Site icon Vistara News

IND vs SL T20 : ಲಂಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತಕ್ಕೆ 7 ವಿಕೆಟ್ ಜಯ, ಸರಣಿ ಕೈವಶ

IND vs SL T20

ಪಲ್ಲೆಕೆಲೆ: : ಶ್ರೀಲಂಕಾ ವಿರುದ್ಧದ ಸರಣಿಯ ಎರಡನೇ ಟಿ20 ಪಂದ್ಯದಲ್ಲಿ (IND vs SL T20) ಭಾರತ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 2-0 ಮುನ್ನಡೆಯೊಂದಿಗೆ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ಕೈವಶ ಮಾಡಿಕೊಂಡಿದೆ. ನಿವೃತ್ತಿ ಘೋಷಿಸಿದ ರೋಹಿತ್ ಶರ್ಮಾ ಅವರಿಂದ ಅಧಿಕಾರ ವಹಿಸಿಕೊಂಡ ನಂತರ ಸೂರ್ಯಕುಮಾರ್ ಯಾದವ್ ಇದರೊಂದಿಗೆ ಭರ್ಜರಿ ಆರಂಭ ಮಾಡಿದರೆ ಕೋಚ್ ಗೌತಮ್ ಗಂಭೀರ್​ ಕೂಡ ಮೊದಲ ಯಶಸ್ಸು ಸಾಧಿಸಿದ್ದಾರೆ. ಮಳೆಯಿಂದ ಬಾಧಿತವಾತ ಪಂದ್ಯದಲ್ಲಿ ಭಾರತ ಸಂಪೂರ್ಣವಾಗಿ ಮೇಲುಗೈ ಸಾಧಿಸಿತು.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 9 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತು. ಅಂತೆಯೇ ಭಾರತ ರನ್ ಮಾಡಲು ಆರಂಭಿಸಿ 6 ರನ್ ಬಾರಿಸಿದ್ದಾಗ ಮಳೆ ಶುರುವಾಯಿತು. ತುಂಬಾ ಹೊತ್ತು ನಷ್ಟವಾದ ಕಾರಣ ಭಾರತಕ್ಕೆ 8 ಓವರ್​ಗಳಲ್ಲಿ 76 ರನ್ ಸವಾಲು ನೀಡಲಾಯಿತು. ಭಾರತ ಇನ್ನೂ 3 ಎಸೆತ ಬಾಕಿ ಇರುವಾಗ 3 ವಿಕೆಟ್​ ನಷ್ಟಕ್ಕೆ 81 ರನ್ ಬಾರಿಸಿ ಗೆಲುವು ಕಂಡಿತು.

ಮೊದಲು ಬ್ಯಾಟ್ ಮಾಡಿದ ಲಂಕಾ ಪವರ್​ ಪ್ಲೇನಲ್ಲಿ 54 ರನ್ ಗಳಿಸಿತು. ಪಥುಮ್ ನಿಸ್ಸಾಂಕಾ ಉತ್ತಮವಾಗಿ ಆಡಿದರು. ಕುಸಾಲ್ ಮೆಂಡಿಸ್ ಅವರ ವಿಕೆಟ್ ಕಳೆದುಕೊಂಡರು. ನಿಸ್ಸಾಂಕಾ 24 ಎಸೆತಗಳಲ್ಲಿ 32 ರನ್ ಗಳಿಸಿ ರವಿ ಬಿಷ್ಣೋಯ್ ಬೌಲಿಂಗ್​ಗೆ ಔಟಾದರು. ಬಳಿಕ ಕುಸಾಲ್ ಪೆರೆರಾ ಅತ್ಯುತ್ತಮ ಪ್ರದರ್ಶನ ನೀಡಿದರು. ಮಧ್ಯಮ ಓವರ್ಗಳಲ್ಲಿ ಇನ್ನಿಂಗ್ಸ್​ಗೆ ವೇಗ ನೀಡಿದ ಅವರು 34 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಎರಡು ಸಿಕ್ಸರ್ ನೊಂದಿಗೆ 53 ರನ್ ಗಳಿಸಿದರು. ಹಾರ್ದಿಕ್ ಪಾಂಡ್ಯ 16ನೇ ಓವರ್ನಲ್ಲಿ ಪೆರೆರಾ ಮತ್ತು ಕಮಿಂಡು ಮೆಂಡಿಸ್ ಅವರನ್ನು ಒಂದೇ ಓವರ್​ನಲ್ಲಿ ಔಟ್ ಮಾಡಿದರು.

ಪೆರೆರಾ ಔಟಾದ ನಂತರ ಶ್ರೀಲಂಕಾ ಕೊನೆಯ ನಾಲ್ಕು ಓವರ್ ಗಳಲ್ಲಿ ಕೇವಲ 22 ರನ್ ಗಳಿಸಿತು. ದಸುನ್ ಶನಕಾ ಮತ್ತು ವನಿಂದು ಹಸರಂಗ ಗೋಲ್ಡನ್ ಡಕ್​ ಔಟಾದರ. ಭಾರತದ ಪರ ಬಿಷ್ಣೋಯ್ ತಮ್ಮ 4 ಓವರ್​ಗಳ ಸ್ಪೆಲ್​ನಲ್ಲಿ 3 ವಿಕೆಟ್ ಪಡೆದರು. ಅರ್ಷ್ದೀಪ್ ಸಿಂಗ್ 2 ವಿಕೆಟ್ ಉರುಳಿಸಿದರು.

ಸೂರ್ಯಕುಮಾರ್, ಜೈಸ್ವಾಲ್ ಗೆಲುವು ತಂದುಕೊಟ್ಟರು

ಭಾರತದ ರನ್ ಚೇಸ್ ನ ಮೊದಲ ಓವರ್ ನಲ್ಲಿ ಮಳೆ ಬಂತು. ಆದರೆ ಅಂತಿಮವಾಗಿ ಭಾರತಕ್ಕೆ 8 ಓವರ್ಗಳಲ್ಲಿ 78 ರನ್​ಗಳ ಪರಿಷ್ಕೃತ ಗುರಿ ನೀಡಲಾಯಿತು. ಗಿಲ್​ ಅನುಪಸ್ಥಿತಿಯಲ್ಲಿ ಆರಂಭಿಕರಾಗಿ ಆಡಲು ಬಂದ ಸಂಜು ಸ್ಯಾಮ್ಸನ್ ಶೂನ್ಯಕ್ಕೆ ಔಟಾದರು. ಹೀಗಾಗಿ ಭಾರತ ಅವರು ಆರಂಭಿಕ ತೊಂದರೆಯಲ್ಲಿ ಸಿಲುಕಿತು.

ಇದನ್ನೂ ಓದಿ: Paris Olympics 2024 : ಪುರಷರ 10 ಮೀಟರ್​ ಏರ್​ರೈಫಲ್​​ ಸ್ಪರ್ಧೆಯಲ್ಲಿ ಫೈನಲ್​ಗೇರಿದ ಅರ್ಜುನ್ ಬಬುಟಾ

, ಯಶಸ್ವಿ ಜೈಸ್ವಾಲ್ ಮತ್ತು ಸೂರ್ಯಕುಮಾರ್ ಅಬ್ಬರಿಸಿದರು. ಭಾರತವು ರನ್​ಗಳಿಕೆಯಲ್ಲಿ ಹಿಂದೆ ಬೀಳದಂತೆ ನೋಡಿಕೊಂಡರು. 12 ಎಸೆತಗಳಲ್ಲಿ 26 ರನ್ ಗಳಿಸಿದ ಸೂರ್ಯಕುಮಾರ್ ಮಥೀಶಾ ಪತಿರಾನಾ ಎಸೆತಕ್ಕೆ ಔಟಾದರು. ಜೈಸ್ವಾಲ್ 15 ಎಸೆತಗಳಲ್ಲಿ 30 ರನ್ ಗಳಿಸಿದರು.

ಡೆತ್ ಓವರ್​ಗಳಲ್ಲಿ ಭಾರತಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಹಾರ್ದಿಕ್ ಪಾಂಡ್ಯ ಎಲ್ಲಾ ಪ್ರಯತ್ನ ಮಾಡಿದರು. ಅವರು ಒಂಬತ್ತು ಎಸೆತಗಳಲ್ಲಿ 22 ರನ್ ಗಳಿಸಿ ಔಟಾಗದೆ ಉಳಿದರು.

Exit mobile version