Site icon Vistara News

IND vs SA : ಭಾರತ ಮಹಿಳೆಯರ ತಂಡಕ್ಕೆ ಭರ್ಜರಿ 10 ವಿಕೆಟ್​ ಜಯ, ಟಿ20 ಸರಣಿ ಸಮಬಲ

IND vs SA:

ಚೆನ್ನೈ: ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ ಭಾರತ ತಂಡ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ (IND vs SA ) ಟಿ20 ಸರಣಿಯ ಮೂರನೇ ಪಂದ್ಯದಲ್ಲಿ 10 ವಿಕೆಟ್ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ ಟಿ20 ಸರಣಿ ಸಮಬಲ ಸಾಧನೆಯೊಂದಿಗೆ ಮುಕ್ತಾಯಗೊಂಡಿದೆ. ಇದೊಂದೇ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡಕ್ಕೆ ಸಮಾಧಾನದ ವಿಷಯ. ಯಾಕೆಂದರೆ ಆರಂಭದಲ್ಲಿ ನಡೆದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಕ್ಲೀನ್ ಸ್ವೀಪ್​ ಸಾಧನೆ ಮಾಡಿದ್ದರೆ ಏಕೈಕ ಟೆಸ್ಟ್​ ಪಂದ್ಯದಲ್ಲಿ ಭಾರತವೇ ಐತಿಹಾಸಿಕ ಗೆಲುವು ಸಾಧಿಸಿತ್ತು. ಇದೀಗ ಟಿ20 ಸರಣಿ ಸಮಬಲದ ಸಾಧನೆಯೊಂದಿಗೆ ಭಾರತ ತಂಡಕ್ಕೆ ಗೆಲುವು ಸಿಕ್ಕ ಹಾಗೆ ಆಗಿದೆ.

ಇಲ್ಲಿನ ಚೆಪಾಕ್ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ ಭಾರತ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ಬಳಗ 17.1 ಓವರ್​ಗಳಲ್ಲಿ 84 ರನ್​ಗಳಿಗೆ ಆಲ್​ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಭಾರತ ತಂಡ ಇನ್ನೂ 55 ಎಸೆತಗಳು ಬಾಕಿ ಇರುವಂತೆಯೇ ವಿಕೆಟ್ ನಷ್ಟವಿಲ್ಲದೆ 88 ರನ್ ಬಾರಿಸಿ ಗೆಲುವು ಸಾಧಿಸಿತು.

ಇದನ್ನೂ ಓದಿ: Gautam Gambhir: ಭಾರತ ತಂಡಕ್ಕೆ ನೂತನ ಕೋಚ್ ಆಯ್ಕೆ; ಕಾದಿದೆ ಗಂಭೀರ್- ಕೊಹ್ಲಿ ಕೋಳಿ ಜಗಳ? ನೀವೇನಂತೀರಿ?

ಸುಲಭ ಗುರಿ ಬೆನ್ನಟ್ಟಿದ ಭಾರತ ಪರ ಸ್ಮೃತಿ ಮಂಧಾನಾ 40 ಎಸೆತಕ್ಕೆ 54 ರನ್ ಬಾರಿಸಿದರೆ ಶಫಾಲಿ ವರ್ಮ 25 ಎಸೆತಕ್ಕೆ 27 ರನ್ ಬಾರಿಸಿದರು. ಇವರಿಬ್ಬರ ಅಬ್ಬರದ ಆಟಕ್ಕೆ ದಕ್ಷಿಣ ಆಫ್ರಿಕಾದ ಬೌಲರ್​ಗಳು ನಿರುತ್ತರರಾದರು.

ಪೂಜಾಗೆ ನಾಲ್ಕು ವಿಕೆಟ್​

ಮೊದಲು ಬ್ಯಾಟ್​ ಮಾಡಿದ ದಕ್ಷಿಣ ಆಫ್ರಿಕಾ ತಂಡದ ಆಟಗಾರರು ಭಾರತ ಬೌಲರ್​ಗಳ ಪ್ರಖರ ದಾಳಿಗೆ ಮಂಕಾದರು. ವೇಗದ ಬೌಲರ್​ ಪೂಜಾ ವಸ್ತ್ರಾಕರ್​ ತಮ್ಮ ಸ್ಪೆಲ್​ನಲ್ಲಿ 13 ರನ್ ನೀಡಿ 4 ವಿಕೆಟ್​ ಕಬಳಿಸಿ ಮಿಂಚಿದರು. ರಾಧಾ ಯಾದವ್​ 6 ರನ್​ ವೆಚ್ಚದಲ್ಲಿ 3 ವಿಕೆಟ್ ಉರುಳಿಸಿದರು. ದಕ್ಷಿಣ ಆಫ್ರಿಕಾ ಪರ ತಂಜಿಮ್ ಬ್ರಿಟ್ಸ್​ 20 ಬಾರಿಸಿದ್ದೇ ಆ ತಂಡದ ಆಟಗಾರ್ತಿಯ ಗರಿಷ್ಠ ಸ್ಕೋರ್​. ಅನ್ನೇಕಾ ಬಾಷ್​ 14 ಎಸೆತಕ್ಕೆ 17 ರನ್ ಬಾರಿಸಿದರು. ಮರಿಜ್ನೆ ಕಾಪ್ 10 ರನ್ ಕೊಡುಗೆ ಕೊಟ್ಟರೆ ಉಳಿದ ಆಟಗಾರರು ಎರಡಂಕಿ ಮೊತ್ತ ದಾಟಿಲ್ಲ.

Exit mobile version