ನವದೆಹಲಿ: ಹಣಕಾಸು ಅಕ್ರಮಗಳ ಆರೋಪ ಹೊತ್ತವರು ಅಥವಾ ದೊಡ್ಡ ಪ್ರಮಾಣದಲ್ಲಿ ಆದಾಯ ತೆರಿಗೆ ಬಾಕಿ ಉಳಿಸಿಕೊಂಡವರು (Income Tax) ವಿದೇಶಕ್ಕೆ ತೆರಳುವಾಗ ಮಾತ್ರ ತೆರಿಗೆ ಕ್ಲಿಯರೆನ್ಸ್ ಪ್ರಮಾಣಪತ್ರಗಳು ಕಡ್ಡಾಯವಾಗಿರುತ್ತವೆ ಎಂದು ಕೇಂದ್ರ ಸರ್ಕಾರ ಭಾನುವಾರ ಸ್ಪಷ್ಟಪಡಿಸಿದೆ. ಸಾಗರೋತ್ತರ ಪ್ರಯಾಣಿಕರಿಗೆ ಇನ್ಕಮ್ ಟ್ಯಾಕ್ಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಕಡ್ಡಾಯಗೊಳಿಸುವ ಬಜೆಟ್ 2024ರ ಪ್ರಸ್ತಾಪವು ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ಹುಟ್ಟುಹಾಕಿದ ನಂತರ ಈ ಸ್ಪಷ್ಟೀಕರಣ ಹೊರಟಿದೆ.
ಬಜೆಟ್ನಲ್ಲಿ ಮಂಡಿಸಲಾಗಿದ್ದ ಹಣಕಾಸು ಮಸೂದೆ 2024ರಲ್ಲಿ, ಕಪ್ಪು ಹಣ ಕಾಯ್ದೆ, 2015 ರ ಉಲ್ಲೇಖವನ್ನು ಕಾಯ್ದೆಗಳ ಪಟ್ಟಿಗೆ ಸೇರಿಸಲು ಪ್ರಸ್ತಾಪಿಸಲಾಗಿತ್ತು. ಈ ಕಾಯ್ದೆಯು ಹಣಕಾಸಿನ ಹೊಣೆಗಾರಿಕೆಗಳನ್ನು ತೆರವುಗೊಳಿಸಬೇಕು ಮತ್ತು ತೆರಿಗೆ ಕ್ಲಿಯರೆನ್ಸ್ ಪ್ರಮಾಣಪತ್ರವನ್ನು ಪಡೆಯಬೇಕು ಎಂದು ಹೇಳುತ್ತದೆ. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗಿದ್ದವು. ಹೀಗಾಗಿ ಪ್ರಸ್ತಾವಿತ ತಿದ್ದುಪಡಿ ಎಲ್ಲರಿಗೂ ಸಂಬಂಧಿಸಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ತಿದ್ದುಪಡಿಯಡಿ ಭಾರತದ ಎಲ್ಲ ನಾಗರಿಕರು ವಿದೇಶ ಪ್ರವಾಸಕ್ಕೆ ತೆರಳುವಾಗ ತೆರಿಗೆ ಕ್ಲಿಯರೆನ್ಸ್ ಪ್ರಮಾಣಪತ್ರ ಪಡೆಯುವ ಅಗತ್ಯವಿಲ್ಲ ಎಂದು ಸಚಿವಾಲಯ ತಿಳಿಸಿದೆ.
ಆದಾಯ ತೆರಿಗೆ ಕಾಯ್ದೆ, 1961 ಹೀಗೆ ಹೇಳುತ್ತದೆ
ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 230 ರ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಯು ತೆರಿಗೆ ಕ್ಲಿಯರೆನ್ಸ್ ಪ್ರಮಾಣಪತ್ರವನ್ನು ಪಡೆಯುವುದನ್ನು ಕಡ್ಡಾಯಗೊಳಿಸುವುದಿಲ್ಲ. “ಅಸ್ತಿತ್ವದಲ್ಲಿರುವ ಕೆಲವು ವ್ಯಕ್ತಿಗಳಿಗೆ ಅನ್ವಯವಾಗುತ್ತದೆ. ಪ್ರಮಾಣಪತ್ರ ಅಗತ್ಯವಿದ್ದರೆ ತೆರಿಗೆ ಕ್ಲಿಯರೆನ್ಸ್ ಪ್ರಮಾಣಪತ್ರವನ್ನು ಪಡೆಯಬೇಕಾಗುತ್ತದೆ ಎಂದು ಹೇಳಿದೆ. ಆದಾಯ ತೆರಿಗೆ ಇಲಾಖೆಯ 2004ರ ಅಧಿಸೂಚನೆಯು ತೆರಿಗೆ ಕ್ಲಿಯರೆನ್ಸ್ ಪ್ರಮಾಣಪತ್ರ ಭಾರತೀಯ ನಿವಾಸಿಗಳಿಗೆ ಮಾತ್ರ ಕಡ್ಡಾಯ ಎಂದು ಹೇಳಿದೆ.
ತೆರಿಗೆ ಕ್ಲಿಯರೆನ್ಸ್ ಪ್ರಮಾಣಪತ್ರ ಯಾರಿಗೆ ಬೇಕು?
ವ್ಯಕ್ತಿಯು ಗಂಭೀರ ಹಣಕಾಸಿನ ಅಕ್ರಮದ ಬಗ್ಗೆ ಶಂಕೆಗೆ ಒಳಗಾದರೆ ಮತ್ತು ಆದಾಯ ತೆರಿಗೆ ಕಾಯ್ದೆ ಅಥವಾ ತೆರಿಗೆ ಕಾಯ್ದೆಯಡಿ ತನಿಖೆಗಳಿಗೆ ಅವರು ಉಪಸ್ಥಿತಿ ನಿರ್ಣಾಯಕವಾಗಿದ್ದರೆ ಮತ್ತು ಅವರ ವಿರುದ್ಧ ಟ್ಯಾಕ್ಸ್ ಡಿಮ್ಯಾಂಡ್ ಎತ್ತುವ ಸಅದ್ಯತೆಗಳು ಇದ್ದರೆ ಅವರು ಪ್ರಮಾಣಪತ್ರವನ್ನು ಪಡೆಯಬೇಕಾಗುತ್ತದೆ.
ನೇರ ತೆರಿಗೆ ಬಾಕಿ ಇಟ್ಟುಕೊಂಡವರು : ವ್ಯಕ್ತಿಯು 10 ಲಕ್ಷ ರೂ.ಗಿಂತ ಹೆಚ್ಚಿನ ನೇರ ತೆರಿಗೆ ಬಾಕಿ ಇಟ್ಟಿದ್ದರೆ, ತೆರಿಗೆ ಕ್ಲಿಯರೆನ್ಸ್ ಪ್ರಮಾಣಪತ್ರವನ್ನು ಪಡೆಯಬೇಕು.
ಇದನ್ನೂ ಓದಿ: Paris Olympics Shooting: ಪ್ಯಾರಿಸ್ ಒಲಿಂಪಿಕ್ಸ್ ಭಾರತಕ್ಕೆ ಒಲಿಯಿತು ಮೊದಲ ಪದಕ; ಕಂಚು ಗೆದ್ದ ಶೂಟರ್ ಮನು ಭಾಕರ್
ತೆರಿಗೆ ಬಾಕಿ ಉಳಿಸಲು ಕಾರಣಗಳನ್ನು ದಾಖಲಿಸಿದ ನಂತರವೇ ತೆರಿಗೆ ಕ್ಲಿಯರೆನ್ಸ್ ಪ್ರಮಾಣಪತ್ರ ಪಡೆಯಲು ವ್ಯಕ್ತಿಯನ್ನು ಕೇಳಬಹುದು ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. ಆದಾಯ ತೆರಿಗೆಯ ಪ್ರಧಾನ ಮುಖ್ಯ ಆಯುಕ್ತರು ಅಥವಾ ಆದಾಯ ತೆರಿಗೆಯ ಮುಖ್ಯ ಆಯುಕ್ತರ ಅನುಮೋದನೆಯೂ ಅವರಿಗೆ ಅಗತ್ಯವಾಗಿರುತ್ತದೆ.
ಪ್ರಮಾಣಪತ್ರವನ್ನು ನೀಡುವ ಆದಾಯ ತೆರಿಗೆ ಅಧಿಕಾರಿಗಳು ಆದಾಯ ತೆರಿಗೆ ಕಾಯ್ದೆ, ಅಥವಾ ಸಂಪತ್ತು-ತೆರಿಗೆ ಕಾಯ್ದೆ, 1957, ಅಥವಾ ಉಡುಗೊರೆ-ತೆರಿಗೆ ಕಾಯ್ದೆ, 1958 ಅಥವಾ ವೆಚ್ಚ-ತೆರಿಗೆ ಕಾಯ್ದೆ, 1987 ರ ಅಡಿಯಲ್ಲಿ ಸಂಬಂಧಪಟ್ಟ ವ್ಯಕ್ತಿಗೆ ಯಾವುದೇ ಎಂಬುದನ್ನು ಖಚಿತಪಡಿಸಬೇಕು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.