Site icon Vistara News

Smriti Mandhana: ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಕ್ರಿಕೆಟ್​​ನಲ್ಲಿ 343 ರನ್ ಸಿಡಿಸಿ ದಾಖಲೆ ಬರೆದ ಸ್ಮೃತಿ ಮಂದಾನ

Smriti Mandhana

ಬೆಂಗಳೂರು: ಭಾರತದ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಹಾಗೂ ಎಡಗೈ ಆರಂಭಿಕ ಬ್ಯಾಟರ್​​ ಸ್ಮೃತಿ ಮಂದಾನ ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ (Smriti Mandhana) ಹೊಸ ಸಾಧನೆ ಮಾಡಿದ್ದಾರೆ. ದಕ್ಷಿಣ ಆಫ್ರಿಕಾ ಮಹಿಳಾ ವಿರುದ್ಧದ ಸರಣಿಯ ಮೂರಕ್ಕೆ ಮೂರು ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಅವರು ಹೊಸ ಸಾಧನೆ ಮಾಡಿದ್ದಾರೆ. ಅವರು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟರ್​​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಭಾನುವಾರ (ಜೂನ್ 23) ದಕ್ಷಿಣ ಆಫ್ರಿಕಾ ಮಹಿಳಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಸ್ಮೃತಿ ಮಂದಾನಾ ಬ್ಯಾಟ್ ಮೂಲಕ ಅದ್ಭುತ ಪ್ರದರ್ಶನ ನೀಡಿದ ನಂತರ ಈ ದಾಖಲೆ ನಿರ್ಮಿಸಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉಭಯ ತಂಡಗಳ ನಡುವಿನ ಸರಣಿ ನಡೆಯಿತು. ಸ್ಮೃತಿ ಮಂದಾನ ಬ್ಯಾಟ್​ನೊಂದಿಗೆ ತಮ್ಮ ಅದ್ಭುತ ಫಾರ್ಮ್ ಅನ್ನು ಮುಂದುವರಿಸಿದರು. ಅವರ ಅಬ್ಬರದಿಂದಾಗಿ ಭಾರತ ತಂಡ ಗೆಲುವು ಕೂಡ ಸುಲಭವಾಯಿತು. ಜತೆಗೆ ಅವರು ಕಿರು ಸರಣಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಮಹಿಳಾ ಕ್ರಿಕೆಟರ್ ಎಂಬ ಸಾಧನೆ ಮಾಡಿದರು. ಒಂದು ವೇಳೆ ಶತಕ ಬಾರಿಸಿದ್ದರೆ ಸತತವಾಗಿ ಮೂರು ಶತಕ ಬಾರಿಸಿದ ವಿರಾಟ್​ ಕೊಹ್ಲಿಯ ಸಾಧನೆಯನ್ನೂ ಸರಿಗಟ್ಟುತ್ತಿದ್ದರು.

ಕಳೆದ ಎರಡು ಏಕದಿನ ಪಂದ್ಯಗಳಲ್ಲಿ ಶತಕಗಳನ್ನು ಬಾರಿಸಿದ್ದ ಸ್ಮೃತಿ ಮಧಾನಾ, ತಮ್ಮ ಇನ್ನಿಂಗ್ಸ್ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದ್ದರು. ಹೀಗಾಗಿ ಮತ್ತೊಂದು ಶತಕ ಗಳಿಸುವ ಅಂಚಿನಲ್ಲಿದ್ದರು. ಆದಾಗ್ಯೂ, ಎಡಗೈ ಬ್ಯಾಟರ್​ ಕೇವಲ 10 ರನ್​ಗಳ ಕೊರತೆಯಿಂದ ಶತಕವನ್ನು ಕಳೆದುಕೊಂಡರು.

ಸ್ಮೃತಿ ಮಂದಾನ 83 ಎಸೆತಗಳಲ್ಲಿ 90 ರನ್ ಸಿಡಿಸಿ ಔಟಾದರು. ಅವರು 108 ಕ್ಕೂ ಹೆಚ್ಚು ಸ್ಟ್ರೈಕ್ ರೇಟ್ ನೊಂದಿಗೆ ಬ್ಯಾಟಿಂಗ್ ಮಾಡಿದ್ದಾರೆ. ಅವರ ಇನ್ನಿಂಗ್ಸ್ ನಲ್ಲಿ 11 ಬೌಂಡರಿಗಳಿವೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯವನ್ನು ಗೆಲ್ಲಲು ಮತ್ತು ಎದುರಾಳಿ ತಂಡವನ್ನು ಸರಣಿಯಲ್ಲಿ ವೈಟ್​ವಾಶ್​ ಮಾಡಲು ಅವರು ತಂಡಕ್ಕೆ ಸಹಾಯ ಮಾಡಿದರು.

ಇದನ್ನೂ ಓದಿ: T20 World Cup 2024 : ಇಂಗ್ಲೆಂಡ್ ಪರ ಹ್ಯಾಟ್ರಿಕ್ ಸಾಧನೆ ಮಾಡಿದ ಕ್ರಿಸ್​ ಜೋರ್ಡಾನ್​; ಸಾಧನೆ ವಿವರ ಇಲ್ಲಿದೆ 

ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಸ್ಮೃತಿ 343 ರನ್ ಗಳಿಸಿದ್ದಾರೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸರಣಿಯ ಎರಡನೇ ಪಂದ್ಯದಲ್ಲಿ ಅವರು 136 ರನ್ ಗಳಿಸುವ ಮೂಲಕ ಸರಣಿಯಲ್ಲಿ 114 ಸರಾಸರಿಯನ್ನು ಹೊಂದಿದ್ದರು.

ಶತಕ ಗಳಿಸಲು ಸಾಧ್ಯವಾಗದಿರುವುದು ದುರದೃಷ್ಟಕರ: ಸ್ಮೃತಿ ಮಂದಾನ

ಸರಣಿಶ್ರೇಷ್ಠ ಪ್ರಶಸ್ತಿ ಪಡೆದ ಸ್ಮೃತಿ ಮಂದಾನ ಅವರು ಶತಕ ಕಳೆದುಕೊಂಡಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ. ಆದರೆ ಅವರು ತಮ್ಮ ತಂಡದ ಪ್ರದರ್ಶನದ ಬಗ್ಗೆ ಸಂತೋಷಪಟ್ಟಿದ್ದಾರೆ. ಟಿ 20 ವಿಶ್ವಕಪ್​ಗೆ ಮುಂಚಿತವಾಗಿ ಇದು ಅವರಿಗೆ ಉತ್ತಮ ಆತ್ಮವಿಶ್ವಾಸ ನೀಡಿದೆ.

“ಇಂದು 100 ರನ್ ಗಳಿಸಲು ಸಾಧ್ಯವಾಗದಿರುವುದು ದುರದೃಷ್ಟಕರ. ಆ ರೀತಿಯ ಶಾಟ್ ಗಳು (ಸ್ವೀಪ್) ಕೆಲವೊಮ್ಮೆ ತಪ್ಪಾಗುತ್ತವೆ. ಬೌಲರ್​ಗಳು ನಿಜವಾಗಿಯೂ ಉತ್ತಮವಾಗಿ ಬೌಲಿಂಗ್ ಮಾಡಿದರು. ನಮಗೆ ಇದು ಬ್ಯಾಟ್​ನೊಂದಿಗೆ ಉತ್ತಮ ಪ್ರದರ್ಶನ ಎಂದು ಹೇಳಿದರು.

Exit mobile version