ಹರಾರೆ: ಸಂಜು ಸ್ಯಾಮ್ಸನ್ (55) ಬಾರಿಸಿದ ಅಮೋಘ ಅರ್ಧ ಶತಕ ಹಾಗೂ ಮುಕೇಶ್ ಕುಮಾರ್ ಅವರ 4 ವಿಕೆಟ್ ಸಾಧನೆಯೊಂದಿಗೆ ಮಿಂಚಿದ ಭಾರತ ತಂಡ ಆತಿಥೇಯ ಜಿಂಬಾಬ್ವೆ ವಿರುದ್ಧದ (IND vs ZIM ) ಟಿ20 ಸರಣಿಯ ಐದನೇ ಪಂದ್ಯದಲ್ಲೂ ವಿಜಯ ಸಾಧಿಸಿದೆ. ಇದರೊಂದಿಗೆ ಭಾರತ ತಂಡ ಸರಣಿಯನ್ನು 4-1 ಅಂತರದಿಂದ ತನ್ನದಾಗಿಸಿಕೊಂಡಿದೆ. ಆರಂಭಿಕ ಪಂದ್ಯದಲ್ಲಿ ಅಚ್ಚರಿಯ ಸೋಲನ್ನು ಕಂಡ ಕಾರಣ ಕ್ಲೀನ್ ಸ್ವೀಪ್ ಮಾಡುವ ಅವಕಾಶವನ್ನು ಶುಬ್ಮನ್ ಗಿಲ್ ನೇತೃತ್ವದ ಬಳಗ ಕಳೆದುಕೊಂಡಿತು. ಆದಾಗ್ಯೂ ಮೊದಲ ನಾಯಕತ್ವದಲ್ಲಿಯೇ ಶುಬ್ಮನ್ ಗಿಲ್ ತಮ್ಮ ಸಾಮರ್ಥ್ಯವನ್ನು ಸಾಬೀತಪಡಿಸಿಕೊಂಡಿದ್ದಾರೆ.
India complete four wins in a row to end the T20I series on a high 👏
— ICC (@ICC) July 14, 2024
📝 #ZIMvIND: https://t.co/naG0RWx8eZ pic.twitter.com/oZbDZYo1li
ಇಲ್ಲಿನ ಹರಾರೆ ಸ್ಪೋರ್ಟ್ಸ್ ಕ್ಲಬ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಜಿಂಬಾಬ್ವೆ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 167 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಜಿಂಬಾಬ್ವೆ 18.3 ಓವರ್ಗಳಲ್ಲಿ 125 ರನ್ ಬಾರಿಸಿ ಸೋಲೊಪ್ಪಿಕೊಂಡಿತು.
A 42-run victory in the 5th & Final T20I 🙌
— BCCI (@BCCI) July 14, 2024
With that win, #TeamIndia complete a 4⃣-1⃣ series win in Zimbabwe 👏👏
Scorecard ▶️ https://t.co/TZH0TNJcBQ#ZIMvIND pic.twitter.com/oJpasyhcTJ
ಮೊದಲು ಬ್ಯಾಟ್ ಮಾಡಿದ ಭಾರತ ತಂಡ 12 ರನ್ಗಳಿಗೆ ಯಶಸ್ವಿ ಜೈಸ್ವಾಲ್ ಔಟಾಗುವ ಮೂಲಕ ಆರಂಭಿಕ ಹಿನ್ನಡೆಗೆ ಒಳಗಾಯಿತು. ಜತೆಗೆ ಶುಭ್ಮನ್ ಗಿಲ್ ಕೂಡ 13 ರನ್ಗೆ ಸೀಮಿತಗೊಂಡರು. ನಂತರದಲ್ಲಿ ಅಭಿಷೇಕ್ ಶರ್ಮಾ 14 ರನ್ಗೆ ಔಟಾಗುವ ಮೂಲಕ 40 ರನ್ಗಳಿಗೆ 3 ವಿಕೆಟ್ ನಷ್ಟ ಮಾಡಿಕೊಂಡಿತು. ಆದರೆ ಆ ಬಳಿಕ ಆಡಲು ಬಂದ ಸಂಜು ಸ್ಯಾಮ್ಸನ್ (58) ಹಾಗೂ ರಿಯಾನ್ ಪರಾಗ್ (22) ತಂಡವನ್ನು ಆರಂಭಿಕ ಆಘಾತದಿಂದ ಕಾಪಾಡಿದರು. ಇವರಿಬ್ಬರೂ ಸೇರಿ ತಂಡದ ಮೊತ್ತವನ್ನು 105 ರನ್ಗಳಿಗೆ ಕೊಂಡೊಯ್ದರು. ಬಳಿಕ ಶಿವಂ ದುಬೆ 12 ಎಸೆತಕ್ಕೆ 26 ರನ್ ಬಾರಿಸಿ ಮಿಂಚಿದರು. ಅವರು ಅಮೋಘ ಎರಡು ಸಿಕ್ಸರ್ ಹಾಗೂ ಅಷ್ಟೇ ಸಂಖ್ಯೆಯ ಫೋರ್ ಹೊಡೆದರು.
ಇದನ್ನೂ ಓದಿ: Hardik Pandya : ಅಂಬಾನಿ ಮನೆಯ ಮದುವೆಯಲ್ಲಿ ಡಾನ್ಸ್ ಮಾಡುತ್ತಾ ಮದ್ಯಕ್ಕೆ ಆರ್ಡರ್ ಮಾಡಿದ ಪಾಂಡ್ಯ, ವಿಡಿಯೊ ವೈರಲ್
ಸಂಕಷ್ಟದಲ್ಲಿದ್ದ ವೇಳೆ ಬ್ಯಾಟ್ ಮಾಡಲು ಬಂದ ಸಂಜು ಸ್ಯಾಮ್ಸನ್ ನಿಧಾನವಾಗಿ ಇನಿಂಗ್ಸ್ ಕಟ್ಟಿದರು. 39 ಎಸೆತಕ್ಕೆ ಅರ್ಧ ಶತಕ ಬಾರಿಸಿದ ಅವರು 45ಎಸೆತಕ್ಕೆ 58 ರನ್ ಬಾರಿಸಿ ಔಟಾದರು. ಅವರ ಇನಿಂಗ್ಸ್ನಲ್ಲಿ 4 ಸಿಕ್ಸರ್ ಹಾಗೂ ಒಂದು ಫೋರ್ ಸೇರಿದ್ದವು. ರಿಂಕು ಸಿಂಗ್ 9 ಎಸೆತಕ್ಕೆ 11 ರನ್ ಬಾರಿಸಿದ್ದಾರೆ.
ಬೌಲರ್ಗಳ ಅಬ್ಬರ
ಭಾರತ ನೀಡಿದ ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದ ಜಿಂಬಾಬ್ವೆ ಶೂನ್ಯಕ್ಕೆ ಔಟಾದರು. 15 ರನ್ಗೆ 2 ವಿಕೆಟ್ ಕಳೆದುಕೊಂಡು ಆತಂಕಕ್ಕೆ ಬಿತ್ತು. ಬಳಿಕ ಡಿಯೋನ್ ಮೈರ್ಸ್ 34 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಅಲ್ಲದೆ ಕೊನೆಯಲ್ಲಿ ಫರಾಜ್ ಅಕ್ರಮ್ 27 ರನ್ ಬಾರಿಸಿದರು. ಮರುಮಣಿ 27 ರನ್ ಬಾರಿಸಿದ್ದು ಹೊರತುಪಡಿಸಿದರೆ ಜಿಂಬಾಬ್ವೆ ತಂಡದಿಂದ ಹೆಚ್ಚು ಪ್ರತಿರೋಧ ಬರಲಿಲ್ಲ. ಇನ್ನೂ 9 ಎಸೆತಗಳು ಇರುವಂತೆಯೇ ಆಲ್ಔಟ್ ಆಯಿತು. ಭಾರತ ಪರ ಬೌಲಿಂಗ್ನಲ್ಲಿ ಮುಕೇಶ್ ಕುಮಾರ್ 22 ರನ್ಗಳಿಎ 4 ವಿಕೆಟ್ ಉರುಳಿಸಿದರೆ ಶಿವಂ ದುಬೆ 2 ವಿಕೆಟ್ ತಮ್ಮದಾಗಿಸಿಕೊಂಡರು.