Site icon Vistara News

IND vs PAK : ಭಾರತ ಪರ ಬೆಟ್ಟಿಂಗ್ ಕಟ್ಟಿ 5.4 ಕೋಟಿ ರೂಪಾಯಿ ಗೆದ್ದ ಕೆನಡಾದ ರ್ಯಾಪರ್ ಡ್ರೇಕ್!

IND vs PAK

ಬೆಂಗಳೂರು: ಟಿ20 ವಿಶ್ವ ಕಪ್​ನಲ್ಲಿ (T20 World Cup) ಭಾರತ ತಂಡ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ (IND vs PAK) ವಿರುದ್ಧ 6 ರನ್​ಗಳ ವಿಜಯ ದಾಖಲಿಸಿದೆ. ಈ ಮೂಲಕ ನೆರೆಯ ದೇಶದ ವಿರುದ್ಧದ ವಿಶ್ವ ಕಪ್ ಪ್ರಾಬಲ್ಯವನ್ನು ಮುಂದುವರಿಸಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿದ ಭಾರತ 18.3 ಓವರ್​ಗಳಲ್ಲಿ 119 ರನ್​ಗಳಿಗೆ ಆಲ್​ಔಟ್ ಆಯಿತು. ಈ ವೇಳೆ ಪಾಕ್(Pakistan Cricket Team)​ ಗೆಲ್ಲುವುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಭಾರತದ (India Cricket Team) ಬೌಲರ್​ಗಳು ತನ್ನ ಪ್ರಭಾವಿ ಸ್ಪೆಲ್​ಗಳ ಮೂಲಕ ಪಾಕಿಸ್ತಾನ ತಂಡವನ್ನು 113 ರನ್​ಗಳಿಗೆ ಕಟ್ಟಿ ಹಾಕಿತು. ಹೀಗಅಗಿ ಭಾರತ ತಂಡದ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಖುಷಿಯಾಗಿದೆ. ಇದೇ ವೇಳೆ ಕೆನಡಾದ ರ್ಯಾಪರ್​ ಡ್ರೇಕ್​ಗೂ ಸಾಕಷ್ಟು ಖುಷಿ ಸಿಕ್ಕಿದೆ. ಹೇಗೆಂದರೆ ಅವರು ಭಾರತ ಪರ 5.4 ಕೋಟಿ ರೂಪಾಯಿ ಬೆಟ್​ ಕಟ್ಟಿದ್ದರು. ಇದೀಗ ಅವರಿಗೆ ಅದರ ಎರಡು ಪಟ್ಟು ಹಣ ಸಿಕ್ಕಿದೆ.

ಭಾರತ ತಂಡ ಪಾಕಿಸ್ತಾನವನ್ನು ಸೋಲಿಸಿಯೇ ಸೋಲಿಸುತ್ತದೆ ಎಂಬ ವಿಶ್ವಾಸದಲ್ಲಿ ಕೆನಡಾದ ರ್ಯಾಪರ್ ಆಬ್ರೆ ಡ್ರೇಕ್ ಗ್ರಹಾಂ ಟೀಮ್ ಇಂಡಿಯಾ ಪರ 5 ಕೋಟಿ ರೂಪಾಯಿ ಬೆಟ್​ ಕಟ್ಟಿದ್ದರು. ಟಿ 20 ವಿಶ್ವಕಪ್ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನ ಒಂಬತ್ತನೇ ಬಾರಿಗೆ ಮುಖಾಮುಖಿಯಾಗಿದ್ದು ಎಂಟು ಸಲ ಭಾರತವೇ ಗೆದ್ದಿದೆ. ಹೀಗಾಗಿ ಅವರು ಸಹಜವಾಗಿ ಭಾರತ ಪರವೇ ಬೆಟ್ಟಿಂಗ್​ ಕಟ್ಟಿದ್ದಾರೆ. ಇನ್ನು 2021ರ ಆವೃತ್ತಿಯಲ್ಲಿ ಪಾಕಿಸ್ತಾನ ತಂಡ ಗೆಲುವು ಸಾಧಿಸಿದೆ. ಇದು ಆ ತಂಡಕ್ಕೆ ವಿಶ್ವ ಕಪ್​ನಲ್ಲಿ ಏಕೈಕ ಗೆಲುವು.

ಟಿ 20 ವಿಶ್ವಕಪ್ ಇತಿಹಾಸದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಪ್ರಾಬಲ್ಯ ಹೊಂದಿರುವ ಕಾರಣ ಪಂದ್ಯವನ್ನು ಗೆಲ್ಲುವ ಪ್ರಬಲ ನೆಚ್ಚಿನ ತಂಡವೆಂದು ಬೆಟ್ಟಿಂಗ್​ ಆ್ಯಪ್​ಗಳ ಪರಿಗಣಿಸಿದ್ದವು. ಮೆನ್ ಇನ್ ಗ್ರೀನ್ ವಿರುದ್ಧದ ಮೆನ್ ಇನ್ ಬ್ಲೂ ಗಮನಾರ್ಹ ಟ್ರ್ಯಾಕ್ ದಾಖಲೆಯನ್ನು ಗಮನದಲ್ಲಿಟ್ಟುಕೊಂಡು, ಡ್ರೇಕ್ ನ್ಯೂಯಾರ್ಕ್​​ನಲ್ಲಿ ನಡೆದ ಬಹುನಿರೀಕ್ಷಿತ ಮುಖಾಮುಖಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ತಂಡದ ಮೇಲೆ ಪಣತೊಡಲು ನಿರ್ಧರಿಸಿದ್ದರು.

ಇದನ್ನೂ ಓದಿ: IND vs PAK : ಪಾಕಿಸ್ತಾನದ ಆಟಗಾರನಿಗೆ ಕಣ್ಣೀರು ಹಾಕಿಸಿದ ಭಾರತ ತಂಡ!

ಡ್ರೇಕ್ ಕ್ರಿಕೆಟ್ ಬೆಟ್ಟಿಂಗ್ ಮಾಡುತ್ತಿರುವುದು ಇದೇ ಮೊದಲಲ್ಲ. ಐಪಿಎಲ್ 2024 ರ ಫೈನಲ್​​ಗೆ ಮುಂಚಿತವಾಗಿ, ಕೆನಡಾದ ರ್ಯಾಪರ್ ಕೋಲ್ಕತಾ ನೈಟ್ ರೈಡರ್ಸ್​ ಪರ ಸನ್​​​ರೈಸರ್ಸ್​ ಹೈದರಾಬಾದ್ ಚಾಂಪಿಯನ್ ಆಗಿ ಹೊರಹೊಮ್ಮುತ್ತದೆ 2 ಕೋಟಿ ರೂ. ಕಟ್ಟಿದ್ದರು. ಆದರೆ ಫಲಿತಾಂಶ ಅವರಿಗೆ ಪೂರಕವಾಗಿ ಬರಲಿಲ್ಲ. ಶ್ರೇಯಸ್ ಅಯ್ಯರ್ ನೇತೃತ್ವದ ಕೆಕೆಆರ್ ತಂಡವು ಪ್ಯಾಟ್ ಕಮಿನ್ಸ್ ಮುಂದಾಳತ್ವದ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿ ಮೂರನೇ ಬಾರಿಗೆ ಐಪಿಎಲ್ ಪ್ರಶಸ್ತಿ ಗೆದ್ದುಕೊಂಡಿತ್ತು. ಡ್ರೇಕ್ ಹಣ ಕಳೆದುಕೊಂಡಿದ್ದರು.

ಪಾಕಿಸ್ತಾನ ವಿರುದ್ಧ ಬುಮ್ರಾ ಭರ್ಜರಿ ಪ್ರದರ್ಶನ

ಜಸ್ಪ್ರೀತ್ ಬುಮ್ರಾ ಭಾರತ ತಂಡಕ್ಕೆ ರಕ್ಷಕನಂತೆ ಆಡಿದರು. ಅವರು ಕೆಲವು ನಿರ್ಣಾಯಕ ವಿಕೆಟ್​ಗಳನ್ನು ಗಳಿಸಿದರು. ಇನ್ನಿಂಗ್ಸ್​ನ 19 ನೇ ಓವರ್​ನಲ್ಲಿ ಒಂದು ವಿಕೆಟ್ ಪಡೆದರು. ಅವರು ತಂಡಕ್ಕೆ ಅಗತ್ಯವಿದ್ದಾಗ ನಿಖರವಾಗಿ ಪ್ರದರ್ಶನ ನೀಡಿದರು ಮತ್ತು ಪಾಕಿಸ್ತಾನ ವಿರುದ್ಧದ ಸೋಲಿನಿಂದ ಭಾರತವನ್ನು ಕಾಪಾಡಿದರು.

120 ರನ್​ಗಳ ಗುರಿ ಬೆನ್ನತ್ತಿದ ಪಾಕ್​​ ಹೀನಾಯ ಸೋಲಿಗೆ ಒಳಗಾಯಿತು. ಇದೇ ವೇಳೆ ಮೆನ್ ಇನ್ ಬ್ಲೂ ನಿಜವಾದ ವಿಜೇತರಂತೆ ಆಡಿತು. ಟಿ 20 ಐ ಇತಿಹಾಸದಲ್ಲಿ ಅತ್ಯಂತ ಕಡಿಮೆ ಸ್ಕೋರ್ ಅನ್ನು ರಕ್ಷಿಸಿತು. ಜಸ್ಪ್ರೀತ್ ಬುಮ್ರಾ ನಿಗದಿತ 4 ಓವರ್ಗಳಲ್ಲಿ 3.50 ಎಕಾನಮಿಯೊಂದಿಗೆ 3 ವಿಕೆಟ್ ಪಡೆದರು. ಆರಂಭಿಕ ವೇಗಿ ಭಾರತ ತಂಡವನ್ನು ನಿರಾಶಾದಾಯಕ ಸೋಲಿನಿಂದ ರಕ್ಷಿಸಿದರು. To Beat Pakistan

Exit mobile version