ಪಿಸಿಬಿ ಇತ್ತೀಚೆಗೆ ಎಲ್ಲಾ ಜಾಗತಿಕ ಟೆಂಡರ್ಗಳನ್ನು ಪ್ರಕಟಿಸಿತ್ತು. ಪಾಕಿಸ್ತಾನ ಕ್ರಿಕೆಟ್ ತಂಡದ ತವರು ಸರಣಿಯು ಆಗಸ್ಟ್ 21 ರಿಂದ ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯೊಂದಿಗೆ ಪ್ರಾರಂಭವಾಗಲಿದೆ. ಪಾಕಿಸ್ತಾನವು ಅಕ್ಟೋಬರ್ನಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಗೆ ಆತಿಥ್ಯ ವಹಿಸಲಿದೆ. ತಂಡದ ಫ್ಯೂಚರ್ ಟೂರ್ ಪ್ರೋಗ್ರಾಮ್ಸ್ (ಎಫ್ಟಿಪಿ) ವೇಳಾಪಟ್ಟಿಯ ಪ್ರಕಾರ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿವೆ.
2024-2026ರ ಅವಧಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವು ಎಲ್ಲಾ ಸ್ವರೂಪಗಳಲ್ಲಿ 61 ಪಂದ್ಯಗಳನ್ನು ಆಡಲಿದೆ. 11 ಟೆಸ್ಟ್, 26 ಏಕದಿನ ಹಾಗೂ 24 ಟಿ20 ಪಂದ್ಯಗಳನ್ನಾಡಲಿದೆ. ಅಂತಾರಾಷ್ಟ್ರೀಯ ದೂರದರ್ಶನ ಹಕ್ಕುಗಳನ್ನು ಮಾರಾಟ ಮಾಡಲು ಮುಂದಾಗಿದೆ.
ಭಾರೀ ನಿರಾಸೆ
ಅಂತರರಾಷ್ಟ್ರೀಯ ಮಾಧ್ಯಮ ಹಕ್ಕುಗಳನ್ನು ಮಾರಾಟ ಮಾಡುವಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ನಿರೀಕ್ಷೆಗಳನ್ನು ಪೂರೈಸಲಾಗಲಿಲ್ಲ. ಅವರಿಗೆ ಸಲ್ಲಿಕೆಯಾದ ಬಿಡ್ ಮೂಲ ಮೌಲ್ಯದ ಅರ್ಧದಷ್ಟು ಮಾತ್ರ ಇತ್ತು. ಕ್ರಿಕೆಟ್ ಮಂಡಳಿಯು ಮೂರು ವರ್ಷಗಳ ಅಂತಾರರಾಷ್ಟ್ರೀಯ ಮಾಧ್ಯಮ ಹಕ್ಕುಗಳಿಗಾಗಿ ಸುಮಾರು 584 ಕೋಟಿ ರೂಪಾಯಿ (ಪಾಕಿಸ್ತಾನ) ನಿಗದಿ ಮಾಡಿತ್ತು. ಆದರೆ, ಪ್ರಸಾರಕು ಅದರ ಅರ್ಧದಷ್ಟು ಮೊತ್ತಕ್ಕೆ ಪ್ರಸ್ತಾಪ ಸಲ್ಲಿಸಿದೆ.
ಪಾಕ್ ಕಂಪನಿಯಿಂದ ಸಲ್ಲಿಕೆ
ಪಾಕಿಸ್ತಾನದ ಮಾಧ್ಯಮ ಸಮೂಹ ಮತ್ತು ಖಾಸಗಿ ಕಂಪನಿಯ ಒಕ್ಕೂಟವು ವಿದೇಶಿ ಬಿಡ್ದಾರರಾದ ವಿಲ್ಲೋ ಮತ್ತು ಸ್ಪೋರ್ಟ್ಸ್ ಫೈವ್ ಅವರೊಂದಿಗೆ ಹರಾಜಿನಲ್ಲಿ ಭಾಗವಹಿಸಿತು. ಈ ಪೈಕಿ ಸ್ಪೋರ್ಟ್ಸ್ ಫೈವ್ 218 ಡಾಲರ್ಗೆ ಬಿಡ್ ಸಲ್ಲಿಸಿದೆ. ಪಾಕಿಸ್ತಾನದ ಕಂಪನಿಯು ಸುಮಾರು 114 ಕೋಟಿ ಪಾಕಿಸ್ತಾನ ರೂಪಾಯ ಬಿಡ್ ಮಾಡಿದರೆ, ವಿಲ್ಲೋ ಸಂಸ್ಥೆಯು 62 ಕೋಟಿ ರೂಪಾಯಿ ಬಿಡ್ ಮಾಡಿತು. ಮೀಸಲು ಬೆಲೆಯನ್ನು ತಲುಪದ ಕಾರಣ ಮಂಡಳಿಯು ಬಿಡ್ದಾರರಿಗೆ ಬೆಲೆಯನ್ನು ಹೆಚ್ಚಿಸಲು ಸೂಚಿಸಿದೆ.
ಇದನ್ನೂ ಓದಿ: Dinesh Karthik : ಇಷ್ಟದ ಐಪಿಎಲ್ ತಂಡ ಯಾವುದೆಂದು ಬಹಿರಂಗಪಡಿಸಿದ ದಿನೇಶ್ ಕಾರ್ತಿಕ್
ಎರಡನೇ ಸುತ್ತಿನಲ್ಲಿ, ಸ್ಪೋರ್ಟ್ಸ್ ಫೈವ್ ತಮ್ಮ ಬಿಡ್ ಅನ್ನು ಅದೇ ಮೊತ್ತ ಉಳಿಸಿಕೊಂಡರೆ, ಪಾಕಿಸ್ತಾನಿ ಕಂಪನಿಯು ತಮ್ಮ ಬಿಡ್ ಅನ್ನು ಸ್ವಲ್ಪ ಏರಿಸಿತು. ಆದಾಗ್ಯೂ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇನ್ನೂ ಮೀಸಲು ಬೆಲೆಯನ್ನು ಪೂರೈಸದ ಕಾರಣ ಎರಡೂ ಪ್ರಸ್ತಾಪಗಳನ್ನು ತಿರಸ್ಕರಿಸಿದೆ.
ಹೊಸ ಟೆಂಡರ್
ನ್ಯೂಜಿಲೆಂಡ್ ವಿರುದ್ಧದ ತವರು ಸರಣಿ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಮಹಿಳಾ ಸರಣಿಗೆ ಹೊಸ ಟೆಂಡರ್ ನೀಡಲಾಗಿದೆ. ಈ ಸುತ್ತಿನಲ್ಲಿ, ಪಾಕಿಸ್ತಾನಿ ಕಂಪನಿಗಳು ಒಟ್ಟಾಗಿ 2.7 ಕೋಟಿ ಪಾಕಿಸ್ತಾನಿ ರೂಪಾಯಿಗಳು), ವಿಲ್ಲೋ 2 ಕೋಟಿ ರೂಪಾಟಿ ಮತ್ತು ಸ್ಪೋರ್ಟ್ಸ್ ಫೈವ್ 1.39 ಕೋಟಿ ರೂಪಾಯಿ ಬಿಡ್ ಮಾಡಿದವು.