Site icon Vistara News

IND vs ZIM : ಜಿಂಬಾಬ್ವೆ ವಿರುದ್ಧ ಕೊನೇ ಟಿ20 ಪಂದ್ಯಕ್ಕೆ ತಂಡದಲ್ಲಿ ಭರ್ಜರಿ ಬದಲಾವಣೆ

IND vs ZIM

ಬೆಂಗಳೂರು: ಜಿಂಬಾಬ್ವೆ ಪ್ರವಾಸದ 5ನೇ ಟಿ20 ಪಂದ್ಯ (IND vs ZIM) ಹರಾರೆ ಸ್ಪೋರ್ಟ್ಸ್ ಕ್ಲಬ್​ನಲ್ಲಿ ಭಾನುವಾರ ನಡೆಯಲಿದೆ. ಇದು ಟೀಮ್ ಇಂಡಿಯಾಗೆ ಸರಣಿಯ ಕೊನೇ ಪಂದ್ಯ. ಶನಿವಾರ ನಡೆದ ನಾಲ್ಕನೇ ಪಂದ್ಯದಲ್ಲಿ ಭಾರತ ತಂಡ ಭರ್ಜರಿ 10 ವಿಕೆಟ್​​ ವಿಜಯ ಸಾಧಿಸಿದೆ. ಇದರೊಂದಿಗೆ ಭಾರತ ತಂಡ 3-1 ಮುನ್ನಡೆಯೊಂದಿಗೆ ಸರಣಿಯನ್ನು ವಶಪಡಿಸಿಕೊಂಡಿದೆ. ಹೀಗಾಗಿ ಐದನೇ ಪಂದ್ಯ ಅನೌಪಚಾರಿಕವಾಗಿದೆ.

ಸರಣಿಯ ಆರಂಭಿಕ ಪಂದ್ಯದಲ್ಲಿ ರನ್​ಗಳಿಂದ ಸೋತ ನಂತರ ಶುಬ್ಮನ್ ಗಿಲ್ ಪಡೆ ತಕ್ಷಣವೇ ಪುಟಿದೆದ್ದಿತು. ಎರಡನೇ, ಮೂರನೇ ಮತ್ತು ನಾಲ್ಕನೇ ಟಿ 20 ಪಂದ್ಯಗಳಲ್ಲಿ ಅವರು ಪ್ರಬಲ ರೀತಿಯಲ್ಲಿ ಗೆಲುವು ಸಾಧಿಸಿತು. ಹಿಂದಿನ ಮೂರು ಪಂದ್ಯಗಳಲ್ಲಿ ಭಾರತ ತಂಡ ಆಲ್ ರೌಂಡ್ ಪ್ರದರ್ಶನ ನೀಡಿತು. 100 ರನ್, 23 ರನ್ ಮತ್ತು 10 ವಿಕೆಟ್ ಗಳಿಂದ ಗೆದ್ದುಕೊಂಡಿತು.

ಗಮನಾರ್ಹ ಪ್ರದರ್ಶನಗಳು ಬ್ಯಾಟರ್​ಗಳಿಂದ ಬಂದವು. ಎರಡನೇ ಪಂದ್ಯದಲ್ಲಿ ಅಭಿಷೇಕ್ ಶರ್ಮಾ (100), ಋತುರಾಜ್ ಗಾಯಕ್ವಾಡ್ (77) ಮತ್ತು ರಿಂಕು ಸಿಂಗ್ (48) ಅವರ ಅರ್ಧಶತಕಗಳ ನೆರವಿನಿಂದ ಭಾರತ 2 ವಿಕೆಟ್ ನಷ್ಟಕ್ಕೆ 234 ರನ್ ಗಳಿಸಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಎರಡನೇ ಪಂದ್ಯದಲ್ಲಿ ವೀರೋಚಿತ ಪ್ರದರ್ಶನ ನೀಡಿದ ಅಭಿಷೇಕ್ ಶರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಎಡಗೈ ಬ್ಯಾಟ್ಸ್ಮನ್ ತನ್ನ ವೀರೋಚಿತ ಪ್ರದರ್ಶನದಿಂದ ಹಲವಾರು ದಾಖಲೆಗಳನ್ನು ಮುರಿದರು. ಇದರಲ್ಲಿ ಟಿ 20 ಐ ಶತಕವನ್ನು ಗಳಿಸಿದ ಭಾರತೀಯ ತಂಡದ ವೇಗದ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಏಕೆಂದರೆ ಅವರು ಈ ಸಾಧನೆಯನ್ನು ತಲುಪಲು ಕೇವಲ 2 ಪಂದ್ಯಗಳಲ್ಲಿ ಆಡಿದ್ದರು.

3ನೇ ಟಿ20 ಪಂದ್ಯದಲ್ಲಿ ನಾಯಕ ಶುಬ್ಮನ್ ಗಿಲ್ 66 ರನ್ ಗಳಿಸಿ ತಂಡಕ್ಕೆ ರುತುರಾಜ್ ಗಾಯಕ್ವಾಡ್ (49) ಸೇರಿದಂತೆ ಇತರರ ಉತ್ತಮ ಬೆಂಬಲ ನೀಡಿದರು. ನಾಲ್ಕನೇ ಟಿ 20 ಪಂದ್ಯದಲ್ಲಿ, ಭಾರತವು ಜಿಂಬಾಬ್ವೆಯನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. 152 ರನ್​ಗಳ ರನ್ ಚೇಸಿಂಗ್ ವೇಳೆ ಯಶಸ್ವಿ ಜೈಸ್ವಾಲ್ ಹಾಗೂ ಶುಭ್ಮನ್ ಗಿಲ್ 156 ರನ್​ಗಳ ಜತೆಯಾಟವಾಡಿದರು. ಜೈಸ್ವಾಲ್ 93 ರನ್ ಗಳಿಸಿದರೆ, ಗಿಲ್ 58 ರನ್ ಗಳಿಸಿದರು.

ಶುಬ್ಮನ್ ಗಿಲ್ ಅವರ ತಂಡವು 4 ನೇ ಟಿ 20 ಯನ್ನು ಗೆದ್ದ ನಂತರ ಸಂತೋಷದಲ್ಲಿದೆ. ಪಂದ್ಯದ ನಂತರ ಮಾತನಾಡಿದ ಶುಬ್ಮನ್ ಗಿಲ್ ಚೇಸಿಂಗ್ ಮಾಡುವಾಗ ಗೆಲ್ಲುವುದೇ ನನ್ನ ಉದ್ದೇಶವಾಗಿತ್ತು. ಅದಕ್ಕಾಗಿಯೇ ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Women’s T20 Asia Cup : ಕ್ರಿಕೆಟ್​ ಅಭಿಮಾನಿಗಳಿಗೆ ಖುಷಿ; ಏಷ್ಯಾ ಕಪ್​ ಪಂದ್ಯಗಳ ವೀಕ್ಷಣೆಗೆ ಉಚಿತ ಪ್ರವೇಶ

ತಮ್ಮ ತಂಡದ ಕೆಲಸ ಇನ್ನೂ ಮುಗಿದಿಲ್ಲ ಎಂದು ಶುಬ್ಮನ್ ಗಿಲ್ ಹೇಳಿದ್ದಾರೆ. ಭಾನುವಾರ ನಡೆಯಲಿರುವ ಐದನೇ ಮತ್ತು ಅಂತಿಮ ಟಿ 20 ಪಂದ್ಯದಲ್ಲಿ ಭಾರತವು ಆಟಗಾರರಿಗೆ ಅವಕಾಶ ನೀಡುವ ಸಾಧ್ಯತೆಗಳಿವೆ.

ಭರ್ಜರಿ ಜಯಕ್ಕೆ ಅಭಿನಂದನೆ

ನಾಲ್ಕನೇ ಪಂದ್ಯದಲ್ಲಿ ಉತ್ತಮ ಆರಂಭ ಪಡೆದಿದ್ದ ಜಿಂಬಾಬ್ವೆ ತಂಡ ನಿಯಮಿತವಾಗಿ ವಿಕೆಟ್ ಗಳನ್ನು ಕಳೆದುಕೊಂಡಿದ್ದರಿಂದ ಆರಂಭಿಕ ಲಾಭ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ನಾಯಕ ಸಿಕಂದರ್ ರಾಜಾ (46) ತಮ್ಮ ಪ್ರಮುಖ ಇನ್ನಿಂಗ್ಸ್ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಭಾರತದ ಪರ ಖಲೀಲ್ ಅಹ್ಮದ್ 2 ವಿಕೆಟ್ ಕಿತ್ತರೆ, ತುಷಾರ್ ದೇಶಪಾಂಡೆ, ವಾಷಿಂಗ್ಟನ್ ಸುಂದರ್, ಅಭಿಷೇಕ್ ಶರ್ಮಾ ಮತ್ತು ಶಿವಂ ದುಬೆ ತಲಾ 1 ವಿಕೆಟ್ ಪಡೆದರು.

Exit mobile version