ಬೆಂಗಳೂರು: ಸಾಂಪ್ರದಾಯಿಕ ಪ್ರತಿಸ್ಪರ್ಧಿ ಪಾಕಿಸ್ತಾನ ವಿರುದ್ಧದ ಟಿ20 ವಿಶ್ವ ಕಪ್ ಲೀಗ್ ಪಂದ್ಯದಲ್ಲಿ ಭಾರತ ತಂಡ (IND vs PAK) ಜಯ ಸಾಧಿಸಿದೆ. ಈ ಮೂಲಕ ಭಾರತ ತಂಡ ಹಾಲಿ ವಿಶ್ವ ಕಪ್ನಲ್ಲಿ ಎರಡನೇ ವಿಜಯ ದಾಖಲಿದೆ. ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡ ಐರ್ಲೆಂಡ್ ವಿರುದ್ಧ ಗೆಲುವು ದಾಖಲಿಸಿತ್ತು. ಇದೀಗ ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ಪಾಕ್ ತಂಡವನ್ನು ಮಣಿಸಿದೆ. ಪ್ರಶಸ್ತಿ ಕಡೆಗೆ ಮುನ್ನುಗ್ಗುವ ಯೋಚನೆಯಲ್ಲಿರುವ ಭಾರತ ತಂಡಕ್ಕೆ ಈ ವಿಜಯದಿಂದ ಭಾರೀ ವಿಶ್ವಾಸ ದೊರಕಿದೆ. ಇದು ಭಾರತ ತಂಡಕ್ಕೆ ಟಿ20 ವಿಶ್ವ ಕಪ್ನಲ್ಲಿ ಪಾಕಿಸ್ತಾನ ವಿರುದ್ಧ ದೊರೆಯುತ್ತಿರುವ 8ನೇ ವಿಜಯ. ಒಂದೇ ಬಾರಿ ಪಾಕಿಸ್ತಾನ ಗೆಲುವು ದಾಖಲಿಸಿದೆ. ಅಲ್ಲದೆ 2023ರಲ್ಲಿ ಭಾರತದಲ್ಲಿ ನಡೆದಿದ್ದ ಏಕ ದಿನ ವಿಶ್ವ ಕಪ್ನಲ್ಲಿಯೂ ಭಾರತ ತಂಡ ಪಾಕಿಸ್ತಾನ ತಂಡವನ್ನು ಸೋಲಿಸಿತ್ತು.
ಇಲ್ಲಿನ ನಸ್ಸೌ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 18.3 ಓವರ್ಗಳಲ್ಲಿ 119 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ ಭಾರತದ ಭರ್ಜರಿ ಬೌಲಿಂಗ್ಗೆ ಹೆದರಿ.. ತನ್ನ ಪಾಲಿನ 20 ಓವರ್ಗಳಲ್ಲಿ 7 ವಿಕೆಟ್ಗೆ 113 ರನ್ ಬಾರಿಸಿ ಸೋಲೊಪ್ಪಿಕೊಂಡಿತು. ಬೌಲಿಂಗ್ಗೆ ನೆರವಾಗುತ್ತಿದ್ದ ಪಿಚ್ನಲ್ಲಿ ಭಾರತೀಯ ಬೌಲರ್ಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದರು. ಬ್ಯಾಟರ್ಗಳು ಪೇರಿಸಿದ್ದ 113 ರನ್ಗಳ ಮೊತ್ತವನ್ನು ಕಾಪಾಡಿದರು.
2007ರ ಟಿ20 ವಿಶ್ವಕಪ್ನ ನಂತರದಿಂದದ 8ನೇ ಬಾರಿಗೆ ಉಭಯ ತಂಡಗಳು ಮುಖಾಮುಖಿಯಾಗುತ್ತಿವೆ. ವಿಶ್ವಕಪ್ ಈ ಹಿಂದಿನ 7 ಪಂದ್ಯಗಳಲ್ಲಿ ಭಾರತ ಮೇಲುಗೈ ಸಾಧಿಸಿದ್ದರೆ ಪಾಕಿಸ್ತಾನ ಒಂದು ಬಾರಿ ಗೆದ್ದಿದೆ. 2007ರ ಉದ್ಘಾಟನಾ ಆವೃತ್ತಿಯಲ್ಲಿ 2ರಲ್ಲಿ ಬಾರಿ ಭಾರತ ಗೆದ್ದಿದೆ. 2021ರಲ್ಲಿ ಭಾರತದ ವಿರುದ್ಧ ಪಾಕ್ ವಿಜಯ ಕಂಡುಕೊಂಡಿತ್ತು
2007ರ ಟಿ20 ವಿಶ್ವಕಪ್ನ ನಂತರದಿಮದ 8ನೇ ಬಾರಿಗೆ ಉಭಯ ತಂಡಗಳು ಮುಖಾಮುಖಿಯಾಗುತ್ತಿವೆ. ವಿಶ್ವಕಪ್ ಈ ಹಿಂದಿನ 7 ಪಂದ್ಯಗಳಲ್ಲಿ ಭಾರತ ಮೇಲುಗೈ ಸಾಧಿಸಿದ್ದರೆ ಪಾಕಿಸ್ತಾನ ಒಂದು ಬಾರಿ ಗೆದ್ದಿದೆ. 2007ರ ಉದ್ಘಾಟನಾ ಆವೃತ್ತಿಯಲ್ಲಿ 2ರಲ್ಲಿ ಬಾರಿ ಭಾರತ ಗೆದ್ದಿದೆ. 2021ರಲ್ಲಿ ಭಾರತದ ವಿರುದ್ಧ ಪಾಕ್ ವಿಜಯ ಕಂಡುಕೊಂಡಿತ್ತು.
ಹಿಂದಿನ ಬಾರಿ ಕೊಹ್ಲಿ ಗೆಲ್ಲಿಸಿದ್ದರು
ಕಳೆದ ವರ್ಷ ನಡೆದ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ, ಪಾಕ್ ವಿರುದ್ಧ ರೋಚಕ ಗೆಲುವು ಸಾಧಿಸಿತ್ತು. ಪವರ್ಪ್ಲೇನಲ್ಲಿ 32ಕ್ಕೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ವಿರಾಟ್ ಕೊಹ್ಲಿ ಏಕಾಂಗಿ ಹೋರಾಟ ನಡೆಸಿ ರೋಚಕ ಗೆಲುವು ತಂದಿದ್ದರು. ಕೊಹ್ಲಿ 52 ಎಸೆತಗಳಲ್ಲಿ ಅಜೇಯ 82 ರನ್ ಚಚ್ಚಿ ಅವಿಸ್ಮರಣೀಯ ಇನಿಂಗ್ಸ್ ಆಡಿದ್ದರು.
ವಿಶ್ವ ಕಪ್ನಲ್ಲಿ ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದ ಐರ್ಲೆಂಡ್ ಎದುರಿನ ತನ್ನ ಮೊದಲ ಪಂದ್ಯದಲ್ಲಿ ಭಾರತ 8 ವಿಕೆಟ್ಗಳ ಅಮೋಘ ಜಯ ಸಾಧಿಸಿದೆ. ಇದೀಗ ಪಾಕಿಸ್ತಾನ ವಿರುದ್ಧಗೂ ಗೆಲುವು ಸಾಧಿಸಿ ಎ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದೆ.
ಇದನ್ನೂ ಓದಿ: IND vs PAK : ವಿರಾಟ್ ಕೊಹ್ಲಿಯಿಂದ ಆಟೋಗ್ರಾಫ್ ಪಡೆದುಕೊಂಡ ಕ್ರಿಸ್ ಗೇಲ್! ಇಲ್ಲಿದೆ ವಿಡಿಯೊ
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಮಳೆಯಿಂದಾಗಿ ಅರ್ಧ ಗಂಟೆ ತಡವಾಗಿ ಆರಂಭವಾಗಿದೆ. ಸ್ಥಳೀಯ ಸಮಯ ಬೆಳಗ್ಗೆ 10 ಗಂಟೆಗೆ ಹಾಗೂ ಭಾರತದ ಸಮಯ ಸಂಜೆ 7.30ಕ್ಕೆ ನಡೆಯಬೇಕಾಗಿದ್ದ ಟಾಸ್ ಮಳೆಯಿಂದಾಗಿ ತಡವಾಯಿತು. ಪಂದ್ಯ ಆರಂಭಗೊಂಡು ಒಂದು ಓವರ್ ಆದ ಬಳಿಕ ಮತ್ತೆ ಮಳೆ ಸುರಿಯಿತು. ಕೊನೆಗೂ ಪಂದ್ಯ ನಡೆದು ಭಾರತಕ್ಕೆ ಜಯ ಸಿಕ್ಕಿತು.