Site icon Vistara News

IND vs ENG 2nd Test: ತಿರುಗೇಟು ನೀಡುತ್ತಿರುವ ಇಂಗ್ಲೆಂಡ್​; ಗೆಲುವಿಗೆ ಬೇಕು 332 ರನ್​

Zak Crawley lofts over the straight boundary for six

ವಿಶಾಖಪಟ್ಟಣಂ: ದ್ವಿತೀಯ ಟೆಸ್ಟ್​ನ(IND vs ENG 2nd Test) ಮೊದಲ ಇನಿಂಗ್ಸ್​ನಲ್ಲಿ ಹಿನ್ನಡೆ ಅನುಭವಿಸಿದ್ದ ಇಂಗ್ಲೆಂಡ್​ ತಂಡ ದ್ವಿತೀಯ ಇನಿಂಗ್ಸ್​ನಲ್ಲಿ ತಿರುಗೇಟು ನೀಡುವ ಮುನ್ಸೂಚನೆ ನೀಡಿದೆ. ಭಾರತ ನೀಡಿದ 399 ರನ್​ಗಳ ಗುರಿ ಬೆನ್ನಟ್ಟುತ್ತಿರುವ ಇಂಗ್ಲೆಂಡ್​ ಮೂರನೇ ದಿನದಾಟದ ಮುಕ್ತಾಯಕ್ಕೆ 1 ವಿಕೆಟ್​ ನಷ್ಟಕ್ಕೆ 67 ರನ್​ ಗಳಿಸಿದೆ. ಇನ್ನೂ 332 ರನ್​ಗಳ ಹಿನ್ನಡೆಯಲ್ಲಿದೆ. 2 ದಿನಗಳ ಆಟ ಬಾಕಿ ಇದೆ.

ವಿಕೆಟ್​ ನಷ್ಟವಿಲ್ಲದೆ 28 ರನ್ ಗಳಿಸಿ ದ್ವಿತೀಯ ದಿನದಾಟ ಮುಗಿಸಿದ್ದ ಭಾರತ, ಮೂರನೇ ದಿನವಾದ ಭಾನುವಾರ ಬ್ಯಾಟಿಂಗ್‌ ಮುಂದುವರಿಸಿ 255ಕ್ಕೆ ಆಲೌಟ್‌ ಆಯಿತು. ಭಾರತ ಪರ ಶುಭಮನ್​ ಗಿಲ್​ ಶತಕ ಬಾರಿಸಿ ಸಂಭ್ರಮಿಸಿದರು. 399 ರನ್​ಗಳ ಗೆಲುವಿನ ಗುರಿ ಬೆನ್ನಟ್ಟಿರುವ ಇಂಗ್ಲೆಂಡ್​ ಒಂದು ವಿಕೆಟ್​ ಕಳೆದುಕೊಂಡರೂ ಉತ್ತಮ ರನ್​ ಗಳಿಸಿದೆ. ಜಾಕ್​ ಕ್ರಾಲಿ(29) ಮತ್ತು ನೇಟ್​ ವಾಚ್​ಮನ್​ ಆಗಿ ಆಡಲಿಳಿದ 19 ವರ್ಷದ ಸ್ಪಿನ್ನರ್​ ರೆಹಾನ್ ಅಹ್ಮದ್ 9 ರನ್​ ಬಾರಿಸಿ ಬ್ಯಾಟಿಂಗ್​ ಕಾಯ್ದುಕೊಂಡಿದ್ದಾರೆ. ನಾಲ್ಕನೇ ದಿನದಾಟದಲ್ಲಿ ಭಾರತೀಯ ಬೌಲರ್​ಗಳು ಹಿಡಿತ ಸಾಧಿಸದೇ ಹೋದರೆ ಮೊದಲ ಟೆಸ್ಟ್​ನಂತೆ ಈ ಪಂದ್ಯಲ್ಲಿಯೂ ಸೋಲು ಕಟ್ಟಿಟ್ಟ ಬುತ್ತಿ ಎನ್ನಲಡ್ಡಿಯಿಲ್ಲ. ಹೀಗಾಗಿ ಘಾತಕ ಸ್ಪೆಲ್​ ನಡೆಸಿ ಯಾರನ್ನೂ ಹೆಚ್ಚು ಹೊತ್ತು ಕ್ರೀಸ್​ ಆಕಮಿಸದಂತೆ ನೋಡಿಕೊಳ್ಳಬೇಕು. ಇಲ್ಲವಾದ

ಗಿಲ್​ ಶತಕ ಸಂಭ್ರಮ


ಕಳೆದ 11 ಇನಿಂಗ್ಸ್​ನಲ್ಲಿ ಬ್ಯಾಟಿಂಗ್​ ವೈಫಲ್ಯ ಕಂಡು ಭಾರೀ ಟೀಕೆಗೆ ಗುರಿಯಾಗಿದ್ದ ಶುಭಮನ್​ ಗಿಲ್​ ಅವರು ದ್ವಿತೀಯ ಟೆಸ್ಟ್​ನಲ್ಲಿ ಶತಕ ಬಾರಿಸುವ ಮೂಲಕ ಮೂಲಕ ಬ್ಯಾಟಿಂಗ್​ ಫಾರ್ಮ್​ಗೆ ಮರಳಿದ್ದಾರೆ. ಜತೆಗೆ ಎಲ್ಲ ಟೀಕೆಗೂ ಈ ಶತಕದ ಮೂಲಕ ಉತ್ತರ ನೀಡಿದ್ದಾರೆ. ಡಾ.ವೈ.ಎಸ್. ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಟೆಸ್ಟ್(India vs England 2nd Test)​ ಪಂದ್ಯದ ಮೂರನೇ ದಿನದಾಟದಲ್ಲಿ ಶುಭಮನ್​ ಗಿಲ್​ ಅವರು 147 ಎಸೆತ ಎದುರಿಸಿ 11 ಬೌಂಡರಿ ಮತ್ತು 2 ಸಿಕ್ಸರ್​ ನೆರವಿನಿಂದ 104 ರನ್​ ಬಾರಿಸಿದರು. ಗಿಲ್​ ಅವರ ಈ ಶತಕದ ಆಟದ ನೆರವಿನಿಂದ ಭಾರತ ದ್ವಿತೀಯ ಇನಿಂಗ್ಸ್​ನಲ್ಲಿ ಉತ್ತಮ ರನ್​ ಗಳಿಸಲು ಸಾಧ್ಯವಾಯಿತು.

ದ್ವಿತೀಯ ದಿನದಾಟದ ಅತ್ಯಂಕ್ಕೆ 15 ರನ್​ ಗಳಿಸಿದ್ದ ಜೈಸ್ವಾಲ್​ ಮೂರನೇ ದಿನದಾಟದಲ್ಲಿ 2 ರನ್​ ಬಾರಿಸಿ ವಿಕೆಟ್​ ಕೈಚೆಲ್ಲಿದರು. ​13 ರನ್​ ಬಾರಿಸಿದ್ದ ರೋಹಿತ್ ಈ ಮೊತಕ್ಕೆ ಆಟ ಮುಗಿಸಿದರು. 30 ರನ್​ಗೆ 2 ವಿಕೆಟ್​ ಕಳೆದುಕೊಂಡ ಆಘಾತ ಎದುರಿಸಿದ ತಂಡಕ್ಕೆ ಮೂರನೇ ಕ್ರಮಾಂಕದಲ್ಲಿ ಆಡಲಿಳಿದ ಶುಭಮನ್​ ಗಿಲ್​ ಮತ್ತು ಅಕ್ಷರ್​ ಪಟೇಲ್​ ಆಸರೆಯಾದರು. 84 ಎಸೆತ ಎದುರಿಸಿದ ಅಕ್ಷರ್​ 45 ರನ್​ ಬಾರಿಸಿ ಕೇವಲ 5 ರನ್​ ಅಂತರದಿಂದ ಅರ್ಧಶತಕದಿಂದ ವಂಚಿತರಾದರು. ಉಳಿದಂತೆ ಯಾವುದೇ ಬ್ಯಾಟರ್​ಗಳು ಕೂಡ ಹೆಚ್ಚು ಹೊತ್ತು ಕ್ರೀಸ್​ ಆಕ್ರಮಿಸುವಲ್ಲಿ ಯಶಸ್ಸು ಕಾಣಲಿಲ್ಲ.

ಇದನ್ನೂ ಓದಿ IND vs ENG: ಉಳಿದ ಮೂರು ಟೆಸ್ಟ್ ಪಂದ್ಯಗಳಿಗೂ ಕೊಹ್ಲಿ, ಜಡೇಜಾ, ಶಮಿ ಅಲಭ್ಯ!

ಶ್ರೇಯಸ್​ ಅಯ್ಯರ್​, ರಜತ್​ ಪಾಟಿದಾರ್​, ಮತ್ತು ಶ್ರೀಕರ್​ ಭರತ್​ ದ್ವಿತೀಯ ಇನಿಂಗ್ಸ್​ನಲ್ಲಿಯೂ ಕಳಪೆ ಬ್ಯಾಟಿಂಗ್​ ಪ್ರದರ್ಶನ ತೋರಿದರು. ಅಯ್ಯರ್​ 29 ರನ್​ ಬಾರಿಸಿದರೆ, ಪಾಟಿದಾರ್​ ಮತ್ತು ಭರತ್​ ಕ್ರಮವಾಗಿ 9 ಮತ್ತು 6 ರನ್ ಬಾರಿಸಿದರು. ಅಂತಿಮ ಹಂತದಲ್ಲಿ ಸ್ಪಿನ್ ಆಲ್​ರೌಂಡರ್​ ಅಶ್ವಿನ್​ ಅವರು 29 ರನ್​ ಬಾರಿಸಿ ತಂಡದ ಮೊತ್ತವನ್ನು 250ರ ಗಡಿ ದಾಟುವಂತೆ ಮಾಡಿದರು. ಇವರ ವಿಕೆಟ್​ ಪತನಗೊಳ್ಳುತ್ತಿದ್ದಂತೆ ಭಾರತದ ದ್ವಿತೀಯ ಇನಿಂಗ್ಸ್​ ಕೂಡ ಅಂತ್ಯ ಕಂಡಿತು. ಜಸ್​ಪ್ರೀತ್ ಬುಮ್ರಾ 26 ಎಸೆತ ಎದುರಿಸಿ ನಿಂತರೂ ಕೂಡ ಇವರಿಂದ ಖಾತೆತೆರೆಯಲು ಸಾಧ್ಯವಾಗಲಿಲ್ಲ. ಶೂನ್ಯಕ್ಕೆ ಔಟಾದರು. ಬಳಿಕ ಬಂದ ಕುಲ್​ದೀಪ್​ ಯಾದವ್​ ಕೂಡ ಸೊನ್ನೆ ಸುತ್ತಿದರು.

ಇಂಗ್ಲೆಂಡ್​ ಪರ ಟಾಮ್​ ಹಾರ್ಟ್ಲಿ 77 ರನ್​ ವೆಚ್ಚದಲ್ಲಿ 4 ವಿಕೆಟ್​ ಕಿತ್ತರು. ಉಳಿದಂತೆ ರೆಹಾನ್​ ಅಹ್ಮದ್ 3 ಮತ್ತು ಹಿರಿಯ ವೇಗಿ ಜೇಮ್ಸ್​ ಆ್ಯಂಡರ್ಸನ್​ 2 ವಿಕೆಟ್​ ಪಡೆದರು. ಭಾರತ ಪರ ದ್ವಿತೀಯ ಇನಿಂಗ್ಸ್​ ಬೌಲಿಂಗ್​ ವೇಳೆ ಅಶ್ವಿನ್​ 1 ವಿಕೆಟ್​ ಪಡೆದಿದ್ದಾರೆ. ಮೊದಲ ಇನಿಂಗ್ಸ್​ನಲ್ಲಿ ಅವರು ವಿಕೆಟ್​ ಲೆಸ್​ ಎನಿಸಿಕೊಂಡಿದ್ದರು.

Exit mobile version