ನವದೆಹಲಿ: ಶ್ರೀಲಂಕಾದ ಬೌಲರ್ ವನಿಂದು ಹಸರಂಗ (Wanindu Hasaranga) ಸೋಮವಾರ ಟೆಸ್ಟ್ ಕ್ರಿಕೆಟ್ನ (test Cricket) ನಿವೃತ್ತಿಯ ನಿರ್ಧಾರವನ್ನು ಪರಿಷ್ಕರಿಸಿ ಆಡಲು ಮುಂದಾಗಿದ್ದರು. ಆದರೆ, ಈ ತೀರ್ಮಾನ ಪ್ರಕಟಗೊಳಿಸಿದ ಮರುದಿನವೇ ಅವರಿಗೆ ನಿಷೇಧ ಹೇರಿ ಅವರ ಯೋಜನೆಗೆ ಮತ್ತೊಂದು ತಿರುವು ಕೊಟ್ಟಿದೆ. ಹೀಗಾಗಿ ಅವರು ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡುವುದು ಸಾಧ್ಯವಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಮಂಗಳವಾರ (ಮಾರ್ಚ್ 19) ಅಮಾನತು ನಿರ್ಧಾರ ಪ್ರಕಟಿಸಿದೆ.
ಕಳೆದ ವರ್ಷ ಸುದೀರ್ಘ ಸ್ವರೂಪದ ಕ್ರಿಕೆಟ್ನಿಂದ ನಿವೃತ್ತರಾದ ಹಸರಂಗ ಟೆಸ್ಟ್ ಕ್ರಿಕೆಟ್ ಮರಳುವ ನಿರ್ಧಾರವನ್ನು ಘೋಷಿಸಿದ ಸ್ವಲ್ಪ ಸಮಯದ ಬಳಿಕ ಐಸಿಸಿ ಹೇಳಿಕೆ ಬಿಡುಗಡೆ ಮಾಡಿರುವುದು ದುರದೃಷ್ಟ.
A big loss for Sri Lanka as star all-rounder is suspended for the #BANvSL Test series 👀
— ICC (@ICC) March 19, 2024
Details ⬇#WTC25https://t.co/CMmQZj3616
ಇತ್ತೀಚೆಗೆ ನಡೆದ ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವಿನ ಏಕದಿನ ಸರಣಿಯ ಮೂರನೇ ಪಂದ್ಯದ ಸಮಯದಲ್ಲಿ, ಹಸರಂಗ ಅವರು ಆಟಗಾರರು ಮತ್ತು ಆಟಗಾರರ ಬೆಂಬಲ ಸಿಬ್ಬಂದಿಗಾಗಿ ರೂಪಿಸಿರುವ ಐಸಿಸಿ ನೀತಿ ಸಂಹಿತೆಯ 2.8 ನೇ ವಿಧಿಯನ್ನು ಉಲ್ಲಂಘಿಸಿದ್ದರು. ಹೀಗಾಗಿ ನಿಷೇಧ ಹೇರಲಾಗಿದೆ. ಪಂದ್ಯದ 37 ನೇ ಓವರ್ನಲ್ಲಿ ಹಸರಂಗ ಅಂಪೈರ್ ಒಬ್ಬರಿಂದ ಕ್ಯಾಪ್ ಕಸಿದುಕೊಂಡು ಅವರನ್ನು ಗೇಲಿ ಮಾಡಿದ್ದರು.
ಹಸರಂಗ ಅವರಿಗೆ ಪಂದ್ಯದ ಶುಲ್ಕದ ಶೇಕಡಾ ೫೦ರಷ್ಟು ದಂಡ ಕೂಡ ವಿಧಿಸಲಾಗಿದೆ. ಅವರು ತಮ್ಮ ಅಪರಾಧಕ್ಕಾಗಿ ಮೂರು ಡಿಮೆರಿಟ್ ಅಂಕಗಳನ್ನು ಪಡೆದುಕೊಂಡಿದ್ದಾರೆ. ಇದು 24 ತಿಂಗಳ ಅವಧಿಯಲ್ಲಿ ಅವರ ಒಟ್ಟು ಡಿಮೆರಿಟ್ ಅಂಕಗಳನ್ನು ಎಂಟಕ್ಕೆ ಏರಿದೆ.
ಇದನ್ನೂ ಓದಿ : Smiriti Mandhana : ನನ್ನನ್ನು ವಿರಾಟ್ ಕೊಹ್ಲಿಗೆ ಹೋಲಿಸಬೇಡಿ; ಮಂಧಾನಾ ಅಸಮಾಧಾನ
ಕಳೆದ ತಿಂಗಳು ಡಂಬುಲ್ಲಾದಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಮೂರನೇ ಟಿ 20 ಪಂದ್ಯದಲ್ಲಿ ಮೂರು ಡಿಮೆರಿಟ್ ಅಂಕಗಳನ್ನು ಪಡೆದ ನಂತರ ಆಲ್ರೌಂಡರ್ ಈಗಾಗಲೇ ಐದು ಡಿಮೆರಿಟ್ ಅಂಕಗಳನ್ನು ಗಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಬಾಂಗ್ಲಾದೇಶ ವಿರುದ್ಧದ ಎರಡು ಟಿ20 ಪಂದ್ಯಗಳಿಂದ ಅಮಾನತುಗೊಳಿಸಲಾಗಿದೆ. ಇತ್ತೀಚಿನ ಡಿಮೆರಿಟ್ ಅಂಕಗಳ ಸೇರ್ಪಡೆಯೊಂದಿಗೆ, ಅವರು ಎಂಟು ಡಿಮೆರಿಟ್ ಅಂಕಗಳ ಮಿತಿಯನ್ನು ಉಲ್ಲಂಘಿಸಿದ್ದಾರೆ. ಇದನ್ನು ಸಂಹಿತೆಯ 7.6 ನೇ ವಿಧಿಗೆ ಅನುಸಾರವಾಗಿ ನಾಲ್ಕು ಅಮಾನತು ಅಂಕಗಳಾಗಿ ಪರಿವರ್ತಿಸಲಾಗಿದೆ.
ನಾಲ್ಕು ಅಮಾನತು ಅಂಕಗಳು ಎರಡು ಟೆಸ್ಟ್ ಅಥವಾ ನಾಲ್ಕು ಏಕದಿನ ಅಥವಾ ಟಿ 20 ಪಂದ್ಯಗಳಿಂದ ನಿಷೇಧಕ್ಕೆ ಸಮನಾಗಿರುತ್ತದೆ. ಆದ್ದರಿಂದ ಹಸರಂಗ ಮಾರ್ಚ್ 22 ರಂದು ಸಿಲ್ಹೆಟ್ನಲ್ಲಿ ಪ್ರಾರಂಭವಾಗಲಿರುವ ಬಾಂಗ್ಲಾದೇಶ ವಿರುದ್ಧದ ಎರಡು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಟೆಸ್ಟ್ನಿಂದ ಹೊರಗುಳಿಯಲಿದ್ದಾರೆ.