Site icon Vistara News

Sniper Rifles : ಸ್ನೈಪರ್ ರೈಫಲ್ ರಫ್ತುದಾರ ಎಂಬ ಪಟ್ಟ ಗಿಟ್ಟಿಸಿದ ಭಾರತ; ಬೆಂಗಳೂರಿನ ಕಂಪನಿಯಿಂದ ಮೆಗಾ ಒಪ್ಪಂದ

sniper rifles

ನವದೆಹಲಿ: ಭಾರತವೀಗ ಅತ್ಯಂತ ಸುಧಾರಿತ ಸ್ನೈಪರ್​ ರೈಫಲ್ (Sniper Rifles)​ ರಫ್ತುದಾರ ದೇಶವೆಂಬ ಖ್ಯಾತಿಯನ್ನು ಗಿಟ್ಟಿಸಿಕೊಂಡಿದೆ. ಬೆಂಗಳೂರು ಮೂಲದ ಸಣ್ಣ ಶಸ್ತ್ರಾಸ್ತ್ರ ತಯಾರಕ ಕಂಪನಿಯಾಗಿರುವ ಎಸ್ಎಸ್ಎಸ್ ಡಿಫೆನ್ಸ್ .338 ಲಪುವಾ ಮ್ಯಾಗ್ನಮ್ ಕ್ಯಾಲಿಬರ್ ಸ್ನೈಪರ್ ರೈಫಲ್ ಪೂರೈಕೆಗಾಗಿ ಸ್ನೇಹಪರ ದೇಶಗಳ ಜತೆ ಮೆಗಾ ರಫ್ತು ಒಪ್ಪಂದ ಮಾಡಿಕೊಂಡಿದೆ. ಇದೇ ಮೊದಲ ಬಾರಿಗೆ ಭಾರತವು ಸ್ನೈಪರ್ ರೈಫಲ್ಸ್​ಗಳನ್ನು ವಿದೇಶಕ್ಕೆ ರಫ್ತು ಮಾಡಿದೆ ಎಂದು ರಕ್ಷಣಾ ಸಂಸ್ಥೆಯ ಮೂಲಗಳು ತಿಳಿಸಿವೆ.

ಸ್ನೈಪರ್ ರೈಫಲ್ ಅನ್ನು ಅದರ ಬ್ಯಾರೆಲ್ ಸೇರಿದಂತೆ ಸಂಪೂರ್ಣವಾಗಿ ವಿನ್ಯಾಸಗೊಳಿಸಲಾಗಿದೆ. ಭಾರತದಲ್ಲಿ ತಯಾರಿಸಲಾಗಿದೆ. ಸ್ನೈಪರ್ ರೈಫಲ್ ಅನ್ನು 1,500 ಮೀಟರ್ ಮತ್ತು ಅದಕ್ಕಿಂತ ಹೆಚ್ಚಿನ ಮೀಟರ್​ ಗುರಿಗಳನ್ನು ಹೊಡೆಯುವುದಕ್ಕೆ ಪೂರಕವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ದಿ ಪ್ರಿಂಟ್ ವರದಿ ಮಾಡಿದೆ.

ಮಿಗಿಲಾಗಿ ಈ ಖಾಸಗಿ ಸಂಸ್ಥೆಯು ರೈಫಲ್​​ಗಳ ಜತೆಗೆ ಅನೇಕ ದೇಶಗಳಿಂದ ಸುಮಾರು 50 ಮಿಲಿಯನ್ ಡಾಲರ್ ಮೌಲ್ಯದ ಮದ್ದುಗುಂಡುಗಳನ್ನು ಪೂರೈಸುವ ಗುತ್ತಿಗೆಗಳನ್ನು ಕೂಡ ಪಡೆದುಕೊಂಡಿದೆ. ಖಾಸಗಿ ಕಂಪನಿಗಳು ತಮ್ಮ ಗ್ರಾಹಕರಿಗಾಗಿ ಹುಡುಕುತ್ತಿದ್ದರೆ, ಭಾರತ ಸರ್ಕಾರವು ಕ್ಷಿಪ್ರವಾಗಿ ಅನುಮತಿಗಳ ಮೂಲಕ ವಹಿವಾಟುಗಳನ್ನು ಗಟ್ಟಿಗೊಳಿಸುತ್ತಿದೆ. ಅಲ್ಲದೆ ವಿದೇಶಗಳಿಂದ ಬರುವ ಬೇಡಿಕೆಗಳನ್ನು ಈ ಕಂಪನಿಗಳಿಗೆ ರವಾನಿಸುತ್ತಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.

ಭಾರತದ ವಾರ್ಷಿಕ ರಕ್ಷಣಾ ಉತ್ಪಾದನೆಯು 2023-24ರಲ್ಲಿ ದಾಖಲೆಯ ಗರಿಷ್ಠ 1.27 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ. ಮೇಕ್ ಇನ್ ಇಂಡಿಯಾ ಯೋಜನೆಯು ಈ ಹೊಸ ಹೊಸ ಮೈಲಿಗಲ್ಲು ತಲುಪಲು ನೆರವಾಗಿದೆ.

ಆಮದಿನಿಂದ ರಫ್ತು ತನಕ

ಭಾರತವು ಈಗ ಫಿರಂಗಿ ಬಂದೂಕುಗಳಿಂದ ಹಿಡಿದು ಕ್ಷಿಪಣಿ ಮತ್ತು ಸಣ್ಣ ಶಸ್ತ್ರಾಸ್ತ್ರಗಳವರೆಗೆ ಹೆಚ್ಚಿನ ಸಂಖ್ಯೆಯ ಶಸ್ತ್ರಾಸ್ತ್ರಗಳನ್ನು ತಯಾರಿಸುತ್ತಿದೆ ಮತ್ತು ರಫ್ತು ಮಾಡುತ್ತಿದೆ. ಭಾರತವು ಇಲ್ಲಿಯವರೆಗೆ ಈ ಸಾಧನಗಳ ಆಮದು ದೇಶವಾಗಿತ್ತು. ಈಗ ನಾವು ಅವುಗಳನ್ನು ರಫ್ತು ಮಾಡಲು ಪ್ರಾರಂಭಿಸಿದ್ದೇವೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.

ಇದನ್ನೂ ಓದಿ: PM Modi Russia Visit : ಮೋದಿಗೆ ರಷ್ಯಾದ ಅತ್ಯುನ್ನತ ನಾಗರಿಕ ಗೌರವ ‘ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ದಿ ಅಪೊಸ್ಟಲ್’ ಪ್ರದಾನ

ಎಸ್ಎಸ್ಎಸ್ ಡಿಫೆನ್ಸ್ ಈಗಾಗಲೇ ಸ್ನೈಪರ್ ರೈಫಲ್​ಗಳ ರಫ್ತು ಪೂರ್ಣಗೊಳಿಸಿದೆ. ಇದು 1,500 ಮೀಟರ್ ಮತ್ತು ಅದಕ್ಕಿಂತ ಹೆಚ್ಚಿನ ಗುರಿಗಳನ್ನು ಗುರಿಯಾಗಿಸಲು ತಯಾರಿಸಲಾಗಿದೆ. ಇತರ ಕೆಲವು ರಾಷ್ಟ್ರಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಈ ದೇಶಗಳ ನಿಯೋಗಗಳು ಬೆಂಗಳೂರಿನಲ್ಲಿರುವ ಕಂಪನಿಯ ಉತ್ಪಾದನಾ ಮತ್ತು ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಮಾತುಕತೆ ನಡೆಸುತ್ತಿವೆ ಎಂದು ಪ್ರಿಂಟ್ ವರದಿ ಮಾಡಿದೆ.

ಈ ರೈಫಲ್ ಹೆಚ್ಚಿನ ರಫ್ತು ಸಾಮರ್ಥ್ಯವನ್ನು ಹೊಂದಿದೆ. ಏಕೆಂದರೆ ಜಾಗತಿಕವಾಗಿ ಕನಿಷ್ಠ 30 ದೇಶಗಳು .338 ಲಪುವಾ ಮ್ಯಾಗ್ನಮ್ ಸ್ನೈಪರ್ ಅನ್ನು ಬಳಸುತ್ತವೆ. ಒಂದು ಡಜನ್​​ಗೂ ಹೆಚ್ಚು ತಯಾರಕರು ಈ ಮಾದರಿಯ ರೈಫಲ್​​ಗಳನ್ನು ಉತ್ಪಾದಿಸುತ್ತಿವೆ.

Exit mobile version