Site icon Vistara News

ICC T20 Ranking: ಟಿ20 ರ್ಯಾಂಕಿಂಗ್​ನಲ್ಲಿ ಭರ್ಜರಿ ಬಡ್ತಿ ಪಡೆದ ಯಶಸ್ವಿ ಜೈಸ್ವಾಲ್​, ಶುಭ್​ಮನ್​ ಗಿಲ್​

ICC T20 Ranking

ಬೆಂಗಳೂರು: ಜಿಂಬಾಬ್ವೆ ವಿರುದ್ಧದ ಟಿ 20 ಐ ಸರಣಿಯಲ್ಲಿ ಪ್ರಭಾವ ಬೀರಿದ ಟೀಮ್ ಇಂಡಿಯಾ ಆಟಗಾರರು ಬುಧವಾರ (ಜುಲೈ 17) ಐಸಿಸಿ ಮಂಡಳಿ ಬಿಡುಗಡೆ ಮಾಡಿದ ಇತ್ತೀಚಿನ ಐಸಿಸಿ ಶ್ರೇಯಾಂಕದಲ್ಲಿ ಗಮನಾರ್ಹ ಪ್ರಗತಿ ಕಂಡಿದ್ದಾರೆ. ಟಿ 20 ವಿಶ್ವಕಪ್ ಮುಗಿದ ಕೂಡಲೇ ಎರಡನೇ ಶ್ರೇಣಿಯ ಭಾರತ ತಂಡವು ಐದು ಪಂದ್ಯಗಳ ಟಿ 20 ಐ ಸರಣಿಗಾಗಿ ಜಿಂಬಾಬ್ವೆ ಪ್ರವಾಸ ಕೈಗೊಂಡಿತ್ತು. ಸರಣಿಯಲ್ಲಿ ಶುಬ್ಮನ್ ಗಿಲ್ ನಾಯಕತ್ವದ ಭಾರತ 4-1 ಅಂತರದ ಸರಣಿ ಗೆಲುವು ದಾಖಲಿಸಿತ್ತು. ವಿಶ್ವ ಟಿ 20 ಚಾಂಪಿಯನ್ಸ್ ಮೊಲದ ಪಂದ್ಯದ 13 ರನ್ ಗಳ ಆಘಾತಕಾರಿ ಸೋಲಿನೊಂದಿಗೆ ಪ್ರವಾಸವು ಆರಂಭಿಸಿದ್ದರೂ ಬಳಿಕ ಮುಂದಿನ ನಾಲ್ಕು ಪಂದ್ಯಗಳನ್ನು ಗೆದ್ದು ಪುಟಿದೆದ್ದಿತು.

ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರ ಯಶಸ್ವಿ ಜೈಸ್ವಾಲ್ ಐಸಿಸಿ ಶ್ರೇಯಾಂಕದಲ್ಲಿ ಮೇಲಕ್ಕೇರಿದ್ದಾರೆ. ಮೊದಲ ಎರಡು ಪಂದ್ಯಗಳನ್ನ ತಪ್ಪಿಸಿಕೊಂಡಿದ್ದರು. ಆದರೆ ಬ್ಯಾಟ್​ನೊಂದಿಗೆ ಉತ್ತಮ ಫಾರ್ಮ್ ಕಂಡ ಅವರು ಮೂರನೇ ಪಂದ್ಯದಲ್ಲಿ 36 ರನ್ ಗಳಿಸಿದರು. ನಾಲ್ಕನೇ ಪಂದ್ಯದಲ್ಲಿ ಅಜೇಯ 93 ರನ್ ಗಳಿಸಿದರು. ಇದು ಭಾರತಕ್ಕೆ ಸರಣಿ ಗೆಲ್ಲಲು ಸಹಾಯ ಮಾಡಿತು.

ಜೈಸ್ವಾಲ್ ಒಟ್ಟಾರೆ 141 ರನ್​ಗಳೊಂದಿಗೆ ಸರಣಿ ಮುಗಿಸಿ ರ್ಯಾಂಕಿಂಗ್​ನಲ್ಲಿ ಆರನೇ ಸ್ಥಾನಕ್ಕೆ ಜಿಗಿದಿದ್ದಾರೆ. ಟಿ 20 ಐನಲ್ಲಿ ಅವರು ಎರಡನೇ ಅತ್ಯುನ್ನತ ಶ್ರೇಯಾಂಕದ ಭಾರತೀಯ ಬ್ಯಾಟರ್ ಆಗಿದ್ದಾರೆ. ಸೂರ್ಯಕುಮಾರ್ ಯಾದವ್ ಎರಡನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಪ್ರಸ್ತುತ ವಿಶ್ವದ ಅಗ್ರ ಶ್ರೇಯಾಂಕ ಹೊಂದಿದ್ದಾರೆ.

ಇದನ್ನೂ ಓದಿ: Paris Olympics 2024 : 8 ಚಿನ್ನ, 1 ಬೆಳ್ಳಿ, 3 ಕಂಚು: ಒಲಿಂಪಿಕ್ಸ್ ಹಾಕಿ ಸ್ಪರ್ಧೆಯಲ್ಲಿ ಭಾರತ ತಂಡದ ಸಾಧನೆಗಳ ವಿವರ ಇಲ್ಲಿದೆ

ಜಿಂಬಾಬ್ವೆ ವಿರುದ್ಧ ಉತ್ತಮ ಪ್ರದರ್ಶನ ನೀಡಿದ ನಂತರ ಶುಬ್ಮನ್ ಗಿಲ್ ಕೂಡ ಶ್ರೇಯಾಂಕದಲ್ಲಿ ದೊಡ್ಡ ಏರಿಕೆ ಮಾಡಿದ್ದಾರೆ. ಬಲಗೈ ಬ್ಯಾಟರ್​ ತಮ್ಮ ತಂಡವನ್ನು ಮುನ್ನಡೆಸಿದ್ದಾರೆ. ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರಾಗಿ ಮುಗಿಸಿದ್ದಾರೆ. 2 ಅರ್ಧಶತಕಗಳ ಸಹಾಯದಿಂದ 170 ರನ್ ಗಳಿಸಿದ್ದಾರೆ. ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ ಅವರು 36 ಸ್ಥಾನ ಮೇಲಕ್ಕೇರಿ 37ನೇ ಸ್ಥಾನ ಪಡೆದುಕೊಂಡಿದ್ದಾರೆ.

ಐಸಿಸಿ ಟಿ20 ರ್ಯಾಂಕಿಂಗ್:

ಬೌಲರ್​ಗಳ ಪೈಕಿ ಜಿಂಬಾಬ್ವೆ ವೇಗಿ ಬ್ಲೆಸ್ಸಿಂಗ್ ಮುಜರಬಾನಿ 11 ಸ್ಥಾನ ಮೇಲಕ್ಕೇರಿ 44ನೇ ಸ್ಥಾನಕ್ಕೇರಿದ್ದಾರೆ. ಭಾರತದ ವಿರುದ್ಧ ಮುಜರಬಾನಿ ಆರು ವಿಕೆಟ್ ಪಡೆದಿದ್ದಾರೆ. ವಾಷಿಂಗ್ಟನ್ ಸುಂದರ್ 36 ಸ್ಥಾನ ಮೇಲಕ್ಕೇರಿ 46ನೇ ಸ್ಥಾನದಲ್ಲಿದ್ದರೆ, ಮುಖೇಶ್ ಕುಮಾರ್ 21 ಸ್ಥಾನ ಮೇಲೇರಿ 73ನೇ ಸ್ಥಾನಕ್ಕೇರಿದ್ದಾರೆ. ಸರಣಿಯಲ್ಲಿ ಸುಂದರ್ ಮತ್ತು ಮುಖೇಶ್ ತಲಾ 8 ವಿಕೆಟ್ ಪಡೆದು ಜಂಟಿಯಾಗಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು.

ಇಂಗ್ಲೆಂಡ್ ಸ್ಪಿನ್ನರ್ ಆದಿಲ್ ರಶೀದ್ ಪ್ರಸ್ತುತ ವಿಶ್ವದ ನಂಬರ್ ಒನ್ ಟಿ 20 ಬೌಲರ್ ಆಗಿದ್ದಾರೆ. ಅಕ್ಷರ್ ಪಟೇಲ್ ಟಿ20ಐನಲ್ಲಿ 13ನೇ ಸ್ಥಾನದಲ್ಲಿದ್ದಾರೆ. ಆಲ್​ರೌಂಡರ್​ಗಳ ಪೈಕಿ ವನಿಂದು ಹಸರಂಗ ಅಗ್ರಸ್ಥಾನದಲ್ಲಿದ್ದರೆ, ಹಾರ್ದಿಕ್ ಪಾಂಡ್ಯ (6ನೇ ಸ್ಥಾನ) 10ರೊಳಗೆ ಸ್ಥಾನ ಪಡೆದಿದ್ದಾರೆ.

Exit mobile version