Site icon Vistara News

IND VS SA : ದಕ್ಷಿಣ ಆಫ್ರಿಕಾ ವಿರುದ್ಧ 3-0 ಕ್ಲೀನ್ ಸ್ವೀಪ್ ಸಾಧನೆ ಮಾಡಿದ ಭಾರತದ ವನಿತೆಯರ ಕ್ರಿಕೆಟ್ ತಂಡ

IND vs SA

ಬೆಂಗಳೂರು: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ (IND VS SA) ಹರ್ಮನ್​ಪ್ರೀತ್ ಕೌರ್ ನೇತೃತ್ವದ ಭಾರತದ ಮಹಿಳೆಯರ ತಂಡ 3-0 ಕ್ಲೀನ್ ಸ್ವೀಪ್​ ಸಾಧನೆ ಮಾಡಿದೆ. ಬೆಂಗಳೂರಿನಲ್ಲಿ ಭಾನುವಾರ ನಡೆದ ಮೂರನೇ ಹಾಗೂ ಕೊನೇ ಪಂದ್ಯದಲ್ಲಿ 6 ವಿಕೆಟ್​ ವಿಜಯ ಸಾಧಿಸಿದ ಭಾರತದ ವನಿತೆಯರು ಅವಿಸ್ಮರಣೀಯ ಸಾಧನೆ ಮಾಡಿದರು. ಸರಣಿಯ ಮೊದಲ ಪಂದ್ಯದಲ್ಲಿ ಭರ್ಜರಿ 143 ರನ್​ಗಳ ಗೆಲುವು ಸಾಧಿಸಿದ್ದ ಮಹಿಳೆಯರು ಎರಡನೇ ಪಂದ್ಯದಲ್ಲಿ 4 ರನ್​ಗಳ ವಿಜಯ ತಮ್ಮದಾಗಿಸಿಕೊಂಡಿದ್ದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೂರು ಪಂದ್ಯಗಳು ಆಯೋಜನೆಗೊಂಡಿದ್ದವು. ಮೂರನೇ ಪಂದ್ಯದಲ್ಲಿ ಆರಂಭಿಕ ಎಡಗೈ ಬ್ಯಾಟರ್​ ಸ್ಮೃತಿ ಮಂಧಾನ ಮತ್ತೊಮ್ಮೆ ಭರ್ಜರಿ ಇನ್ನಿಂಗ್ಸ್ ಕಟ್ಟುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅವರು ಈ ಹಿಂದಿನ ಎರಡೂ ಪಂದ್ಯಗಳಲ್ಲಿ ಶತಕ ಬಾರಿಸಿ ಮಿಂಚಿದ್ದರು. ಮೂರನೇ ಶತಕವನ್ನು 10 ರನ್​ಗಳ ಕೊರತೆಯಿಂದ ಕಳೆದುಕೊಂಡಿದ್ದಾರೆ.ಒಂದು ವೇಳೆ ಶತಕ ಬಾರಿಸಿದ್ದರೆ ಪುರುಷರ ತಂಡದ ವಿರಾಟ್ ಕೊಹ್ಲಿಯ ಸಾಧನೆಯನ್ನು ಸರಿಗಟ್ಟುವ ಅವಕಾಶ ಇತ್ತು. ಅದನ್ನವರು ನಷ್ಟ ಮಾಡಿಕೊಂಡರು.

ಮೊದಲೆರಡು ಪಂದ್ಯಗಳು ಗೆದ್ದ ಕಾರಣ ಸರಣಿ ಭಾರತದ ಕೈವಶವಾಗಿತ್ತು. ಹೀಗಾಗಿಔಪಚಾರಿಕ ಎನಿಸಿದ್ದ ಮೂರನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಸೌತ್ ಆಫ್ರಿಕಾ, ಉತ್ತಮ ಪ್ರದರ್ಶನ ನೀಡುವ ಉದ್ದೇಶ ಹೊಂದಿತ್ತು. ಆದರೆ ಭಾರತೀಯ ಬೌಲರ್​ಗಳು ಅದಕ್ಕೆ ಅವಕಾಶ ನೀಡಲಿಲ್ಲ. ಮೊದಲ ವಿಕೆಟ್​ಗೆ ಶತಕದ ಜೊತೆಯಾಟ ಬಂದರೂ ಉಳಿದ ಬ್ಯಾಟರ್​​ಗಳು ವೈಫಲ್ಯ ಕಂಡರು. ದೀಪ್ತಿ ಶರ್ಮಾ ಮತ್ತು ಅರುಂಧತಿ ರೆಡ್ಡಿ ತಲಾ ಎರಡು ವಿಕೆಟ್​ ಕಬಳಿಸಿ ಎದುರಾಳಿ ತಂಡ ರನ್​ ಗಳಿಕೆಗೆ ಕಡಿವಾಣ ಹಾಕಿದರು. ಪರಿಣಾಮವಾಗಿ ದಕ್ಷಿಣ ಆಫ್ರಿಕಾ 50 ಓವರ್​​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಭಾರತ ಇನ್ನೂ 56 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್​ ನಷ್ಟಕ್ಕೆ 220 ರನ್ ಬಾರಿಸಿ ಗೆಲುವು ಸಾಧಿಸಿತು.

ಸ್ಮೃತಿ ಮಂಧಾನ ಭರ್ಜರಿ ಬ್ಯಾಟಿಂಗ್​

219 ರನ್​ಗಳ ಗುರಿ ಬೆನ್ನಟ್ಟಿದ ಭಾರತ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್​ಗೆ 61 ರನ್​ ಪೇರಿಸಿತು. ಶಫಾಲಿ ವರ್ಮಾ 25 ರನ್​ಗೆ ಔಟಾಗಿ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಬಳಿಕ ಪ್ರಿಯಾ ಪೂನಿಯಾ ಅವರು ಸ್ಮೃತಿ ಮಂಧಾನ ಜೊತೆಗೂಡಿ ಇನಿಂಗ್ಸ್​ ಕಟ್ಟಿದರು. ಈ ಜೋಡಿಯೂ 2ನೇ ವಿಕೆಟ್​​ಗೆ ಅರ್ಧ ಶತಕದ ಜತೆಯಾಟ ನೀಡಿತು.

ಇದನ್ನೂ ಓದಿ:T20 World Cup 2024 : ಅಮೆರಿಕ ವಿರುದ್ಧವೂ ಸೋತ್ರಲ್ಲೋ… ಪಾಕ್​ ಪಾರ್ಲಿಮೆಂಟ್​ನಲ್ಲೂ ವಿಶ್ವ ಕಪ್ ಸೋಲಿನ ಚರ್ಚೆ!

ಕಳೆದ ಎರಡು ಪಂದ್ಯಗಳಲ್ಲಿ ಶತಕ ಸಿಡಿಸಿದ್ದ ಸ್ಮೃತಿ, ಈ ಪಂದ್ಯದಲ್ಲೂ ಶತಕ ಸಿಡಿಸುವ ಭರವಸೆ ಮೂಡಿಸಿದ್ದರು. ಆದರೆ 90 ರನ್ ಗಳಿಸಿದ್ದ ಆತುರ ಮಾಡಿ ವಿಕೆಟ್ ಒಪ್ಪಿಸಿದರು. 83 ಎಸೆತಗಳಲ್ಲಿ 11 ಬೌಂಡರಿ ಸಹಿತ 90 ರನ್ ಗಳಿಸಿ ಮಿಂಚಿದರು. ಸರಣಿಯಯ ಹಿಂದಿನ 2 ಪಂದ್ಯಗಳಲ್ಲಿ ಕ್ರಮವಾಗಿ 117 ಮತ್ತು 135 ರನ್ ಗಳಿಸಿದ್ದರು. ಹರ್ಮನ್​ಪ್ರೀತ್​ ಕೌರ್ಕೂ 42 ರನ್ ಗಳಿಸಿದರು. ಜೆಮಿಮಾ ರೊಡ್ರಿಗಸ್ (19) ಮತ್ತು ರಿಚಾ ಘೋಷ್​ (6) ಗೆಲುವು ತಂದುಕೊಟ್ಟು.

ಭಾರತದ ಮಾರಕ ಬೌಲಿಂಗ್


ಮೊದಲು ಬ್ಯಾಟಿಂಗ್ ಮಾಡಿದ ಸೌತ್ ಆಫ್ರಿಕಾ ಉತ್ತಮ ಆರಂಭ ಪಡೆಯಿತು ನಾಯಕಿ ಲಾರಾ ವೊಲ್ವಾರ್ಡ್ಟ್ ಅರ್ಧಶತಕ ಸಿಡಿಸಿ ಮಿಂಚಿದರು. ತಜ್ಮಿನ್ ಬ್ರಿಟ್ಸ್ ಕೂಡ 38 ರನ್​ಗಳ ಉಪಯುಕ್ತ ಕಾಣಿಕೆ ನೀಡಿದರು. ಹೀಗಾಗಿ 100 ರನ್​ಗಳ ಆರಂಭಿಕ ಜತೆಯಾಟ ಸಿಕ್ಕಿತು. ನಂತರ ಮರಿಜಾನ್ನೆ ಕಪ್ 7, ಆನ್ನೆಕೆ ಬೋಷ್ 5, ಸುನೆ ಲೂಸ್ 13 ರನ್ ಗಳಿಸಿ ವಿಕೆಟ್​ ಒಪ್ಪಿಸಿ ನಿರಾಸೆ ಮೂಡಿಸಿದರು. ಶಂಗಾಸೆ (16) ನಾಡಿನ್ ಡಿ ಕ್ಲರ್ಕ್ (26) ಕೂಡ ಔಟಾದರು. ಭಾರತೀಯ ಬೌಲರ್​ಗಳು ಪ್ರಭಾವ ಬೀರಿದರು. ಮೈಕೆ ಡಿ ರಿಡ್ಡರ್ ಕೊನೆ ಹಂತದಲ್ಲಿ ಅಜೇಯ 26 ರನ್ ಪೇರಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ದೀಪ್ತಿ , ಅರುಂಧತಿ ಜತೆಗೆ ಶ್ರೇಯಾಂಕಾ ಪಾಟೀಲ್, ಪೂಜಾ ವಸ್ತ್ರಾಕರ್ ತಲಾ 1 ವಿಕೆಟ್ ಉರುಳಿಸಿದರು.

Exit mobile version