Site icon Vistara News

ICC World Test Championship : 2027ರ ಡಬ್ಲ್ಯುಟಿಸಿ ಫೈನಲ್​​ ಇಂಗ್ಲೆಂಡ್​ನಲ್ಲಿ, ದಿನಾಂಕವೂ ಪ್ರಕಟ

word test championship

ಬೆಂಗಳೂರು: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್​ 2027 ರ (ICC World Test Championship 🙂 ಫೈನಲ್ ಜೂನ್​ನಲ್ಲಿ ಇಂಗ್ಲೆಂಡ್​ನಲ್ಲಿ ನಡೆಯಲಿದೆ. ಡಬ್ಲ್ಯುಟಿಸಿ ಫೈನಲ್ ಇಂಗ್ಲೆಂಡ್​ನಲ್ಲಿ ಆಯೋಜನೆಗೊಂಡಿರುವುದು ಇದು ನಾಲ್ಕನೇ ಬಾರಿ. ಡಬ್ಲ್ಯುಟಿಸಿ 2021 ಫೈನಲ್​ಗೆ ಸೌತಾಂಪ್ಟನ್ ಡಬ್ಲ್ಯುಟಿಸಿ 2023 ಫೈನಲ್​ಗೆ ಓವಲ್ ಆತಿಥ್ಯ ವಹಿಸಿತ್ತು. ಲಾರ್ಡ್ಸ್ ಡಬ್ಲ್ಯುಟಿಸಿ 2025 ಫೈನಲ್​​​ಗೆ ಆತಿಥ್ಯ ವಹಿಸಲಿದೆ.

ಡಬ್ಲ್ಯುಟಿಸಿ ಪಾಯಿಂಟ್ಸ್ ಟೇಬಲ್​ನಲ್ಲಿ ಆಸ್ಟ್ರೇಲಿಯಾ ನಂ.1 ತಂಡವಾಗಿ ಟೆಸ್ಟ್ ಸ್ಪರ್ಧೆಯನ್ನು ಪ್ರಾರಂಭಿಸಿದೆ. ಭಾರತ ಎರಡನೇ ಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ಕ್ರಮವಾಗಿ ಮೂರು, ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ. ಪಾಕಿಸ್ತಾನ 6ನೇ ಸ್ಥಾನ, ವೆಸ್ಟ್ ಇಂಡೀಸ್ 7ನೇ ಸ್ಥಾನ, ಇಂಗ್ಲೆಂಡ್ 8ನೇ ಸ್ಥಾನ ಹಾಗೂ ಶ್ರೀಲಂಕಾ ಕೊನೆಯ ಸ್ಥಾನದಲ್ಲಿವೆ.

ಪ್ರಸ್ತುತ, ಭಾರತ, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿಯನ್ನು ಆಡುತ್ತಿರುವ ನಾಲ್ಕು ತಂಡಗಳು. ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಶೀಘ್ರದಲ್ಲೇ ಟೆಸ್ಟ್ ಸರಣಿಯನ್ನು ಆಡಲಿವೆ. ಅಂಕಪಟ್ಟಿಯಲ್ಲಿ ಮೇಲಕ್ಕೇರಲು ಕೆಳಗಿರುವ ತಂಡಗಳು ಸಾಕಷ್ಟು ಪ್ರಯತ್ನ ಮಾಡಬೇಕಾಗಿದೆ. ವಿಶೇಷವಾಗಿ ಇಂಗ್ಲೆಂಡ್, ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ನಂತಹ ತಂಡಗಳಿಗೆ ಹೆಚ್ಚು ಶ್ರಮ ಬೇಕಾಗಿದೆ.

ರೋಹಿತ್ ಟೀಕಿಸಿದ್ದರು

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್ಸ್​​ಗೆ ಇಂಗ್ಲೆಂಡ್ ಆತಿಥ್ಯ ವಹಿಸಿದ್ದಕ್ಕೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟೀಕೆ ವ್ಯಕ್ತಪಡಿಸಿದ್ದಾರೆ. ಪ್ರಮುಖವಾಗಿ ಜೂನ್​ನಲ್ಲಿ ಡಬ್ಲ್ಯುಟಿಸಿ ಫೈನಲ್ಸ್ ಆಯೋಜಿಸುವ ಆಲೋಚನೆಯನ್ನು ಟೀಕಿಸಿದ್ದರು. ಡಬ್ಲ್ಯುಟಿಸಿ ಫೈನಲ್ಸ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋತ ನಂತರ ಅವರು ತಮ್ಮ ಮನಸ್ಸಿನ ಆಲೋಚನೆಯನ್ನು ವ್ಯಕ್ತಪಡಿಸಿದರು. ಇದಕ್ಕಾಗಿ ಫೈನಲ್ಸ್​ಗೆ ತಯಾರಿ ನಡೆಸಲು ಅವರಿಗೆ ಸಾಕಷ್ಟು ಸಮಯ ಸಿಕ್ಕಿರಲಿಲ್ಲ. ಭವಿಷ್ಯದಲ್ಲಿ ಡಬ್ಲ್ಯುಟಿಸಿ ಫೈನಲ್ಸ್ ಅನ್ನು ಜೂನ್​​ನಲ್ಲಿ ನಡೆಯಬಾರದು ಎಂದು ರೋಹಿತ್ ಹೇಳಿದ್ದರು. ಐಪಿಎಲ್ 2023 ಫೈನಲ್ ನಂತರ ಇಂಗ್ಲೆಂಡ್​ ತಲುಪಿದ ಕಾರಣ ಇಂಗ್ಲೆಂಡ್​ಗೆ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಭಾರತಕ್ಕೆ ಹೆಚ್ಚು ಸಮಯ ಸಿಕ್ಕಿರಲಿಲ್ಲ .

ಇದನ್ನೂ ಓದಿ : Ishan Kishan : ಇಶಾನ್ ಕಿಶನ್ ಅಶಿಸ್ತಿಗೆ ಧೋನಿ ಸಲಹೆ ಕಾರಣವೇ?

ಐಪಿಎಲ್ ಫೈನಲ್ ನಂತರ ಏಕೆ? ಇದು ಮಾರ್ಚ್​ನಲ್ಲಿ ಆಗಲು ಏಕೆ ಸಾಧ್ಯವಿಲ್ಲ? ನಾವು ಫೈನಲ್ ಆಡಲು ಜೂನ್ ಮಾತ್ರ ತಿಂಗಳು ಅಲ್ಲ. ಇದನ್ನು ವರ್ಷದ ಯಾವುದೇ ಸಮಯದಲ್ಲಿ ಮತ್ತು ವಿಶ್ವದ ಎಲ್ಲಿಯಾದರೂ ಆಡಬಹುದು, ಇಂಗ್ಲೆಂಡ್ನಲ್ಲಿ ಮಾತ್ರವಲ್ಲ, ವಿಶ್ವದ ಎಲ್ಲಿಯಾದರೂ ಆಡಬಹುದು”ಎಂದು ರೋಹಿತ್ ಹೇಳಿದ್ದರು.

ಮಹಿಳೆಯರ ಚಾಂಪಿಯನ್ಸ್ ಟ್ರೋಫಿ

ಐಸಿಸಿ ಮಹಿಳಾ ಟಿ 20 ಚಾಂಪಿಯನ್ಸ್ ಟ್ರೋಫಿಯನ್ನು ಪ್ರಾರಂಭಿಸಿದೆ. ಉದ್ಘಾಟನಾ ಆವೃತ್ತಿಯು 2027 ರ ಫೆಬ್ರವರಿಯಲ್ಲಿ ಶ್ರೀಲಂಕಾದಲ್ಲಿ ನಡೆಯಲಿದ್ದು, ಟಿ 20 ಐ ಸ್ವರೂಪದಲ್ಲಿ ನಡೆಯಲಿದೆ. ಪುರುಷರ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ ಪಾಕಿಸ್ತಾನದಲ್ಲಿ ನಡೆಯಲಿದೆ. ಇದನ್ನು ಏಕದಿನ ಮಾದರಿಯಲ್ಲಿ ಆಡಲಾಗುವುದು.

ಏತನ್ಮಧ್ಯೆ, 2026ರ ಜನವರಿಯಲ್ಲಿ ಮಹಿಳಾ ಅಂಡರ್ -19 ವಿಶ್ವಕಪ್ ನ ಮುಂದಿನ ಆವೃತ್ತಿಯನ್ನು ಮಲೇಷ್ಯಾ ಆಯೋಜಿಸಲಿದೆ. ಪುರುಷರ ಟಿ 20 ಐ ವಿಶ್ವಕಪ್​​ನ ಮುಂದಿನ ಆವೃತ್ತಿಗೆ ಭಾರತವು ಆತಿಥ್ಯ ವಹಿಸಲಿದ್ದು, ಶ್ರೀಲಂಕಾ 2026 ರ ಅಕ್ಟೋಬರ್-ನವೆಂಬರ್​ನಲ್ಲಿ ಸಹ-ಆತಿಥ್ಯ ವಹಿಸಲಿದೆ. ಭಾರತವು ಮುಂದಿನ ಮಹಿಳಾ ಏಕದಿನ ವಿಶ್ವಕಪ್ ಅನ್ನು 2025 ರ ಅಕ್ಟೋಬರ್-ನವೆಂಬರ್ನಲ್ಲಿ ಆಯೋಜಿಸಲಿದೆ. ಹೀಗಾಗಿ ಉಪಖಂಡವು ಮುಂದಿನ ಎರಡು ವರ್ಷಗಳ ಕಾಲ ಕ್ರಿಕೆಟ್ ವೈಭವದ ಭಾಗವಾಗಲು ಸಜ್ಜಾಗಿದೆ.

Exit mobile version