Site icon Vistara News

IND VS PAK : ಭಾರತ- ಪಾಕಿಸ್ತಾನ ಪಂದ್ಯ ಅರ್ಧ ಗಂಟೆ ತಡ; ಟಾಸ್ ಗೆದ್ದ ಪಾಕ್​ನಿಂದ ಫೀಲ್ಡಿಂಗ್ ಆಯ್ಕೆ

Ind vs pak

ನ್ಯೂಯಾರ್ಕ್​: ಟಿ 20 ವಿಶ್ವಕಪ್​ ಪಂದ್ಯಕ್ಕಾಗಿ ನಿರ್ಮಿಸಲಾಗಿರುವ ನಸ್ಸೌ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಮಳೆಯಿಂದಾಗಿ ಅರ್ಧ ಗಂಟೆ ತಡವಾಗಿ ಆರಂಭವಾಗಿದೆ. ಸ್ಥಳೀಯ ಸಮಯ ಬೆಳಗ್ಗೆ 10 ಗಂಟೆಗೆ ಹಾಗೂ ಭಾರತದ ಸಮಯ ಸಂಜೆ 7.30ಕ್ಕೆ ನಡೆಯಬೇಕಾಗಿದ್ದ ಟಾಸ್​ ಮಳೆಯಿಂದಾಗಿ ತಡವಾಯಿತು. 8 ಗಂಟೆಗೆ ಟಾಸ್​ ನಡೆದು ಟಾಸ್ ಗೆದ್ದ ಪಾಕಿಸ್ತಾನ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. 8.30ಕ್ಕೆ ಪಂದ್ಯ ಆರಂಭವಾಗಲಿದೆ.

ನ್ಯೂಯಾರ್ಕ್​ನಲ್ಲಿ ಸಂಜೆಯ ವೇಳೆಗೆ ಮಳೆ ಶುರುವಾಗಿತ್ತು. ಹೀಗಾಗಿ ಟಾಸ್ ನಡೆಸಲು ಆಗಲಿಲ್ಲ. ಸ್ವಲ್ಪ ಹೊತ್ತಿನ ಬಳಿಕ ಮಳೆ ನಿಂತಿದ್ದು ಅಂಪೈರ್​ಗಳು ಅರ್ಧ ಗಂಟೆ ತಡವಾಗಿ ಟಾಸ್​ ನಡೆಸಿದರು. ಪಾಕ್​ ನಾಯಕ ಬಾಬರ್​ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು .

ವಿಶ್ವ ಕಪ್​ನಲ್ಲಿ ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. ಐರ್ಲೆಂಡ್ ಎದುರಿನ ತನ್ನ ಮೊದಲ ಪಂದ್ಯದಲ್ಲಿ ಭಾರತ 8 ವಿಕೆಟ್​ಗಳ ಅಮೋಘ ಜಯ ಸಾಧಿಸಿದೆ. ಆದರೆ, ಪಾಕಿಸ್ತಾನ ತಂಡವು ತನ್ನ ಆರಂಭಿಕ ಪಂದ್ಯದಲ್ಲೇ ಕ್ರಿಕೆಟ್ ಶಿಶು ಅಮೆರಿಕ ವಿರುದ್ಧ ಶರಣಾಗಿತ್ತು. ಹೀಗಾಗಿ ಪಾಕಿಸ್ತಾನ ಹೆಚ್ಚು ಒತ್ತಡದಲ್ಲಿದೆ.

2007ರ ಟಿ20 ವಿಶ್ವಕಪ್​ನ ನಂತರದಿಮದ 8ನೇ ಬಾರಿಗೆ ಉಭಯ ತಂಡಗಳು ಮುಖಾಮುಖಿಯಾಗುತ್ತಿವೆ. ವಿಶ್ವಕಪ್ ಈ ಹಿಂದಿನ 7 ಪಂದ್ಯಗಳಲ್ಲಿ ಭಾರತ ಮೇಲುಗೈ ಸಾಧಿಸಿದ್ದರೆ ಪಾಕಿಸ್ತಾನ ಒಂದು ಬಾರಿ ಗೆದ್ದಿದೆ. 2007ರ ಉದ್ಘಾಟನಾ ಆವೃತ್ತಿಯಲ್ಲಿ 2ರಲ್ಲಿ ಬಾರಿ ಭಾರತ ಗೆದ್ದಿದೆ. 2021ರಲ್ಲಿ ಭಾರತದ ವಿರುದ್ಧ ಪಾಕ್ ವಿಜಯ ಕಂಡುಕೊಂಡಿತ್ತು.

ಇದನ್ನೂ ಓದಿ: IND vs PAK : ಭಾರತ ತಂಡವನ್ನು ಪಾಕಿಸ್ತಾನಕ್ಕೆ ಹೋಗಲು ಸಮ್ಮಿಶ್ರ ಸರ್ಕಾರವೂ ಬಿಡುವುದಿಲ್ಲ

ಕಳೆದ ವರ್ಷ ನಡೆದ ಟಿ20 ವಿಶ್ವಕಪ್​​ನಲ್ಲಿ ಟೀಮ್ ಇಂಡಿಯಾ, ಪಾಕ್ ವಿರುದ್ಧ ರೋಚಕ ಗೆಲುವು ಸಾಧಿಸಿತ್ತು. ಪವರ್​​​ಪ್ಲೇನಲ್ಲಿ 32ಕ್ಕೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ವಿರಾಟ್ ಕೊಹ್ಲಿ ಏಕಾಂಗಿ ಹೋರಾಟ ನಡೆಸಿ ರೋಚಕ ಗೆಲುವು ತಂದಿದ್ದರು. ಕೊಹ್ಲಿ 52 ಎಸೆತಗಳಲ್ಲಿ ಅಜೇಯ 82 ರನ್ ಚಚ್ಚಿ ಅವಿಸ್ಮರಣೀಯ ಇನಿಂಗ್ಸ್ ಆಡಿದ್ದರು.

ಇತ್ತಂಡಗಳ ಪ್ಲೇಯಿಂಗ್ ಇಲೆವೆನ್​

ಭಾರತ: ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್​), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.

ಪಾಕಿಸ್ತಾನ : ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಬಾಬರ್ ಅಜಮ್ (ನಾಯಕ), ಉಸ್ಮಾನ್ ಖಾನ್, ಫಖರ್ ಜಮಾನ್, ಶಾದಾಬ್ ಖಾನ್, ಇಫ್ತಿಕರ್ ಅಹ್ಮದ್, ಇಮಾದ್ ವಾಸಿಮ್, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ನಸೀಮ್ ಶಾ, ಮೊಹಮ್ಮದ್ ಅಮೀರ್.

Exit mobile version