Site icon Vistara News

ವಿಸ್ತಾರ Money Guide : ಅಂಚೆ ಇಲಾಖೆಯಲ್ಲಿ 10 ಲಕ್ಷ ರೂ.ಗಿಂತ ಹೆಚ್ಚಿನ ಹೂಡಿಕೆಗೆ ಇನ್‌ಕಮ್ ಪ್ರೂಫ್‌ ಕಡ್ಡಾಯವೆ?

post office

Rent not paid so landlord locke post office

ಸರ್ಕಾರ ಅಂಚೆ ಇಲಾಖೆಯ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆಗೆ ಉತ್ತೇಜಿಸುತ್ತಿದೆ. ಬಡ್ಡಿ ದರವನ್ನೂ ಗಮನಾರ್ಹ ಮಟ್ಟದಲ್ಲಿ ಇರಿಸಿದೆ. (Small Savings Schemes) ಇದು ಒಳ್ಳೆಯದೇ ಎನ್ನುತ್ತಾರೆ ತಜ್ಞರು. ( ವಿಸ್ತಾರ Money Guide) ನೀವು ಅಂಚೆ ಇಲಾಖೆಯಲ್ಲಿ ಸಾರ್ವಜನಿಕ ಭವಿಷ್ಯ ನಿಧಿ( Public provident fund-PPF̧) ನ್ಯಾಶನಲ್‌ ಸೇವಿಂಗ್ಸ್‌ ಸರ್ಟಿಫಿಕೇಟ್‌ (National savings certificate-NSC), ಕಿಸಾನ್‌ ವಿಕಾಸ ಪತ್ರ( Kisan Vikas Patra -KVP) ಇತ್ಯಾದಿ ಇನ್ವೆಸ್ಟ್‌ಮೆಂಟ್‌ ಮಾಡುತ್ತಿದ್ದರೆ, ಆದಾಯದ ಮೂಲ ಯಾವುದು ಎಂಬುದಕ್ಕೆ ದಾಖಲೆ (ಆದಾಯ ಪ್ರಮಾಣ ಪತ್ರ) ಕೊಡಬೇಕಾಗುತ್ತದೆ. (Income proof) ಅಂಚೆ ಇಲಾಖೆಯ ಹೂಡಿಕೆ ಯೋಜನೆಗಳಲ್ಲಿ KYC ಪ್ರಕ್ರಿಯೆ ಇರುತ್ತದೆ. ಭಯೋತ್ಪಾದಕರು ಈ ಯೋಜನೆಗಳನ್ನು ದುರ್ಬಳಕೆ ಮಾಡದಂತೆ PMLA ಕಾಯಿದೆ ವ್ಯಾಪ್ತಿಯಲ್ಲೂ ಇದು ಬರುತ್ತದೆ.

ಅಂಚೆ ಇಲಾಖೆಯ ಸುತ್ತೋಲೆಯ ಪ್ರಕಾರ ಹೂಡಿಕೆದಾರರನ್ನು ರಿಸ್ಕ್‌ ಅವಲಂಬಿಸಿ ನಾನಾ ಕೆಟಗರಿಯನ್ನಾಗಿ ವಿಂಗಡಿಸಲಾಗಿದೆ. ಹೈ ರಿಸ್ಕ್‌ ಕೆಟಗರಿಯಲ್ಲಿ ಇರುವವರು ಕೆವೈಸಿ ಹೊರತಾಗಿಯೂ ಆದಾಯ ಪ್ರಮಾಣ ಪತ್ರ ಸಲ್ಲಿಸಬೇಕಾಗುತ್ತದೆ. ರಿಸ್ಕ್‌ನ ಕೆಟಗರಿಗಳನ್ನು ಈಗ ನೋಡೋಣ.

ಲೋ ರಿಸ್ಕ್‌ (low risk) : ಅಂಚೆ ಇಲಾಖೆಯ ಸಣ್ಣ ಉಳಿತಾಯ ಯೋಜನೆಗಳಲ್ಲಿ ನಿಮ್ಮ ಹೂಡಿಕೆ, ಬ್ಯಾಲೆನ್ಸ್‌, ಸೇವಿಂಗ್ಸ್‌ ಸರ್ಟಿಫಿಕೇಟ್‌ಗಳ ಮೌಲ್ಯ 50,000 ರೂ. ಒಳಗಿದ್ದರೆ ಲೋ ರಿಸ್ಕ್‌ ಕೆಟಗರಿಯಲ್ಲಿ ಬರುತ್ತದೆ.

ಮೀಡಿಯಂ ರಿಸ್ಕ್‌ (medium risk) : ಅಂಚೆ ಇಲಾಖೆಯ ಸಣ್ಣ ಉಳಿತಾಯ ಯೋಜನೆಗಳಲ್ಲಿ ನಿಮ್ಮ ಹೂಡಿಕೆ, ಬ್ಯಾಲೆನ್ಸ್‌, ಸೇವಿಂಗ್ಸ್‌ ಸರ್ಟಿಫಿಕೇಟ್‌ಗಳ ಮೌಲ್ಯ 50,000 ರೂ. ಮೀರಿದ್ದರೆ ಹಾಗೂ 10 ಲಕ್ಷ ರೂ. ಒಳಗಿದ್ದರೆ ಮೀಡಿಯಂ ರಿಸ್ಕ್‌ ಕೆಟಗರಿಯಲ್ಲಿ ಬರುತ್ತದೆ.

ಹೈ ರಿಸ್ಕ್‌ (high risk): ಅಂಚೆ ಇಲಾಖೆಯ ಸಣ್ಣ ಉಳಿತಾಯ ಯೋಜನೆಗಳಲ್ಲಿ ನಿಮ್ಮ ಹೂಡಿಕೆ, ಬ್ಯಾಲೆನ್ಸ್‌, ಸೇವಿಂಗ್ಸ್‌ ಸರ್ಟಿಫಿಕೇಟ್‌ಗಳ ಮೌಲ್ಯ 10 ಲಕ್ಷ ರೂ. ಮೀರಿದರೆ ಹೈ ರಿಸ್ಕ್‌ ಕೆಟಗರಿಯಲ್ಲಿ ಬರುತ್ತದೆ.

ಅಂಚೆ ಇಲಾಖೆಯು 2023ರ ಮೇನಲ್ಲಿ ಅಧಿಕಾರಿಗಳಿಗೆ ಈ ಸಂಬಂಧ ನಿರ್ದೇಶನ ನೀಡಿತ್ತು. ನಿರ್ದಿಷ್ಟ ಕೆಟಗರಿಯ ಹೂಡಿಕೆದಾರರಿಂದ ಇನ್‌ ಕಮ್‌ ಪ್ರೂಫ್‌ ಸಲ್ಲಿಕೆಗೆ ಕೋರಿತ್ತು. ದೇಶದ ಹೊರಗೆ ರಾಜಕೀಯವಾಗಿ ತೊಡಗಿಸಿಕೊಂಡವರು (politically exposed persons) ಹೈ ರಿಸ್ಕ್‌ ಕೆಟಗರಿಯ ಗ್ರಾಹಕರಲ್ಲಿ ಬರುತ್ತಾರೆ. ವಿದೇಶಗಳಲ್ಲಿ ಪ್ರತಿಷ್ಠಿತ ಸಾರ್ವಜನಿಕ ಸಂಸ್ಥೆಗಳಲ್ಲಿ ಹುದ್ದೆಯಲ್ಲಿ ಇರುವವರೂ ಈ ಕೆಟಗರಿಗೆ ಬರುತ್ತಾರೆ. ಸರ್ಕಾರಗಳ ಮುಖ್ಯಸ್ಥರು, ಹಿರಿಯ ರಾಜಕಾರಣಿಗಳು, ನ್ಯಾಯಾಂಗ ಅಥವಾ ಮಿಲಿಟರಿ ಅಧಿಕಾರಿಗಳು, ಹಿರಿಯ ಸರ್ಕಾರಿ ಅಧಿಕಾರಿಗಳು ಈ ಕೆಟಗರಿಯಲ್ಲಿ ಬರುತ್ತಾರೆ.

ಆದಾಯ ಮೂಲಕ್ಕೆ ದಾಖಲೆಗಳು ಯಾವುದು?

ಠೇವಣಿದಾರರು ಅಥವಾ ಸಣ್ಣ ಉಳಿತಾಯಗಾರರು ಆದಾಯ ಪ್ರಮಾಣ ದಾಖಲೆಯಾಗಿ ಕೆಳಕಂಡ ಆಯ್ಕೆಗಳನ್ನು ಸಲ್ಲಿಸಬಹುದು. ಬ್ಯಾಂಕ್/‌ ಅಂಚೆ ಇಲಾಖೆ ಅಕೌಂಟ್‌ ಸ್ಟೇಟ್‌ ಮೆಂಟ್‌ ತೋರಿಸಬಹುದು. ಅದರಲ್ಲಿ ಆದಾಯ ಮೂಲ ವಿವರ ಇರಬೇಕು. ಕಳೆದ ಮೂರು ವರ್ಷಗಳ ಆದಾಯ ತೆರಿಗೆ ರಿಟರ್ನ್‌ ಸಲ್ಲಿಕೆಯ ದಾಖಲೆ ಆಗಬಹುದು. ಅದು ನಿಮ್ಮ ಒಟ್ಟಾರೆ ಆದಾಯವನ್ನು ತೋರಿಸುತ್ತದೆ. ಸೇಲ್‌ ಡೀಡ್‌, ಗಿಫ್ಡ್‌ ಡೀಡ್‌, ವಿಲ್‌, ಲೆಟರ್‌ ಆಫ್‌ ಅಡ್ಮಿನಿಸ್ಟ್ರೇಶನ್‌, ಸಕ್ಸೆಶನ್‌ ಸರ್ಟಿಫಿಕೇಟ್‌, ಸ್ಯಾಲರಿ ಸ್ಲಿಪ್‌, ಇತರ ಯಾವುದೇ ಆದಾಯ ಮೂಲ ದಾಖಲೆಗಳನ್ನು ಸಲ್ಲಿಸಬಹುದು.

ಹೈ ರಿಸ್ಕ್‌ ಕೆಟಗರಿಯಲ್ಲಿ ಬರುವವರು ಕೆವೈಸಿ ಪ್ರಕ್ರಿಯೆಗೆ ಕೆಳಕಂಡ ದಾಖಲೆಗಳನ್ನೂ ಕೊಡಬೇಕಾಗುತ್ತದೆ. ಪಾಸ್‌ ಪೋರ್ಟ್‌ ಗಾತ್ರದ ಇತ್ತೀಚಿನ ಎರಡು ಫೊಟೊ, ಆಧಾರ್‌ ಮತ್ತು ಪ್ಯಾನ್‌ ಕಾರ್ಡ್‌, ವಿಳಾಸದ ದೃಢೀಕರಣ.

ಇದನ್ನೂ ಓದಿ: Moodys report : ಅಧಿಕ ಸಾಲದಿಂದ ಭಾರತದ ಆರ್ಥಿಕತೆಗೆ ಅಪಾಯ ಇದೆಯೆ? ಮೂಡೀಸ್‌ ಹೇಳಿದ್ದೇನು?

Exit mobile version